ಅನಿಲ್ ಕಪೂರ್ ಯೌವನದ ಹಿಂದೆ ಅಡಗಿದ ಆ ಸಂಖ್ಯೆಯ ರಹಸ್ಯ!

Published : Feb 17, 2026, 09:59 AM IST
anil kapoor

ಸಾರಾಂಶ

70ರ ವಯಸ್ಸಿನಲ್ಲೂ ಯುವಕನಂತೆ ಕಾಣುವ ಅನಿಲ್ ಕಪೂರ್ (Anil Kapoor) ಅವರ ಫಿಟ್ನೆಸ್ ಹಿಂದಿನ ರಹಸ್ಯ ಕೇವಲ ವ್ಯಾಯಾಮವಲ್ಲ. ಸಂಖ್ಯಾಶಾಸ್ತ್ರದ ಪ್ರಕಾರ, ಅವರ ಜನ್ಮಸಂಖ್ಯೆ ಅವರ ಚೈತನ್ಯ ಮತ್ತು ಆಕರ್ಷಣೆಗೆ ಕಾರಣವಾಗಿರಬಹುದಾ? 

ಬಾಲಿವುಡ್ ನಟ ಅನಿಲ್‌ ಕಪೂರ್‌ (Anil Kapoor) ಕಳೆದ ನಾಲ್ಕು ದಶಕಗಳಿಂದ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದಾರೆ. 1983ರಲ್ಲಿ ಬಂದ Woh Saat Din ಚಿತ್ರದ ಮೂಲಕ ನಾಯಕನಾಗಿ ಕಾಣಿಸಿಕೊಂಡ ಅವರು, ಇಂದಿಗೂ ಅದೇ ಚುರುಕು ಮತ್ತು ಉತ್ಸಾಹವನ್ನು ಕಾಯ್ದುಕೊಂಡಿದ್ದಾರೆ. 70ರ ವಯಸ್ಸಿನಲ್ಲೂ ಅವರ ಎನರ್ಜಿ ನೋಡಿ ಅನೇಕರಿಗೆ ಆಶ್ಚರ್ಯವಾಗುತ್ತದೆ. ಅವರ ಈ ಯೌವನ, ಚೈತನ್ಯದ ರಹಸ್ಯವೇನು?

ಅನಿಲ್ ಕಪೂರ್ ಪ್ರತಿದಿನ ಯೋಗ, ವ್ಯಾಯಾಮ ಮತ್ತು ನಿಯಮಿತ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ಅವರ ದೇಹಭಾಷೆ, ಕೆಲಸದ ಮೇಲೆ ಇರುವ ಆಸಕ್ತಿ ಮತ್ತು ಉಲ್ಲಾಸ ನೋಡುವವರಿಗೆ ಪ್ರೇರಣೆಯಾಗುತ್ತದೆ. ಆದರೆ ಇದಲ್ಲದೆ ಇನ್ನೊಂದು ರಹಸ್ಯವೂ ಇದೆಯಂತೆ. ಅನಿಲ್ ಕಪೂರ್ ಡಿಸೆಂಬರ್ 24ರಂದು ಜನಿಸಿದವರು. ಸಂಖ್ಯಾಶಾಸ್ತ್ರದ ಪ್ರಕಾರ 6, 15 ಅಥವಾ 24ರಂದು ಜನಿಸಿದವರ ಜನ್ಮಸಂಖ್ಯೆ 6 ಆಗಿರುತ್ತದೆ. ಈ ಸಂಖ್ಯೆಯವರನ್ನು ಶುಕ್ರ ಗ್ರಹದ ಅಧೀನದಲ್ಲಿರುವವರು ಎಂದು ನಂಬಲಾಗುತ್ತದೆ.

ಸಂಖ್ಯೆ 6 ಹೊಂದಿದವರ ಗುಣಗಳು

ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ ವ್ಯಕ್ತಿಯ ಉತ್ಸಾಹ, ಶಿಸ್ತು ಮತ್ತು ಜೀವನ ಚೈತನ್ಯವನ್ನು ತೋರಿಸುತ್ತದೆ. ಸಂಖ್ಯೆ 6 ಹೊಂದಿರುವವರು ಆಕರ್ಷಕ ಸ್ವಭಾವದವರು. ಇವರಲ್ಲಿ ಕಲಾತ್ಮಕತೆ, ಸೌಂದರ್ಯ ಪ್ರೀತಿ ಮತ್ತು ಐಶ್ವರ್ಯದ ಆಸಕ್ತಿ ಹೆಚ್ಚಾಗಿರುತ್ತದೆ. ಸಂಖ್ಯೆ 6ರವರು ತುಂಬಾ ಸ್ನೇಹಪರರು. ಇವರ ಮಾತುಗಳಲ್ಲಿ ವಿಶೇಷ ಆಕರ್ಷಣೆ ಇರುತ್ತದೆ. ಜನರ ಮೇಲೆ ಪ್ರಭಾವ ಗಟ್ಟಿಯಾಗಿ ಬೀರುತ್ತಾರೆ. ಆದ್ದರಿಂದ ಇವರನ್ನು ಜನರು ಸುಲಭವಾಗಿ ಮರೆಯುವುದಿಲ್ಲ.

ಉಡುಪು ಮತ್ತು ಆಕರ್ಷಣೆ

ಈ ಸಂಖ್ಯೆಯವರಿಗೆ ವಿಶಿಷ್ಟ ಡ್ರೆಸಿಂಗ್ ಸೆನ್ಸ್ ಇರುತ್ತದೆ. ಜನಸ್ತೋಮದಲ್ಲಿಯೂ ಇವರಿಗೆ ವಿಶೇಷ ಗುರುತು ಸಿಗುತ್ತದೆ. ಇವರಲ್ಲಿ ಸಹಜವಾದ ಮ್ಯಾಗ್ನೆಟಿಕ್ ಶಕ್ತಿ ಇರುತ್ತದೆ. ಬರ್ತ್‌ ನಂಬರ್‌ 6 ಹೊಂದಿರುವವರು ಸಾಮಾನ್ಯವಾಗಿ ಐಶ್ವರ್ಯಮಯ ಜೀವನವನ್ನು ಇಷ್ಟಪಡುತ್ತಾರೆ. ತಮ್ಮ ರೂಪ ಮತ್ತು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.

ಈ ಸಂಖ್ಯೆ ಯೌವನ, ಆಕರ್ಷಣೆ ಮತ್ತು ಜೀವನ ಸಮತೋಲನದ ಸಂಕೇತ ಕೂಡ. ಇಂತಹವರು ಜೀವನದಲ್ಲಿ ಸಮತೋಲನ ಕಾಪಾಡಿಕೊಂಡು ಉತ್ತಮ ಪ್ರಗತಿಯನ್ನು ಸಾಧಿಸುತ್ತಾರೆ. ಇವರಲ್ಲಿ ಸೃಜನಶೀಲತೆ ಹೆಚ್ಚು ಇರುತ್ತದೆ. ಪಾರ್ಟಿಗಳು, ಸ್ನೇಹಬಳಗ, ಸಂಭಾಷಣೆ – ಇವುಗಳೆಲ್ಲ ಇವರಿಗೆ ಇಷ್ಟ. ಹೀಗಾಗಿ, ಅನಿಲ್ ಕಪೂರ್ ಅವರ ಚೈತನ್ಯಕ್ಕೆ ಕಾರಣ ಕೇವಲ ವ್ಯಾಯಾಮ ಮತ್ತು ಆಹಾರ ಕ್ರಮ ಮಾತ್ರವಲ್ಲ, ಅವರ ಜನ್ಮಸಂಖ್ಯೆಯ ಪ್ರಭಾವವೂ ಇರಬಹುದು ಎಂದು ಸಂಖ್ಯಾಶಾಸ್ತ್ರ ಹೇಳುತ್ತದೆ.

ಎಲ್ಲರಿಗೆ ಗೊತ್ತಿರುವಂತೆ ಅನಿಲ್ ಕಪೂರ್ ಅವರ ವೃತ್ತಿ ಬದುಕನ್ನು ಬದಲಿಸಿದ ಚಿತ್ರರಂಗ ಅಂದರೆ ಅದು ಕನ್ನಡ ಚಿತ್ರರಂಗ. ಅನಿಲ್ ಕಪೂರ್ ಸೈಕಲ್ ಹೊಡೆಯುತ್ತಿದ್ದ ಸಮಯದಲ್ಲಿ ಇವರನ್ನು ನಾಯಕನನ್ನಾಗಿಸಿದ್ದ ಮಣಿರತ್ನಂ 1983ರಲ್ಲಿ ''ಪಲ್ಲವಿ ಅನುಪಲ್ಲವಿ'' ಚಿತ್ರವನ್ನು ಮಾಡಿದ್ದರು. ಈ ಮೂಲಕ ಅನಿಲ್ ಕಪೂರ್ ಮಾತ್ರವಲ್ಲದೇ ಮಣಿರತ್ನಂ ಕೂಡ ತಮ್ಮ ವೃತ್ತಿ ಬದುಕಿಗೆ ಕನ್ನಡ ಚಿತ್ರರಂಗದ ಮೂಲಕವೇ ಮುನ್ನುಡಿಯನ್ನು ಬರೆದಿದ್ದರು. ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಹಿಟ್ ಆಗದಿದ್ದರೂ ''ಪಲ್ಲವಿ ಅನುಪಲ್ಲವಿ'' ಚಿತ್ರದ ಹಾಡುಗಳು ಎವರ್‌ಗ್ರೀನ್ ಹಿಟ್ ಎನಿಸಿಕೊಂಡುಬಿಟ್ಟವು. 'ನಗುವ ನಯನ ಮಧುರ ಮೌನ' ಹಾಗೂ 'ನಗು ಎಂದಿದೆ ಮಂಜಿನ ಬಿಂದು' ಇವತ್ತಿಗೂ ಜನಜನಿತ. ಇಲ್ಲಿಂದಾಚೆ ಮಣಿರತ್ನಂ ಮತ್ತು ಅನಿಲ್ ಕಪೂರ್ ಇಬ್ಬರು ಕನ್ನಡ ಚಿತ್ರರಂಗದ ಪಾಲಿಗೆ ಕೈಗೆಟುಕದ ನಕ್ಷತ್ರಗಳಾದರು. ಮಣಿರತ್ನಂ ದಕ್ಷಿಣ ಭಾರತ ಮಾತ್ರವಲ್ಲದೇ ಭಾರತ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಾಗಿ ಹೊರ ಹೊಮ್ಮಿದರೆ ಅನಿಲ್ ಕಪೂರ್ ಬಾಲಿವುಡ್‌ನಲ್ಲಿ ಬದುಕು ರೂಪಿಸಿಕೊಂಡರು. ಒಂದಾದ ಮೇಲೊಂದರಂತೆ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು ಕೂಡ ನೀಡಿದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ತನಿಷಾ ಕುಪ್ಪಂಡ ಉಗುರಿನಲ್ಲಿ ನಟ ದರ್ಶನ್: ​ಅನ್ನ ಸಂತರ್ಪಣೆ, ವಿಶೇಷ ಪೂಜೆ ವಿಡಿಯೋ ವೈರಲ್​
ಇಷ್ಟು ದಿನ ಬಚ್ಚಿಟ್ಟಿದ್ದ ಫ್ಯಾಮಲಿ, ಮಕ್ಕಳ ಸೀಕ್ರೆಟ್ ವಿಷ್ಯ ಕೊನೆಗೂ ಬಿಚ್ಚಿಟ್ಟ ಶಾರುಖ್ ಖಾನ್!