218 ಕೋಟಿ ಬಾಚಿದ್ದ ಮೊದಲ ಹಾರರ್​ ಮೂವಿಗೆ 65 ವರ್ಷ: 'ಕಾಮಿನಿ' ಕಂಡು ಹಾಲ್​ನಲ್ಲೇ ಬೆಚ್ಚಿಬಿದ್ದ ಪ್ರೇಕ್ಷಕರು

Published : May 15, 2025, 06:13 PM ISTUpdated : May 16, 2025, 10:06 AM IST
218 ಕೋಟಿ ಬಾಚಿದ್ದ ಮೊದಲ ಹಾರರ್​ ಮೂವಿಗೆ 65 ವರ್ಷ: 'ಕಾಮಿನಿ' ಕಂಡು ಹಾಲ್​ನಲ್ಲೇ ಬೆಚ್ಚಿಬಿದ್ದ ಪ್ರೇಕ್ಷಕರು

ಸಾರಾಂಶ

1949ರಲ್ಲಿ ಬಿಡುಗಡೆಯಾದ ಬಾಲಿವುಡ್‌ನ ಮೊದಲ ಹಾರರ್ ಸಿನಿಮಾ "ಮಹಲ್", ಅರಮನೆ, ಪುನರ್ಜನ್ಮ ಮತ್ತು ದೆವ್ವದ ಕಥೆಯನ್ನು ಹೊಂದಿದೆ. ಹರಿಶಂಕರ್ ಅರಮನೆಗೆ ಬಂದಾಗ, ತೋಟಗಾರ ಹಳೆಯ ಪ್ರೇಮಕಥೆ ವಿವರಿಸುತ್ತಾನೆ. ಕಾಮಿನಿ ತನ್ನ ಪ್ರೇಮಿಯ ಸಾವಿನ ನಂತರ ಸಾಯುತ್ತಾಳೆ. ಶಂಕರ್‌ಗೆ ಕಾಮಿನಿ ಕಾಣಿಸಿಕೊಂಡು, ಪ್ರೇಮಕಥೆ ಪುನರಾವರ್ತನೆಯಾಗುತ್ತದೆ. ರಂಜನಾಳನ್ನು ಮದುವೆಯಾದ ಶಂಕರ್, ಕೊನೆಗೆ ಕಾಮಿನಿಯಿಂದ ಪತ್ನಿಯನ್ನು ಕೊಲ್ಲುವಂತೆ ಪ್ರಚೋದಿತನಾಗುತ್ತಾನೆ.

ಇಂದು ಹಾರರ್​ ಮೂವಿಗಳಿಗೆ ಲೆಕ್ಕವೇ ಇಲ್ಲ. ಸಿನಿಮಾ ಮಾತ್ರವಲ್ಲದೇ ಸೀರಿಯಲ್​ಗಳಲ್ಲಿಯೂ ಇದು ಬಂದು ದಶಕಗಳೇ ಕಳೆದುಹೋಗಿವೆ. ಈಗೀಗ ಕನ್ನಡ ಧಾರಾವಾಹಿಗಳಲ್ಲಿಯೂ ಇಂಥದ್ದೇ ಕಥೆಯನ್ನು ಹೆಣೆಯಲಾಗುತ್ತಿದೆ. ಕ್ರೈಂ ಮತ್ತು ದೆವ್ವದ ಕಥೆಗಳು ಜನರಿಗೆ ಇಷ್ಟವಾಗುತ್ತದೆ ಎನ್ನುವ ಕಾರಣದಿಂದ ಕಥೆ ಒಂದೇ ರೀತಿ ಆದರೂ ಅದನ್ನು ಆಚೀಚೆ ಮಾಡಿ ಜನರಿಗೆ ಉಣಬಡಿಸುತ್ತಿದ್ದಾರೆ. ಆದ್ದರಿಂದ ಈಗಿನ ಭೂತ, ಪ್ರೇತಗಳಿಗೆ ಜನರು ಅಷ್ಟೊಂದು ಭಯಪಡುವುದಿಲ್ಲ. ಆದರೂ ಒಬ್ಬರೇ ನೋಡಿದರೆ ಭಯ ಪಡುವುದು ಇದ್ದೇ ಇದೆ. ಆದರೆ, 1949ರಲ್ಲಿ ಇಂಥದ್ದೊಂದು ಸಿನಿಮಾ ತಯಾರಾದರೆ ಆಗಿನ ಸ್ಥಿತಿ ಹೇಗಿರಬೇಡ ಹೇಳಿ. ಈಗ ಹೇಳ್ತಿರೋದ ಬಾಲಿವುಡ್​​ನ ಮೊದಲ ಹಾರರ್​  ಮೂವಿ. ಅದರ ಹೆಸರು ಮಹಲ್​. ಸಿನಿಮಾ ಮಂದಿರದಲ್ಲಿಯೇ ಜನರು ಬೆಚ್ಚಿ ಬಿದ್ದಿದ್ದರು.

ಆಗಿನ ಕಾಲದಲ್ಲಿ ಈ ಚಿತ್ರವನ್ನು 9 ಲಕ್ಷಕ್ಕೆ (ಅಂದರೆ ಈಗಿನ ಸುಮಾರು 15.75 ಕೋಟಿ ರೂಪಾಯಿ) ತಯಾರು ಮಾಡಲಾಗಿತ್ತು. ಈ ಚಿತ್ರ 1.25 ಕೋಟಿ ರೂಪಾಯಿ ಅರ್ಥಾತ್​ ಈಗಿನ ಸುಮಾರು 218 ಕೋಟಿ ರೂಪಾಯಿಗಳನ್ನು ಗಳಿಸಿತ್ತು ಎಂದು ವರದಿಯಾಗಿದೆ. ಇದರಲ್ಲಿನ ಆಯೇಗಾ ಆನೇವಾಲಾ ಹಾಡು ಕೂಡ ಸೂಪರ್​ ಡೂಪರ್​ ಆಗಿತ್ತು. ಇದರಲ್ಲಿನ ಕಾಮಿನಿಯ ಕಂಡು ಜನರು ಚಿತ್ರಮಂದಿರಲ್ಲಿಯೇ ಬೆವರಿಳಿದು ಹೋಗಿದ್ದಂತೆ. ಅಂದಹಾಗೆ ಇದು. ಮಹಲ್ ಅಂದರೆ ಒಂದು ಅರಮನೆ, ಪುನರ್ಜನ್ಮ ಮತ್ತು ದೆವ್ವದ ಕಥೆ. ಪ್ರಯಾಗದಲ್ಲಿ, ಒಂದು ಸುಂದರವಾದ ಪಾಳುಬಿದ್ದ ಅರಮನೆ ಇದೆ. ಹೊಸ ಮಾಲೀಕ ಹರಿಶಂಕರ್ (ಅಶೋಕ್ ಕುಮಾರ್) ಈ ಅರಮನೆಗೆ ವಾಸಿಸಲು ಬಂದಾಗ, ಹಳೆಯ ತೋಟಗಾರ ಅಪೂರ್ಣ ಪ್ರೀತಿಯ ಕಥೆಯನ್ನು ಹೇಳುತ್ತಾನೆ ಅಲ್ಲಿಂದ  ಚಿತ್ರಕಥೆ ಶುರುವಾಗುತ್ತದೆ. ಸುಮಾರು 40 ರಿಂದ 45 ವರ್ಷಗಳ ಹಿಂದೆ, ಒಬ್ಬ ವ್ಯಕ್ತಿ ಅದನ್ನು ನಿರ್ಮಿಸಿದನು ಮತ್ತು ಅವನ ಲವರ್​, ಕಾಮಿನಿ (ಮಧುಬಾಲಾ) ಅದರಲ್ಲಿ ವಾಸಿಸಲು ಪ್ರಾರಂಭಿಸಿದಳು. ಮಧ್ಯರಾತ್ರಿಯಲ್ಲಿ ಆ ವ್ಯಕ್ತಿ ತನ್ನ ಬಳಿಗೆ ಬರಲು ಅವಳು ದಿನವಿಡೀ ಕಾಯುತ್ತಿದ್ದಳು.  ಒಂದು ಬಿರುಗಾಳಿಯ ರಾತ್ರಿ, ಆ ವ್ಯಕ್ತಿಯ ಹಡಗು ಮುಳುಗಿ ಅವನು ಸಾಯುತ್ತಾನೆ. ಅದಕ್ಕೂ ಮುನ್ನ ಆಗ ತಮ್ಮ  ಪ್ರೀತಿ ಎಂದಿಗೂ ವಿಫಲವಾಗುವುದಿಲ್ಲ ಎಂದು ಹೇಳಿರುತ್ತಾನೆ.  ಕೆಲವು ದಿನಗಳ ನಂತರ, ಕಾಮಿನಿಯೂ ಸಾಯುತ್ತಾಳೆ. 

ಲಿಫ್ಟ್​ನಲ್ಲಿ ಸಿಕ್ಕಾಕ್ಕೊಂಡ ನಟಿ ಊರ್ವಶಿ- 550 ಕೋಟಿ ರೂ. ಒಡತಿ 'ಪ್ಲಾಸ್ಟಿಕ್​ ರಾಣಿ'ಯ ಹೊರತೆಗೆಯಲು ಸಾಹಸ...

ಶಂಕರ್ ಮಲಗುವ ಕೋಣೆಗೆ ಹೋದಾಗ, ಗೋಡೆಯಿಂದ ಒಂದು ನೆರಳು ಕಾಣಿಸುತ್ತದೆ. ಅದರಲ್ಲಿ ತನ್ನಂತ ವ್ಯಕ್ತಿಯನ್ನು ಕಂಡು ಆತನಿಗೆ ಆಶ್ಚರ್ಯವಾಗುತ್ತದೆ.  ನಂತರ, ಒಬ್ಬ ಮಹಿಳೆ ಹಾಡುವುದನ್ನು ಕೇಳಲಾಗುತ್ತದೆ ಮತ್ತು ಶಂಕರ್ ಅವಳ ಧ್ವನಿಯನ್ನು ಅನುಸರಿಸುತ್ತಾನೆ. ಅವಳು ಕೋಣೆಯಲ್ಲಿ ಕುಳಿತಿರುವುದನ್ನು ಅವನು ಕಂಡುಕೊಳ್ಳುತ್ತಾನೆ, ಆದರೆ ಅವಳು ಅವನನ್ನು ನೋಡಿದಾಗ ಓಡಿಹೋಗುತ್ತಾಳೆ. ಶಂಕರ್ ನ ಸ್ನೇಹಿತ ಶ್ರೀನಾಥ್ (ಕಾನು ರಾಯ್) ಬರುತ್ತಾನೆ ಮತ್ತು ಶಂಕರ್ ಹಿಂದಿನ ಜನ್ಮದಲ್ಲಿ ಅಪೂರ್ಣ ಪ್ರೇಮಕಥೆಯ ಪುರುಷ ಎಂದು ಅವನಿಗೆ ಅನುಮಾನವಾಗುತ್ತದೆ.  ಕೊನೆಗೆ ಇದು ನಿಜವೆಂದು ತಿಳಿಯುತ್ತದೆ. ಶಂಕರ್​ ಯಾರನ್ನಾದರೂ ಮದುವೆಯಾದರೆ, ಆಕೆಯ ದೇಹವನ್ನು ನಾನು ಹೊಕ್ಕಬಲ್ಲೆ ಎಂದಾಗ ತೋಟದ ಮಾಲೀಕನ ಮಗಳು ರಂಜನಾಳನ್ನು ಆತ ಮದುವೆಯಾಗುತ್ತಾನೆ.   


ಕಾಮಿನಿಯನ್ನು ಮರೆಯಲು ಅವನು ತನ್ನ ಹೆಂಡತಿ ರಂಜನಾ ಜೊತೆ ದೂರ ಹೋಗಲು ನಿರ್ಧರಿಸುತ್ತಾನೆ. ಎರಡು ವರ್ಷಗಳ ನಂತರ, ಶಂಕರ್ ಪ್ರತಿ ರಾತ್ರಿ ಎಲ್ಲಿಗೆ ಹೋಗುತ್ತಾನೆ ಎಂದು ತಿಳಿಯಲು ಪತಿಯನ್ನು ಹಿಂಬಾಲಿಸಿದಾಗ ಕಾಮಿನಿ ವಿಷಯ ತಿಳಿಯುತ್ತದೆ. ಆಗ ಪತ್ನಿಯನ್ನು ಕೊಲ್ಲುವಂತೆ ಕಾಮಿನಿ ಹೇಳುತ್ತಾಳೆ.  ಎಲ್ಲವನ್ನೂ ಕೇಳಿದ ರಂಜನಾ ವಿಷ ಕುಡಿದು ಪೊಲೀಸ್ ಠಾಣೆಗೆ ಹೋಗಿ ಶಂಕರ್ ವಿರುದ್ಧ ದೂರು ದಾಖಲು ಮಾಡುತ್ತಾಳೆ. ಮುಂದಾಗುವುದೆಲ್ಲವೂ ವಿಚಿತ್ರ, ಕುತೂಹಲದ ತಿರುವು. ಆ ಕಾಲದಲ್ಲಿಯೇ ಇಂಥದ್ದೊಂದು ಅದ್ಭುತ ಕಲ್ಪನೆ, ರೋಚಕ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಕೊಟ್ಟ ಸಿನಿಮಾ ಇದಾಗಿದೆ. 

ನಟಿ ಸಮಂತಾಗೂ ಈ ನಿರ್ದೇಶಕನೇ ಬೇಕು, ಪತ್ನಿಗೂ ಪತಿಯೇ ಬೇಕು: ಏನಾಗ್ತಿದೆ ಇಲ್ಲಿ?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಎಂಡಿಬಿ 2025 ಪಟ್ಟಿಯಲ್ಲಿ ದಾಖಲೆ: ಮೂವರು ಕನ್ನಡದ ತಾರೆಗಳಿಗೆ ಟಾಪ್‌ 10ರಲ್ಲಿ ಸ್ಥಾನ!
ಟಾಕ್ಸಿಕ್‌ನಿಂದ ಅನಿರುದ್ಧ್ ರವಿಚಂದರ್ ಔಟ್‌.. ಕನ್ನಡಿಗನಿಗೆ ಆ ಅವಕಾಶ ಕೊಟ್ಟ ರಾಕಿಂಗ್ ಸ್ಟಾರ್ ಯಶ್!