Aamir Khan Rejected Movies: ಮಿಸ್ಟರ್ ಪರ್ಫೆಕ್ಷನಿಸ್ಟ್ ಬೇಡವೆಂದ ಸಿನಿಮಾ ಸೂಪರ್ ಹಿಟ್‌ !

By Suvarna News  |  First Published Mar 13, 2022, 8:37 PM IST

ಬಾಲಿವುಡ್‌ (Bollywood)ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಸಿಕೊಳ್ಳೋರು ಅಮೀರ್‌ ಖಾನ್‌ (Aamir Khan).  ಆದ್ರೆ ಬಿಟೌನ್‌ನ ಈ ಮಿಸ್ಟರ್ ಪರ್ಫೆಕ್ಷನಿಸ್ಟ್ ಸಿನಿಮಾಗಳನ್ನು ಸೆಲೆಕ್ಟ್ ಮಾಡುವಾಗ ಮಾತ್ರ ಪರ್ಫೆಕ್ಟ್ ಆಗಿಲ್ಲ. ಅಮೀರ್ ಖಾನ್ ರಿಜೆಕ್ಟ್ ಮಾಡಿದ ಅದೆಷ್ಟೋ ಸಿನಿಮಾಗಳು (Cinema) ಸೂಪರ್ ಹಿಟ್ ಆಗಿವೆ. 


ಬಾಲಿವುಡ್‌ (Bollywood)ನಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಸಿಕೊಳ್ಳೋರು ಅಮೀರ್‌ ಖಾನ್‌. ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾಗಳ ವಿಷಯದಲ್ಲಿ ಮಾತ್ರ ತುಂಬಾ ಚ್ಯೂಸಿ. ಯಾವಾಗಲೂ ಪ್ರೇಕ್ಷಕರಿಗೆ ಮನರಂಜನೆ ನೀಡುವ ಉತ್ತಮ ಸಿನಿಮಾ (Movie)ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಅವರು ವರ್ಷಕ್ಕೆ ಇಂತಿಷ್ಟು ಸಿನಿಮಾ ಮಾಡಲೇಬೇಕೆಂಬ ಜಿದ್ದಿಗೆ ಬೀಳುವುದಿಲ್ಲ. ಹಲವು ವರ್ಷಗಳನ್ನು ತೆಗೆದುಕೊಂಡು ಅತ್ಯುತ್ತಮವಾದ ಒಂದು ಸಿನಿಮಾ ಮಾಡುತ್ತಾರೆ. ತಾರೆ ಜಮೀನ್ ಪರ್, ಲಗಾನ್, ರಂಗ್ ದೇ ಬಸಂತಿ, ತ್ರೀ ಈಡಿಯಟ್ಸ್‌, ದಂಗಲ್, ಪಿಕೆ, ತಲಾಶ್‌, ಗಝನಿ, ಅಮೀರ್‌ ಖಾನ್‌ ಅದ್ಭುತ ಅಭಿಯನವನ್ನು ತೋರಿಸಿದ ಅತ್ಯುತ್ತಮ ಕಥಾಹಂದರವನ್ನು ಹೊಂದಿರುವ ಸಿನಿಮಾಗಳು. 

ಆದ್ರೆ ನಿಮ್ಗೊಂದ್ ವಿಷ್ಯ ಗೊತ್ತಾ ? ಮಿಸ್ಟರ್‌ ಪರ್ಫೆಕ್ಷನಿಸ್ಟ್  ಸಹ ಕೆಲವೊಂದು ಬಾರಿ ಸರಿಯಾದ ಸಿನಿಮಾವನ್ನು ಆಯ್ಕೆ ಮಾಡುವಲ್ಲಿ ಎಡವಿದ್ದಾರೆ. ಕೆಲವು ಉತ್ತಮ ಅವಕಾಶಗಳನ್ನು ಕಳೆದುಕೊಂಡಿದ್ದಾರೆ.  ಅಮೀರ್ ಖಾನ್ ಬೇಡವೆಂದು ಬಿಟ್ಟ ಅದೆಷ್ಟೋ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅಮೀರ್ ಖಾನ್ ತಿರಸ್ಕರಿಸಿದ ಆ ಕೆಲವು ಚಿತ್ರಗಳು ಯಾವುವು ತಿಳಿಯೋಣ.

Tap to resize

Latest Videos

'ತಾರೆ ಜಮೀನ್‌ ಪರ್' ನಟ ದರ್ಶೀಲ್ ಸಫಾರಿ ಹೀಗಾಗಿದ್ದಾರೆ ನೋಡಿ...

ಡರ್
1993ರಲ್ಲಿ ತೆರೆಕಂಡ ಲವ್‌ ಥ್ರಿಲ್ಲರ್ ಸ್ಟೋರಿ ಡರ್‌. ಶಾರೂಕ್ ಖಾನ್ (Shah Rukh Khan) ಮತ್ತು ಜೂಹಿ ಚಾವ್ಲಾ ಅಭಿನಯದ ಡರ್ ಚಿತ್ರದ ಆ ವರ್ಷದ ಬ್ಲಾಕ್‌ಬಸ್ಟರ್ ಆಗಿತ್ತು. ಪಾಗಲ್‌ ಪ್ರೇಮಿಯ ಕಥಾಹಂದರವನ್ನು ಹೊಂದಿದ್ದ ಡರ್‌ ಚಿತ್ರವನ್ನು ಯಶ್ ಚೋಪ್ರಾ ನಿರ್ದೇಶಿಸಿದ್ದರು. ಚಿತ್ರ ಬರೀ ಪ್ರೀತಿ ಮಾತ್ರವಲ್ಲದೆ ಸಸ್ಪೆನ್ಸ್‌ನ್ನು ಸಹ ಹೊಂದಿದ್ದರಿಂದ ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಟ್ಟರು. ಚಿತ್ರ ಸೂಪರ್ ಹಿಟ್ ಆಯಿತು. ಆದರೆ ಶಾರುಖ್ ಖಾನ್‌ಗೆ ಮೊದಲು, ಆಮೀರ್‌ ಖಾನ್‌ಗೆ ಈ ಚಲನಚಿತ್ರವನ್ನು ಆಫರ್ ಮಾಡಲಾಯಿತು. ಆದರೆ ಪಾಗಲ್‌ ಪ್ರೇಮಿಯ ನೆಗೆಟಿವ್‌-ಶೇಡ್ ಪಾತ್ರವನ್ನು ಮಾಡಲು ಅಮೀರ್ ಖಾನ್‌ ಬಯಸಲಿಲ್ಲ. ಹೀಗಾಗಿ ಅದರಲ್ಲಿ ಶಾರೂಕ್ ಅಭಿನಯಿಸಿದರು. 

undefined

1942 ಎ ಲವ್ ಸ್ಟೋರಿ
ಅಮೀರ್ ತಿರಸ್ಕರಿಸಿದ ಮತ್ತೊಂದು ಅತ್ಯದ್ಭುತ ಸಿನಿಮಾ 1942 ಎ ಲವ್ ಸ್ಟೋರಿ. ಖಾನ್ ಅವರನ್ನು ಗಮನದಲ್ಲಿಟ್ಟುಕೊಂಡು ನಿರ್ದೇಶಕ ವಿಧು ವಿನೋದ್ ಚೋಪ್ರಾ ಕಥೆಯನ್ನು ಬರೆದಿದ್ದರು. ಆದರೆ ಕೊನೇ ಕ್ಷಣದಲ್ಲಿ ಅಮೀರ್‌ ಖಾನ್ ಈ ಪಾತ್ರವನ್ನು ತಿರಸ್ಕರಿಸಿದರು. ಅನಿಲ್ ಕಪೂರ್ ಚಿತ್ರದಲ್ಲಿ ಅಭಿನಯಿಸಿದರು. 1994ರ ಅತ್ಯುತ್ತಮ-ಚಿತ್ರವಾಗಿ 1942 ಎ ಲವ್ ಸ್ಟೋರಿ ಹೊರ ಹೊಮ್ಮಿತು.

Amir Khan Gifts Expensive Saree: ಕರೀನಾಗಾಗಿ 4 ಪಟ್ಟು ಬೆಲೆ ನೀಡಿ ದುಬಾರಿ ಸೀರೆ ಖರೀದಿಸಿದ ಆಮೀರ್!

ಜೋಶ್
ಜೋಶ್ ಚಿತ್ರಕ್ಕೆ ಶಾರೂಕ್ ಖಾನ್ ನಿರ್ವಹಿಸಿದ ಪಾತ್ರಕ್ಕೆ ಅಮೀರ್ ಖಾನ್‌ನ್ನು ಪರಿಗಣಿಸಲಾಗಿರಲ್ಲಿಲ್ಲ. ಬದಲಾಗಿ ಅವರು ಪ್ರಕಾಶ್ ಪಾತ್ರವನ್ನು ಮಾಡಬೇಕಿತ್ತು. ಆದರೆ ಅಮೀರ್ ಖಾನ್‌ಗೆ ಈ ಪಾತ್ರದ ಚಿತ್ರಣ ಇಷ್ಟವಾಗಲಿಲ್ಲ ಮತ್ತು ಅವರು ಚಿತ್ರದಲ್ಲಿ ಅಭಿನಯಿಸಲು ನಿರಾಕರಿಸಿದರು. ಅಂತಿಮವಾಗಿ, ಶರದ್ ಕಪೂರ್ ಇದರಲ್ಲಿ ನಟಿಸಬೇಕಾಯಿತು. ಚಿತ್ರ ಥಿಯೇಟರ್‌ಗಳಲ್ಲಿ ಸೂಪರ್ ಹಿಟ್ ಆಯಿತು.

ನಾಯಕ್ ದಿ ರಿಯಲ್ ಹೀರೋ
ಶಂಕರ್ ಅವರ 'ನಾಯಕ್: ದಿ ರಿಯಲ್ ಹೀರೋ' ಚಿತ್ರವನ್ನು ತಿರಸ್ಕರಿಸುವ ಮೂಲಕ ಅಮೀರ್ ಉತ್ತಮ ಅವಕಾಶವನ್ನು ಕಳೆದುಕೊಂಡರು. ವರದಿಗಳ ಪ್ರಕಾರ, ಖಾನ್ ಅವರನ್ನು ಆರಂಭದಲ್ಲಿ ಶಿವಾಜಿ ರಾವ್‌ಗಾಗಿ ಸಂಪರ್ಕಿಸಲಾಯಿತು, ಆದರೆ ನಟನಿಗೆ ಚಿತ್ರ ಮಾಡಲು ಸಾಧ್ಯವಾಗಲಿಲ್ಲ. ಅನಿಲ್ ಕಪೂರ್ ಅವಕಾಶವನ್ನು ಪಡೆದುಕೊಂಡರು. ಅನಿಲ್‌ ಕಪೂರ್ ಈ ಪಾತ್ರದಲ್ಲಿ ವೃತ್ತಿಜೀವನದ ಅತ್ಯುತ್ತಮ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಯಿತು. 

ಸ್ವದೇಸ್
2001ರ ಗೇಮ್ ಚೇಂಜರ್ ಬ್ಲಾಕ್‌ಬಸ್ಟರ್ 'ಲಗಾನ್' ನಂತರ, ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಮುಂದಿನ ಸಾಮಾಜಿಕ ಚಿತ್ರ  'ಸ್ವದೇಸ್' ಗಾಗಿ ಅಮೀರ್ ಖಾನ್‌ ಅವರನ್ನು ಸಂಪರ್ಕಿಸಿದರು. ವರದಿಗಳ ಪ್ರಕಾರ, ಖಾನ್ ಚಿತ್ರ ಮಾಡಲು ನಿಜವಾಗಿಯೂ ಉತ್ಸುಕರಾಗಿರಲಿಲ್ಲ, ಆದರೆ ಅವರು ಚಿತ್ರದ ಮಹೂರ್ತದಲ್ಲಿ ಹಾಜರಿದ್ದರು. 'ಸ್ವದೇಸ್' ಗಲ್ಲಾಪೆಟ್ಟಿಗೆಯಲ್ಲಿ ಹಣ ಗಳಿಸಲಿಲ್ಲ, ಆದರೆ ಇದು ಜನರ ಮನಸ್ಸಿನಲ್ಲಿ ಹೆಚ್ಚು ಸ್ಥಾನಮಾನವನ್ನು ಗಳಿಸಿತ್ತು. ಈ ಸಿನಿಮಾವನ್ನು ಶಾರುಖ್ ಖಾನ್ ಅಭಿನಯದ ಅತ್ಯುತ್ತಮ ಚಲನಚಿತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಲಾಲ್ ಸಿಂಗ್ ಚಡ್ಡಾ ಅಮೀರ್‌ ಖಾನ್ ಮುಂದಿನ ಸಿನಿಮಾವಾಗಿದೆ. ಅದ್ವೈತ್ ಚಂದನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ಮತ್ತು ಎರಿಕ್ ರೋತ್ ಮತ್ತು ಅತುಲ್ ಕುಲಕರ್ಣಿ ಚಿತ್ರಕಥೆಯನ್ನು ಬರೆದಿದ್ದಾರೆ. ಚಿತ್ರದಲ್ಲಿ ತೆಲುಗು ನಟ ನಾಗಚೈತನ್ಯ ಸಹ ಅಭಿನಯಿಸುತ್ತಿದ್ದಾರೆ.

click me!