ತನ್ನದೇ ಮದ್ವೆ ದಿನವೂ ತೂರಾಡ್ತಿದ್ದ ಫರಾ ಖಾನ್‌: ಪಿಗ್ಗಿ, ರಾಣಿ ಜೊತೆಗಿನ ಫೋಟೋ ಶೇರ್

By Suvarna NewsFirst Published Jul 30, 2022, 12:41 PM IST
Highlights

ಬಾಲಿವುಡ್‌ನ ಖ್ಯಾತ ಕೋರಿಯೋಗ್ರಾಫರ್ ಫರಾ ಖಾನ್‌ ಅವರು ತಮ್ಮ ಮದುವೆಯ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ರಾಣಿ ಮುಖರ್ಜಿ ಅವರು ಮದುವಣಗಿತ್ತಿ ಫರಾ ಖಾನ್‌ ಜೊತೆಯಲ್ಲಿದ್ದಾರೆ.

ಮದುವೆ ಆಲ್ಬಂಗಳನ್ನು ತೆರೆಯುತ್ತಾ ಹೋದಂತೆ ಹಲವು ರಸಮಯ ಘಟನೆಗಳು ನೆನಪಾಗುತ್ತಿರುತ್ತವೆ. ಅಪ್ಪ ಅಮ್ಮನ ಮದುವೆ ಅಲ್ಬಂಗಳನ್ನು ತೆಗೆದು ಮಕ್ಕಳು ನೋಡುತ್ತಿದ್ದರೆ. ಆ ಕ್ಷಣ ನಡೆದ ಹಲವು ಸ್ವಾರಸ್ಯಕರ ಘಟನೆಗಳನ್ನು ಪೋಷಕರು ವಿವರಿಸುವುದುಂಟು ಹಾಗೆಯೇ ಈಗ ಬಾಲಿವುಡ್‌ನ ಖ್ಯಾತ ಕೊರಿಯೋಗ್ರಾಫರ್ ಒಬ್ಬರು ತಮ್ಮ ಮದುವೆಯ ಫೋಟೋಗಳನ್ನು ಶೇರ್ ಮಾಡಿ ರಸಮಯ ಕ್ಷಣವನ್ನು ಮೆಲುಕು ಹಾಕಿದ್ದಾರೆ. 

ಬಾಲಿವುಡ್‌ನ ಖ್ಯಾತ ಕೋರಿಯೋಗ್ರಾಫರ್ ಫರಾ ಖಾನ್‌ ಅವರು ತಮ್ಮ ಮದುವೆಯ ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ರಾಣಿ ಮುಖರ್ಜಿ ಅವರು ಮದುವಣಗಿತ್ತಿ ಫರಾ ಖಾನ್‌ ಜೊತೆಯಲ್ಲಿದ್ದಾರೆ. ಫರಾ ಮುಖ ನಶೆಯೇರಿದಂತೆ ಕಾಣುತ್ತಿದೆ. 2004 ರಲ್ಲಿ ಮಂಗಳೂರು ಮೂಲದ ಶಿರೀಷ್ ಕುಂದರ್ ಅವರನ್ನು ಫರಾ ವಿವಾಹವಾಗಿದ್ದರು, ಇವರಿಗೆ ಮೂವರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಸಂಗೀತಾ ಕಾರ್ಯಕ್ರಮದ ಫೋಟೋ ಇದಾಗಿದೆ. 

Latest Videos

ಈ ಫೋಟೋದಲ್ಲಿ ಫರಾ ಅವರು ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ರಾಣಿ ಮುಖರ್ಜಿ ಅವರ ಜೊತೆ ಡಾನ್ಸ್ ಮಾಡುತ್ತಿದ್ದಾರೆ. ಫೋಟೋದ ಜೊತೆ ಫ್ಲಾಶ್‌ಬ್ಯಾಕ್ ಫ್ರೈಡೇ ಎಂದು ಬರೆದುಕೊಂಡಿರುವ ಫರಾ, ತನ್ನದೇ ಮದುವೆಯಲ್ಲಿ ಪಾನಮತ್ತಳಾಗಿರುವ ವಧು ಜೊತೆ ಪ್ರಿಯಾಂಕಾ ಛೋಪ್ರ ಹಾಗೂ ರಾಣಿ ಮುಖರ್ಜಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಮದುವೆಯ ಗೊಜಲಿನಲ್ಲಿ ನಾನು ಮದುವೆ ದುಪ್ಪಟ್ಟ ನೆಕ್ಲೇಸ್‌, ಹಾಗೂ ಕೂದಲಿನ ಉದುರಿ ಕಳೆದುಕೊಂಡೆ ಎಂದು ಅವರು ಬರೆದುಕೊಂಡಿದ್ದಾರೆ. 

 

ಫರಾ ಈ ಹಿಂದೆ ತನ್ನ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಹೃತಿಕ್ ರೋಷನ್ ಹಾಗೂ ಅಭಿಷೇಕ್ ಬಚ್ಚನ್‌ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಫರಾ ತಮ್ಮ ಪತಿ ಶಿರೀಶ್ ಕುಂದರ್ ಅವರನ್ನು ಶಾರೂಖ್ ಖಾನ್ ಅಭಿನಯದ ಮೇ ಹೂನಾ ಸಿನಿಮಾ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. 2008ರಲ್ಲಿ ಶಿರೀಶ್ ಫರಾ ದಂಪತಿ ಮುದ್ದಾದ ತ್ರಿವಳಿಗಳಿಗೆ ಪೋಷಕರಾಗಿದ್ದರು. 

ಬಾಲಿವುಡ್‌ಗೆ ಬಂದು 30 ವರ್ಷ: ಸಂದೇಶ್‌ ಆತೇ ಹೈಗೆ ಕೊರಿಯೋಗ್ರಾಪ್ ಮಾಡಿದನ್ನು ನೆನೆದ ಫರ್ಹಾ

ಹಿಂದಿ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿರುವ ಫರಾ, 80 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನೂರಕ್ಕೂ ಹೆಚ್ಚು ಹಾಡುಗಳಿಗೆ  ನೃತ್ಯ ಸಂಯೋಜನೆಯನ್ನು ಮಾಡಿದ್ದಾರೆ. ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ಆರು ಬಾರಿ ಇವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಒಲಿದು ಬಂದಿದೆ. ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಫರಾ ಪಡೆದಿದ್ದಾರೆ. ಜೊತೆಗೆ, ಅವರು ತಮಿಳು ಚಲನಚಿತ್ರಗಳಲ್ಲಿ ಇವರು ಕೆಲಸ ಮಾಡಿದ್ದಾರೆ. 

ಅಂತಾರಾಷ್ಟ್ರೀಯ ಯೋಜನೆಗಳಾದ ಮಾರಿಗೋಲ್ಡ್: ಆನ್ ಅಡ್ವೆಂಚರ್ ಇನ್ ಇಂಡಿಯಾದಲ್ಲಿ ಕೆಲಸ ಮಾಡಿದ್ದಾರೆ. ಇದ್ದಲ್ಲದೇ ಮಾನ್ಸೂನ್ ವೆಡ್ಡಿಂಗ್, ಬಾಂಬೆ ಡ್ರೀಮ್ಸ್ ಮತ್ತು ಚೀನೀ ಚಲನಚಿತ್ರವಾದ ಪರ್ಹೆಪ್ಸ್‌ ಲವ್ ಮತ್ತು ಕುಂಗ್ ಫೂ ಯೋಗ ಮುಂತಾದ ಅಂತಾರಾಷ್ಟ್ರೀಯ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಟೋನಿ ಪ್ರಶಸ್ತಿ ಮತ್ತು ಗೋಲ್ಡನ್ ಹಾರ್ಸ್ ಪ್ರಶಸ್ತಿಗೆ ಇವರು  ನಾಮ ನಿರ್ದೇಶನಗೊಂಡಿದ್ದರು.  ಅಲ್ಲದೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾವಾದ ಮೈ ಹೂ ನಾ (2004) ಮತ್ತು ಅವರ ಎರಡನೇ ನಿರ್ದೇಶನದ ಓಂ ಶಾಂತಿ ಓಂ (2007) ಗಾಗಿ ಅತ್ಯುತ್ತಮ ನಿರ್ದೇಶಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. 

ಸಾನಿಯಾ ಮಿರ್ಜಾ ಪುತ್ರ ಸಿನಿಮಾಗೆ ಎಂಟ್ರಿ? ಕಡಿಮೆ ಬೆಲೆಗೆ ಸಿಕ್ಕ ಹೀರೋ ಎಂದ ನಿರ್ದೇಶಕಿ ಫರಾ ಖಾನ್

click me!