
ಬೆಂಗಳೂರು: ಛಾವಾ ಚಿತ್ರದ ಸಕ್ಸಸ್‌ನಲ್ಲಿರೋ ನಟಿ ರಶ್ಮಿಕಾ ಮಂದಣ್ಣಗೆ ಕೆಲ ಸಿನಿಮಾ ವಿಶ್ಲೇಷಕರು ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಎನಿಮಲ್, ಪುಷ್ಪಾ-2 ನಂತರ ಬಿಡುಗಡೆಗೊಂಡಿರುವ ರಶ್ಮಿಕಾ ನಟನೆಯ ಛಾವಾ ಸಿನಿಮಾ ಪ್ರೇಕ್ಷಕರು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಮುಂದಿನ ತಿಂಗಳು ಇದೇ ಮಾರ್ಚ್‌ನಲ್ಲಿ ರಶ್ಮಿಕಾ ನಟನೆಯ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಒಂದು ವೇಳೆ ಈ ಸಿನಿಮಾ ಮಾರ್ಚ್ 30ರಂದು ಬಿಡುಗಡೆಯಾದ್ರೆ ಬಾಕ್ಸ್ ಆಫಿಸ್‌ನಲ್ಲಿ ಸೋಲಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಚಿತ್ರತಂಡ ಮಾತ್ರ 1,000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಮಾರ್ಚ್‌ನಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ರಶ್ಮಿಕಾ ನಟನೆಯ ಸಿನಿಮಾ 1,000 ಅಲ್ಲ, 300 ಕೋಟಿಯೂ ಕಲೆಕ್ಷನ್ ಮಾಡಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಆದ್ರೆ ಚಿತ್ರತಂಡ 1000 ಕೋಟಿಗೂ ಅಧಿಕ ಹಣ ಸಂಪಾದನೆ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.
ಈ ಬಾರಿ ಬಿಡುಗಡೆಗೆ ಸಿದ್ಧವಾಗಿರುವ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಬಾರಿಯ ಈದ್‌ಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಈದ್‌ಗೆ ರಿಲೀಸ್ ಆಗಿರುವ ಕಾರಣ, ಸಿನಿಮಾ ಸಕ್ಸಸ್ ಕಾಣುತ್ತೆ ಎಂಬುವುದು ಚಿತ್ರತಂಡದ ನಿರೀಕ್ಷೆಯಾಗಿದೆ. ಆದ್ರೆ ಈ ಬಾರಿ ಈದ್ ಭಾನುವಾರ ಬಂದಿದೆ. ಭಾನುವಾರ ಬಂದಿರೋ ಕಾರಣ ಸಿನಿಮಾ ವಿಶ್ಲೇಷಕರು ಕೆಲ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಸಿಕಂದರ್ ಸಿನಿಮಾ ಈದ್‌ಗೆ ಎಂದು ಮಾತ್ರ ಹೇಳಲಾಗಿದ್ದು, ಚಿತ್ರತಂಡ ಈವರೆಗೂ ಅಂತಿಮ ದಿನಾಂಕವನ್ನು ಪ್ರಕಟಿಸಿಲ್ಲ. ಒಂದು ವೇಳೆ ಹಬ್ಬದ ದಿನವೇ ಸಿಕಂದರ್ ಬಿಡುಗಡೆಯಾದ್ರೆ ಬಾಕ್ಸ್ ಆಫಿಸ್ ಕಲೆಕ್ಷನ್ ಕಡಿಮೆಯಾಗಲಿದೆ ಎಂದು ಸಿನಿಮಾ ವಿಮರ್ಶಕರು ಹೇಳುತ್ತಿದ್ದಾರೆ. ಭಾನುವಾರ ರಿಲೀಸ್ ಆದ್ರೆ ಜನರು ಆ ದಿನ ಮಾತ್ರ ಥಿಯೇಟರ್‌ಗೆ ಬರುತ್ತಾರೆ. ಸೋಮವಾರದಿಂದ ಮತ್ತೆ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗುತ್ತಾರೆ. ಮುಂದಿನ ವೀಕೆಂಡ್ ವೇಳೆಗೆ ಚಿತ್ರದ ಕಥೆ ರಿವೀಲ್, ಸಿನಿಮಾ ಕ್ರೇಜ್ ಕಡಿಮೆಯಾಗುತ್ತದೆ. ಇದರಿಂದ ಸಿಕಂದರ್ ಸಿನಿಮಾ ಕಲೆಕ್ಷನ್ ಇಳಿಕೆಯಾಗಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ.
ಇದನ್ನೂ ಓದಿ: ಛಾವಾ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಮುಡಿಗೆ ಮತ್ತೊಂದು ಕಿರೀಟ
ಇತ್ತೀಚೆಗೆ ಕೆಲ ಸಿನಿಮಾಗಳನ್ನು ಗುರುವಾರವೇ ಬಿಡುಗಡೆ ಮಾಡಲಾಗುತ್ತಿದೆ. ಶುಕ್ರವಾರ ಸಂಜೆಯಿಂದಲೇ ಜನರು ಥಿಯೇಟರ್‌ಗೆ ಬರುತ್ತಾರೆ. ಶನಿವಾರ ಮತ್ತು ಭಾನುವಾರ ರಜೆ ಇರೋದರಿಂದ ಮೂರು ದಿನ ಜನರಿಗೆ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಲು ಅವಕಾಶ ಸಿಗುತ್ತೆ. ಈ ಕಾರಣದಿಂದ ಬಹುತೇಕ ನಿರ್ಮಾಪಕರು ಚಿತ್ರವನ್ನು ಗುರುವಾರದಂದು ಬಿಡುಗಡೆ ಮಾಡಲು ಮುಂದಾಗುತ್ತಿದ್ದಾರೆ. ಆದ್ರೆ ಭಾನುವಾರ ರಿಲೀಸ್ ಆದ್ರೆ ಒಂದು ದಿನ ಮಾತ್ರ ಚಿತ್ರಮಂದಿರ ಭರ್ತಿ ಆಗುತ್ತೆ ಅನ್ನೋದು ಸಿನಿ ವಿಶ್ಲೇಷಕರ ಮಾತಾಗಿದೆ.
ಟೈಗರ್-3 ಬಳಿಕ ಸಲ್ಮಾನ್ ಖಾನ್ ನಟನೆಯ ಸಿನಿಮಾ ಬಿಡುಗಡೆಯಾಗುತ್ತಿದೆ. ಟೈಗರ್-3 ಬಳಿಕ ಸಲ್ಮಾನ್ ಖಾನ್ ಎರಡ್ಮೂರು ಚಿತ್ರದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಸಲ್ಮಾನ್ ಪೂರ್ಣಪ್ರಮಾಣದ ನಾಯಕನಾಗಿ ನಟಿಸಿರುವ 'ಸಿಕಂದರ್' ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದು, ನಾಯಕಿಯರಾಗಿ ರಶ್ಮಿಕಾ ಮಂದಣ್ಣ ಮತ್ತು ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಟ ಕಿಶೋರ್, ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ ಸಹ ಸಿಕಂದರ್‌ನಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಸತ್ಯದ ದರ್ಶನ ಮಾಡಿಸಿದ್ರಾ ರಶ್ಮಿಕಾ ಮಂದಣ್ಣ? ಅಭಿಮಾನಿಗಳಿಂದ ಹರಿದುಬಂತು ಶ್ಲಾಘನೆಗಳ ಮಹಾಪೂರ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.