'ಫೈಟರ್' ಚಿತ್ರದ ಇಷ್ಕ್ ಜೈಸಾ ಕುಚ್ ಹಾಡು ರಿಲೀಸ್ ಆಗಿದೆ: ದೀಪಿಕಾ ಬೋಲ್ಡ್ ಅವತಾರ ನೋಡಿ ಬಿಚ್ಚಿದ್ರೆ ಮಾತ್ರ ಬೆಲೆನಾ ಅಂತ ಕೇಳ್ತಿದ್ದಾರೆ ನೆಟ್ಟಿಗರು!
ಅನಿಮಲ್ ಚಿತ್ರದಲ್ಲಿ ಅರೆಬರೆ ಬೆತ್ತಲಾಗಿ ರಶ್ಮಿಕಾ ಕಾಣಿಸಿಕೊಂಡರೂ, ಪೂರ್ತಿ ಬೆತ್ತಲಾಗಿ ಕಾಣಿಸಿಕೊಂಡ ತೃಪ್ತಿ ಡಿಮ್ರಿಯೇ ನ್ಯಾಷನಲ್ ಕ್ರಷ್ ಆಗಿ ಸಕತ್ ಡಿಮ್ಯಾಂಡ್ ಕುದುರಿಸಿಕೊಳ್ತಿರೋ ಈ ಹೊತ್ತಿನಲ್ಲಿ, ಈಗ ಇನ್ನೊಂದು ಬೋಲ್ಡ್ ಅವತಾರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಫೈಟರ್ ಚಿತ್ರದಲ್ಲಿ ನಟ ಹೃತಿಕ್ ರೋಷನ್ ಜೊತೆ ಬೀಚ್ನಲ್ಲಿ ರೊಮ್ಯಾನ್ಸ್ ಮಾಡಿರುವ ಇಷ್ಕ್ ಜೈಸಾ ಕುಚ್ ಹಾಡು ರಿಲೀಸ್ ಆಗಿದೆ. ಇದಾಗಲೇ ಪಠಾಣ್ನಲ್ಲಿ ಶಾರುಖ್ ಖಾನ್ ಜೊತೆ ಹಸಿಬಿಸಿಯಾಗಿ ನಟಿಸಿರುವ ದೀಪಿಕಾ ಪಡುಕೋಣೆ, ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ನಟ ಹೃತಿಕ್ ರೋಷನ್ ಜೊತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪಠಾಣ್ನಲ್ಲಿ ಕೇಸರಿ ಬಿಕಿನಿ ಧರಿಸಿ ಬೇಷರಂ ರಂಗ್ ಎಂದು ಹಾಡಿ ವಿವಾದ ಸೃಷ್ಟಿಸಿದ್ದರೆ, ಈಗ ಕಪ್ಪು ಬಿಕಿನಿ ಧರಿಸಿ ರೊಮ್ಯಾನ್ಸ್ ಮಾಡಿದ್ದಾರೆ.
ಹೃತಿಕ್ ರೋಷನ್ ಶರ್ಟ್ಲೆಸ್ ಆಗಿ ಕಾಣಿಸಿಕೊಂಡಿದ್ದರೆ, ದೀಪಿಕಾ ಪೂರ್ಣ ಬೆತ್ತಲಾಗಲಿಲ್ಲ ಎನ್ನುವುದಷ್ಟೇ ಸಮಾಧಾನ ಎನ್ನುತ್ತಿದ್ದಾರೆ ನೆಟ್ಟಿಗರು. ನೀರಿನಲ್ಲಿ ವಾಟರ್ ಬೇಬಿ ಪೋಸ್ನಲ್ಲಿ ಇವರು ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ವಿಶಾಲ್ ಹಾಗೂ ಶೇಖರ್ ಕಂಪೋಸ್ ಮಾಡಿದ್ದಾರೆ. ಕುಮಾರ್ ಲಿರಿಕ್ಸ್ ಬರೆದಿದ್ದು ಮೆಲೊ ಡಿ ರ್ಯಾಪ್ ಒದಗಿಸಿದ್ದಾರೆ. ಈ ಹಾಡಿಗೆ ಹೃತಿಕ್ ರೋಷನ್ ಗರ್ಲ್ಫ್ರೆಂಡ್ ಗಾಯಕಿ ಸಬಾ ಆಜಾದ್ ಸೇರಿದಂತೆ ಹಲವರು ಅಭಿನಂದನೆ ಸೂಚಿಸಿದ್ದಾರೆ. ಹಾರ್ಟ್ ಮತ್ತು ಫೈರ್ ಇಮೋಜಿ ಹಾಕಿ ಖುಷಿ ಪಟ್ಟಿದ್ದಾರೆ. ಈ ಹಾಡಿನಲ್ಲಿ ದೀಪಿಕಾ ಮತ್ತು ಹೃತಿಕ್ ರೋಷನ್ ಕೆಮೆಸ್ಟ್ರಿಗೆ ಹಲವು ಫ್ಯಾನ್ಸ್ ಮನಸೋತು ಫಿದಾ ಆಗಿದ್ದರೆ, ಇನ್ನು ಕೆಲವರು ಮಾತ್ರ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ನಲ್ಲಿ ನಟಿಯರು ಬೆತ್ತಲಾದರೆ ಮಾತ್ರ ಬೆಲೆ ಎನ್ನುವುದು ದಿನೇ ದಿನೇ ಸಾಬೀತಾಗುತ್ತಿದೆ ಎಂದು ಹೇಳುತ್ತಿದ್ದಾರೆ.
ದೇಶಭಕ್ತಿ ಮೆರೆವ ಚಿತ್ರಕ್ಕೂ ನಟರು ಬೆತ್ತಲಾಗೋದು ಅನಿವಾರ್ಯನಾ? 'ಫೈಟರ್' ಟೀಸರ್ ನೋಡಿ ಛೀ ಅಂತಿದ್ದಾರೆ ನೆಟ್ಟಿಗರು!
ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ 2024ರ ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದೆ. ಇನ್ನುಳಿದಂತೆ ಕರಣ್ ಸಿಂಗ್ ಗೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜಿಜ್ ತಾರಾಗಣದಲ್ಲಿದ್ದಾರೆ. ಐಮ್ಯಾಕ್ಸ್ ತ್ರೀಡಿ ವರ್ಷನ್‌ನಲ್ಲೂ ಈ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.
ಈ ಹಿಂದೆ ಚಿತ್ರದ ಟೀಸರ್ ರಿಲೀಸ್ ಆದಾಗಲೂ ಸಾಕಷ್ಟು ಜನರು ಟೀಕೆ ಮಾಡಿದ್ದರು. ಫೈಟರ್ ಜೆಟ್‌ನ ಸಾಹಸವೇನೋ ರೋಮಾಂಚನಗೊಳಿಸುವಂತಿದೆ. ಮೊನಾಕಿನಿ ತೊಟ್ಟು ಸಾಗರ ತೀರದಲ್ಲಿ ದೀಪಿಕಾ, ಹೃತಿಕ್ ರೋಷನ್ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ದೇಶ ಭಕ್ತಿ ಮೆರೆಯುವ ಚಿತ್ರ ಎನ್ನಲಾಗಿದೆ. ಟೀಸರ್ ಕೊನೆಯಲ್ಲಿ ಹೃತಿಕ್ ರಾಷ್ಟ್ರಧ್ವಜ ಹಿಡಿದು ಬರುತ್ತಾರೆ. ಅಲ್ಲಿಗೆ ದೇಶದ ಬಗ್ಗೆ ಇರುವ ಚಿತ್ರ ಇದಾಗಿದೆ. ದೇಶಭಕ್ತಿ ಮೆರೆಯುವ ಚಿತ್ರಕ್ಕೂ ಇಂಥ ಕಳಪೆ ದೃಶ್ಯಗಳು ಬೇಕೆ ಎಂದು ಕೇಳುತ್ತಿದ್ದರು.
ನನ್ನಪ್ಪ ಮಹಾ ದರೋಡೆಕೋರ: ಕಾಫಿ ವಿತ್ ಕರಣ್ನಲ್ಲಿ ಶಾಕಿಂಗ್ ವಿಷ್ಯ ಬಹಿರಂಗಪಡಿಸಿದ ಅಜಯ್ ದೇವಗನ್!