13ನೇ ವಯಸ್ಸಿಗೆ ಮನೆಬಿಟ್ಟಿದ್ದ ನನ್ನಪ್ಪ ಮಹಾ ದರೋಡೆಕೋರನಾಗಿದ್ದ ಎಂಬ ಶಾಕಿಂಗ್ ವಿಷಯವನ್ನು ಬಹಿರಂಗಪಡಿಸಿದ್ದಾರೆ ಅಜಯ್ ದೇವಗನ್!
ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ರಿಯಾಲಿಟಿ ಷೋನಲ್ಲಿ ಈ ಬಾರಿ ನಟರಾದ ಅಜಯ್ ದೇವಗನ್ ಮತ್ತು ರೋಹಿತ್ ಶೆಟ್ಟಿ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಕೆಲವು ವಿಷಯಗಳ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಷೋ ಒಂದು ವಿವಾದಾತ್ಮಕ ಷೋ ಎಂದೇ ಪ್ರಖ್ಯಾತಿ ಹೊಂದಿರುವ ಈ ಷೋನಲ್ಲಿ ಇದಾಗಲೇ ಹಲವಾರು ನಟರು ಮಾತನಾಡಿರುವುದು ವಿವಾದಕ್ಕೂ ಕಾರಣವಾಗಿದ್ದಿದೆ. ಇದೇ ವೇಳೆ ಕೆಲವು ನಟರು ತಮ್ಮ ತೀರಾ ಖಾಸಗಿ ವಿಷಯಗಳನ್ನೂ ಶೇರ್ ಮಾಡಿಕೊಂಡಿದ್ದಿದೆ. ಅದೇ ರೀತಿ, ಈಗ ನಟ ಅಜಯ್ ದೇವಗನ್ ಅವರು ತಮ್ಮ ಖಾಸಗಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಅಂದಹಾಗೆ ಸಿನಿಪ್ರಿಯರಿಗೆ ತಿಳಿದಿರುವಂತೆ ಅಜಯ್ ದೇವಗನ್ ಅವರ ತಂದೆ ವೀರು ದೇವಗನ್ ಅವರು ಪ್ರಸಿದ್ಧ ಸಾಹಸ ನಿರ್ದೇಶಕರು. ಆ್ಯಕ್ಷನ್ ನಿರ್ದೇಶಕರಾಗಿ ಇವರು 80ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಸ ಸನ್ನಿವೇಶಗಳನ್ನು ನಿರ್ದೇಶಿಸಿದ್ದಾರೆ. ಅಜಯ್ ದೇವಗನ್, ಅಮಿತಾಭ್ ಬಚ್ಚನ್, ಮನಿಷಾ ಕೋಯಿರಾಲ ಮತ್ತು ಸುಷ್ಮಿತಾ ಸೇನ್ ತಾರಾಗಣದ 'ಹಿಂದೂಸ್ತಾನ್ ಕೀ ಕಸಮ್' (1999) ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಿತರಾಗಿದ್ದರು ವೀರು ದೇವಗನ್ ಅವರು. ದಿಲ್‍ವಾಲೆ (1994), ಹಿಮ್ಮತ್‌ವಾಲಾ (1983), ಶಹನ್‌ಶಾಹ್ (1988) ಚಿತ್ರಗಳು ಅವರ ಸಾಹಸ ನಿರ್ದೇಶನದಲ್ಲಿ ಮೂಡಿಬಂದಿರುವ ಪ್ರಮುಖ ಸಿನಿಮಾಗಳು.
undefined
ಟೈಟಾನಿಕ್ನಲ್ಲಿ ನಾಯಕನಿಗೆ ಖಾಸಗಿ ಅಂಗ ತೋರಿಸಲು ಕೇಟ್ಗೆ ನಾಚಿಕೆಯೇ ಆಗಿರಲಿಲ್ಲ... ಏಕೆಂದರೆ...
ಆದರೆ ಕಾಫಿ ವಿತ್ ಕರಣ್ನಲ್ಲಿ ತಮ್ಮ ತಂದೆಯ ಇನ್ನೊಂದು ಮುಖದ ಬಗ್ಗೆ ಅಜಯ್ ದೇವಗನ್ ಮಾತನಾಡಿದ್ದಾರೆ. ಅಸಲಿಗೆ ನಮ್ಮ ತಂದೆ ಅತಿ ದೊಡ್ಡ ಗ್ಯಾಂಗ್ಸ್ಟರ್ ಆಗಿದ್ದರು ಎನ್ನುವ ಶಾಕಿಂಗ್ ವಿಷಯವನ್ನು ರಿವೀಲ್ ಮಾಡಿದ್ದಾರೆ. ವಾಸ್ತವವಾಗಿ, ನನ್ನ ತಂದೆ 13 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋದರು ಮತ್ತು ದರೋಡೆಕೋರರಾಗಿದ್ದರು ಎಂದು ನಟ ಬಹಿರಂಗಪಡಿಸಿದ್ದಾರೆ. "ಅವರು ಕೇವಲ 13 ವರ್ಷದವರಾಗಿದ್ದಾಗ ಪಂಜಾಬ್‌ನಲ್ಲಿರುವ ತಮ್ಮ ಮನೆಯಿಂದ ಓಡಿಹೋದರು. ಅವರು ರೈಲು ಟಿಕೆಟ್ ಇಲ್ಲದೆ ಮುಂಬೈಗೆ ಬಂದರು, ಈ ಹಿನ್ನೆಲೆಯಲ್ಲಿ ಜೈಲಿಗೆ ಅವರನ್ನು ಹಾಕಲಾಯಿತು. ಕೈಯಲ್ಲಿ ಕೆಲಸವಿರಲಿಲ್ಲ, ತಿನ್ನಲು ಆಹಾರವಿರಲಿಲ್ಲ. ಯಾರೋ ಅವರಿಗೆ ಸಹಾಯ ಮಾಡಿದರು, ತಮ್ಮ ಕ್ಯಾಬ್ ತೊಳೆದರೆ, ಕ್ಯಾಬ್ನಲ್ಲಿ ಮಲಗಲು ಅವಕಾಶ ಕೊಡುವುದಾಗಿ ಯಾರೋ ಒಬ್ಬರು ಹೇಳಿದರು. ನನ್ನ ತಂದೆ ಹಾಗೆಯೇ ಮಾಡಿ ನಂತರ ಕ್ಯಾಬ್ ತೊಳೆಯಲು ಶುರು ಮಾಡಿದರು. ಅದಾದ ಬಳಿಕ ಕಾರ್ಪೆಂಟರ್ ಆಗಿ ಕೆಲಸ ಮಾಡಿದರು. ಅಲ್ಲಿಂದಲೇ ಅವರಿಗೆ ದರೋಡೆಕೋರರ ಪರಿಚಯವಾಗಿ ದೊಡ್ಡ ದರೋಡೆಕೋರರೂ ಆದರು ಎಂದು ಹೇಳಿದ್ದರು. ಆ ಸಮಯದಲ್ಲಿ ಅವರು ಗ್ಯಾಂಗ್‌ಗಳನ್ನು ಹೊಂದಿದ್ದರು ಮತ್ತು ಗ್ಯಾಂಗ್ ವಾರ್‌ಗಳನ್ನು ಮಾಡುತ್ತಿದ್ದರು ಎಂದಿದ್ದಾರೆ.
ಬಾಲಿವುಡ್ಗೆ ತಂದೆಯ ಎಂಟ್ರಿ ಆಗಿದ್ದು ಹೇಗೆ ಎನ್ನುವುದನ್ನು ತಿಳಿಸಿದ ಅಜಯ್ ದೇವಗನ್ ಅವರು, ಒಂದು ದಿನ ಹಿರಿಯ ಸಾಹಸ ನಿರ್ದೇಶಕ ರವಿ ಖನ್ನಾ ಅವರು ಹಾದುಹೋಗುತ್ತಿದ್ದರು. ಆ ಸಂದರ್ಭದಲ್ಲಿ ಬೀದಿ ಜಗಳ ನಡೆಯುತ್ತಿತ್ತು. ಆಗ ಅವರು ತಮ್ಮ ಕಾರನ್ನು ನಿಲ್ಲಿಸಿದರು. ಜಗಳವನ್ನು ತದೇಕ ಚಿತ್ತದಿಂದ ನೋಡಿದರು. ನಂತರ ಅವರು ನನ್ನ ತಂದೆಯನ್ನು ಕರೆದು 'ನೀವು ಏನು ಮಾಡುತ್ತೀರಿ?' ಎಂದು ಕೇಳಿದಾಗ ನನ್ನ ತಂದೆ ಬಡಗಿ ಎಂದು ಹೇಳಿದರು. ಆಗ ಅವರು ನೀನು ತುಂಬಾ ಚೆನ್ನಾಗಿ ಫೈಟಿಂಗ್ ಮಾಡುತ್ತಿ. ನಾಳೆ ನನ್ನನ್ನು ಭೇಟಿ ಮಾಡು ಎಂದರು. ಅಲ್ಲಿಂದ ಅವರಿಗೆ ಬಾಲಿವುಡ್ನಲ್ಲಿ ಅವಕಾಶ ಸಿಕ್ಕಿತು ಎಂದರು. ಬಳಿಕ ನಿರ್ದೇಶಕ ರೋಹಿತ್ ಶೆಟ್ಟಿ ಅವರು ತಮ್ಮ ತಂದೆ ಸಾಹಸ ನಿರ್ದೇಶಕ ಎಂ.ಬಿ.ಶೆಟ್ಟಿ ಕೂಡ 13 ವರ್ಷದವನಾಗಿದ್ದಾಗ ಮುಂಬೈಗೆ ಬಂದು ಮಾಣಿಯಾಗಿ ಕೆಲಸ ಮಾಡುತ್ತಿದ್ದರು ಎಂದು ಹೇಳಿದರು. ವೀರು ಅವರು 2019ರಂದು ನಿಧನರಾದರು.
ಮಗಳ ವಯಸ್ಸಿನವಳ ಜೊತೆ 3ನೇ ಬಾರಿ ಅರ್ಬಾಜ್ ಖಾನ್ ಮದುಮಗ! ಡೇಟ್ ಫಿಕ್ಸ್: ಹೊಟ್ಟೆ ಉರಿಸಿಕೊಳ್ತಿರೋ ಅವಿವಾಹಿತರು!