ಟೈಟಾನಿಕ್​ನಲ್ಲಿ ನಾಯಕನಿಗೆ ಖಾಸಗಿ ಅಂಗ ತೋರಿಸಲು ಕೇಟ್​ಗೆ ನಾಚಿಕೆಯೇ ಆಗಿರಲಿಲ್ಲ... ಏಕೆಂದರೆ...

By Suvarna News  |  First Published Dec 22, 2023, 2:20 PM IST

ಟೈಟಾನಿಕ್​ನಲ್ಲಿ ನಾಯಕನಿಗೆ ಖಾಸಗಿ ಅಂಗ ತೋರಿಸಲು ನಾಯಕಿ ಕೇಟ್​ಗೆ ನಾಚಿಕೆಯೇ ಆಗಿರಲಿಲ್ಲವಂತೆ. ಅದೇಕೆ ಎಂಬ ವಿಷಯ ಇದೀಗ ಬಹಿರಂಗಗೊಂಡಿದೆ 
 


1997ರಲ್ಲಿ ತೆರೆ ಕಂಡಿದ್ದ  ಜೇಮ್ಸ್ ಕ್ಯಾಮರೂನ್ ನಿರ್ದೇಶನದಲ್ಲಿ ಮೂಡಿಬಂದ ಟೈಟಾನಿಕ್​ ಚಿತ್ರವನ್ನು ನೋಡಿದವರು ಬಹುಶಃ ಯಾರೂ ಮರೆಯಲಿಕ್ಕಿಲ್ಲ. ಚಿತ್ರ ಬಿಡುಗಡೆಯಾಗಿ 26 ವರ್ಷ ಕಳೆದರೂ ಆ ಚಿತ್ರವನ್ನು ಮೆಲುಕು ಹಾಕುವವರು ಹಲವರು. ಆಗಿನ ಕಾಲದಲ್ಲಿ ಈ ಚಿತ್ರ 210 ಮಿಲಿಯನ್​ ಡಾಲರ್​ ಅಂದರೆ ಸುಮಾರು 18 ಸಾವಿರ ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಈಗಿನ ಬೆಲೆಗೆ ಹೋಲಿಸಿದರೆ ಇದರ ದರ ಸುಮಾರು 337 ಮಿಲಿಯನ್​ ಡಾಲರ್​ ಎಂದರೆ,  ಸುಮಾರು 28 ಸಾವಿರ ಕೋಟಿ ರೂಪಾಯಿಗಳು ಎಂಬ ಲೆಕ್ಕಾಚಾರವಿದೆ. ಈ ಚಿತ್ರದಲ್ಲಿ ಎಲ್ಲರ ಕಣ್ಣು ಕುಕ್ಕಿದ್ದು ನಟಿ ಕೇಟ್ ವಿನ್ಸ್ ಲೆಟ್. ಆಗ 20 ವರ್ಷದವರಿದ್ದ ಕೇಟ್​ ಈ ಚಿತ್ರದಲ್ಲಿ ಸಂಪೂರ್ಣ ನಗ್ನವಾಗಿ ಕಾಣಿಸಿಕೊಂಡಿದ್ದು ದೊಡ್ಡ ಮಟ್ಟದಲ್ಲಿಯೇ ಸುದ್ದಿಯಾಗಿತ್ತು. ಇಂದಿನ ಕೆಲ ನಟಿಯರು ಯಾವುದೇ ಅಳುಕಿಲ್ಲದೇ ನಗ್ನರಾಗಲು ಮುಂದೆ ಬರುವುದು ಉಂಟು. ಆದರೆ 27 ವರ್ಷಗಳ ಹಿಂದೆ ಇದು ಸುಲಭದ ಮಾತಾಗಿರಲಿಲ್ಲ. ಅಂಥ ಸಮಯದಲ್ಲಿ ಸಿನಿಮಾಕ್ಕಾಗಿ ನಗ್ನರಾಗಿ ಹಲ್​ಚಲ್​ ಸೃಷ್ಟಿಸಿದ್ದರು ಕೇಟ್​.

 ಬ್ರಿಟಿಷ್ ನಟಿಯ ನಗ್ನ ದೃಶ್ಯವನ್ನು ಚಲನಚಿತ್ರ ನಿರ್ಮಾಣದ ಇತಿಹಾಸದಲ್ಲಿ ಅತ್ಯಂತ ಅಪ್ರತಿಮ ದೃಶ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ನಾಯಕ ಡಿಕಾಪ್ರಿಯೊ ಅವರ ಜೊತೆ ಕೇಟ್​ ನಗ್ನರಾಗಿ ಕಾಣಿಸಿಕೊಂಡಿದ್ದ ಹಿಂದೆ ಒಂದು ಕುತೂಹಲದ ಅಂಶವೂ ಇದೀಗ ಬೆಳಕಿಗೆ ಬಂದಿದೆ. ಆಗಿನ ಕಾಲದಲ್ಲಿಯೇ ನಟಿಯೊಬ್ಬರು ಅಷ್ಟು ಸಲೀಸಾಗಿ ತಮ್ಮ ಖಾಸಗಿ ಅಂಗವನ್ನು ತೋರ್ಪಡಿಸಿದ್ದು ಹೇಗೆ ಎಂಬ ವಿಷಯವೀಗ ಬಹಿರಂಗಗೊಂಡಿದೆ. ಜೇಮ್ಸ್ ಕ್ಯಾಮರೂನ್ ಅವರ ಪುಸ್ತಕ ಟೈಟಾನಿಕ್ - ದಿ ಅಫಿಶಿಯಲ್ ಬಿಹೈಂಡ್ ದಿ ಸೀನ್ಸ್​ನಲ್ಲಿ ಕೆಲವೊಂದು ಅಂಶಗಳನ್ನು ಬಹಿರಂಗಪಡಿಸಲಾಗಿದೆ.

Tap to resize

Latest Videos

ಮಗಳ ವಯಸ್ಸಿನವಳ ಜೊತೆ 3ನೇ ಬಾರಿ ಅರ್ಬಾಜ್​ ಖಾನ್​ ಮದುಮಗ! ಡೇಟ್​ ಫಿಕ್ಸ್​: ಹೊಟ್ಟೆ ಉರಿಸಿಕೊಳ್ತಿರೋ ಅವಿವಾಹಿತರು!

ಅಷ್ಟಕ್ಕೂ, ಅದರಲ್ಲಿ ಉಲ್ಲೇಖವಾಗಿದ್ದು ಏಕೆಂದರೆ ನಾಯಕ ಡಿಕಾಪ್ರಿಯೊ ತಮ್ಮ ಖಾಸಗಿ ಅಂಗವನ್ನು ತೋರಿಸಲು ಕೇಟ್​ ಅವರಿಗೆ ನಾಚಿಕೆಯೇ ಆಗಿಲ್ಲವಂತೆ. ಇದಕ್ಕೆ ಕಾರಣ, ಆತನ ತೇಜಸ್ಸು, ವರ್ಚಿಸ್ಸಿಗೆ ಮನಸೋತಿದ್ದ ನಟಿ ಡಿಕಾಪ್ರಿಯೋ ಜೊತೆ ಪ್ರೀತಿಯಲ್ಲಿ ಬೀಳುವುದು ಗ್ಯಾರೆಂಟಿ ಎಂದು ತಿಳಿದಿತ್ತು. ಇದೇ ಕಾರಣಕ್ಕೆ ಆಕೆಗೆ ಯಾವುದೇ ರೀತಿಯ ಅಳುಕು ಆಗಿರಲಿಲ್ಲ ಎಂದು ಹೇಳಲಾಗಿದೆ. ನಟ ತುಂಬಾ ಸುಂದರವಾಗಿದ್ದಾನೆ. ಆತನಿಗೆ ನಾನು ಬೌಲ್ಡ್​ ಆದೆ ಎಂದು ನಟಿ ಹೇಳಿದ್ದರು. ಆದ್ದರಿಂದ ಯಾವುದೇ ಮುಜುಗರವಿಲ್ಲದೆಯೇ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾರೆ ಎಂದು ವಿವರಣೆ ನೀಡಲಾಗಿದೆ. 

ಅಷ್ಟಕ್ಕೂ ಕೆಲ ದಿನಗಳ ಹಿಂದೆ ನಟಿ, ಈ ನಗ್ನ ದೃಶ್ಯ ತಮ್ಮ ಜೀವನದ ಮೇಲೆ ಅಪಾರ ಕೆಟ್ಟ ಪರಿಣಾಮ ಉಂಟು ಮಾಡಿತು ಎಂಬ ಬಗ್ಗೆ ಹೇಳಿದ್ದರು.  ಕೆಲ ವರ್ಷಗಳ ವರೆಗೆ ಇದು ಬದುಕನ್ನೇ ನರಕ ಮಾಡಿತು ಎಂದು ಹೇಳಿಕೊಂಡಿದ್ದಾರೆ. ನಾನು ಅನೇಕರಿಂದ ಕೀಳು ಮಟ್ಟದಲ್ಲಿ ಕಾಣಿಸಿಕೊಂಡೆ. ಈಗ ಕಾಲ ಬದಲಾಗಿ ಇಂಥ ದೃಶ್ಯಗಳನ್ನು ಸ್ವೀಕರಿಸುವವರು ಇದ್ದಾರೆ. ಆದರೆ ಅಂದಿನ ದಿನಗಳಲ್ಲಿ ನಾನು ತುಂಬಾ ನೊಂದುಕೊಂಡೆ. ಜನರು ನನ್ನ ಬಾಡಿ ಷೇಮ್​ ಮಾಡಿದರು. ನನ್ನನ್ನು ನೋಡುವ ದೃಷ್ಟಿಯೂ ಬದಲಾಯಿತು. ಇದರಿಂದ ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೆ ಎಂದಿದ್ದರು ನಟಿ ಕೇಟ್​. 

ಐಶ್ವರ್ಯ ಎಕ್ಸ್​ ಸಲ್ಮಾನ್​ರನ್ನು ಹೀಗೆ ತಬ್ಬಿಕೊಳ್ಳೋದಾ ಅಭಿಷೇಕ್​? ಏನಿದರ ಅರ್ಥ? ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​!

ಪಡ್ಡೆಗಳ ಬೇಡಿಕೆ ಪೂರೈಸಲು ಕೇಟ್ ಬೆತ್ತಲಾಗುತ್ತಾಳೆ ಎಂದುಕೊಂಡವರೇ ಹೆಚ್ಚು. ಆದರೆ ಅದು ತಪ್ಪು ಗ್ರಹಿಕೆ ಎಂದು ಈ ಹಿಂದೆ ಕೇಟ್​ ಹೇಳಿದ್ದರು.  ' ನಾನು ಸಿನಿಮಾದಲ್ಲಿ ಬೆತ್ತಲಾಗುವುದರಿಂದ ನನ್ನ ಮಹಿಳಾ ಅಭಿಮಾನಿಗಳು ತಮ್ಮ ಫಿಗರ್ ಬಗ್ಗೆ ಅಭಿಮಾನದಿಂದ ನೋಡುವಂತಾಗುತ್ತದೆ. ನಾನೇನು ಜೀರೋ ಫಿಗರ್ ಹೊಂದಿಲ್ಲ. ಆಕರ್ಷಕ ಅಥವಾ ದೊಡ್ದ ಸ್ತನ, ನಿತಂಬ ಹೊಂದಿಲ್ಲ. ಆದರೆ, ನನ್ನ ದೇಹ ಸೌಂದರ್ಯವನ್ನು ಆತ್ಮವಿಶ್ವಾಸದಿಂದ ಯಾವುದೇ ಮುಜುಗರವಿಲ್ಲದೆ ಹೆಮ್ಮೆಯಿಂದ ನನ್ನನು ನಾನು ತೆರೆಯ ಮೇಲೆ ಪ್ರತಿನಿಧಿಸುತ್ತೇನೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯ ಎಂದು ಈ ಹಿಂದೆ ನಟಿ ಮ್ಯಾಗಜೀನ್​ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಇದೀಗ ಅದರಿಂದ ಆಗಿರುವ ನಕಾರಾತ್ಮಕ ಅನುಭವವನ್ನೂ ಬಿಚ್ಚಿಟ್ಟಿದ್ದಾರೆ. 
 

click me!