ನಟರಾದ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಮದುವೆಯಾಗಿ ಮಗು ಇರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನಟಿಯ ಪಾಲಕರು ದೂರು ದಾಖಲಿಸಿದ್ದಾರೆ. ಏನಿದು?
ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas) ಮದುವೆ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಅವರು ಮಾಧ್ಯಮಗಳಿಗೆ ಎದುರಾದಾಗೊಮ್ಮೆ ಮದುವೆ ವಿಚಾರ ಪ್ರಸ್ತಾಪವಾಗುತ್ತದೆ. ಹಿಂದೊಮ್ಮೆ ತಿರುಪತಿಯಲ್ಲಿ ನಡೆದ ಆದಿ ಪುರುಷ ಸಿನಿಮಾದ ಪ್ರಿ ರಿಲೀಸ್ ಇವೆಂಟ್ನಲ್ಲಿಯೂ ಇದೇ ಪ್ರಶ್ನೆ ಎದುರಾಗಿದ್ದಾಗ ಅವರು, ಮದುವೆಯ ಬಗ್ಗೆ ಮೌನ ಮುರಿದಿದ್ದರು. ಮದುವೆ ಪ್ರಶ್ನೆ ಕೇಳಿದಾಗೆಲ್ಲ ಏನಾದರೂ ಒಂದು ಸಬೂಬು ನೀಡಿ ಜಾರಿಕೊಳ್ಳುತ್ತಿದ್ದ ನಟ, ಮದುವೆಯ ಪ್ರಶ್ನೆ ಕೇಳುತ್ತಿದ್ದಂತೆಯೇ, ಮದುವೆಗೆ ಕಾಲ ಕೂಡಿ ಬರಲಿ. ಇದೇ ತಿರುಪತಿಯಲ್ಲೇ ನಾನು ಮದುವೆ ಮಾಡಿಕೊಳ್ಳುತ್ತೇನೆ ಎಂದಿದ್ದರು. ಆದರೆ ಮದುವೆ ಯಾವಾಗ ಎನ್ನುವುದನ್ನು ಮಾತ್ರ ಅವರು ಹೇಳಿಕೊಂಡಿಲ್ಲ. ಅವರ ಹೆಸರು ಮಾತ್ರ ನಟಿ ಅನುಷ್ಕಾ ಜೊತೆ ಥಳಕು ಹಾಕಿಕೊಳ್ಳುತ್ತಲೇ ಇದೆ. ಅನುಷ್ಕಾ ಮತ್ತು ಪ್ರಭಾಸ್ ಜೊತೆ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲು ಬಿಲ್ಲಾ ಜೊತೆ ಒಟ್ಟಿಗೆ ಕೆಲಸ ಮಾಡಿದ್ದರು. ಆ ನಂತರ ಮಿರ್ಚಿ ಮತ್ತು ಬಾಹುಬಲಿ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು.
ಇನ್ನು ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಕನ್ನಡದಲ್ಲಿಯೂ ಮಾಡುವೆ ಎಂದಿದ್ದರೂ ಇದುವರೆಗೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ತೆಲುಗು ಚಿತ್ರ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' (Mrs Shetty Mrs Poli Shetty) ಸಿನಿಮಾದಲ್ಲಿ ನಟಿಸಿದ್ದು, ಅದು ಕಳೆದ ಸೆಪ್ಟೆಂಬರ್7ರಂದು ರಿಲೀಸ್ ಆಗಿದೆ. ಮೂರು ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಆಗಮಿಸಿದ್ದಾರೆ ಅನುಷ್ಕಾ. ಮಹೇಶ್ ಬಾಬು ಪಿಚಿಗೊಲ್ಲ ನಿರ್ದೇಶನದಲ್ಲಿ ಮೂಡಿಬಂದಿದೆ ಈ ಚಿತ್ರ. ಈ ಸಿನಿಮಾದಲ್ಲಿ ಶೆಫ್ ಆಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಸಲ್ಮಾನ್ ಖಾನ್ ಚಿತ್ರದಲ್ಲಿ ರಿಜೆಕ್ಟ್ ಆಗಿದ್ದ 'ಜೈ ಹೋ'ಗೆ ಆಸ್ಕರ್ ಪ್ರಶಸ್ತಿ: ಎ.ಆರ್.ರೆಹಮಾನ್ ಹೇಳಿದ್ದೇನು?
ಆದರೆ ಇದೀಗ ಕುತೂಲಹದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅದೇನೆಂದರೆ, ಅನುಷ್ಕಾ ಮತ್ತು ಪ್ರಭಾಸ್ ಅವರ ಮದುವೆಯ ಫೋಟೋ ವೈರಲ್ ಆಗಿವೆ. ಸಾಲದು ಎನ್ನುವುದಕ್ಕೆ ಇಬ್ಬರ ಬಳಿ ಒಂದು ಮಗು ಕೂಡ ಇದೆ. ಇದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯ ನಡುವೆಯೇ ಈ ಫೋಟೋಗಳು ವೈರಲ್ ಆಗಿವೆ. ಕೆಲವರು ಅನುಷ್ಕಾ ಕೆಲ ವರ್ಷ ಗ್ಯಾಪ್ ತೆಗೆದುಕೊಂಡಿದ್ದು ಇದೇ ಕಾರಣಕ್ಕೇನಾ ಎಂದುಪ್ರಶ್ನಿಸುತ್ತಿದ್ದಾರೆ.
ಆದರೆ ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ, ಅನುಷ್ಕಾ ಪೋಷಕರು ಪೊಲೀಸರ ಬಳಿ ದೂರು ದಾಖಲಿಸಲಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಏನೆಂದರೆ, ಈ ವೈರಲ್ ಫೋಟೋಗಳ ಹಿಂದಿರೋ ಅಸಲಿಯತ್ತೇ ಬೇರೆ. ಹೇಳಿ ಕೇಳಿ ಇದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ-AI) ಯುಗ. ಫೋಟೋ, ವಿಡಿಯೋಗಳಲ್ಲಿ ಯಾರ ಜೊತೆ ಯಾರನ್ನಾದರೂ ಸೇರಿಸಿ ಏನು ಬೇಕಾದರೂ ಮಾಡುವ ಕಾಲವಿದು. ಈ ಫೋಟೋಗಳೂ ಅದೇ ಎಐನಿಂದ ಸೃಷ್ಟಿ ಮಾಡಿರುವುದು. ಇದು ಅಸಲಿ ಫೋಟೋಗಳು ಅಲ್ಲ. ಆದ್ದರಿಂದ ಮಗಳಿಗೆ ತೇಜೋವಧೆ ಆಗುತ್ತಿರುವುದಾಗಿ ಅನುಷ್ಕಾ ಪಾಲಕರು ದೂರು ದಾಖಲಿಸಿದ್ದಾರೆ.
32 ಲಕ್ಷ ಚಂದಾದಾರರ ಈ ಆ್ಯಪ್ ಪೂನಂ ಪಾಂಡೆಯನ್ನು ಕೋಟ್ಯಧಿಪತಿ ಮಾಡಿತ್ತು! ನಟಿಯ ಸಂಪಾದನೆ ಮಾರ್ಗ ಹೀಗಿತ್ತು