ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಫರಾ ಖಾನ್. ಯಾಕೆ ಪ್ರೆಗ್ನೆನ್ಸಿ ಲೇಟ್ ಮಾಡಿದ್ದು ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟ ನಿರ್ದೇಶಕಿ....
ಹಿಂದಿ ಚಿತ್ರರಂಗದ ಜನಪ್ರಿಯ ನಿರ್ದೇಶಕ ಹಾಗೂ ನಟಿ ಫರಾ ಖಾನ್ ಮತ್ತು ಶಿಶರ್ ಕುಂದ್ರೆ 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದ ನಿರ್ದೇಶಕಿ ಯಾವ ಫ್ಯಾಮಿಲಿ ಪ್ಲ್ಯಾನಿಂಗ್ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಏಕೆಂದರೆ ಮದುವೆ ಆದಾಗಲೇ 40 ವರ್ಷ ಆಗಿತ್ತು. ಮದುವೆ ನಂತರ ಮಕ್ಕಳು ಮಾಡಿಕೊಂಡು ಖುಷಿಯಾಗಿ ಜೀವನ ಮಾಡಬೇಕು ಅನ್ನೋದು ಪತಿಯ ಆಸೆ ಆಗಿತ್ತು, ಹೀಗಾಗಿ ಮದುವೆ ಆದ ವರ್ಷವೇ ಪ್ರೆಗ್ನೆನ್ಸಿ ಪ್ರಯತ್ನ ಪಡುತ್ತಾರೆ. ವಿಫಲರಾದ ಮೇಲೆ ಐವಿಎಫ್ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಚಿಕಿತ್ಸೆ ಪಡೆಯುತ್ತಿರುವ ವಿಚಾರ ಯಾರಿಗೂ ಗೊತ್ತಿರಲಿಲ್ಲ ಹೀಗಾಗಿ ಯಾಕೆ ಲೇಟಾಗಿ ಮಗು ಮಾಡಿಕೊಂಡಿದ್ದು ಹಾಗೂ ಮೂವರು ಮಕ್ಕಳು ಹುಟ್ಟಿದ್ದು ಹೇಗೆ ಅನ್ನೋ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ನಿರ್ದೇಶಕಿ.
'ನನ್ನ ಪ್ರೆಗ್ನೆನ್ಸಿ ತುಂಬಾ ಲೇಟ್ ಆಯ್ತು ಏಕೆಂದರೆ ನಾನು ಮದುವೆ ಲೇಟ್ ಆಗಿ ಆಗಿದ್ದು. ನಾನು ಮದುವೆ ಮಾಡಿಕೊಂಡಾಗ ಸುಮಾರು 40 ವರ್ಷ ಆಗಿತ್ತು ಹೀಗಾಗಿ ನನ್ನ ಪ್ರೆಗ್ನೆನ್ಸಿ ಕೂಡ ತುಂಬಾ ಲೇಟ್ ಅಯ್ತು. ಮದುವೆ ಆದ ಮೇಲೆ ಸುಮಾರು ಒಂದೆರಡು ವರ್ಷ ನ್ಯಾಚುರಲಿ ಪ್ರಯತ್ನ ಪಟ್ಟಿದ್ದೀವಿ. ನನ್ನ ವಯಸ್ಸು ಹೆಚ್ಚಾಗಿದ್ದ ಕಾರಣ ನಾನು ಡಾಕ್ಟರ್‌ನ ಸಂಪರ್ಕ ಮಾಡಿದೆ ಆಗ ಅವರೇ ನ್ಯಾಚುರಲಿ ಪ್ರಯತ್ನ ಮಾಡೋಣ ಅಂದ್ರು. ಏನ್ ಮಾಡಿದರೂ ನ್ಯಾಚುರಲಿ ಆಗುತ್ತಿರಲಿಲ್ಲ. ಒಮ್ಮೆ ನನ್ನ ಸ್ನೇಹಿತೆಯನ್ನು ಭೇಟಿ ಮಾಡಿದೆ ಆಕೆಗೂ ಕೂಡ ವಯಸ್ಸು ಹೆಚ್ಚಾಗಿತ್ತು ಆದರೆ ಅವಳಿಗೆ ಅವಳಿ ಜವಳಿ ಮಕ್ಕಳು ಆಗಿತ್ತು. ನೋಡು ನಾಳೆ ನೀನು ತಪ್ಪದೆ ವೈದ್ಯರನ್ನು ಭೇಟಿ ಮಾಡಿ ಐವಿಎಫ್ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿರುವೆ ಎಂದರು. ಮರುದಿನವೇ ನಾವು ಐವಿಎಫ್ ಚಿಕಿತ್ಸೆ ಶುರು ಮಾಡಿದೆ ಆಗ ನನಗೆ 42 ವರ್ಷ ಆಗಿತ್ತು' ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಫರಾ ಮಾತನಾಡಿದ್ದಾರೆ.
'ಐವಿಎಫ್ ಜರ್ನಿ ತುಂಬಾ ಕಷ್ಟ ಆಗಿತ್ತು ಏಕೆಂದರೆ ನನಗೆ ಮೂರು ಸೈಕಲ್ ಪ್ರಯತ್ನ ಮಾಡಿದ್ದರು. ಆದರೆ ಅದೇ ವರ್ಷ ನನಗೆ ಪೀರಿಯಡ್ಸ್ ಆಯ್ತು. ನಮಗೆ ಚಿಕಿತ್ಸೆ ನೀಡುವ ಡಾಕ್ಟರ್‌ಗೂ ಕೂಡ ತಾಳ್ಮೆಯಿಂದ ಇದ್ದು ನಮಗೆ ಧೈರ್ಯ ನೀಡಬೇಕು. ಓಂ ಶಾಂತಿ ಸಿನಿಮಾ ಶೂಟಿಂಗ್ ಸಮಯದಲ್ಲಿ ನಾನು ಬೆಳಗ್ಗೆ ಎದ್ದು ಇಂಜೆಕ್ಷನ್ ತೆಗೆದುಕೊಂಡು ಶೂಟಿಂಗ್ ಆರಂಭಿಸುತ್ತಿದ್ದರೆ ಆದರೆ ಒತ್ತಡಕ್ಕೆ ಆಗುತ್ತಿರಲಿಲ್ಲ. ಚಿತ್ರೀಕರಣ ಮುಗಿಸಿದ ಮೇಲೆ ನಾನು ಒತ್ತಡ ಕಡಿಮೆ ಆದ ಮೇಲೆ ಇಂಜೆಕ್ಷನ್ ತೆಗೆದುಕೊಳ್ಳಲು ಶುರು ಮಾಡಿದೆ ಆಗ ನಾನು ಪ್ರೆಗ್ನೆಂಟ್ ಆದೆ. ನನಗೆ ಮಗು ಬೇಕು ಎಂದು ಮನಸ್ಸಿನಲ್ಲಿ ತುಂಬಾ ಆಸೆ. ಮಗು ಆಗಿಲ್ಲ ಅಂದ್ರೆ ಸಮಸ್ಯೆ ಇಲ್ಲ ಎಂದು ನನ್ನ ಪತಿ ಆರಾಮ್ ಆಗಿದ್ದರು ಆದರೆ ಮಗು ಆಸೆ ಕೂಡ ನಮಗೆ ಇತ್ತು' ಎಂದು ಫರಾ ಹೇಳಿದ್ದಾರೆ.
ಸಮಂತಾ ಪ್ರೆಗ್ನೆನ್ಸಿ ಫೋಟೋ ವೈರಲ್; ನಾಗ ಚೈತನ್ಯಾ ಹೊಟ್ಟೆ ಉರಿಸೋ ಕೆಲಸ ನಡಿತಿದ್ಯಾ?