Cannes Film Festival: ಊರ್ವಶಿ ರೌಟೇಲಾ 61 ಲಕ್ಷ ರೂ. ಡ್ರೆಸ್​ ಒಳಗಿಂದ ಇಣುಕಿದ್ದೇನು? ಫ್ಯಾನ್ಸ್​ ಕಕ್ಕಾಬಿಕ್ಕಿ!

Published : May 20, 2025, 05:25 PM ISTUpdated : May 20, 2025, 05:48 PM IST
Cannes Film Festival: ಊರ್ವಶಿ ರೌಟೇಲಾ 61 ಲಕ್ಷ ರೂ. ಡ್ರೆಸ್​ ಒಳಗಿಂದ ಇಣುಕಿದ್ದೇನು? ಫ್ಯಾನ್ಸ್​ ಕಕ್ಕಾಬಿಕ್ಕಿ!

ಸಾರಾಂಶ

ಕೇನ್ಸ್ ಚಲನಚಿತ್ರೋತ್ಸವದಲ್ಲಿ ಊರ್ವಶಿ ರೌಟೇಲಾ ದುಬಾರಿ ಉಡುಪಿನಲ್ಲಿ ಕಾಣಿಸಿಕೊಂಡರು. ಆಕೆಯ ಉಡುಪಿನಲ್ಲಿನ ಒಂದು ಭಾಗ ಹರಿದಿದೆ ಎಂಬ ವದಂತಿ ಹಬ್ಬಿ ಚರ್ಚೆಗೆ ಗ್ರಾಸವಾಯಿತು. ಲಿಫ್ಟ್‌ನಲ್ಲಿ ಸಿಕ್ಕಿಹಾಕಿಕೊಂಡ ಹಳೆಯ ವಿಡಿಯೋ ವೈರಲ್ ಆಗಿದೆ. ನೀರು ಕುಡಿಯುವ ವಿಚಿತ್ರ ಶೈಲಿ, ಓರ್ಹಾನ್ ಜೊತೆಗಿನ ನೃತ್ಯ ಮತ್ತು ಚುಂಬನ ಕೂಡ ಸುದ್ದಿಯಲ್ಲಿದೆ.

ದೇಹಕ್ಕೆ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡು ಪ್ಲಾಸ್ಟಿಕ್​ ರಾಣಿ ಎಂದೇ ಫೇಮಸ್​ ಆಗಿರೋ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಸದ್ಯ ಕೇನ್ಸ್​ ಉತ್ಸವದಲ್ಲಿ ಮಿಂಚುತ್ತಿದ್ದಾರೆ. ಆದರೆ ಸದಾ  ಸದ್ದು ಮಾಡುತ್ತಲೇ ಇರುವ ನಟಿ ಈಗ ಕೇನ್ಸ್​ನಲ್ಲಿಯೂ ಭಾರಿ ಸದ್ದು ಮಾಡುತ್ತಿದ್ದಾರೆ. 61 ಲಕ್ಷ ರೂಪಾಯಿ ಬೆಲೆ ಬಾಳುವ ಕಪ್ಪು ಡ್ರೆಸ್​​ ತೊಟ್ಟಿದ್ದ ಊರ್ವಶಿಯ ಕಂಕುಳ ಬಳಿ ಇಣುಕಿರುವ  ವಸ್ತು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಈ ಇಣುಕಿರುವ ವಸ್ತು ಏನೆಂದು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ.

ಊರ್ವಶಿ ಅವರ ಬಟ್ಟೆ ಹರಿದಿದೆ ಎಂದೇ ಹೇಳಲಾಗುತ್ತಿದೆ. ಈ ಮೂಲಕ ಕೇನ್ಸ್​ನಲ್ಲಿ ಹರಿದ ಬಟ್ಟೆ ಧರಿಸಿದ ನೂರಾರು ಕೋಟಿಯ ಒಡತಿ ಮೊದಲ ಮಹಿಳೆ ಈಕೆ ಎಂದು ಟ್ರೋಲ್​ ಕೂಡ ಮಾಡಲಾಗುತ್ತಿದೆ. ಈ ಬಗ್ಗೆ ಊರ್ವಶಿ ಕೂಡ ಮಾತನಾಡಿದ್ದು, ನಾನು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ನಿಜಕ್ಕೂ ಊರ್ವಶಿಯ ಬಟ್ಟೆ ಹರಿದದ್ದಾ ಅಥವಾ ಜನರ ಗಮನ ಸೆಳೆಯಲು ಏನಾದರೂ ಅಲ್ಲಿ ಸಿಕ್ಕಿಸಿಕೊಂಡಿದ್ರಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಅಷ್ಟಕ್ಕೂ ಕೆಲ ದಿನಗಳ ಹಿಂದಷ್ಟೇ ಈಕೆ ಕೇನ್ಸ್​ ಉತ್ಸವದಲ್ಲಿ ಹೊರಟಾಗ  ಲಿಫ್ಟ್​ನಲ್ಲಿ ಸಿಕ್ಕಾಕ್ಕೊಂಡಿರುವ ವಿಡಿಯೋ ವೈರಲ್​ ಆಗಿತ್ತು.  ಅಷ್ಟಕ್ಕೂ ಇದು ಕಳೆದ ವರ್ಷದ ವಿಡಿಯೋ ಆಗಿದ್ದು, ಇದೀಗ ವೈರಲ್​ ಆಗುತ್ತಿದೆ. ಇದಕ್ಕೆ ಕಾರಣ, ಈ ವರ್ಷದ ಉತ್ಸವದಲ್ಲಿ ಇವರು ತೀರ್ಪುಗಾರರಾಗಿ ಹೋಗಿದ್ದಾರೆ. ಆದರೆ ಕಳೆದ ಸಲ ಹೋದಾಗ ಮಾತ್ರ ಇವರ ಪರಿಸ್ಥಿತಿ ಯಾರಿಗೂ ಬೇಡವಾಗಿತ್ತು. ವಜ್ರಖಚಿತ ಡ್ರೆಸ್​ ತೊಟ್ಟು ಹೋದ ನಟಿಯ ಗೌನ್​ ಲಿಫ್ಟ್​ಗೆ ಸಿಲುಕಿದ್ದರ ಪರಿಣಾಮ ಬಾಗಿಲು ಹಾಕಲಾಗದೇ 25 ನಿಮಿಷ ಅಲ್ಲಿಯ ಸಿಬ್ಬಂದಿ ಹರಸಾಹಸ ಪಡುವಂತಾಯಿತು.
 
ಲಿಫ್ಟ್​ನಲ್ಲಿ ಸಿಕ್ಕಾಕ್ಕೊಂಡ ನಟಿ ಊರ್ವಶಿ- 550 ಕೋಟಿ ರೂ. ಒಡತಿ 'ಪ್ಲಾಸ್ಟಿಕ್​ ರಾಣಿ'ಯ ಹೊರತೆಗೆಯಲು ಸಾಹಸ...

ಕೆಲ ದಿನಗಳ ಹಿಂದೆ, ಊರ್ವಶಿ ನೀರನ್ನು ಕುಡಿಯುವ ಬದಲು ಕಚ್ಚಿದ್ದರಿಂದ ಸದ್ದು ಮಾಡಿದ್ದರು.  ಯಾವುದೋ ಫಂಕ್ಷನ್​ನಲ್ಲಿ ಕೆಜಿಗಟ್ಟಲೆ ಮೇಕಪ್​ ಹಾಕಿಕೊಂಡು ಕುಳಿತಿರುವ ನಟಿ, ತಮ್ಮ ಉಗುರುಗಳಿಗೂ ಶೃಂಗಾರ ಮಾಡಿಕೊಂಡಿದ್ದರು. ನೀರನ್ನು ಕುಡಿಯುವಾಗ ತಮ್ಮ ಸುಂದರವಾಗಿ ಉಗುರುಗಳು ಕಾಣಿಸಲಿ ಎನ್ನುವ ಕಾರಣಕ್ಕೋ ಏನೋ ಬಾಯಿಯನ್ನು ಮುಚ್ಚಿಕೊಂಡಿದ್ದರು. ಇಷ್ಟೇ ಆದರೆ ಪರವಾಗಿರಲಿಲ್ಲ. ನೀರನ್ನು ಕುಡಿಯುವಾಗ ಕ್ಯಾಮೆರಾ ಕಣ್ಣುಗಳು ತಮ್ಮ ಮೇಲೆ ಇರುವುದು ತಿಳಿಯುತ್ತಲೇ ಸ್ಟೈಲ್​ ಮಾಡಿ ಕುಡಿಯಲು ಹೋಗಿ ಟ್ರೋಲ್​ಗೆ ಒಳಗಾಗಿದ್ದರು. ಇವರು, ಈ ವಿಡಿಯೋದಲ್ಲಿ ನೀರನ್ನು ಕುಡಿಯುತ್ತಿಲ್ಲ ಬದಲಿಗೆ ತಿನ್ನುತ್ತಿರುವಂತೆ ಕಾಣಿಸುತ್ತದೆ. 

ಇನ್ನು ಕೆಲ ದಿನಗಳ ಹಿಂದೆ, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಕ್ರಿಕೆಟ್​ ಮ್ಯಾಚ್​ ಸಂದರ್ಭದಲ್ಲಿ ಎಂದು ಜನಪ್ರಿಯವಾಗಿರುವ ಪ್ರಭಾವಿ ಓರ್ಹಾನ್ ಅವತ್ರಮಣಿ ಹಾಗೂ ಹಾಟ್​ ಬ್ಯೂಟಿ ಊರ್ವಶಿ ರೌಟೇಲಾ ಸಕತ್​ ಡಾನ್ಸ್​ ಮಾಡಿದ್ದರು. ಡಾನ್ಸ್​ ಮಾಡುತ್ತಲೇ ಓರಿ ಊರ್ವಶಿಗೆ ಕಿಸ್​ ಮಾಡಿದ್ದ. ಈ ವಿಡಿಯೋ ಸಕತ್​ ವೈರಲ್​ ಆಗಿತ್ತು. ಇನ್ನು ಬಾಲಿವುಡ್​ ಪ್ರೇಮಿಗಳಿಗೆ ಓರಿ ತೀರಾ ಚಿರಪರಿಚಿತ. ಸಾಮಾನ್ಯನಂತೆ ಕಾಣುವ ಈತ ಬಾಲಿವುಡ್‌ನಲ್ಲಿ ತುಂಬಾ ಪ್ರಭಾವಿ. ಎಲ್ಲಾ ಸೆಲೆಬ್ರಿಟಿಗಳಿಗೂ ಈತ ಬೇಕೇ ಬೇಕು. ಬಹುತೇಕ ಬಾಲಿವುಡ್‌ನ ಎಲ್ಲರೂ   ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.  ಈತನಿಗೆ ಎಲ್ಲೆಡೆ ಮುಟ್ಟಲು ನಟಿಯರು ಪರ್ಮಿಷನ್​ ಕೊಡುತ್ತಾರೋ ಎನ್ನುವಂತೆಯೇ ಎಲ್ಲಾ ಫೋಟೋಗಳೂ ಇರುತ್ತವೆ. ಈತನ ಜೊತೆ ಫೋಟೋ ತೆಗೆಸಿಕೊಂಡರೆ ನಟಿಯರಿಗೆ ಲಕ್ಕಿ ಎನ್ನುವ ಮಾತಿದೆ. ಈಗ ಹೊಸ ವಿಷ್ಯ ಏನಪ್ಪಾ ಎಂದರೆ ಊರ್ವಶಿ ರೌಟೇಲಾ ಜೊತೆ ಓರಿ ಮದುವೆ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ ಕೊನೆಗೆ ಆ ಸುದ್ದಿ ಅಲ್ಲಿಯೇ ಸೈಲೆಂಟ್​ ಆಗಿದೆ. 


ನೀರನ್ನು ಕಚ್ಚಿ ತಿನ್ನುವ ಪ್ರಪಂಚದ ಮೊದಲ ಮಹಿಳೆ, ನಟಿ ಊರ್ವಶಿ ರೌಟೇಲಾ! ವಿಡಿಯೋ ವೈರಲ್

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ 8 ಗಂಟೆ ಆತನ ಜೊತೆಗಿದ್ದೆ , ಅನುಭವ ಬಿಚ್ಚಿಟ್ಟ ನಟಿ ಪಾರ್ವತಿ
150- 200 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದ ಪ್ರಭಾಸ್ ರಾಜಾ ಸಾಬ್‌ಗೆ ಪಡೆದಿದ್ದು ಇಷ್ಟು ಕಡಿಮೆನಾ?