ಅಚಾನಕ್ಕಾಗಿ ನುಗ್ಗಿದ ಕಾರು, ಅಪಾಯದಿಂದ ಪಾರಾದ ಗಾಯಕ ಸೋನು ನಿಗಮ್; ವಿಡಿಯೋ

Published : May 20, 2025, 04:47 PM IST
ಅಚಾನಕ್ಕಾಗಿ ನುಗ್ಗಿದ ಕಾರು, ಅಪಾಯದಿಂದ ಪಾರಾದ ಗಾಯಕ ಸೋನು ನಿಗಮ್; ವಿಡಿಯೋ

ಸಾರಾಂಶ

ಕನ್ನಡಿಗರ ಕೆಣಕಿ ಪ್ರಕರಣ ಸೇರಿದಂತೆ ಭಾರಿ ವಿವಾದ ಸೃಷ್ಟಿಸಿದ್ದ ಗಾಯಕ ಸೋನು ನಿಗಮ್‌ಗೆ ಇದೀಗ ಪ್ರಕರಣದ ಹಿಂದೆ ಓಡಾಡುತ್ತಿದ್ದಾರೆ. ಇದರ ನಡುವೆ ಸೋನು ನಿಗಮ್ ನಡೆದು ಸಾಗುತ್ತಿದ್ದಂತೆ ಅಚಾನಕ್ಕಾಗಿ ಕಾರು ನುಗ್ಗಿದ ಘಟನೆ ಘಟನೆ ನಡೆದಿದೆ. ಕೂದಲೆಳೆ ಅಂತರದಿಂದ ಸೋನು ನಿಗಮ್ ಪಾರಾಗಿದ್ದಾರೆ.  

ಮುಂಬೈ(ಮೇ.20) ಬಾಲಿವುಡ್ ಗಾಯಕ ಸೋನು ನಿಗಮ್ ಇತ್ತೀಚೆಗೆ ಕನ್ನಡಿಗರ ಕುರಿತು ಆಡಿದ ಮಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕನ್ನಡ ಸಿನಿಮಾ, ಕರ್ನಾಟಕದಲ್ಲಿ ಕಾರ್ಯಕ್ರಮಗಳಿಗೆ ಸೋನು ನಿಗಮ್‌ ಬ್ಯಾನ್ ಮಾಡಲಾಗಿದೆ. ಇತ್ತ ಈ ಪ್ರಕರಣ ಕೋರ್ಟ್‌ನಲ್ಲಿದೆ. ಸೋನು ನಿಗಮ್ ಈ ಪ್ರಕರಣ ಸಂಬಂಧ ವರ್ಚುವಲ್ ಆಗಿ ಹಾಜರಾಗಲು ಕೋರ್ಟ್ ಅನುಮತಿಸಿದೆ. ಒಂದೆಡೆ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೆ, ಇತ್ತ ಸೋನು ಸಿಗಮ್ ಅಪಾಯದಿಂದ ಪಾರಾದ ಘಟನೆ ನಡೆದಿದೆ. ಸೋನು ನಿಗಮ್ ಕಾರಿನಿಂದ ಇಳಿದು ನಡೆದುಕೊಂಡು ಬರುತ್ತಿದ್ದಂತೆ ಕಾರು ಅಚಾನಕ್ಕಾಗಿ ನುಗ್ಗಿದೆ. ಕೂದಲೆಳೆ ಅಂತರದಿಂದ ಸೋನು ನಿಗಮ್ ಅಪಾಯದಿಂದ ಪಾರಾಗಿದ್ದಾರೆ.

ಸೋನು ನಿಗಮ್​ ವೈರಲ್ ವಿಡಿಯೋ
ಮುಂಬೈನಲ್ಲಿ ಈ ಘಟನೆ ನಡೆದಿದೆ. ಸೋನು ನಿಗಮ್ ಕಾರಿನಿಂದ ಇಳಿದು ಆತ್ಮೀಯರೊಬ್ಬರನ್ನು ಭೇಟಿ ಮಾಡಲು ಆಗಮಿಸಿದ್ದಾರೆ. ಸೋನು ನಿಗಮ್ ಕಾರಿನಿಂದ ಮುಂಭಾಗಕ್ಕೆ ಬರುತ್ತಿದ್ದಂತೆ, ಕಾರು ಅಚಾನಕ್ಕಾಗಿ ನುಗ್ಗಿದೆ.ಇನ್ನೇನು ಡಿಕ್ಕಿಯಾಗಬೇಕು ಅನ್ನುವಷ್ಟರಲ್ಲೇ ಸೋನು ನಿಗಮ್ ಎಚ್ಚೆತ್ತುಕೊಂಡು ಹಿಂದೆ ಸರಿದಿದ್ದಾರೆ. ಇತ್ತ ಕಾರು ಚಾಲಕ ಕೂಡ ದಿಢೀರ್ ಬ್ರೇಕ್ ಹಾಕಿದ್ದಾರೆ. ಆದರೆ ಈ ವೇಳೆ ಸೋನು ನಿಗಮ್ ನೀಡಿದ ಪ್ರತಿಕ್ರಿಯೆ ವೈರಲ್ ಆಗುತ್ತಿದೆ.  

ಕನ್ನಡಿಗರ ಕೆಣಕಿ ಸಂಕಷ್ಟಕ್ಕೆ ಸಿಲುಕಿದ ಸೋನು ನಿಗಮ್‌ಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್

ಸೋನು ನಿಗಮ್ ತಮ್ಮ ಬಾಡಿಗಾರ್ಡ್​ ಜೊತೆ ರಸ್ತೆಯಲ್ಲಿ ನಡೆಯುತ್ತಿರುವುದನ್ನು ಕಾಣಬಹುದು. ಈ ವೇಳೆ ಒಂದು ಕಾರು ಅಲ್ಲಿಂದ ಹಾದುಹೋಗುತ್ತದೆ. ಚಾಲಕನಿಗೆ ಕಾರಿನ ಬ್ರೇಕ್​ ಮೇಲೆ ನಿಯಂತ್ರಣ ತಪ್ಪಿದ್ದರಿಂದ, ರಸ್ತೆ ದಾಟುತ್ತಿದ್ದ ಸೋನು ನಿಗಮ್‌ಗೆ ಕಾರು ಮೆಲ್ಲನೆ ಡಿಕ್ಕಿಯಾಗಿದೆ. ಆದರೆ, ಸೋನು ತಕ್ಷಣವೇ ಮುಂದೆ ಹೆಜ್ಜೆ ಹಾಕುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಂಡರು. ಅವರ ಗಾರ್ಡ್​ ಕೂಡ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಂಡರು. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಆದರೆ ಸೋನುಗೆ ಒಮ್ಮೆಲೇ ಕೋಪ ಬಂದಿತು. ಅವರು ತಿರುಗಿ ಚಾಲಕನ ಕಡೆ ನೋಡಿದರು. ಆದರೆ, ತಮ್ಮ ಮೇಲೆ ನಿಯಂತ್ರಣ ಸಾಧಿಸಿ ಮುಂದೆ ಸಾಗಿದರು.

 

 

ಸೋನು ನಿಗಮ್​ ವಿಡಿಯೋಗೆ ಬಂದ ಕಮೆಂಟ್​ಗಳು
ಸೋನು ನಿಗಮ್​ ವಿಡಿಯೋ ನೋಡಿದ ನಂತರ ಒಬ್ಬ ಇಂಟರ್​ನೆಟ್ ಬಳಕೆದಾರರು, "OMG! ಇದೇನಾಯ್ತು? ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, "ಏನೂ ಆಗಿಲ್ಲ, ಇದು ಕೇವಲ ಡ್ರಾಮ" ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ಅವರು ಏನೂ ಮಾಡಿಲ್ಲ" ಎಂದು ಬರೆದಿದ್ದಾರೆ. "ಅವರಿಗೆ ಕಾರಿನಲ್ಲಿ ಸಲ್ಮಾನ್​ ಭಾಯ್​ ಇರಬೇಕು ಎಂದು ಕೆಲರು ಕಮೆಂಟ್ ಮಾಡಿದ್ದಾರೆ. 

ಬೆಂಗಳೂರು ಕಾರ್ಯಕ್ರಮದ ವಿವಾದದಿಂದ ಸುದ್ದಿಯಲ್ಲಿದ್ದ ಸೋನು ನಿಗಮ್
51 ವರ್ಷದ ಸೋನು ನಿಗಮ್​ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳನ್ನು ಹಾಡುವಂತೆ ಒತ್ತಾಯಿಸಿದವರನ್ನು ಪೆಹಲ್ಗಾಂ ಉಗ್ರ ದಾಳಿಗೆ ಹೋಲಿಸಿದ್ದರಿಂದ ಸುದ್ದಿಯಲ್ಲಿದ್ದರು. ಹೀಗಾಗ ಸೋನು ನಿಗಮ್  ವಿರುದ್ಧ ಪ್ರಕರಣ ದಾಖಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ ಚಿತ್ರಕ್ಕೆ ಹಾಲಿವುಡ್‌ ಬೂಸ್ಟ್‌: ಅವತಾರ್‌ 3ನಲ್ಲಿ ವಾರಣಾಸಿ ಟೀಸರ್‌
ಅರೆರೆ! ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇದೇನಾಯ್ತು.. ಇದ್ದಕ್ಕಿದ್ದಂತೆ ಇಬ್ಬರು ನಟಿಯರ ಜೊತೆ ಬಾಲಿವುಡ್‌ಗೆ ಹೊರಟಿದ್ಯಾಕೆ?