
ಕಮಲ ಹಾಸನ್ ಅವರು ನಟರಾಗುವುದಕ್ಕಿಂತ ಮೊದಲಿನ ಬದುಕು ಹೇಗಿತ್ತು? ಇದರ ಬಗ್ಗೆ ಹಲವು ಕತೆಗಳಿವೆ. ಸ್ವತಃ ಕಮಲ್ ಕೆಲವು ವಿಷಯಗಳನ್ನು ಸಂದರ್ಶನಗಳಲ್ಲಿ ಹೇಳಿದ್ದಾರೆ. ಕೆಲವನ್ನು ಬಚ್ಚಿಟ್ಟಿದ್ದಾರೆ. ಅವರು ಬಾರ್ಬರ್ ಅರ್ಥಾತ್ ಕ್ಷೌರಿಕ ಆಗಿದ್ದುದೂ ಅದರಲ್ಲಿ ಒಂದು. ಹಾಗೇ, ಅವರು ಆಟೋ ರಿಕ್ಷಾ ಡ್ರೈವರ್ ಹಾಗೇ ಬದುಕಿ ಸತ್ತುಹೋಗುವ ಸಂಭವ ಕೂಡ ಇತ್ತಂತೆ. ಅದನ್ನು ತಪ್ಪಿಸಿದವರು ತಮಿಳು ಫಿಲಂ ಲೋಕದ ಲೆಜೆಂಡ್ ಅನಿಸಿ ಇನ್ನೊಬ್ಬ ವ್ಯಕ್ತಿ.
ಚಿಕ್ಕಂದಿನಲ್ಲಿಯೇ ಬಹುಮುಖ ಪ್ರತಿಭೆಯ ಕಮಲ್ ಹಾಸನ್ ಯುವಕನಾಗಿದ್ದಾಗ ಸಾಂಪ್ರದಾಯಿಕ ಉದ್ಯೋಗ ಪಡೆಯಲು ಅಗತ್ಯವಾದ ಕೌಶಲ್ಯಗಳು ತಮ್ಮಲ್ಲಿ ಇರಲಿಲ್ಲ ಎಂದು ಭಾವಿಸಿದ್ದರು. ಹೀಗಾಗಿ ಕ್ಷೌರಿಕನಾಗಿ ಕೆಲಸ ಮಾಡಲು ಪ್ರಾರಂಭಿಸಿದರಂತೆ. ಈ ಮೂಲಕ ತಮ್ಮ ತಾಯಿಯನ್ನು ಅವಮಾನಿಸುವುದೂ ಅವರ ಉದ್ದೇಶ ಆಗಿತ್ತಂತೆ. ಯಾಕೆಂದರೆ ಕಮಲ್ ಏನೂ ಕೆಲಸ ಮಾಡುವುದಿಲ್ಲ, ಮಾಡಲು ಸಾಧ್ಯವಿಲ್ಲ ಎಂದು ಅವರ ತಾಯಿ ಭಾವಿಸಿದ್ದರಂತೆ. ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಕಮಲ್ ಇದನ್ನೆಲ್ಲ ಹೇಳಿದ್ದಾರೆ.
ಬಾರ್ಬರ್ ಆಗಿದ್ದಾಗ ಅವರ ಗುರು ಆಗಿದ್ದವರು ಕೆ. ಬಾಲಚಂದರ್. ಹೌದು, ಅದೇ ಬಾಲಚಂದರ್. ತಮಿಳುನಾಡಿನ ಚಲನಚಿತ್ರರಂಗದ ಲೆಜೆಂಡ್ ನಿರ್ದೇಶಕ, ನಿರ್ಮಾಪಕ, ಲೇಖಕ. ಅವರು ಕಮಲ್ ಹಾಗೂ ರಜನಿಕಾಂತ್ ಇಬ್ಬರಿಗೂ ಮಾರ್ಗದರ್ಶಕ ಆಗಿದ್ದವರು. “ಬಾಲಚಂದರ್ ಅವರು ನನಗೆ ಉತ್ತಮ ಜೋಡಿಯಾಗುತ್ತಾರೆ ಎಂದು ಹೇಳಿದ ವ್ಯಕ್ತಿ ನನ್ನ ಮತ್ತೊಬ್ಬ ಗುರು. ಅವರು ಕ್ಷೌರಿಕರಾಗಿದ್ದರು ಮತ್ತು ಅವರು ನನಗೆ ಕ್ಷೌರಿಕ ವೃತ್ತಿಯನ್ನು ಕಲಿಸಿದರು. ನಾನು ಸಲೂನ್‌ನಲ್ಲಿ ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದೆ. ಅದು ನನ್ನ ತಾಯಿಯನ್ನು ಕೆಣಕಲು. ಏಕೆಂದರೆ ನಾನು ಏನೂ ಮಾಡುತ್ತಿಲ್ಲ ಎಂದು ಅವರು ಭಾವಿಸಿದ್ದರು. ನಾನು ಪೇಪರ್‌ಬ್ಯಾಕ್‌ಗಳನ್ನು ಓದುತ್ತಿದ್ದೆ ಮತ್ತು ಸಿನಿಮಾ ನೋಡುತ್ತಿದ್ದೆ. ನಾನು ಮಾಡಬೇಕಾದ ಕೆಲಸ ಇದಲ್ಲ ಎಂದು ತಾಯಿ ಹೇಳುತ್ತಿದ್ದರು. ನನ್ನಲ್ಲಿರುವ ಪ್ರತಿಭೆಗೆ ತಕ್ಕ ಕೆಲಸ ನನಗೆ ಸುಲಭವಾಗಿ ಸಿಗಲಿಲ್ಲ. ನನ್ನ ತಾಯಿಗೆ ಅವಮಾನವಾಗಲಿ ಎಂದು ನಾನು ಯೋಚಿಸಿದೆ ಮತ್ತು ನಾನು ಕ್ಷೌರಿಕನಾದೆ” ಎಂದಿದ್ದಾರೆ ಕಮಲ್.
ಬಾಲಚಂದರ್ ಅವರೊಂದಿಗಿನ ಸಂಬಂಧ ಮತ್ತು ಅವರಿಂದ ಪಡೆದ ಒಂದು ಪ್ರಮುಖ ಸಲಹೆಯನ್ನು ಕಮಲ್ ನೆನಪಿಸಿಕೊಳ್ಳುತ್ತಾರೆ. ಅದೇ ಬಹುಶಃ ಅವರನ್ನು ದುಃಖಕರವಾದ ಭವಿಷ್ಯದಿಂದ ರಕ್ಷಿಸಿತು. ಕಮಲ್ ಅವರ ಅನೇಕ ಸ್ನೇಹಿತರು ಇವರಿಗಿಂತ ಹೆಚ್ಚು ಪ್ರತಿಭಾನ್ವಿತರಾಗಿದ್ದರೂ ದುರಂತ ಸಾವುಗಳನ್ನು ಅನುಭವಿಸಿದ್ದರಂತೆ. ಬಾಲಚಂದರ್ ಈ ಕಥೆಯಿಂದ ಪ್ರೇರಿತರಾಗಿದ್ದರು ಮತ್ತು ಅದನ್ನು ತಮ್ಮ ಜರಾ ಸಿ ಜಿಂದಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಳಸಿದ್ದಾರೆ. ಕಮಲ್ 19 ವರ್ಷದವನಿದ್ದಾಗ, ನಿರ್ದೇಶಕನಾಗಲು ಬಯಸುತ್ತೇನೆ ಎಂದು ಬಾಲಚಂದರ್ ಅವರಿಗೆ ಹೇಳಿದರು, ಆದರೆ ಬಾಲಚಂದರ್ ಅವರನ್ನು ಆ ಮಾರ್ಗವನ್ನು ಅನುಸರಿಸದಂತೆ ತಡೆದರು. "ನೀನು ನಿರ್ದೇಶಕನಾದರೆ ಆಟೋ ರಿಕ್ಷಾಗಳಲ್ಲಿ ಪ್ರಯಾಣಿಸುತ್ತಾ ನಿನ್ನ ಜೀವನವನ್ನು ಕಳೆಯುತ್ತಿ" ಎಂದು ಎಚ್ಚರಿಸಿದರು. "ನಿನಗೆ ಸಿನಿಮಾ ತಾರೆಯಾಗುವ ಗುಣಗಳಿವೆ. ಆಟೋ ರಿಕ್ಷಾ ಓಡಿಸುವುದನ್ನು ಮರೆತುಬಿಡು" ಎಂದರು. "ನಾನು ಅವರ ಸಲಹೆಯನ್ನು ಸ್ವೀಕರಿಸದಿದ್ದರೆ ಬಹುಶಃ ಒಂದು ಆಟೋದಲ್ಲಿ ಸಾಯುತ್ತಿದ್ದೆ" ಎಂದು ಕಮಲ್ ಹೇಳುತ್ತಾರೆ.
ಬೇರೆಯದೇ ಪ್ರಪಂಚಕ್ಕೆ ಕರೆದೊಯ್ಯುವ ರೊಮ್ಯಾಂಟಿಕ್ ಕೊರಿಯನ್ ಸಿನಿಮಾಗಳಿವು!
ಕಮಲ್ ಅವರ ಹಲವಾರು ಸ್ನೇಹಿತರು- ಅವರಲ್ಲಿ ಅನೇಕರು ಅವರಿಗಿಂತ ಹೆಚ್ಚು ಪ್ರತಿಭಾನ್ವಿತರು- ದುರಂತ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಂಡಿದ್ದರು. ಬೀದಿಗಳಲ್ಲಿ ಸತ್ತಿದ್ದರು. ಬಾಲಚಂದರ್ ನೀಡಿದ ಸಲಹೆಯಿಂದಾಗಿ ಕಮಲ್ ಸಂಪೂರ್ಣವಾಗಿ ನಟನೆಗೆ ಹೋಗಲು ನಿರ್ಧರಿಸಿದರು. "ಹಾಗೆ ಮಾಡದೆ ಇದ್ದಿದ್ದರೆ, ಬಹುಶಃ ನನ್ನ ಕೆಲವು ಸ್ನೇಹಿತರಂತೆ ತಲ್ಲಣದಿಂದ, ನನ್ನ ಈಡೇರದ ಕನಸುಗಳೊಂದಿಗೆ, ಆಟೋ ರಿಕ್ಷಾದಲ್ಲಿ ಸಾಯುತ್ತಿದ್ದೆ. ಮತ್ತು ಆಟೋ ರಿಕ್ಷಾದಲ್ಲಿ ಮೃತ ದೇಹವಿದೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಅದಕ್ಕಾಗಿಯೇ ನಾನು ಬಾಲಚಂದರ್‌ಗೆ ಕೃತಜ್ಞನಾಗಿದ್ದೇನೆ" ಎನ್ನುತ್ತಾರೆ ಕಮಲ್.
ಇದ್ರೆ 'ಯಶ್ ಹೆಂಡ್ತಿ ಇದ್ದಂಗೆ ಇರ್ಬೇಕು' ಅಂತಿರೋದ್ಯಾಕೆ ಗಂಡಸ್ರು..? ಅಂಥದ್ದೇನಾಯ್ತು ಈವಾಗ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.