ಅತ್ತಿಗೆ, ಯಶ್ 19 ಸಿನಿಮಾ ಘೋಷಿಸಿ ಇಲ್ಲಾಂದ್ರೆ ಸ್ಟ್ರೈಕ್ ಮಾಡ್ತೀವಿ - ರಾಧಿಕಾಗೆ ಯಶ್ ಫ್ಯಾನ್ಸ್ ಆವಾಜ್

Published : Apr 01, 2023, 12:37 PM IST
ಅತ್ತಿಗೆ, ಯಶ್ 19 ಸಿನಿಮಾ ಘೋಷಿಸಿ ಇಲ್ಲಾಂದ್ರೆ ಸ್ಟ್ರೈಕ್ ಮಾಡ್ತೀವಿ - ರಾಧಿಕಾಗೆ ಯಶ್ ಫ್ಯಾನ್ಸ್ ಆವಾಜ್

ಸಾರಾಂಶ

ಯಶ್ 19 ಸಿನಿಮಾ ಯಾವಾಗ ಘೋಷಣೆ ಮಾಡ್ತಾರೆ ಅಂತ ಕಳೆದ 10 ತಿಂಗಳಿಂದ ಫ್ಯಾನ್ಸ್ ಕಾಯ್ತಿದ್ದಾರೆ. ಆದರೆ ಪರ್ಫೆಕ್ಷನಿಸ್ಟ್ ಯಶ್ ಎಲ್ಲೂ ಆತುರ ತೋರೋರಲ್ಲ. ಆದರೆ ಫ್ಯಾನ್ಸ್ ಸಹನೆ ಕಳ್ಕೊಂಡಿದ್ದಾರೆ. ಯಶ್ 19 ಸಿನಿಮಾ ಘೋಷಣೆ ಮಾಡದಿದ್ರೆ ನಿಮ್ ಮನೆ ಮುಂದೆ ಧರಣಿ ಕೂರ್ತೀವಿ ಅತ್ಗೆ ಅಂತ ರಾಧಿಕಾಗೆ ಆವಾಜ್ ಹಾಕಿದ್ದಾರೆ.

ಕೆಜಿಎಫ್ ಮೊದಲ ಭಾಗ ಸೂಪರ್ ಡೂಪರ್ ಹಿಟ್ ಆಗಿ, ಕೆಜಿಎಫ್ ಪಾರ್ಟ್ 2 ಬಂದು ಆಗಲೇ ವರ್ಷ ಆಗ್ತಾ ಬಂತು. ಸಾಮಾನ್ಯ ಇಂಥಾ ಸೂಪರ್ ಡೂಪರ್ ಸಿನಿಮಾ ಹಿಟ್ ಆದಾಗ ಹೆಚ್ಚಿನ ಹೀರೋಗಳು ಈ ಜನಪ್ರಿಯತೆಯಲ್ಲೇ ಒಂದಿಷ್ಟು ಸಿನಿಮಾ ಮಾಡಿ ರಿಲೀಸ್ ಮಾಡ್ತಾರೆ. ಆದರೆ ಯಶ್ ನಿಧಾನವೇ ಪ್ರಧಾನ ಅನ್ನೋರು, ಮಾಡೋ ಕೆಲಸ ಪರ್ಫೆಕ್ಟ್ ಆಗಿರಬೇಕು ಅನ್ನೋದು ಅವರ ಧ್ಯೇಯ. ಸಿನಿಮಾ ಆದ್ರೂ ಅಷ್ಟೇ, ಲೈಫ್ ಆದ್ರೂ ಅಷ್ಟೇ. ಹೀಗಾಗಿ ತನ್ನ ರೇಂಜ್‌ಗೆ ಸರಿಹೊಂದೋ ಸ್ಕ್ರಿಪ್ಟ್ ಬರೋ ತನಕ ಅವರು ಅಲ್ಲಾಡಲಿಲ್ಲ. ಮಫ್ತಿ ನಿರ್ದೇಶಕ ನರ್ತನ್ ಕಳೆದ ಐದು ವರ್ಷದಿಂದ ಯಶ್‌ಗೆ ಸಿನಿಮಾ ಮಾಡೋದು ಅಂತ ಸ್ಕ್ರಿಪ್ಟ್ ರೆಡಿ ಮಾಡಿದ್ರು. ಅದಕ್ಕಾಗಿ ವರ್ಷಾನುಗಟ್ಟಲೆ ಕಷ್ಟಪಟ್ಟರು. ಆದರೆ ಮಂಡ್ಯ ಲೆವೆಲಿಂದ ಕರ್ನಾಟಕ ಲೆವೆಲ್‌ಗೆ ಏರಿ, ಸ್ಯಾಂಡಲ್ ವುಡ್ ನಿಂದ ವರ್ಲ್ಡ್ ಸಿನಿಮಾ ಲೆವೆಲ್‌ಗೆ ಏರಿ ಇಡೀ ವಿಶ್ವದಲ್ಲೇ ನಿರೀಕ್ಷೆ ಹುಟ್ಟಿಸಿರೋ ಯಶ್ ಗೆ ಅವರ ಸ್ಕ್ರಿಪ್ಟ್ ಸರಿ ಬರಲಿಲ್ಲ. ಸೋ ಬೇರೆ ದಾರಿಯಿಲ್ಲದೇ ನರ್ತನ್ ಭೈರತಿ ರಣಗಲ್‌ ಸಿನಿಮಾ ಆಡಲು ಮುಂದಾದರು.

ಇದೀಗ ಫ್ಯಾನ್ಸ್‌ಗೂ ಕಾದು ಕಾದು ಸಾಕಾಗಿದೆ. ನಟಿ, ಯಶ್ ಪತ್ನಿ ರಾಧಿಕಾ ಪಂಡಿತ್‌ಗೆ ನೇರ ಆವಾಜ್ ಹಾಕಿದ್ದಾರೆ. ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ‘ಅತ್ತಿಗೆ.. ಯಶ್ 19ನೇ ಸಿನಿಮಾ ಬಗ್ಗೆ ಅಪ್​ಡೇಟ್ ಕೊಡಿ. ಇಲ್ಲದಿದ್ದರೆ ಸ್ಟ್ರೈಕ್ ಮಾಡ್ತೀವಿ' ಅಂತ ಕಮೆಂಟ್ ಮಾಡಿರೋದು ಇದೀಗ ವೈರಲ್ ಆಗ್ತಿದೆ. ‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದಿದ್ದು ಏಪ್ರಿಲ್ 14ರಂದು. ಈ ಸಿನಿಮಾ ಸೂಪರ್ ಹಿಟ್ ಆಯಿತು. ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1400 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ಚಿತ್ರದ ಹೆಚ್ಚುಗಾರಿಕೆ. ಈ ಸಿನಿಮಾ ತೆರೆಗೆ ಬರುತ್ತಿದ್ದಂತೆ ಯಶ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿತು. ಅವರು ಯಾವ ಪ್ರಾಜೆಕ್ಟ್​ ಒಪ್ಪಿಕೊಳ್ಳುತ್ತಾರೆ ಎನ್ನುವ ಕುತೂಹಲ ಇದ್ದೇ ಇತ್ತು. ಆದರೆ, ಇದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. ಅಭಿಮಾನಿಗಳು ಕೂಡ ಕಾದು ಕಾದು ಸುಸ್ತಾಗಿದ್ದಾರೆ. ಹೀಗಾಗಿ, ರಾಧಿಕಾ ಅವರನ್ನು ಈ ಬಗ್ಗೆ ಕೇಳಲಾಗುತ್ತಿದೆ.

The Elephant Whisperers ಚಿತ್ರದ ಬೊಮ್ಮನ್ - ಬೆಳ್ಳಿ ದಂಪತಿ ಸಾಕಿದ್ದ 4 ತಿಂಗಳ ಆನೆ ಮರಿ ಅನಾರೋಗ್ಯಕ್ಕೆ ಬಲಿ

ಹಾಗೆ ನೋಡಿದ್ರೆ ಯಶ್ ಗಿಂತಲೂ ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋದು ರಾಧಿಕಾ ಪಂಡಿತ್. ತಮ್ಮ ಮನೆಯ, ಮಕ್ಕಳ ಫೋಟೋ, ಟ್ರಾವೆಲ್ ಮಾಡಿದರೆ ಆ ಫೋಟೋಗಳನ್ನೆಲ್ಲ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗೂ ರಾಧಿಕಾ ಪಂಡಿತ್ ಟ್ರಾವೆಲ್(Travel), ಪಾರ್ಟಿ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಬಹಳ ಮಂದಿ ಈ ಫೋಟೋಗಳನ್ನು ಲೈಕ್(Like) ಮಾಡಿದ್ದಾರೆ. ಹಾಗಂತ ಬರೀ ಲೈಕ್ ಕೊಟ್ಟು ಸುಮ್ಮನಾಗಿಲ್ಲ. ಅನೇಕರು ಯಶ್ ಸಿನಿಮಾ ಬಗ್ಗೆ ಮಾಹಿತಿ ಕೇಳಿದ್ದಾರೆ. ಕೊಡದೇ ಇದ್ದರೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಒಬ್ಬ ಫ್ಯಾನ್ಸ ಅಂತೂ "ಅತ್ತಿಗೆ.. ಯಶ್ 19ನೇ ಸಿನಿಮಾ ಬಗ್ಗೆ ಅಪ್​ಡೇಟ್ ಕೊಡಿ. ಇಲ್ಲದಿದ್ದರೆ ಸ್ಟ್ರೈಕ್ ಕೂರ್ತ್ತೀವಿ’ ಅಂದಿದ್ದು ಸಖತ್ ಫನ್ನಿ ಆಗಿದ್ದರೂ ಹವಾ ಕ್ರಿಯೇಟ್ ಮಾಡಿದೆ.

ಈ ನಡುವೆ ಏ.14ಕ್ಕೆ ಯಶ್ ಹೊಸ ಸಿನಿಮಾ ಘೋಷಣೆ(Announce) ಆಗಲಿದೆ ಎಂಬ ಸುದ್ದಿ ಇದೆ. ಕಳೆದ ವರ್ಷ ಇದೆ ಅವಧಿಯಲ್ಲಿ ಕೆಜಿಎಫ್‌ 2 ವಿಶ್ವಾದ್ಯಂತ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್(Block buster hit) ಆಗಿತ್ತು. ಕೋಟಿಗಟ್ಟಲೆ ಬಾಚಿಕೊಂಡಿತ್ತು. ಏ.14ಕ್ಕೆ ಕನ್ನಡ ಚಿತ್ರರಂಗದಲ್ಲಿ ಮಹತ್ವ ಇದೆ. ಸೋ ಯಶ್ ಅದೇ ದಿನ ಹೊಸ ಸಿನಿಮಾ ಘೋಷಿಸುತ್ತಾರೆ. ಅದು ಅವರ ಹೋಂ ಬ್ಯಾನರ್‌ನಿಂದಲೇ ಹೊರಬರಲಿದೆ ಎಂಬ ಮಾತಿದೆ. ಈ ಸಿನಿಮಾದ ನಿರ್ದೇಶಕ ಯಾರು ಅನ್ನೋದು ಮಾತ್ರ ಪ್ರಶ್ನೆ ಆಗಿಯೇ ಉಳಿದಿದೆ.

ಬಾಲಿವುಡ್ ವಿರುದ್ಧ ಗುಡುಗಿದ ಬೆನ್ನಲ್ಲೇ ಕರಣ್ ಜೋಹರ್ ತಬ್ಬಿ ಅಭಿನಂದಿಸಿದ ಪ್ರಿಯಾಂಕಾ; ವಿಡಿಯೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss ಗಿಲ್ಲಿ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದ ನಟ ಜಗ್ಗೇಶ್​: ಮಾತು ನಿಜವಾಗೋಯ್ತು- ವಿಡಿಯೋ ವೈರಲ್​
ಅಮಿತಾಭ್ ಮಾತ್ರವಲ್ಲ, ಇವರೆಲ್ಲರೂ ಶೂಟಿಂಗ್ ಸೆಟ್‌ನಿಂದ ಜೀವ ಉಳಿಸಿಕೊಂಡು ಬಂದವರೇ