ಕೌನ್ ಬನೇಗಾ ಕರೋಡ್ಪತಿ ಪ್ರೋಮೋ ಬಿಡುಗಡೆ : ಮತ್ತೆ ಹಾಟ್‌ಸೀಟ್‌ಗೆ ಬಂದ ಅಮಿತಾಬ್‌

Published : Apr 03, 2022, 03:00 AM IST
ಕೌನ್ ಬನೇಗಾ ಕರೋಡ್ಪತಿ ಪ್ರೋಮೋ ಬಿಡುಗಡೆ : ಮತ್ತೆ ಹಾಟ್‌ಸೀಟ್‌ಗೆ ಬಂದ ಅಮಿತಾಬ್‌

ಸಾರಾಂಶ

ಕೌನ್ ಬನೇಗಾ ಕರೋಡ್ಪತಿ ಪ್ರೋಮೋ ಬಿಡುಗಡೆ ಮತ್ತೆ ಹಾಟ್‌ಸೀಟ್‌ಗೆ ಬಂದ ಅಮಿತಾಬ್‌ ಶೋದಲ್ಲಿ ಭಾಗವಹಿಸಲು  ಏಪ್ರಿಲ್ 9 ರಿಂದ ನೋಂದಣಿ ಆರಂಭ  

ಮುಂಬೈ(ಏ.3): ಬಾಲಿವುಡ್‌ ಖ್ಯಾತ ನಟ ಅಮಿತಾಬ್‌ ಬಚ್ಚನ್‌ ನಡೆಸಿಕೊಡುವ ಹಿಂದಿಯ ಖ್ಯಾತ ಟಿವಿ ಶೋ ಕೌನ್ ಬನೇಗಾ ಕರೋಡ್‌ಪತಿಯ 14 ನೇ ಸೀಸನ್‌ನ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಈ ಶೋನಲ್ಲಿ ಭಾಗವಹಿಸಲು ಏಪ್ರಿಲ್ 9 ರಿಂದ ನೋಂದಣಿ ಆರಂಭವಾಗಲಿದೆ. ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಹೊಸ ಸೀಸನ್‌ನ ಮೊದಲ ಪ್ರೋಮೋವನ್ನು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದೆ. ಏಪ್ರಿಲ್ 9 ರಿಂದ ಈ ಶೋಗೆ ನೋಂದಣಿ ಆರಂಭವಾಗಲಿದೆ ಎಂದು ಅದು ತಿಳಿಸಿದೆ. 

ಪ್ರೋಮೋದಲ್ಲಿ, ಯುವ ಜೋಡಿಯು ಬೆಳದಿಂಗಳ ರಾತ್ರಿಯಲ್ಲಿ ತಮ್ಮ ಟೆರೇಸ್‌ನಲ್ಲಿ ಹಾಸಿಗೆಯ ಮೇಲೆ ಮಲಗಿರುವುದು ಕಂಡು ಬರುತ್ತದೆ. ಪತಿ ತನ್ನ ಹೆಂಡತಿಯನ್ನು ಸ್ವಿಟ್ಜರ್ಲೆಂಡ್‌ಗೆ (Switzerland) ಒಂದು ದಿನ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡುತ್ತಾನೆ, ಅದರ ಜೊತೆಗೆ ದೊಡ್ಡ ಮನೆಯನ್ನು ಖರೀದಿಸಿ, ಮತ್ತು ಅವರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಭರವಸೆಯನ್ನು ಕೂಡ ನೀಡುತ್ತಾನೆ. ಕುಟುಂಬಕ್ಕಾಗಿ ಅವನ ಕನಸುಗಳ ಬಗ್ಗೆ ಕೇಳಿದ ಹೆಂಡತಿಗೆ ಸಂತೋಷವಾಗುತ್ತದೆ. ಆದಾಗ್ಯೂ, ಹಲವು ವರ್ಷಗಳು ಕಳೆದಿವೆ ಮತ್ತು ದಂಪತಿಗಳು ಇನ್ನೂ ತಮ್ಮ ಹಾಸಿಗೆಯ ಮೇಲೆ, ಅದೇ ಮನೆಯ ಅದೇ ತಾರಸಿಯ ಮೇಲೆ ಇದ್ದಾರೆ. ಅವನು ಇನ್ನೂ ಅದೇ  ಹಳೆಯ ಭರವಸೆಯನ್ನು ಈಗಲೂ ಹೆಂಡತಿಗೆ ನೀಡುತ್ತಾನೆ. ಇದರಿಂದ ಆಕೆ ಸಿಟ್ಟುಗೊಳ್ಳುತ್ತಾಳೆ.

KBCಯಲ್ಲಿ ಅಮಿತಾಬ್ ಬಚ್ಚನ್ ಜೊತೆ ಉಡುಪಿಯ ದಿನಗೂಲಿ ಕಾರ್ಮಿಕ

ಈ ವೇಳೆ ಅಮಿತಾಭ್ ಬಚ್ಚನ್ ಅವರ ಅಶರೀರವಾಣಿಯು ಕೇಳಿಸುತ್ತದೆ. ಒಬ್ಬರ ಕನಸುಗಳನ್ನು ಸುಮ್ಮನೆ ಬಿಟ್ಟುಬಿಡುವ ಬದಲು ಅದನ್ನು ಸಾಕಾರಗೊಳಿಸುವ ಸಮಯ ಬಂದಿದೆ ಎಂದು ಅವರು ಹೇಳುತ್ತಾರೆ. (ಸಪ್ನೆ ದೇಖ್ ಕೆ ಖುಷ್ ಮತ್ ಹೋಜೈಯೆ. ಉನ್ಹೇ ಪೂರಾ ಕರ್ನೇ ಕೆ ಲಿಯೇ ಫೋನ್ ಉತೈಯೇ) ಕನಸು ಕಾಣುವುದರಲ್ಲೇ ಖುಷಿ ಕಾಣಬೇಡಿ. ಆ ಕನಸುಗಳನ್ನು ಸಾಕಾರಗೊಳಿಸಲು ಫೋನ್‌ ಕೈಗೆ ತೆಗೆದುಕೊಳ್ಳಿ ಏಪ್ರಿಲ್  9 ರ ರಾತ್ರಿ 9 ಗಂಟೆಗೆ ಸರಿಯಾಗಿ ನಾನು ನನ್ನ ಪ್ರಶ್ನೆಗಳೊಂದಿಗೆ ಬರುತ್ತಿದ್ದೇನೆ. ಕೆಬಿಸಿಗೆ ನೋಂದಣಿ ಆರಂಭವಾಗಿದೆ. ಕೇವಲ ಸೋನಿಯಲ್ಲಿ ಮಾತ್ರ ಎಂದು ಅಮಿತಾಬ್‌ ಬಚ್ಚನ್ ಹೇಳುತ್ತಿರುವುದು ಈ ಪ್ರೊಮೊದಲ್ಲಿ ಇದೆ.

 

ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ಕಾರ್ಯಕ್ರಮವೂ 2000ನೇ ಇಸವಿಯಿಂದ ಪ್ರಸಾರವಾಗುತ್ತಿದೆ. ಶಾರುಖ್ ಖಾನ್ ಹೋಸ್ಟ್ ಮಾಡಿದ ಮೂರನೇ ಸೀಸನ್‌  ಹೊರತುಪಡಿಸಿ ಇದರ ಉಳಿದ ಎಲ್ಲಾ ಸೀಸನ್‌ಗಳನ್ನು ಅಮಿತಾಭ್ ಬಚ್ಚನ್ (Amitabh Bachchan) ಹೋಸ್ಟ್ ಮಾಡಿದ್ದಾರೆ. ಕಳೆದ ವರ್ಷ, ಕಾರ್ಯಕ್ರಮವು ತನ್ನ 1000 ನೇ ಸಂಚಿಕೆಯನ್ನು ಪೂರೈಸಿತು. ಹಾಗೂ ಈ ವಿಶೇಷ ಸಂಚಿಕೆಗೆ ಅಮಿತಾಭ್ ಅವರ ಪುತ್ರಿ ಶ್ವೇತಾ ಬಚ್ಚನ್ (Shweta Bachchan) ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ (Navya Naveli Nanda) ಅವರು ಅತಿಥಿಗಳಾಗಿ ಆಗಮಿಸಿದರು.

IPL 2021: ವಿಡಿಯೋ ಕಾಲ್ ಮೂಲಕ ಪ್ರತ್ಯಕ್ಷರಾಗಿ KBC ಸ್ಪರ್ಧಿಗೆ ಅಚ್ಚರಿ ನೀಡಿದ ರೋಹಿತ್ ಶರ್ಮಾ!

ಕಳೆದ ವರ್ಷ, ಈ ಶೋದಲ್ಲಿ ಶಾಂದಾರ್ ಶುಕ್ರವಾರ ಎಂಬ ಸಂಚಿಕೆಗಳನ್ನು ಪರಿಚಯಿಸಿತು, ಇದರಲ್ಲಿ ಚಲನಚಿತ್ರ ತಾರೆಯರು, ಕ್ರಿಕೆಟರ್‌ಗಳು ಸೇರಿದಂತೆ ವಿವಿಧ ರಂಗದ ಖ್ಯಾತನಾಮರು ಅತಿಥಿಗಳಾಗಿ ಆಗಮಿಸಿ ತಮ್ಮ ಆಯ್ಕೆಯ ದತ್ತಿಗಳಿಗೆ ಹಣವನ್ನು ಸಂಗ್ರಹಿಸುವ ಸಲುವಾಗಿ ಆಟವಾಡಿದರು.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?