ಕಾರು ಅಪಘಾತ: ನಟಿ ಮಲೈಕಾ ಆರೋರಾ ಆಸ್ಪತ್ರೆಗೆ ದಾಖಲು

Published : Apr 02, 2022, 10:26 PM ISTUpdated : Apr 02, 2022, 10:54 PM IST
ಕಾರು ಅಪಘಾತ: ನಟಿ ಮಲೈಕಾ ಆರೋರಾ ಆಸ್ಪತ್ರೆಗೆ ದಾಖಲು

ಸಾರಾಂಶ

ಬಾಲಿವುಡ್‌ ನಟಿ ಮಲೈಕಾ ಅರೋರಾಗೆ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನವದೆಹಲಿ(ಏ.4): ಬಾಲಿವುಡ್‌ ನಟಿ ಮಲೈಕಾ ಅರೋರಾಗೆ ಅಪಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.  ಶನಿವಾರ ಮಧ್ಯಾಹ್ನ ಪುಣೆಯಲ್ಲಿ ಫ್ಯಾಶನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ನಟಿಯ ಕಣ್ಣಿಗೆ ಗಾಯವಾಗಿದೆ ಎಂದು ವರದಿಗಳು ಹೇಳಿವೆ. ಪ್ರಸ್ತುತ ಅವರಿಗೆ ಮುಂಬೈನ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

ಸದ್ಯ ಮಲೈಕಾ ಅವರು ಆಸ್ಪತ್ರೆಯಲ್ಲಿದ್ದಾರೆ ಮತ್ತು ಸ್ಥಿರವಾಗಿದ್ದಾರೆ ಎಂದು ನಟನ ಸಹೋದರಿ ಅಮೃತಾ ಅರೋರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಮೂರು ಕಾರುಗಳ ಮಧ್ಯೆ ಈ ಅಪಘಾತ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಬಾಲಿವುಡ್‌ ನಟಿ ಮಲೈಕಾ ಅರೋರಾ ಭಾರತದ ಬೆಸ್ಟ್ ಡ್ಯಾನ್ಸರ್ ಕೂಡ ಆಗಿದ್ದು, ಮತ್ತು ಝಲಕ್ ದಿಖ್ಲಾ ಜಾ ಸೇರಿದಂತೆ ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನ್ಯೂಯಾರ್ಕ್‌ನಲ್ಲಿರುವ ನಟಿ ಮಲೈಕಾ ಅರೋರಾರ ಮಸ್ತ್ ಫೋಟೋಗಳು 

ಮಲೈಕಾರನ್ನು ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಖೋಪೋಲಿ ಪೊಲೀಸರು (Khopoli police) ತಿಳಿಸಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ಪ್ರಸ್ತಾಪಿಸಿದ್ದು, ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಸಿ ಎಫ್‌ಐಆರ್ ದಾಖಲಿಸಲಾಗುವುದು. ಸದಾ ಅಪಘಾತ ಸಂಭವಿಸುವುದರಿಂದ ಅಪಘಾತ ಪೀಡಿತ ಪ್ರದೇಶ ಎನಿಸಿರುವ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ (Mumbai-Pune expressway) 38 ಕಿಮೀ ಪಾಯಿಂಟ್‌ನಲ್ಲಿ ಈ ಅಪಘಾತ ಸಂಭವಿಸಿದೆ. ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದವು ಮತ್ತು ಎಲ್ಲಾ ಮೂರು ವಾಹನಗಳು ಘಟನೆಯಲ್ಲಿ ಹಾನಿಗೊಳಗಾಗಿವೆ. ಅಪಘಾತದ ನಂತರ ವಾಹನ ಚಾಲಕರು ತಕ್ಷಣವೇ ಸ್ಥಳದಿಂದ ಹೊರಟು ಹೋಗಿದ್ದು, ಇದ್ದರಿಂದ ಯಾವ ರೀತಿಯ ಗಾಯಗಳಾಗಿವೆ ಎಂಬ ಬಗ್ಗೆ ಸ್ಪಷ್ಟವಾಗಿಲ್ಲ. ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ನಮಗೆ ತಿಳಿಸಲಾಗಿದೆ ಎಂದು ಖೋಪೋಲಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿರೀಶ್ ಪವಾರ್ (Shirish Pawar) ಹೇಳಿದ್ದಾರೆ. 

ಪಡ್ಡೆಗಳ ನಿದ್ದೆಗೆಡಿಸಿದ ಮಲೈಕಾ ಅರೋರಾ ಬೋಲ್ಡ್ ಫೋಟೋಶೂಟ್


ಮಲೈಕಾ ಅವರ ರೇಂಜ್ ರೋವರ್ ಹಾಗೂ ಎರಡು ಪ್ರವಾಸಿ ವಾಹನಗಳ ನಡುವೆ ಅಪಘಾತವಾಗಿದೆ. "ನಾವು ಎಲ್ಲಾ ಮೂರು ಕಾರುಗಳ ನೋಂದಣಿ ಸಂಖ್ಯೆಯನ್ನು ಸ್ವೀಕರಿಸಿದ್ದೇವೆ ಮತ್ತು ಈಗ ನಿಜವಾಗಿ ಏನಾಯಿತು ಎಂಬುದನ್ನು ತಿಳಿಯಲು ನಾವು ಮಾಲೀಕರನ್ನು ಸಂಪರ್ಕಿಸುತ್ತೇವೆ. ಪ್ರಸ್ತುತ ನಾವು ಘಟನೆಯ ಬಗ್ಗೆ ಪ್ರಸ್ತಾಪಿಸಿದ್ದೇವೆ ಮತ್ತು ಅಪಘಾತ ಹೇಗೆ ಸಂಭವಿಸಿತು ಮತ್ತು ಯಾರಿದ್ದರು, ಯಾರು ತಪ್ಪಿತಸ್ಥರು ಎಂಬುದನ್ನು ತನಿಖೆ ಮಾಡಿದ ನಂತರ ಎಫ್‌ಐಆರ್ ದಾಖಲಿಸಲಾಗುವುದು ಎಂದು ಖೋಪೋಲಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಹರೇಶ್ ಕಲ್ಸೇಕರ್ (Haresh Kalsekar) ಹೇಳಿದ್ದಾರೆ.

 

ಶನಿವಾರ ಮಧ್ಯಾಹ್ನ ಮಲೈಕಾ ಫ್ಯಾಶನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈವೆಂಟ್‌ನ ಫೋಟೋಗಳು ಮತ್ತು ವೀಡಿಯೊಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದರು. ಮಲೈಕಾ ಬಾಲಿವುಡ್‌ನ ಜನಪ್ರಿಯ ಮುಖವಾಗಿದ್ದು, ಚೈಯಾ ಚೈಯಾ, ಮಾಹಿ ವೆ, ಮುನ್ನಿ ಬದ್ನಾಮ್ ಮತ್ತು ಇನ್ನೂ ಹಲವು ವಿಶೇಷ  ಐಟಂ ಡಾನ್ಸ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್, ಇಂಡಿಯಾಸ್ ಗಾಟ್ ಟ್ಯಾಲೆಂಟ್, ಜಲಕ್ ದಿಖ್ಲಾ ಜಾ ಮುಂತಾದ ಹಲವು ರಿಯಾಲಿಟಿ ಶೋಗಳನ್ನು ಇವರು ಹೋಸ್ಟ್ ಮಾಡಿದ್ದಾರೆ. 

ನಟ ಅರ್ಬಾಜ್ ಖಾನ್ (Arbaaz Khan) ಅವರನ್ನು ಮದುವೆಯಾಗಿದ್ದ ಮಲೈಕಾ ಅವರಿಗೆ ಅರ್ಹಾನ್ (Arhaan) ಎಂಬ ಮಗನಿದ್ದಾನೆ. ಈ ದಂಪತಿ 2017 ರಲ್ಲಿ ವಿಚ್ಛೇದನ (divorced) ಪಡೆದರು. ಮಲೈಕಾ ಈಗ ಅರ್ಜುನ್ ಕಪೂರ್ (Arjun Kapoor)ಜೊತೆ ಡೇಟಿಂಗ್ ಮಾಡುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?