ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಕಾರಣರಾದ ಸೂದ್! ಅಭಿಮಾನಿಗಳ ಮೆಚ್ಚುಗೆ ಸುರಿಮಳೆ!

Published : Jun 10, 2022, 07:31 PM ISTUpdated : Aug 04, 2022, 08:14 PM IST
ಮಗುವಿನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಕಾರಣರಾದ ಸೂದ್! ಅಭಿಮಾನಿಗಳ ಮೆಚ್ಚುಗೆ ಸುರಿಮಳೆ!

ಸಾರಾಂಶ

ಬಡವರ (Poor) ಉದ್ಧಾರಕ್ಕೆ ಎಷ್ಟೋ ಸಮಾಜ ಸೇವಕ ಸಂಘ ಸಂಸ್ಥೆಗಳಿವೆ. ಇದೆಲ್ಲಾ ಇದ್ದರೂ ನಮ್ಮ ಸೆಲೆಬ್ರೆಟಿಗಳು (Celebrity) ತಮ್ಮದೇ ಶೈಲಿಯಲ್ಲಿ ಬಡವರಿಗೆ ಆಗಾಗ್ಗೆ ಏನಾದರೊಂದು ಪುಣ್ಯದ ಕೆಲಸ ಮಾಡುತ್ತಿರುತ್ತಾರೆ. ಈ ಸಾಲಿನಲ್ಲಿ ಇದೀಗ ಬಾಲಿವುಡ್ ಸ್ಟಾರ್ (Bollywood Star) ನಟ ಸೋನು ಸೂದ್ (Sonu Sood) ಬಿಹಾರ್ (Bihar) ಮೂಲದ 4ವರ್ಷದ (years) ಮಗುವಿಗೆ ಶಸ್ತ್ರ ಚಿಕಿತ್ಸೆ (Surgery) ಮಾಡಿಸಿ ಎಲ್ಲರ ಮನಸ್ಸು ಗೆದ್ದಿದ್ದಾರೆ.

ಬಿಹಾರ ಮೂಲದ ಚೌಮುಖಿ ಕುಮಾರಿ (Chaumukhi Kumari) ಎಂಬ 4 ವರ್ಷದ ಮಗುವಿಗೆ ನಾಲ್ಕು ಕಾಲು (Four Leg) ಹಾಗೂ ನಾಲ್ಕು ಕೈಗಳಿದ್ದವು (4 Hands). ಈ ಮಗುವಿನ ಚಿಕಿತ್ಸೆಗಾಗಿ ಪೋಷಕರು ಬಿಹಾರ ಸರ್ಕಾರಕ್ಕೆ (Government) ಸಹಾಯ ಹಸ್ತ ಕೇಳಿದ್ದರೂ, ಸಂಘ ಸಂಸ್ಥೆಗಳಿಗಾಗಲೀ ಯಾವುದೇ ರೀತಿಯ ಸಹಕಾರ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ (Social Media) ಚೌಮುಖಿಯ ವಿಡಿಯೋವನ್ನು (Video) ಯಾರೋ ಹಾಕಿದ್ದರು. ಈ ವಿಡಿಯೋ ಗಮನಿಸಿದ ಸೋನು ಸೂದ್ ತಕ್ಷಣ ತಮ್ಮ ತಂಡವನ್ನು (Team) ನವಾಡಗೆ (Nawada) ಕಳುಹಿಸಿ ಅವರ ಪೋಷಕರ ಜೊತೆ ಮಾತನಾಡಿ ಚಿಕಿತ್ಸೆಗೆ ಕೊಡಿಸುವ ಭರವಸೆ ನೀಡಿದ್ದರು.

ಕೊಟ್ಟ ಮಾತಿನಂತೆ ಸೋನು, ಸೂರತ್‌ನ (Surat) ಖಾಸಗಿ ಆಸ್ಪತ್ರೆಯೊಂದರಲ್ಲಿ (Private Hospital) ಚೌಮುಖಿಗೆ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯಲೋಕಕ್ಕೆ ಸವಾಲಾಗಿದ್ದ ಈ ಶಸ್ತ್ರಚಿಕಿತ್ಸೆ ಈಗ ಯಶಸ್ವಿಯಾಗಿದೆ. ಬುಧವಾರ ಸತತ 7 ಗಂಟೆಗಳ ಕಾಲ ಶಸ್ತç ಚಿಕಿತ್ಸೆ ನಡೆದಿದ್ದು,  ಈ ಕುರಿತು ಸೋನು ತಮ್ಮ ಟ್ವಿಟರ್ (Twitter) ಹಾಗೂ ಇನ್ಸ್‌ಟಾಗ್ರಾಂ ಅಕೌಂಟ್‌ನಲ್ಲಿ (Instagram account) ಮಗುವಿನ ಫೋಟೊ (Photo) ಹಾಕಿ ಸಂತಸ ಹಂಚಿಕೊಂಡಿದ್ದಾರೆ.

ಚೌಮುಖಿ ಹಾಗೂ ನಾನು ಇಬ್ಬರೂ ಜಯಗಳಿಸಿದ್ದೇವೆ (Won) ಎಂದು ತಮ್ಮ ಇನ್ಸಾ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೊದಲ್ಲಿ ಚೌಮುಖಿ ಆಸ್ಪತ್ರೆಯಲ್ಲಿ ರೆಸ್ಟ್(Rest) ಮಾಡುತ್ತಿದ್ದು, ಸೋನು ಅವರ ಈ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಕೆಲಸಕ್ಕೆ ಅವರ ಫ್ಯಾನ್ಸ್(Fans) ಹಾಗೂ ಸಿನಿ ಇಂಡಸ್ಟಿçÃ(Cini Industry) ಮೆಚ್ಚುಗೆ ವ್ಯಕ್ತಪಡಿಸಿದೆ. ಬಡವರ ಬಂಧು, ರಿಯಲ್ ಹಿರೋ(Real Hero) ಎಂದೆಲ್ಲಾ ಕಮೆಂಟ್(Comment) ಮಾಡಿದ್ದಾರೆ. 

ಸಹಾಯ ಮಾಡಲು ಹಣ ಎಲ್ಲಿಂದ ಬರುತ್ತೆ ಎಂದು ಸಂಪೂರ್ಣ ಮಾಹಿತಿ ಬಹಿರಂಗ ಪಡಿಸಿದ ನಟ ಸೋನು ಸೂದ್

ಇದೀಗ ಚೌಮುಖಿ ಸಹಜ(Normal) ಸ್ಥಿತಿಗೆ ಮರಳಿದ್ದಾಳೆ. ಎಲ್ಲಾ ಮಕ್ಕಳಂತೆ ಶಾಲೆಗೆ(School) ಹೋಗಬಹುದಾಗಿದ್ದು, ಆಟವಾಡಬಹುದು(Play) ಹಾಗೂ ಬರೆಯಬಹುದಾಗಿದೆ(Write). ವೈದ್ಯರು(Doctor) ಸಹ ಚೌಮುಖಿ ಎಲ್ಲಾ ರೀತಿಯಿಂದಲೂ ಆರೋಗ್ಯವಾಗಿದ್ದಾಳೆ, ಬಹು ಬೇಗ ಮನೆಗೆ(House) ಹೋಗಬಹುದು ಎಂದಿದ್ದಾರೆ. 

ಸೋನು ಸೂದ್ ಈ ರೀತಿಯ ಸಮಾಜ ಸೇವೆಯ ಕಾರ್ಯ ಹೊಸದೇನಲ್ಲ. ಈ ಹಿಂದೆ ಉಕ್ರೇನ್‌ನಲ್ಲಿ(Ukraine) ಸಿಲುಕಿದ್ದ ಹಲವು ಭಾರತೀಯ ವಿದ್ಯಾರ್ಥಿಗಳನ್ನು(Indian Students) ಚಾರಿಟಿ ವತಿಯಿಂದ ಉಕ್ರೇನಲ್ಲಿ ಸ್ಥಳೀಯ ಟ್ಯಾಕ್ಸಿ(Taxy) ಮೂಲಕ ಭಾರತೀಯ ವಿದ್ಯಾರ್ಥಿಗಳನ್ನು ಹಾರ್ಕಿವ್ ರೈಲ್ವೇ ನಿಲ್ದಾಣಕ್ಕೆ(Railway Station) ಕರೆದೊಯ್ಯಲಾಗಿತ್ತು. ನಂತರ ಅವರನ್ನು ಪೋಲ್ಯಾಂಡಿನ ಗಡಿಗೆ ಸಾಗಿಸಲು ಬಸ್‌ಗಳ(Bus) ವ್ಯವಸ್ತೆ ಮಾಡಿಸಿ ಭಾರತಕ್ಕೆ ಕರೆತಂದಿದ್ದರು. ಅಲ್ಲದೆ ಕೋವಿಡ್(Covid) ಸಂದರ್ಭದಲ್ಲಿ ತಮ್ಮ ಊರುಗಳ ಶಾಲೆಗೆ ತೆರಳಿ ಸಾವಿರಾರು ಸೈಕಲ್(Cycle) ಹಂಚಿದ್ದರು. ಕೋವಿಡ್ ಪ್ಯಾಂಡಮಿಕ್ ವೇಳೆಯಲ್ಲಿ ಸರ್ಕಾರಕ್ಕೆ ಸಹಾಯ ಮಾಡಿ ಎಲ್ಲರ ಮೆಚ್ಚುಗಗೆ ಪಾತ್ರರಾಗಿದ್ದರು. 

Sonu Sood Distributes Bicycles: ವಿದ್ಯಾರ್ಥಿಗಳಿಗೆ 1000 ಸೈಕಲ್ ಹಂಚಿದ ಸೋನು ಸೂದ್

 

ಇತ್ತೀಚೆಗೆ ತೆರೆ ಕಂಡ ಸಾಮ್ರಾಟ್ ಪೃಥ್ವಿರಾಜ್(Samrat Pruthviraj) ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ಜೊತೆ  ಸೋನು ಸೂದ್ ಒಬ್ಬ ಕವಿಯ(Poet) ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ(Directed) ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ(Box-office) ಸದ್ದು ಮಾಡಿತ್ತು. ಇದೀಗ ಖಾಸಗಿ ವಾಹಿನಿಯೊಂದರಲ್ಲಿ ಜಡ್ಜ್(Judge) ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ತಮಿಳು ಚಿತ್ರೋದ್ಯಮದ ಮೂಲಕ ತಮ್ಮ ಕರಿಯರ್ (Career) ಆರಂಭಿಸಿರುವ ಸೋನು, ಕೊನೆಯದಾಗಿ ಆಚಾರ್ಯ(Acharya) ಸಿನಿಮಾದಲ್ಲಿ ನಟಿಸಿದ್ದರು. ಮುಂದೆ ಅವರು ಇ ನಿವಾಜ್(E Niwas) ನಿರ್ದೇಶನದ ಕಿಸಾನ್(kisan) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!