ಟಾಲಿವುಡ್ ಸಿನಿಮಾ ಉದ್ಯಮದಲ್ಲಿ ಮಹಿಳೆಯರಿಗೆ ಸುರಕ್ಷಿತ ಎನ್ನಿಸುವ ಕೆಲಸದ ವಾತಾವರಣವನ್ನು ಕಲ್ಪಿಸಲು ಸರ್ಕಾರ ಪ್ರಯತ್ನಿಸಬೇಕು. ಈ ಬಗ್ಗೆ ಉದ್ಯಮ ನೀತಿಗಳನ್ನು ರೂಪಿಸಲು ಸಹಾಯ ಮಾಡುವ, ಲೈಂಗಿಕ ಕಿರುಕುಳದ ಕುರಿತು ಸಲ್ಲಿಸಿದ ಉಪ ಸಮಿತಿಯ ವರದಿಯನ್ನು..
ಕೇರಳ ರಾಜ್ಯದ 'ಮಲಯಾಳಂ ಚಿತ್ರರಂಗ'ದಲ್ಲಿ ಲೈಂಗಿಕ ಕಿರುಕುಳದ ಕುರಿತು ಜಸ್ಟೀಸ್ ಹೇಮಾ ಸಮಿತಿಯ ವರದಿ (Hema Committee Report) ಅಲ್ಲಿನ ಸಿನಿ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದೆ. ಇದೀಗ ಈ ವರದಿಗೆ ದೇಶಾದ್ಯಂತ ಕಲಾವಿದರು ಶಾಕ್ ಆಗಿದ್ದಾರೆ. ಜೊತೆಗೆ, ಕೇರಳದಲ್ಲಿ ಇಟ್ಟಿರುವ ದಿಟ್ಟ ಹೆಜ್ಜೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ಇದೀಗ ಟಾಲಿವುಡ್ ನಟಿ ಸಮಂತಾ ರುತ್ ಪ್ರಭು 'ತೆಲುಗು ಚಿತ್ರರಂಗದಲ್ಲೂ 'ಅದೇ ರೀತಿಯ ವರದಿಯನ್ನು ಪ್ರಕಟಿಸಬೇಕು' ಎಂದು ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ನಡೆದ ಲೈಂಗಿಕ ಕಿರುಕುಳದ ಹಿನ್ನೆಲೆಯಲ್ಲಿ ಕೇರಳದಲ್ಲಿ ಜಸ್ಟೀಸ್ ಹೇಮಾ ವರದಿ ಬಹಿರಂಗಗೊಂಡ ಬಳಿಕ 9 ಪುರುಷರ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ. ಜೊತೆಗೆ ಅಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಕೇರಳದಲ್ಲಿ ವುಮೆನ್ ಇನ್ ಸಿನಿಮಾ ಕಲೆಕ್ಟಿವ್(wcc)ಯಿಂದ ಪ್ರೇರಿತವಾಗಿ ಟಾಲಿವುಡ್ 2019ರಲ್ಲಿ ಸ್ಥಾಪಿತವಾಗಿರುವ ವಾಯ್ಸ್ ಆಫ್ ವುಮೆನ್(vow) ಮೂಲಕ ಇದೇ ರೀತಿಯ ವರದಿ ಹೊರಬರಬೇಕಿದೆ ಎಂದು ನಟಿ ಸಮಂತಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವ್ಯಾನಿಟಿ ವ್ಯಾನ್‌ನಲ್ಲಿ ನಟಿಯರ ನೇಕೆಡ್ ಚಿತ್ರೀಕರಣ ಮಾಡ್ತಾರೆ: ರಾಧಿಕಾ ಶರತ್‌ಕುಮಾರ್ ಗಂಭೀರ ಆರೋಪ
ಈ ಬಗ್ಗೆ ನಟಿ ಸಮಂತಾ ಅವರು ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ 'ನಾವು, ತೆಲುಗು ಚಿತ್ರರಂಗದ ಮಹಿಳೆಯರು, ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ & ಕೇರಳದ ಡಬ್ಲ್ಯುಸಿಸಿಯ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ. ಮಹಿಳೆಯರ ಶೋಷಣೆ ತಡೆಯುವ ನಿಟ್ಟಿನಲ್ಲಿ ಇದು ಈ ಕ್ಷಣಕ್ಕೆ ದಾರಿಯನ್ನಂತೂ ಮಾಡಿಕೊಟ್ಟಿದೆ' ಎಂದು ನಟಿ ಸಮಂತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಟಾಲಿವುಡ್ ಸಿನಿಮಾ ಉದ್ಯಮದಲ್ಲಿ ಮಹಿಳೆಯರಿಗೆ ಸುರಕ್ಷಿತ ಎನ್ನಿಸುವ ಕೆಲಸದ ವಾತಾವರಣವನ್ನು ಕಲ್ಪಿಸಲು ಸರ್ಕಾರ ಪ್ರಯತ್ನಿಸಬೇಕು. ಈ ಬಗ್ಗೆ ಉದ್ಯಮ ನೀತಿಗಳನ್ನು ರೂಪಿಸಲು ಸಹಾಯ ಮಾಡುವ, ಲೈಂಗಿಕ ಕಿರುಕುಳದ ಕುರಿತು ಸಲ್ಲಿಸಿದ ಉಪ ಸಮಿತಿಯ ವರದಿಯನ್ನು ಪ್ರಕಟಿಸಲು ನಾವು ತೆಲಂಗಾಣ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ' ಎಂದು ನಟಿ ಸಮಂತಾ ಹೇಳಿದ್ದಾರೆ.
ಪತ್ನಿ ವಿಜಯಲಕ್ಷ್ಮೀ ನೆನೆದು ದರ್ಶನ್ ಕಣ್ಣೀರು ಹಾಕಿದ್ರಾ? ಪಶ್ಚಾತ್ತಾಪದ ಮಾತುಗಳು ಬಂದಿವೆಯಾ?
ಮಲಯಾಳಂ ಸಿನಿ ಉದ್ಯಮದಿಂದ ಇತ್ತೀಚೆಗೆ ಹೊರಬಂದ ಹೇಮಾ ಸಮಿತಿಯ ವರದಿಯು ಕೇರಳದಲ್ಲಿ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಪ್ರೇರೇಪಿಸಿತು. ಅಲ್ಲಿ ಸದ್ಯಕ್ಕೆ, ನಟ-ರಾಜಕಾರಣಿ ಮುಖೇಶ್ ಮಾಧವನ್, ಸಿದ್ದಿಕ್, ಜಯಸೂರ್ಯ, ನಿರ್ದೇಶಕರಾದ ರಂಜಿತ್ ಮತ್ತು ವಿಕೆ ಪ್ರಕಾಶ್, ಎಡವೇಲ ಬಾಬು, ಮಣಿಯನ್ಪಿಳ್ಳ ರಾಜು, ಮತ್ತು ನಿರ್ಮಾಣ ಕಾರ್ಯನಿರ್ವಾಹಕರಾದ ವಿಚು ಮತ್ತು ನೋಬಲ್ ಸೇರಿದಂತೆ ಒಂಬತ್ತು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.