ಸಿರೀಸ್ ನಲ್ಲಿ ಬ್ಯುಸಿ ಇರುವ ಬಾಲಿವುಡ್ ನಟಿ ತಿಲೋತ್ತಮ್ ಶೋಮ್ ತಮ್ಮ ಜೀವನದಲ್ಲಿ ನಡೆದ ಕೆಟ್ಟ ಘಟನೆಯನ್ನು ಎಲ್ಲರ ಮುಂದಿಟ್ಟಿದ್ದಾರೆ. ಪುಂಡರಿಂದ ರಕ್ಷಣೆ ಪಡೆಯಲು ಲಿಫ್ಟ್ ಕೇಳಿದ್ರೆ, ಲಿಫ್ಟ್ ನೀಡಿದ ವ್ಯಕ್ತಿ ಮತ್ತಷ್ಟು ನೀಚನಾಗಿದ್ದ. ಆ ದಿನ ಮರೆಯಲು ಸಾಧ್ಯವಿಲ್ಲ ಎಂದು ನಟಿ ಹೇಳಿದ್ದಾರೆ.
ತ್ರಿಭುವನ್ ಮಿಶ್ರಾ ಸಿಎ ಟಾಪರ್ ಸಿರೀಸ್ ಸದ್ಯ ಸುದ್ದಿಯಲ್ಲಿದೆ. ಇದ್ರಲ್ಲಿ ಮಾನವ್ ಕೌಲ್ ಮತ್ತು ತಿಲೋತ್ತಮ ಶೋಮ್ ಕಾಣಿಸಿಕೊಂಡಿದ್ದಾರೆ. ಪುರುಷ ಲೈಂಗಿಕ ಕಾರ್ಯಕರ್ತರನ್ನು ಆಧರಿಸಿದ ಈ ಸಿರೀಸ್ ನಲ್ಲಿ ತಿಲೋತ್ತಮ್ ಶೋಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅದ್ರ ಪ್ರಮೋಷನ್ ನಲ್ಲಿ ಬ್ಯುಸಿ ಇರುವ ನಟಿ, ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ನಡೆದ ಕೆಟ್ಟ ಹಾಗೂ ಮರೆಯಲಾಗದ ಘಟನೆಯನ್ನು ಎಲ್ಲರ ಮುಂದಿಟ್ಟಿದ್ದಾರೆ. ಅದೇ ವೇಳೆ ಲೈಂಗಿಕ ಶಿಕ್ಷಣದ ಮಹತ್ವದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ದೆಹಲಿ (Delhi) ಯನ್ನು ನಡೆದ ಈವ್ ಟೀಸಿಂಗ್ (Eve Teasing) ಘಟನೆ ಬಗ್ಗೆ ತಿಲೋತ್ತಮ್ ಶೋಮ್ (Tilottama Shom) ಮಾತನಾಡಿದ್ದಾರೆ. ಆ ಸಮಯದಲ್ಲಿ ತಿಲೋತ್ತಮ್ ಶೋಮ್, ದೆಹಲಿಯಲ್ಲಿದ್ದರು. ಆಗ ಚಳಿಗಾಲವಾಗಿದ್ದರಿಂದ ಬೇಗ ಕತ್ತಲಾಗ್ತಿತ್ತು. ಸಂಜೆ ಸಮಯವಾಗಿತ್ತು. ತಿಲೋತ್ತಮ್ ಶೋಮ್, ಬಸ್ ನಿಲ್ದಾಣದಲ್ಲಿ ಕಾಯ್ತಿದ್ದರು. ಈ ವೇಳೆ ಕಾರೊಂದು ಅವರ ಬಳಿ ಬಂದು ನಿಂತಿತು. ಅದ್ರಲ್ಲಿ ಆರು ಮಂದಿ ಹುಡುಗರಿದ್ರು. ಆರಂಭದಲ್ಲಿ ಕಾರು ಬಸ್ ನಿಲ್ದಾಣದಲ್ಲಿ ಏಕೆ ನಿಂತಿದೆ ಎಂಬುದು ತಿಲೋತ್ತಮ್ ಶೋಮ್ ಗೆ ಅರ್ಥವಾಗ್ಲಿಲ್ಲ. ಏನೋ ನಡೆಯುತ್ತಿದೆ ಎಂಬ ಅನುಮಾನದಲ್ಲಿಯೇ ತಿಲೋತ್ತಮ್ ಶೋಮ್, ಹುಡುಗರಿಂದ ದೂರಸರಿದು ನಿಂತರು. ಆದ್ರೆ ಹುಡುಗರ ಅಶ್ಲೀಲ ಕಮೆಂಟ್ ಮುಂದುವರೆದಿತ್ತು. ಪ್ರಾಣ ರಕ್ಷಣೆಗೆ ಮುಂದಾದ ತಿಲೋತ್ತಮ್ ಶೋಮ್, ದಾರಿ ಮಧ್ಯೆ ಹೋಗಿ ಲಿಫ್ಟ್ ಕೇಳಲು ಶುರು ಮಾಡಿದ್ದರು. ಈ ಸಮಯದಲ್ಲಿ ಒಂದು ಕಾರು ತಿಲೋತ್ತಮ್ ಶೋಮ್ ಮುಂದೆ ನಿಂತಿತು. ಕಾರ್ ಮೇಲೆ ಡಾಕ್ಟರ್ ಚಿಹ್ನೆ ಇದ್ದ ಕಾರಣ ಭಯವಿಲ್ಲದೆ ತಿಲೋತ್ತಮ್ ಶೋಮ್ ಕಾರು ಹತ್ತಿದರು. ಮುಂದಿನ ಸೀಟಿನಲ್ಲಿ ಕುಳಿತುಕೊಂಡರು. ಆದ್ರೆ ನರಿ ಬಾಯಿಂದ ಸಿಂಹದ ಬಾಯಿಗೆ ಬಿದ್ದಂತಾಗಿತ್ತು. ಲಿಫ್ಟ್ ಕೊಡುವ ವ್ಯಕ್ತಿ ತನ್ನ ಪ್ಯಾಂಟ್ ಜಿಪ್ ತೆಗೆದಿದ್ದ. ತಿಲೋತ್ತಮ್ ಶೋಮ್ ಕೈಯನ್ನು ತನ್ನತ್ತ ಎಳೆದುಕೊಳ್ತಿದ್ದ. ತಕ್ಷಣ ತಿಲೋತ್ತಮ್ ಶೋಮ್ ಕೈ ಹಿಂದಕ್ಕೆ ಎಳೆದುಕೊಂಡರು. ತಿಲೋತ್ತಮ್ ಶೋಮ್ ವರ್ತನೆಯಿಂದ ಗೊಂದಲಕ್ಕೀಡಾದ ವ್ಯಕ್ತಿ ಕಾರ್ ನಿಲ್ಲಿಸಿ ತಿಲೋತ್ತಮ್ ಶೋಮ್ ಅವರನ್ನು ಇಳಿಯುವಂತೆ ಹೇಳಿದ್ದ.
ರಜನಿಕಾಂತ್ ಲೈಫಲ್ಲಿ 'ಶ್ರೀ ರಾಘವೇಂದ್ರ ಸ್ವಾಮಿ'ಗಳ ಪವಾಡದ ಬಗ್ಗೆ ನಟ ರಿಷಬ್ ಶೆಟ್ಟಿ ಹೇಳಿದ್ದೇನು?
ಈ ಘಟನೆಯಿಂದ ನಟಿ ತಿಲೋತ್ತಮ್ ಶೋಮ್ ತುಂಬಾ ಭಯಗೊಂಡಿದ್ದರು. ಈ ಸಮಯದಲ್ಲಿ ಮನೆಗೆ ಹೋಗುವ ಬದಲು ತಿಲೋತ್ತಮ್ ಶೋಮ್ ತನ್ನ ಸ್ನೇಹಿತೆ ಮನೆಗೆ ಹೋಗಿದ್ದರು. ನನ್ನ ಭಯದ ಮುಖ ನೋಡಿ ಪಾಲಕರು ಆತಂಕಕ್ಕೆ ಒಳಗಾಗೋದು ಬೇಡ ಎಂಬುದು ತಿಲೋತ್ತಮ್ ಶೋಮ್ ಉದ್ದೇಶವಾಗಿತ್ತು.
ಲೈಂಗಿಕ ವಿಷ್ಯದ ಬಗ್ಗೆ ಮುಕ್ತ ಮಾತು : ತಿಲೋತ್ತಮ್ ಶೋಮ್ ತಮ್ಮ ಮನೆ, ಲೈಂಗಿಕ ಶಿಕ್ಷಣದ ಬಗ್ಗೆಯೂ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅವರ ಪಾಲಕರು ಯಾವುದೇ ವಿಷ್ಯವನ್ನು ಮುಚ್ಚಿಡುತ್ತಿರಲಿಲ್ಲ. ಹಾಗಾಗಿ ತಿಲೋತ್ತಮ್ ಶೋಮ್ ಅವರ ಎಲ್ಲ ಪ್ರಶ್ನೆಗೆ ಉತ್ತರ ಸಿಕ್ತಾ ಇತ್ತು. ಅವರು ಸೆಕ್ಸ್ ಹೇಗೆ, ಮಕ್ಕಳು ಹೇಗೆ ಜನಿಸ್ತಾರೆ ಎಂಬೆಲ್ಲ ಪ್ರಶ್ನೆಯನ್ನು ಪಾಲಕರಿಗೆ ಕೇಳಿ ಉತ್ತರ ಪಡೆಯುತ್ತಿದ್ದರು.
ಅಪ್ಪನ ಹೆಸರು ಕೇಳ್ಕೊಂಡು ಬೆಳೆಯಲ್ಲ ಎಂದ ಉಪೇಂದ್ರ ಪುತ್ರ; ನನ್ನ ಮಗನನ್ನು ಹೆತ್ತಿದ್ದಕ್ಕೂ ಸಾರ್ಥಕ ಅಂದಿದ್ಯಾಕೆ?
ತಿಲೋತ್ತಮಾ ಶೋಮ್, ಲಸ್ಟ್ ಸ್ಟೋರೀಸ್ 2, ಅಂಗ್ರೇಜಿ ಮೀಡಿಯಂ, ಹಿಂದಿ ಮೀಡಿಯಂ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಾನ್ಸೂನ್ ವೆಡ್ಡಿಂಗ್ ಚಿತ್ರದ ಮೂಲಕ ವೃತ್ತಿ ಜೀವನ ಶುರು ಮಾಡಿದ ತಿಲೋತ್ತಮಾ ಶೋಮ್ ಬೋಲ್ಡ್ ನಟಿ. ತಿಲೋತ್ತಮಾ ಶೋಮ್ ಅನೇಕ ಸಿರೀಸ್ ನಲ್ಲಿಯೂ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ, ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬದ ಜೊತೆ ಸಂಬಂಧವಿದೆ. ಜಯಾಬಚ್ಚನ್ ಸಹೋದರಿ ಮಗನನ್ನು ತಿಲೋತ್ತಮಾ ಶೋಮ್ ಮದುವೆ ಆಗಿದ್ದಾರೆ.