ಮಗಳು ವಿಸ್ಮಯ ಹುಟ್ಟುಹಬ್ಬದಂದೇ ಎಂಪೂರನ್ ಬಿಡುಗಡೆ: ಏನ್‌ ಮಾಡ್ತಿದ್ದಾರೆ ಮೋಹನ್‌ಲಾಲ್ ಪುತ್ರಿ

ಕೇರಳದಲ್ಲಿ 750ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಎಂಪೂರನ್ ಪ್ರದರ್ಶನ ಕಾಣುತ್ತಿದೆ.

Empuraan released on daughter Vismayas birthday What is Mohanlal's daughter doing

ಲಯಾಳಿಗಳು ಕಾತರದಿಂದ ಕಾಯುತ್ತಿದ್ದ ಎಂಪೂರನ್ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಗೂ ಮುನ್ನವೇ ದಾಖಲೆಗಳನ್ನು ಬರೆದ ತನ್ನ ಸಿನಿಮಾ ನೋಡಲು ಮೋಹನ್‌ಲಾಲ್ ಮತ್ತು ಪೃಥ್ವಿರಾಜ್ ಕೊಚ್ಚಿಯ ಕವಿತಾ ಚಿತ್ರಮಂದಿರಕ್ಕೆ ಆಗಮಿಸಿದರು. ಅವರೊಂದಿಗೆ ಕುಟುಂಬ ಮತ್ತು ಇತರ ಚಿತ್ರತಂಡದ ಸದಸ್ಯರಿದ್ದರು. ಮೋಹನ್‌ಲಾಲ್‌ಗೆ ಇಂದು ಡಬಲ್ ಖುಷಿ. ಅವರ ಮಗಳು ವಿಸ್ಮಯ (ಮಾಯಾ) ಮೋಹನ್‌ಲಾಲ್ ಅವರ ಹುಟ್ಟುಹಬ್ಬ ಕೂಡ ಇಂದು.

ಬೆಳಗ್ಗೆಯೇ ವಿಸ್ಮಯಗೆ ಶುಭ ಕೋರಿ ಮೋಹನ್‌ಲಾಲ್ ಪೋಸ್ಟ್ ಹಂಚಿಕೊಂಡಿದ್ದಾರೆ. 'ಹುಟ್ಟುಹಬ್ಬದ ಶುಭಾಶಯಗಳು ಮಾಯಾಕುಟ್ಟಿ. ಪ್ರತಿ ದಿನವೂ ನಿನ್ನ ಕನಸುಗಳು ನನಸಾಗಲಿ ಮತ್ತು ನಿನ್ನ ಜೀವನದಲ್ಲಿ ಸಂತೋಷ ಮತ್ತು ನಗು ತುಂಬಿರಲಿ. ನಿನ್ನ ಬಗ್ಗೆ ನನಗೆ ಹೆಮ್ಮೆ ಇದೆ. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ, ಅಚ್ಚಾ', ಎಂದು ಮೋಹನ್‌ಲಾಲ್ ಬರೆದಿದ್ದಾರೆ. ನಂತರ ಅನೇಕ ಜನರು ಮೋಹನ್‌ಲಾಲ್‌ ಪುತ್ರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ತಂದೆ ಮತ್ತು ಮಗಳಿಗೆ ಇಂದು ಸಂತೋಷದ ದಿನ ಎಂದು ಎಲ್ಲರೂ ಬರೆದಿದ್ದಾರೆ.

ಎಂಪುರಾನ್ ಚಿತ್ರದಲ್ಲಿ ಕ್ಯಾಮಿಯೋ ಯಾರು?: ಯೂಟ್ಯೂಬರ್ ಇರ್ಫಾನ್‌ಗೆ ಆ ಸೀಕ್ರೆಟ್ ಹೇಳಿದ ಮೋಹನ್ ಲಾಲ್

Latest Videos

ಏನ್ ಮಾಡ್ತಿದ್ದಾರೆ ಮೋಹನ್‌ಲಾಲ್ ಪುತ್ರಿ

ತಂದೆ ಅಥವಾ ಸಹೋದರ ಪ್ರಣವ್‌ನಂತೆ ವಿಸ್ಮಯಗೆ ಸಿನಿಮಾದಲ್ಲಿ ಆಸಕ್ತಿಯಿಲ್ಲ. ಮಾರ್ಷಲ್ ಆರ್ಟ್ಸ್, ಕ್ಲೇ ಆರ್ಟ್ಸ್ ಮತ್ತು ಬರಹದಲ್ಲಿ ವಿಸ್ಮಯ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಈ ಹಿಂದೆ ಕುಂಗ್ ಫು, ಥಾಯ್ ಸಮರ ಕಲೆಗಳನ್ನು ಅಭ್ಯಾಸ ಮಾಡುತ್ತಿರುವ ಪೋಸ್ಟ್‌ಗಳನ್ನು ವಿಸ್ಮಯ ಹಂಚಿಕೊಂಡಿದ್ದು, ಅದು ಹೆಚ್ಚು ಗಮನ ಸೆಳೆದಿತ್ತು. 2021 ರಲ್ಲಿ ವಿಸ್ಮಯ 'ಗ್ರೇನ್ಸ್ ಆಫ್ ಸ್ಟಾರ್ ಡಸ್ಟ್' ಎಂಬ ಪುಸ್ತಕ ಬರೆದಿದ್ದಾರೆ. ಆ ಪುಸ್ತಕಕ್ಕೆ ಅಮಿತಾಬ್ ಬಚ್ಚನ್ ಸೇರಿದಂತೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಏತನ್ಮಧ್ಯೆ, ಕೇರಳದಲ್ಲಿ 750ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಎಂಪೂರನ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳೊಂದಿಗೆ ಮೋಹನ್‌ಲಾಲ್ ಮತ್ತು ಚಿತ್ರತಂಡದವರು ಬೆಳಿಗ್ಗೆ ಕವಿತಾ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಬಿಡುಗಡೆಯಾಗುವ ಮುನ್ನವೇ ಎಂಪೂರನ್ ಬಾಕ್ಸ್ ಆಫೀಸ್ ದಾಖಲೆಯನ್ನು ಸೃಷ್ಟಿಸಿತ್ತು. ಮಲಯಾಳಂನಲ್ಲಿ ಮೊದಲ ದಿನ 50 ಕೋಟಿ ಓಪನಿಂಗ್ ಗಳಿಸಿದ ಮೊದಲ ಚಿತ್ರ ಎಂಪೂರನ್ ಆಗಿದೆ. ಬಿಡುಗಡೆಗೆ ಹಿಂದಿನ ದಿನವೇ ಈ ಸಾಧನೆ ಮಾಡಿರುವುದು ಗಮನಾರ್ಹ.

ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎನ್ನಲಾದ ನಟ ಮಮ್ಮುಟ್ಟಿ ಹೆಸರಲ್ಲಿ ಶಬರಿಮಲೆಯಲ್ಲಿ ಮೋಹನ್‌ ಲಾಲ್ ಪೂಜೆ: ವಿವಾದ

 

vuukle one pixel image
click me!