ಬಾಲಿವುಡ್ ನಟನ ಮನೆಯಲ್ಲಿ ಡ್ರಗ್ಸ್: ನಟ ಅರೆಸ್ಟ್

By Suvarna News  |  First Published Aug 28, 2021, 6:10 PM IST
  • ನಟನ ಮನೆಯಲ್ಲಿ ಸಿಕ್ತು ಮಾದಕ ವಸ್ತು
  • ಇಬ್ಬರು ಖ್ಯಾತ ನಟರನ್ನು ಬಂಧಿಸಿದ ಎನ್‌ಸಿಬಿ

ಮುಂಬೈನ ಲೋಖಂಡ್‌ವಾಲಾದಲ್ಲಿರುವ ನಿವಾಸದಿಂದ ನಿಷೇಧಿತ ಔಷಧಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡ ನಂತರ NCB ಬಾಲಿವುಡ್ ನಟ ಗೌರವ್ ದೀಕ್ಷಿತ್ ಅವರನ್ನು ಬಂಧಿಸಿದೆ. ದಾಳಿ ಮಾಡಿದ ನಂತರ ಎನ್‌ಸಿಬಿ ಟಿವಿ ನಟ ಗೌರವ್ ದೀಕ್ಷಿತ್ ಅವರನ್ನು ಬಂಧಿಸಿತು.

ನಟ ಅಜಾಜ್ ಖಾನ್ ಅವರ ವಿಚಾರಣೆಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ ಎನ್‌ಸಿಬಿ ಅಧಿಕಾರಿಯು ಗೌರವ್ ದೀಕ್ಷಿತ್ ನನ್ನು ಕಸ್ಟಡಿಗೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಮಾದಕ ದ್ರವ್ಯ ಪ್ರಕರಣದಲ್ಲಿ ಅಜಾಜ್ ಖಾನ್ ಬಂಧನಕ್ಕೊಳಗಾದ ಒಂದು ತಿಂಗಳ ನಂತರ, ಎನ್‌ಸಿಬಿ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಗೌರವ್ ಮನೆಯಲ್ಲಿ ದೊಡ್ಡ ಪ್ರಮಾಣದ ನಿಷೇಧಿತ ಔಷಧಗಳನ್ನು ವಶಪಡಿಸಿಕೊಂಡಿದೆ.

Tap to resize

Latest Videos

ಡೇನಿಯಲ್ ವೆಬ್‌ರನ್ನೇಕೆ ವರಿಸಿದೆ? ಸನ್ನಿ ಲಿಯೋನ್ ಹೇಳುತ್ತಾರೆ ಅವರ ಮದುವೆ ಕಥೆ!

ಗೌರವ್ ತನ್ನ ಸ್ನೇಹಿತನೊಂದಿಗೆ ಆತನ ನಿವಾಸದಲ್ಲಿ ಪೊಲೀಸರನ್ನು ಕಂಡಾಗ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದರು. ಅಂದಿನಿಂದ ಪೊಲೀಸರು ನಟನನ್ನು ಹುಡುಕುತ್ತಿದ್ದರು. 'ಬಿಗ್ ಬಾಸ್ 7' ನಲ್ಲಿ ಸ್ಪರ್ಧಿಸಿದ್ದ ಅಜಾಜ್ ಖಾನ್ ಅವರನ್ನು ಮಾರ್ಚ್ 31 ರಂದು ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಗಂಟೆಗಳ ವಿಚಾರಣೆ ನಡೆಸಲಾಗಿತ್ತು. ವಿಚಾರಣೆ ನಂತರ ಎನ್‌ಸಿಬಿಯಿಂದ ಬಂಧಿಸಲ್ಪಟ್ಟರು.

ಇತ್ತೀಚೆಗಷ್ಟೇ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನಾ ಡ್ರಗ್ಸ್ ತೆಗೆದುಕೊಂಡಿರುವುದು ದೃಢಪಟ್ಟಿತ್ತು. ಈಗ ಮತ್ತೆ ಬಾಲಿವುಡ್‌ನಲ್ಲಿ ಡ್ರಗ್ಸ್ ವಿಚಾರ ಸುದ್ದಿಯಾಗಿದೆ.

click me!