ಬಾಲಿವುಡ್‌ನ ಹಲವಾರು ಸೆಲೆಬ್ರಿಟಿಗಳು ಮನೋರೋಗಕ್ಕೆ, ಡಿಪ್ರೆಶನ್‌ಗೆ ತುತ್ತಾಗಿದ್ದಾರೆ. ಆದರೆ ಮರಳಿ ಚೇತರಿಸಿಕೊಂಡು ತಮ್ಮ ವೃತ್ತಿ ಜೀವನದಲ್ಲಿ ಉತ್ತುಂಗ ಮುಟ್ಟಿದ್ದಾರೆ. ಬನ್ನಿ ಅವರ್ಯಾರು ಅಂತ ನೋಡೋಣ.
ಇತರ ಎಲ್ಲ ವ್ಯಕ್ತಿಗಳಂತೆ ಸೆಲೆಬ್ರಿಟಿಗಳ ಜೀವನವೂ ಗುಲಾಬಿಗಳ ಹಾಸಿಗೆಯಲ್ಲ. ಇವರ ಫಿಲ್ಮಿ ಪಯಣಗಳೂ ಸುಗಮವಾಗಿರಲಿಲ್ಲ. ಅನೇಕ ಸೆಲೆಬ್ರಿಟಿಗಳು ತಮ್ಮ ಮುಕ್ತ ಮಾತುಕತೆಯ ಮೂಲಕ ತಾವು ಎದುರಿಸಿದ ಖಿನ್ನತೆಯ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಿದ್ದಾರೆ.
ದೀಪಿಕಾ ಪಡುಕೋಣೆ
ಮಾನಸಿಕ ಅಸ್ವಸ್ಥತೆಗಳ ವಿರುದ್ಧ ಹೋರಾಡಿದ ಅತ್ಯಂತ ಸ್ಫೂರ್ತಿದಾಯಕ ಸೆಲೆಬ್ರಿಟಿಗಳಲ್ಲಿ ಒಬ್ಬರು ದೀಪಿಕಾ ಪಡುಕೋಣೆ. ತನ್ನ ಖಿನ್ನತೆಯ ಬಗ್ಗೆ ಅವಳು ಹೆಚ್ಚಾಗಿ ಮಾತಾಡಿದಳು. ಈ ಸ್ಥಿತಿಯನ್ನು ಎದುರಿಸುವವರಿಗೆ ಸಹಾಯ ಮಾಡಲು ಸಂಸ್ಥೆಯನ್ನು ಆರಂಭಿಸಿದದರು. ತನ್ನ ಮಾನಸಿಕ ಸ್ಥಿತಿಯ ಬಗ್ಗೆ ಹೇಳಿಕೊಂಡಾಗ ದೀಪಿಕಾ ತಮ್ಮ ಯಶಸ್ಸಿನ ಉತ್ತುಂಗದಲ್ಲಿದ್ದರು. 2015ರಲ್ಲಿ ಏಕಾಂಗಿಯಾಗಿ ಬದುಕಿದ್ದು ಮತ್ತು ಹೆಚ್ಚಿನ ಸಮಯ ಕೆಲಸವನ್ನೇ ಮಾಡುತ್ತಿದ್ದುದು ಆಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತ್ತು. ಈಗ ರಣವೀರ್ ಸಿಂಗ್ ಅವರನ್ನು ಮದುವೆಯಾಗಿ ಜೊತೆಗೆ ಬಾಳುತ್ತಿದ್ದಾರೆ.
ನಂಬಬೇಡಿ, ಈ ತಾರೆಯರ ಆಕರ್ಷಕ ಸ್ತನಗಳು ನಿಜವಲ್ಲ!
ಅಮಿತಾಭ್ ಬಚ್ಚನ್
ಲಕ್ಷಾಂತರ ಭಾರತೀಯರು ಮಾದರಿ ಎಂದೇ ಭಾವಿಸುವ ಅಮಿತಾಬ್ ಬಚ್ಚನ್ ಖಿನ್ನತೆಯನ್ನು ಎದುರಿಸಿದ್ದಾರೆ ಎಂದರೆ ನಂಬುತ್ತೀರಾ? ಇದು ನಿಜ. ಅವರು 1996ರಲ್ಲಿ ಚಿತ್ರ ನಿರ್ಮಾಣಕ್ಕೆ ಇಳಿದರು, ವೈಫಲ್ಯಗಳ ಸರಮಾಲೆಯನ್ನು ಎದುರಿಸಿದರು ಮತ್ತು ಅಂತಿಮವಾಗಿ ದಿವಾಳಿಯಾದರು. ಆಗ ಅವರನ್ನು ಖಿನ್ನತೆ ಬಾಧಿಸಿತ್ತು. ಆದಾಗ್ಯೂ, ಬಚ್ಚನ್ ಹೋರಾಟ ಕೈಬಿಡಲಿಲ್ಲ. ಜೀವನವು ಹಣ ಗಳಿಸುವುದಕ್ಕಿಂತ ಹೆಚ್ಚಿನದು ಎಂದು ಗ್ರಹಿಸಿದ್ದರು. ಖಿನ್ನತೆಗೆ ಸಹಾಯ ಪಡೆಯದಿರುವುದು ಸರಿಯಲ್ಲ ಎಂಬ ಬಚ್ಚನ್ ಹೇಳಿಕೆ ಖಿನ್ನತೆಯ ಬಗ್ಗೆ ಸಾರ್ವತ್ರಿಕವಾಗಿ ಸ್ವೀಕರಿಸಲ್ಪಟ್ಟ ಮಂತ್ರವಾಗಿದೆ.
ಶಾರುಖ್ ಖಾನ್
ವರ್ಚಸ್ವಿ ನಟ ಶಾರುಖ್ ಖಾನ್ ಕೂಡ ಖಿನ್ನತೆ ಅನುಭವಿಸಿದ್ದರು. ಇದು ನಡೆದುದು 2010ರಲ್ಲಿ ಅವರ ಭುಜದ ಶಸ್ತ್ರಚಿಕಿತ್ಸೆ ನಡೆದಾಗ. ಈ ಖಿನ್ನತೆಗೆ ಪ್ರಮುಖ ಕಾರಣವೆಂದರೆ ಹಲವಾರು ಶಸ್ತ್ರಚಿಕಿತ್ಸೆಗಳ ಮೂಲಕ ಸೂಪಸ್ಟಾರ್‌ನ ಮಾನಸಿಕ ಗಟ್ಟಿತನ ಕುಸಿದುದು. ಆದಾಗ್ಯೂ, ಈಗ ಅವರು ಜೀವನದಲ್ಲಿ ಈ ನೋವಿನ ಪ್ರಸಂಗದಿಂದ ಹೊರಬಂದಿದ್ದಾರೆ.
ಸಂಜಯ ದತ್
ಸಂಜಯ್ ದತ್ ವಿವಾದಗಳಿಗೆ ಹೆಸರುವಾಸಿ. ದುರದೃಷ್ಟವಶಾತ್, ತಮ್ಮ ವೃತ್ತಿಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಿದರು. 93ರ ಮುಂಬೈ ಸ್ಫೋಟ ಸಂಚುಗಾರರ ಜೊತೆ ಭಾಗಿಯಾಗಿದ್ದ ಆರೋಪ, ಕ್ಯಾನ್ಸರ್‌ನಿಂದ ತಾಯಿಯನ್ನು ಕಳೆದುಕೊಂಡಿದ್ದು ಮತ್ತು ಜೈಲುವಾಸವೂ ಸೇರಿದಂತೆ ಅವರ ಜೀವನದಲ್ಲಿ ದುರಂತಗಳ ಸರಮಾಲೆಯಿತ್ತು. ಇವೆಲ್ಲವೂ ಅವರನ್ನು ಖಿನ್ನತೆಗೆ ತಳ್ಳುವಂತೆ ಮಾಡಿತು. ಆದರೆ ಈಗ ಅವರು ಶಾಂತತೆ ಕಂಡುಕೊಂಡಿದ್ದಾರೆ.
ಈ ಜನಪ್ರಿಯ ನಟ ನಟಿಯರು ಹುಟ್ಟಿನಿಂದಲೇ ಪ್ರತಿಭಾವಂತರು!
ಮನಿಷಾ ಕೊಯಿರಾಲ
ಕ್ಲಿನಿಕಲ್ ಖಿನ್ನತೆಯನ್ನು ಇವರು ಧೈರ್ಯದಿಂದ ಎದುರಿಸಿ ಹೋರಾಡಿದ್ದಾರೆ. ಅವರು ಕ್ಯಾನ್ಸರ್‌ನಿಂದ ಬದುಕುಳಿದವರು ಕೂಡ. ಹೆಚ್ಚಿನ ಭರವಸೆಯೊಂದಿಗೆ ಅವರು ನಿಜವಾಗಿಯೂ ತಮ್ಮ ಪ್ರಕ್ಷುಬ್ಧ ಸ್ಥಿತಿಯಿಂದ ಚೇತರಿಸಿಕೊಂಡಿದ್ದಾರೆ. ವೃತ್ತಿ ಜೀವನದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುವ ಹೊಸ್ತಿಲಲ್ಲಿ ಇದ್ದಾರೆ.
ಅನುಷ್ಕಾ ಶರ್ಮಾ
ಖಿನ್ನತೆಯಲ್ಲಿರುವವರ ಬಗ್ಗೆ ಸಾಮಾಜಿಕವಾಗಿ ತಪ್ಪು ಕಲ್ಪನೆ ಇದೆ. ಇವರನ್ನು ಪ್ರತ್ಯೇಕವಾಗಿಡಬೇಕು ಎಂಬ ತಪ್ಪು ನಂಬಿಕೆ ಇದೆ. ಇದು ತಪ್ಪು. ಖಿನ್ನತೆ ಇರುವವರು ಕೂಡಲೇ ಸಕಾಲಿಕ ಸಹಾಯ ಪಡೆಯಬೇಕು, ಖಿನ್ನತೆಯ ಸಮಾಜದಲ್ಲಿ ಸಾಕಷ್ಟು ಅರಿವು ಮೂಡಿಸಬೇಕು ಎಂದು ಸ್ಪಷ್ಟವಾಗಿ ಮಾತನಾಡಿದವರಲ್ಲಿ ಅನುಷ್ಕಾ ಶರ್ಮಾ ಒಬ್ಬರು. ಅವರು ತಮ್ಮ ಹದಿಹರೆಯದಲ್ಲಿ ಖಿನ್ನತೆ ಎದುರಿಸಿದ್ದರು.
ಇಲಿಯಾನಾ ಡಿ ಕ್ರೂಜ್
ಇನ್ನೊಬ್ಬ ಪ್ರತಿಭಾವಂತ ತಾರೆ, ಇಲಿಯಾನಾ ಡಿ ಕ್ರೂಜ್ ಖಿನ್ನತೆ ಮತ್ತು ದೇಹದ ಡಿಸ್ಮಾರ್ಫಿಕ್ ಡಿಸಾರ್ಡರ್ (ಒಂದು ಬಗೆಯ ಗೀಳು) ಬಳಲುತ್ತಿದ್ದವರು. ಈ ಮಾನಸಿಕ ಅಸ್ವಸ್ಥತೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲದ ಸಮಯ ಅದು. ಆದಾಗ್ಯೂ, ಸಹಾಯವನ್ನು ಪಡೆದು ಮತ್ತು ಚಿಕಿತ್ಸಕರೊಂದಿಗೆ ಮಾತನಾಡಿ ಇಲಿಯಾನಾ ಈ ಅಸ್ವಸ್ಥತೆಯನ್ನು ಧೈರ್ಯದಿಂದ ಎದುರಿಸಿದಳು.
ಹೃತಿಕ್ ರೋಷನ್
ಬಾಲಿವುಡ್‌ನ ಸ್ಟೈಲಿಶ್ ಮತ್ತು ಎನರ್ಜಿಟಿಕ್ ಸ್ಟಾರ್ ಆದ ಹೃತಿಕ್ ಕೂಡ ಖಿನ್ನತೆಗೆ ಒಳಗಾಗಿದ್ದಾರೆ ಮತ್ತು ಅವರು ಅದರ ಬಗ್ಗೆ ಬಹಿರಂಗವಾಗಿ ಮಾತನಾಡಲು ಮುಂದೆ ಬಂದರು. ಈ ಮಾನಸಿಕ ಖಾಯಿಲೆ ಕಳಂಕಿತವಾಗುವುದನ್ನು ಬಯಸದ ಅವರು ಅದರ ಬಗ್ಗೆ ಜವಾಬ್ದಾರಿಯುತವಾಗಿ ಮಾತಾಡಿದರು.
ಟೈಗರ್ ಶ್ರಾಫ್
ತಮ್ಮ ಯಾವುದೇ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಸಾಧನೆ ಮಾಡದಿದ್ದಾಗ, ಈ ನಟ ತೀವ್ರ ಖಿನ್ನತೆಗೆ ಒಳಗಾದರು. ಆದರೆ ಈಗ ಅವರು ಆ ಹಂತವನ್ನು ದಾಟಿದಂತೆ ತೋರುತ್ತಿದ್ದು, ಇದು ಅವರ ಸಾಮಾಜಿಕ ಮಾಧ್ಯಮ ಸಂದೇಶಗಳಿಂದ ಸ್ಪಷ್ಟವಾಗಿದೆ.