5ಜಿ ತರಂಗಾಂತರ ಪ್ರಶ್ನಿಸಿದ ಜೂಹಿ ಚಾವ್ಲಾ ಅರ್ಜಿ ವಜಾ, 20 ಲಕ್ಷ ದಂಡ ಹಾಕಿದ ಕೋರ್ಟ್!

By Suvarna NewsFirst Published Jun 4, 2021, 7:24 PM IST
Highlights
  • 5 ಜಿ ತರಂಗಾಂತರ ಮಾರಾಟದ ಬಗ್ಗೆ ಪ್ರಶ್ನಿಸಿದ ನಟಿ ಜೂಹಿ
  • ಬಾಲಿವುಡ್ ನಟಿ ಜೂಯಿ ಚಾವ್ಲಾ ಅರ್ಜಿ ವಜಾ
  • ಅರ್ಜಿದಾರಿಗೆ 20 ಲಕ್ಷ ದಂಡ ಕೂಡ ಹಾಕಿದ ಕೋಟ್೯

ನವದೆಹಲಿ(ಜೂ.04): ಭಾರತದಲ್ಲಿ 5ಜಿ ತರಂಗಾಂತರ ಪ್ರಾಣಿ ಸಂಕುಲವನ್ನೇ ನಾಶಪಡಿಸಲಿದೆ. ಕ್ಯಾನ್ಸರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಹೀಗಾಗಿ ಅನುಮೋದನೆ ಮೊದಲು ಪರಿಶೀಲನೆ ಅಗತ್ಯ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ನಟಿ, ಪರಿಸರವಾದಿ ಜೂಹಿ ಚಾವ್ಲಾಗೆ ಹಿನ್ನಡೆಯಾಗಿದೆ. ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಭಾರತದಲ್ಲಿ 5G: ಹೈಕೋರ್ಟ್ ಸೆಷನ್ ಸಂದರ್ಭ ಫಿಲ್ಮ್ ಸಾಂಗ್ ಹಾಡಿದ್ಯಾರು ?

5ಜಿ ತರಂಗಾಂತರ ಮಾರಾಟವನ್ನು ಜೂಹಿ ಚಾವ್ಲಾ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ಮಾಧ್ಯಮ ಪ್ರಚಾರ ಗಿಟ್ಟಿಸಿಕೊಳ್ಳಲ ಹಾಗೂ ಕಾನೂನ ಪ್ರಕ್ರಿಯೆ ದುರುಪಯೋಗ ಪಡಿಸಕೊಳ್ಳಲು ಬಳಸಿಕೊಂಡಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಹೀಗಾಗಿ ಅರ್ಜಿದಾರರಿಗೆ 20 ಲಕ್ಷ ರೂಪಾಯಿ ದಂಡ ವಿಧಿಸಿದೆ.

5ಜಿ ತರಂಗಾಂತರ ಮಾರಾಟ, ಅದರ ಸಾಧಕ ಬಾಧಕ ಕುರಿತು ಮೊದಲು ಕೇಂದ್ರ ಸರ್ಕಾರವನ್ನು ಮಾಹಿತಿ ಕೇಳಬೇಕು. ಇಲ್ಲಿ ಕೇಂದ್ರ ಅಥವಾ ಸಂಬಂಧಪಟ್ಟ ಇಲಾಖೆ ಮಾಹಿತಿ ನೀಡಲು ನಿರಾಕರಿಸಿದ್ದಲ್ಲಿ ನ್ಯಾಯಲಯದ ಮೊರೆ ಹೋಗಬಹುದು. ಆದರೆ ಈ ಪ್ರಕರಣದಲ್ಲಿ ಜೂಹಿ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿರುವ ಉದ್ದೇಶ ಸಮಂಜಸವಲ್ಲ ಎಂದು ದೆಹಲಿ ನ್ಯಾಯಮೂರ್ತಿ ಜೆಆರ್ ಮಿಧಾ ಅಭಿಪ್ರಾಯಪಟ್ಟಿದ್ದಾರೆ.

ಸುರಕ್ಷತೆ ಖಚಿತಪಡಿಸಿ; 5G ಕೆನೆಕ್ಷನ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ!.

ದೆಹಲಿ ಹೈಕೋರ್ಟ್ ವರ್ಚುವಲ್ ಮೂಲಕ ಅರ್ಜಿ ವಿಚಾರಣೆ ನಡೆಸಿತ್ತು. ಈ ವೇಳೆ ವಿಡಿಯೋ ಲಿಂಕನ್ನು ನಟಿ ತನ್ನ ಆಪ್ತರಿಗೆ ಹಂಚಿಕೊಂಡಿದ್ದರು.  ಲಿಂಕ್ ಬಳಸಿ ವರ್ಚುವಲ್ ವಿಚಾರಣೆಯಲ್ಲಿ ಪಾಲ್ಗೊಂಡ ವ್ಯಕ್ತಿ ಹಿಂದಿ ಚಲನಚಿತ್ರ ಗೀತೆ ಹಾಡಿ ವಿಚಾರಣೆಗೆ ಅಡ್ಡಿಪಡಿಸಿದರು. ಈ ವ್ಯಕ್ತಿಯನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲು ನ್ಯಾಯಾಲಯ ಆದೇಶಿಸಿದೆ.

click me!