2006ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಸಿನಿಮಾ ಕ್ರಿಶ್ ಯಾರಿಗೆ ತಾನೆ ನೆನಪಿಲ್ಲ, ಇದರಲ್ಲಿ ಜೂನಿಯರ್ ಹೃತಿಕ್ ರೋಷನ್ ಕ್ರಿಶ್ ಆಗಿ ನಟಿಸಿದ ಬಾಲಕನ ಬಗ್ಗೆ ನಿಮಗೆ ನೆನಪಿದ್ಯಾ.ಬೆಕ್ಕಿನ ಕಣ್ಣುಗಳ ಈ ಸುಂದರ ತರುಣ ಈಗ ಏನ್ ಮಾಡ್ತಿರಬಹುದು ಎಂಬ ಕುತೂಹಲ ಅನೇಕರನ್ನು ಕಾಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
2006ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಸಿನಿಮಾ ಕ್ರಿಶ್ ಯಾರಿಗೆ ತಾನೆ ನೆನಪಿಲ್ಲ, ಇದರಲ್ಲಿ ಜೂನಿಯರ್ ಹೃತಿಕ್ ರೋಷನ್ ಕ್ರಿಶ್ ಆಗಿ ನಟಿಸಿದ ಬಾಲಕನ ಬಗ್ಗೆ ನಿಮಗೆ ನೆನಪಿದ್ಯಾ. ಬೆಕ್ಕಿನ ಕಣ್ಣುಗಳ ಈ ಸುಂದರ ತರುಣ ಈಗ ಏನ್ ಮಾಡ್ತಿರಬಹುದು ಎಂಬ ಕುತೂಹಲ ಅನೇಕರನ್ನು ಕಾಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಸಾಮಾನ್ಯವಾಗಿ ಬಾಲ್ಯದಲ್ಲಿ ಸಿನಿಮಾ ರಂಗಕ್ಕೆ ಬಂದವರು ಮತ್ತೆ ತಮ್ಮ ಕೆರೆಯರ್ ಬದಲಿಸುವುದು ತೀರಾ ಕಡಿಮೆ. ಬಹುತೇಕರು ನಟನಾರಂಗದಲ್ಲೇ ವೃತ್ತಿ ಮುಂದುವರೆಸಲು ಬಯಸುತ್ತಾರೆ. ಆದರೆ ಈ ಹುಡುಗ ಮಾತ್ರ ವಿಭಿನ್ನ. 2006ರಲ್ಲಿ ತೆರೆ ಕಂಡ ಬಾಲಿವುಡ್ ಸೂಪರ್ ಹಿಟ್ ಸಿನಿಮಾ ಕ್ರಿಶ್, ಗ್ರೀಕ್ ಗಾಡ್ ಖ್ಯಾತಿಯ ಹೃತಿಕ್ ರೋಷನ್ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದರು. ಹೃತಿಕ್ ರೋಷನ್ ತಂದೆ ರಾಕೇಶ್ ರೋಶನ್ ನಿರ್ದೇಶನದ ಈ ಸಿನಿಮಾದಲ್ಲಿ ಜೂನಿಯರ್ ಹೃತಿಕ್ ಅಂದ್ರೆ ಕ್ರಿಶ್ ಪಾತ್ರವನ್ನು ನಿಭಾಯಿಸಿದ್ದು, ಈ ಹುಡುಗ ಮಿಕ್ಕಿ. ಅಂದು ಜೂನಿಯರ್ ಕ್ರಿಶ್ ಆಗಿ ನಟಿಸಿದ್ದ ಮಿಕ್ಕಿ ಇಂದು ಬೆಳೆದು ದೊಡ್ಡವರಾಗಿ ಡಾಕ್ಟರ್ ಮಿಕ್ಕಿ ಆಗಿದ್ದು, ಇವರೀಗ ಖ್ಯಾತ ಕಣ್ಣಿನ ಶಸ್ತ್ರಚಿಕಿತ್ಸಕರಾಗಿದ್ದಾರೆ. ಸಿನಿಮಾದಿಂದ ಹೊರಬಿದ್ದು, ಶಿಕ್ಷಣ ಮುಗಿಸಿ ವೈದ್ಯಕೀಯ ಲೋಕಕ್ಕೆ ಇಳಿದ ಇವರ ಈ ಪರಿವರ್ತನೆಯ ಜರ್ನಿ ಬಗ್ಗೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಸ್ವತ ಡಾ. ಮೈಕಿ ಈ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.
ಹೃತಿಕ್ ಜೊತೆಗಿನ ಸಂಬಂಧದ ಕಾರಣಕ್ಕೆ ಅವಕಾಶ ಸಿಗ್ತಿಲ್ಲ, ಪ್ಲೀಸ್ ಕೆಲಸ ಕೊಡಿ ಎಂದ ಸಬಾ ಆಜಾದ್
ವೀಡಿಯೋದಲ್ಲಿ ಡಾ. ಮಿಕ್ಕಿ ತಮ್ಮ ಬಳಿ ಬರುವ ರೋಗಿಗಳು ನಾವು ನಿಮ್ಮನ್ನು ಎಲ್ಲೋ ನೋಡಿದ್ದೇವೆ ಎಂದು ಹೇಳ್ತಾರಂತೆ, ಇದಕ್ಕೆ ವೀಡಿಯೋ ಮಾಡಿರುವ ಅವರು ಕ್ರಿಶ್ ಸಿನಿಮಾದಲ್ಲಿ ತಾವು ನಟಿಸಿರುವ ಸೀನ್‌ನ ತುಣುಕೊಂದನ್ನು ಹಂಚಿಕೊಂಡಿದ್ದು, ಜೊತೆಗೆ ಹೃತಿಕ್ ರೋಷನ್, ಸಿನಿಮಾ ನಿರ್ದೇಶಕ ರಾಕೇಶ್ ರೋಷನ್ ಜೊತೆಗೆ ತಾವಿರುವ ಫೋಟೋವನ್ನು ಈ ವೀಡಿಯೋಗೆ ಸೇರಿಸಿದ್ದಾರೆ. ಬಳಿಕ ಹೀಗೆ ಬರೆದುಕೊಂಡಿದ್ದಾರೆ. ನೀವು ನನ್ನನ್ನು ಮೊದಲೆಲ್ಲಾದರು ನೋಡಿದ್ದೀರಾ? ಖಂಡಿತವಾಗಿಯೂ ನೋಡಿರ್ತಿರಾ? ನನಗೆ ಜೂನಿಯರ್ ಕ್ರಿಶ್ ಆಗಿ ನಟಿಸಲು ನಂಬಲಾಗದಂತಹ ಅವಕಾಶವೊಂದು ಸಿಕ್ಕಿತ್ತು. ಜೊತೆಗೆ ಈ ಕೆಲಸದ ಆಚೆಗೆ ಈ ಸಿನಿಮಾದಲ್ಲಿ ಬಹಳ ಪ್ರತಿಭಾವಂತ ತಂಡವಿತ್ತು. ಆ ತಂಡದ ಭಾಗವಾಗಿದ್ದು ನಿಜವಾಗಿಯೂ ಖುಷಿಯ ವಿಚಾರ,
ಒಬ್ಬ ಬಾಲ ಕಲಾವಿದನಾಗಿ ಆರಂಭವಾದ ನನ್ನ ಪಯಣ ಮುಂದೆ ಓರ್ವ ಕಣ್ಣಿನ ಶಸ್ತ್ರಚಿಕಿತ್ಸನಾಗಿ ಬದಲಾಗಿದ್ದು ಯಾವುದೇ ಅದ್ಭುತಕ್ಕೂ ಕಡಿಮೆ ಏನಲ್ಲ, ಈ ಪರಿವರ್ತನೆಯೂ ಅದ್ಭುತ ಅನುಭವಗಳು ಮತ್ತು ಅಸಾಧಾರಣ ಕಲಿಕೆಗಳಿಂದ ತುಂಬಿದೆ ಹಾಗೂ ಇದೇ ಇಂದು ನಾನು ಯಾರೆಂಬುದನ್ನು ರೂಪಿಸಿದೆ. ನಾನು ನನ್ನ ನಟನಾ ದಿನಗಳಲ್ಲಿ ಕಲಿತ ಪಾಠಗಳು ನನಗೆ ಇಂದಿಗೂ ನನ್ನ ವೃತ್ತಿಯಲ್ಲಿ ಪ್ರೇರಣೆ ನೀಡುತ್ತಿದೆ. ಈ ವಿಭಿನ್ನವಾದ ಹಾದಿಯ ಪ್ರತಿಯೊಂದು ಹೆಜ್ಜೆಗೂ ನಾನು ಕೃತಜ್ಞನಾಗಿರುತ್ತೇನೆ. ನಾನು ಈಗ ನಿಮ್ಮ ಕಣ್ಣಿನ ಆರೈಕೆಗೆ ಸೂಪರ್ ಹೀರೋ ಆಗಿರುವೆ ಎಂದು ಬರೆದುಕೊಂಡಿದ್ದಾರೆ ಡಾಕ್ಟರ್ ಮಿಕ್ಕಿ.
ಹಾವು ಮುಂಗುಸಿಗಳಂತಿದ್ದರೂ ಆಪತ್ಕಾಲದಲ್ಲಿ ಕಂಗನಾ ಬೆನ್ನಿಗೆ ನಿಂತ ಹೃತಿಕ್ ರೋಷನ್
ಅಲ್ಲದೇ ಅವರು ಶೇರ್ ಮಾಡಿರುವ ವೀಡಿಯೋದಲ್ಲಿರುವ ಸಿನಿಮಾದ ತುಣುಕುಗಳು ಹೃತಿಕ್ ಅಭಿಮಾನಿಗಳನ್ನು ಮತ್ತೊಮ್ಮೆ ಆ ಕಾಲಕ್ಕೆ ಕೊಂಡೊಯ್ಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿಯೂ ಡಾ ಮಿಕ್ಕಿ ಅವರ ಈ ಅದ್ಭುತ ಜರ್ನಿಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ಇದು ದೇವರ ಪ್ಲಾನ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಲೈಫ್ ಡೆಸ್ಟಿನೇಷನ್ ಎಂದಿದ್ದಾರೆ. ಅಲ್ಲದೇ ಈ ಅದ್ಭುತ ಏಳಿಗೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಈ ಕ್ರಿಶ್ ಸಿನಿಮಾವೂ 2006ರಲ್ಲಿ ರಿಲೀಸ್ ಆಗಿತ್ತು. ಹೃತಿಕ್ ರೋಷನ್ ಈ ಸಿನಿಮಾದಲ್ಲಿ ಡಬ್ಬಲ್ ರೋಲ್ ಮಾಡಿದ್ದರು.. ಪ್ರಿಯಾಂಕಾ ಚೋಪ್ರಾ, ನಸಿರುದ್ದೀಶ್ ಶಾ ಹಾಗೂ ರೇಖಾ ಈ ಸಿನಿಮಾದ ಸಪೋರ್ಟಿಂಗ್ ರೋಲ್ ನಿಭಾಯಿಸಿದ್ದರು.