ಇದು ಬಿಗ್ಗೆಸ್ಟ್ ಓಟಿಟಿ ಡೀಲ್! ಪುಷ್ಪ 2 ಎಷ್ಟು ಕೋಟಿಗೆ ಓಟಿಟಿಗೆ ಸೇಲಾಯ್ತು ಅಂತ ಗೊತ್ತಾದ್ರೆ ಶಾಕ್ ಆಗ್ತೀರ!

By Bhavani Bhat  |  First Published Sep 2, 2024, 11:52 AM IST

ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾ ರಿಲೀಸ್‌ಗೂ ಮುನ್ನವೇ ಸಿನಿಮಾ ದಾಖಲೆ ಬರೆದಿದೆ. ಈ ಸಿನಿಮಾದ ಓಟಿಟಿ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಭಾರೀ ಮೊತ್ತಕ್ಕೆ ಖರೀದಿಸಿದೆ. ಡಿಸೆಂಬರ್ 6 ಕ್ಕೆ ಚಿತ್ರ ತೆರೆಗೆ ಬರಲಿದೆ.


ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ರಿಲೀಸ್‌ಗೂ ಮೊದಲೇ ಸಖತ್ ಸೌಂಡ್ ಮಾಡ್ತಿದೆ. ಹಾಗೆ ನೋಡಿದ್ರೆ ಇದರ ಪ್ರೀಕ್ವೆಲ್ 3 ವರ್ಷಗಳ ಹಿಂದೆ ರಿಲೀಸ್ ಆಗಿತ್ತು. ಆಗ 'ಪುಷ್ಪ' ಸಿನಿಮಾ ತೆರೆಗೆ ಬಂದು ಬಾಕ್ಸಾಫೀಸ್ ಚಿಂದಿ ಮಾಡಿತ್ತು. ಈ ಸಿನಿಮಾದ ಮೊದಲ ಭಾಗ ಕ್ರಿಯೇಟ್ ಮಾಡಿರೋ ಹೈಪ್ ಯಾವ ಲೆವೆಲ್‌ಗೆ ತಂಡವನ್ನು ಮೇಲೆತ್ತಿದೆ ಅಂದರೆ ಅತೀ ಹೆಚ್ಚು ಮೊತ್ತಕ್ಕೆ ನೆಟ್‌ಫ್ಲಿಕ್ಸ್ ಈ ಸಿನಿಮಾದ ಸೀಕ್ವೆಲ್ ಅನ್ನು ಖರೀದಿಸಲು ಮುಂದಾಗಿದೆ. ಈಗಾಗಲೇ ಈ ಸಿನಿಮಾದ ಒಂದೆರಡು ಹಾಡು, ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ರಿಲೀಸ್‌ಗೆ ಭರ್ಜರಿ ಪ್ಲಾನ್ ನಡೀತಿದೆ ಅನ್ನೋದಕ್ಕೆ ಸಾಕ್ಷಿ ಅನ್ನೋ ಹಾಗೆ ಆಗಸ್ಟ್ 15ಕ್ಕೆ ಬರಬೇಕಿದ್ದ ಸಿನಿಮಾ ತಡವಾಗುತ್ತಿದೆ. ಲೇಟ್ ಆದರೂ ಒಳ್ಳೆ ಸಿನಿಮಾ ಕೊಡ್ತೀವಿ ಎಂದು ಚಿತ್ರತಂಡ ಹೇಳ್ತಿದೆ. ಇದರಿಂದ ಈ ಸಿನಿಮಾ ರಿಲೀಸ್‌ ದೊಡ್ಡ ಮಟ್ಟದಲ್ಲಿ ಹೈಪ್ ಕ್ರಿಯೇಟ್ ಮಾಡೋ ಎಲ್ಲ ಲಕ್ಷಣಗಳೂ ಕಾಣುತ್ತಿದೆ. ಇದನ್ನೆಲ್ಲ ನೋಡಿ ಸೂಪರ್‌ ಸ್ಟಾರ್ ಅಲ್ಲು ಅರ್ಜುನ್ ಫ್ಯಾನ್ಸ್ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅಂದ ಹಾಗೆ ಈ ಸಿನಿಮಾವನ್ನು ನೂರಾರು ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡ್ತಿರೋದು ಮೈತ್ರಿ ಮೂವಿ ಮೇಕರ್ಸ್. ಈ ಸಿನಿಮಾಕ್ಕೆ ಮೊದಲ ಭಾಗಕ್ಕಿಂತ ಹಲವು ಪಟ್ಟು ಹೆಚ್ಚು ಖರ್ಚು ಮಾಡಿರೋದಾಗಿ ಈ ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸೀಕ್ವೆಲ್‌ಗಳು ಸಖತ್ ಕಮಾಲ್ ಮಾಡ್ತಿವೆ. ಈ ಹಿಂದೆ 'ಬಾಹುಬಲಿ', 'ಕೆಜಿಎಫ್' ಸರಣಿಯ ಮೊದಲ ಸಿನಿಮಾಗಳು ಬ್ಲಾಕ್‌ಬಸ್ಟರ್ ಹಿಟ್ ಆದಾಗ ಎರಡನೇ ಭಾಗದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ತೆರೆಗೆ ತಂದಿದ್ದರು. ಅದೇ ಲೆಕ್ಕಾಚಾರ 'ಪುಷ್ಪ' ವಿಚಾರದಲ್ಲಿ ನಡೀತಿದೆ.

Tap to resize

Latest Videos

ಜಗಳಕ್ಕೆ ಕಾಲ್ ಕೆರೆದು ಬಂದವರಗೆ ಪುಷ್ಪರಾಜ್ ಖಡಕ್ ಉತ್ತರ; ಅಲ್ಲು ಅರ್ಜುನ್ ಪುಷ್ಪ2 ಹೊಸ ರೆಕಾರ್ಡ್..!

ಪುಷ್ಪ ಪಾರ್ಟ್‌-1 ಬರೋಬ್ಬರಿ 350 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಆ ಲೆಕ್ಕಚಾರದಲ್ಲಿ ಇದೀಗ ಸೀಕ್ವೆಲ್‌ ಅನ್ನು ಬಹುಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಸರಿ ಸುಮಾರು 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸೀಕ್ವೆಲ್ ತೆರೆಗೆ ತರಲಾಗುತ್ತಿದೆ.

ಡಿಸೆಂಬರ್ 6ಕ್ಕೆ 'ಪುಷ್ಪ'-2 ಸಿನಿಮಾ ತೆರೆಗೆ ಬರಲಿದೆ. ಸದ್ಯ ಈ ಚಿತ್ರಕ್ಕೆ ಬೆಸ್ಟ್ ಡಿಜಿಟಲ್ ಪಾಲುದಾರರು ಸಿಕ್ಕಿದ್ದಾರೆ. ನೆಟ್‌ಫ್ಲಿಕ್ಸ್ ಸಂಸ್ಥೆ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 270 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ ಪುಷ್ಪ ಸೀಕ್ವೆಲ್‌ನ ರೈಟ್ಸ್‌ ಅನ್ನು ಖರೀದಿ ಮಾಡಿದೆ. ಈ ಹಿಂದೆ ಭಾರತೀಯ ಚಿತ್ರರಂಗದಲ್ಲಿ ಈ ಭಾರಿ ಮೊತ್ತದ ವ್ಯವಹಾರ ನಡೆದಿಲ್ಲ. ಇದೆ ಮೊದಲ ಬಾರಿ ಈ ಭಾರೀ ಮೊತ್ತಕ್ಕೆ ಸಿನಿಮಾವೊಂದರ ಖರೀದಿ ಓಟಿಟಿಯಲ್ಲಿ ನಡೆದಿದೆ ಎನ್ನಲಾಗಿದೆ.

ಬಿಗ್ ಬಾಸ್ ವೀಕ್ಷಕರಿಗೆ ನಿರಾಸೆ, ಶಸ್ತ್ರಚಿಕಿತ್ಸೆಯಿಂದ ಈ ಬಾರಿ ನಿರೂಪಣೆಗೆ ಸಲ್ಮಾನ್ ಖಾನ್ ಡೌಟ್!

ಅಂದ ಹಾಗೆ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಆಗ್ತಿರೋ 'ಪುಷ್ಪ-2' ಚಿತ್ರದ ಎಲ್ಲಾ ಭಾಷೆಗಳ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಿದೆ. ಈ ಹಿಂದೆ ಈ ಸಿನಿಮಾದ ಮೊದಲ ಭಾಗವನ್ನು ಅಮೇಜಾನ್ ಪ್ರೈಂ ವೀಡಿಯೋ ಖರೀದಿಸಿತ್ತು. ಈ ಹಿಂದಿನ ಭಾಗದಲ್ಲಿದ್ದಂತೇ ಈ ಭಾಗಕ್ಕೂ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿನ ಸಲದಂತೆಯೇ ಈ ಬಾರಿಯೂ ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ನಡುವಿನ ಫೈಟ್ ಪ್ರೇಕ್ಷಕರಿಗೆ ಥ್ರಿಲ್ ಕೊಡಲಿದೆ. ಡಿಸೆಂಬರ್ 6ಕ್ಕೆ 'ಪುಷ್ಪ'-2' ಸಿನಿಮಾ ಥಿಯೇಟರ್‌ನಲ್ಲಿ ಅಬ್ಬರಿಸಲಿದೆ. ಸೋ ಸಿನಿಮಾ ರಿಲೀಸ್‌ಗೂ ಎಷ್ಟೋ ಮೊದಲೇ ಈ ಸಿನಿಮಾದ ಓಟಿಟಿ ರೈಟ್ಸ್ ಈ ಭಾರೀ ಮೊತ್ತಕ್ಕೆ ಸೇಲಾಗಿರೋದು ನೋಡ್ತಿದ್ರೆ ಸೌತ್ ಸಿನಿಮಾ ಇಂಡಸ್ಟ್ರಿ ಕಷ್ಟಕಾಲದಲ್ಲಿದೆ ಅನ್ನುವ ಮಾತೆಲ್ಲ ಸತ್ಯಕ್ಕೆ ದೂರವಾದದ್ದು ಅನಿಸುತ್ತೆ.

click me!