The Kashmir Files ಸಿನಿಮಾ ಹೇಟ್ ಮಾಡ್ತೀನಿ ಎಂದ RGVಗೆ ಅಗ್ನಿಹೋತ್ರಿ ಕೊಟ್ಟ Reply ಹೀಗಿದೆ

Suvarna News   | Asianet News
Published : Mar 21, 2022, 05:48 PM IST
The Kashmir Files ಸಿನಿಮಾ ಹೇಟ್ ಮಾಡ್ತೀನಿ ಎಂದ RGVಗೆ ಅಗ್ನಿಹೋತ್ರಿ ಕೊಟ್ಟ Reply ಹೀಗಿದೆ

ಸಾರಾಂಶ

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ಹೇಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದು, ಇದೇ ಕಾರಣಕ್ಕೆ ನಿಮ್ಮನ್ನು ನಾನು ಇಷ್ಟ ಪಡೋದು ಎಂದು ಹೇಳಿದ್ದೀರೆ.

ದಿ ಕಾಶ್ಮೀರ್ ಫೈಲ್ಸ್(The Kashmir Files) ಸಿನಿಮಾ ಭಾರತದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಕೋಟಿ ಕೋಟಿ ಬಾಚಿಕೊಳ್ಳುತ್ತಿರುವ ದಿ ಕಾಶ್ಮೀರ್ ಫೈಲ್ಸ್ ವೀಕೆಂಡ್ ನಲ್ಲಿ ದಾಖಲೆಯ ಕಲೆಕ್ಷನ್ ಮಾಡಿ ಗಮನ ಸೆಳೆದಿದೆ. ದಿ ಕಾಶ್ಮೀಕ್ ಫೈಲ್ಸ್ ಚಿತ್ರದ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಸಿನಿಮಾ ನೋಡಿ ಅನೇಕರು ಮೆಚ್ಚಿಕೊಂಡರೆ ಇನ್ನು ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ. ಸಿನಿಮಾ ಬಿಡುಗಡೆಯಾಗಿ 10 ದಿನಗಳಾದರೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ.

ಇದೀಗ ಸಿನಿಮಾ ಬಗ್ಗೆ ತೆಲುಗಿನ ವಿವಾದಾತ್ಮಕ ನಿರ್ದೇಶಕ ಅಂತಾನೆ ಖ್ಯಾತಿಗಲಿಸಿರುವ ರಾಮ್ ಗೋಪಾಲ್ ವರ್ಮಾ(Ram Gopal Varma) ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮದೆ ಶೈಲಿಯಲ್ಲಿ ಸಿನಿಮಾದ ಬಗ್ಗೆ ವಿಮರ್ಷೆ ಮಾಡಿರುವ ವರ್ಮಾ ಈ ಸಿನಿಮಾವನ್ನು ಹೇಟ್ ಮಾಡುತ್ತೀನಿ ಎಂದು ಹೇಳಿದ್ದಾರೆ. ಚಿತ್ರದ ಬಗ್ಗೆ ವಿಮರ್ಷೆ ಮಾಡಿರುವ ವಿಡಿಯೋ ಹಂಚಿಕೊಂಡಿರುವ ವರ್ಮಾ ಮೊದಲ ಬಾರಿಗೆ ಸಿನಿಮಾದ ಬಗ್ಗೆ ವಿಮರ್ಷೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

'ನನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ನಾನು ಸಿನಿಮಾ ವಿಮರ್ಶೆ ಮಾಡುತ್ತಿದ್ದೇನೆ. ಇಲ್ಲಿ ನಾನು ಸಿನಿಮಾ ವಿವಾದಾತ್ಮಕ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಸಿನಿಮಾವನ್ನು ಹೇಗೆ ಮಾಡಬೇಕು ಎಂಬುದನ್ನು ನಾವೆಲ್ಲ ನಂಬಿದ್ದೆವೋ ಅದೆಲ್ಲವನ್ನೂ ಈ ಚಿತ್ರ ಬದಲಾಯಿಸಿದೆ. ಇಲ್ಲಿ ಸ್ಟಾರ್ಸ್ ಇಲ್ಲ. ಪ್ರೇಕ್ಷಕರನ್ನು ಮೆಚ್ಚಿಸುವ ಯಾವುದೇ ಉದ್ದೇಶ ನಿರ್ದೇಶಕನಿಗೆ ಇಲ್ಲ. ಆ ಎಲ್ಲ ನಂಬಿಕೆ ಮತ್ತು ನಿಯಮಗಳನ್ನು ಈ ಸಿನಿಮಾ ಮುರಿದು ಹಾಕಿದೆ' ಎಂದು ಹೇಳಿದ್ದಾರೆ.

ಡಾಲಿ ಧನಂಜಯ್‌ನ ಹಾಡಿ ಹೊಗಳಿದ ಟಾಲಿವುಡ್ ನಿರ್ದೇಶಕ RGV

ಬಳಿಕ ಈ ಸಿನಿಮಾವನ್ನು ಹೇಟ್ ಮಾಡುತ್ತೇನೆ ಎಂದಿರುವ ವರ್ಮಾ ಯಾಕೆ ಎಂದು ಕಾರಣ ನೀಡಿದ್ದಾರೆ. 'ನಾನು ಈ ಸಿನಿಮಾವನ್ನು ದ್ವೇಷಿಸುತ್ತೇನೆ. ಯಾಕೆಂದರೆ ನಾನು ಇದುವರೆಗೂ ಕಲಿತದ್ದನ್ನು, ನಂಬಿದನ್ನು ಈ ಸಿನಿಮಾ ನಾಶ ಮಾಡಿದೆ. ಹಾಗಾಗಿ ಈ ಸಿನಿಮಾವನ್ನು ಹೇಟ್ ಮಾಡುತ್ತೇನೆ. ನಿರ್ದೇಶಕರಾಗಿರಲಿ, ನಟನೆಯ ಶೈಲಿಯಾಗರಿಲಿ, ಚಿತ್ರಕತೆ ಮಾಡಿದ ರೀತಿಗೆ ನಾನು ದ್ವೇಷಮಾಡುತ್ತೇನೆ. ಯಾಕೆಂದರೆ ಈ ಸಿನಿಮಾ ಎಲ್ಲಾ ನಿರ್ದೇಶಕರ ಗುರುತನ್ನು ನಾಶಮಾಡುವಂತೆ ಹೇಳುತ್ತದೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿದ ಅಗ್ನಿಹೋತ್ರಿಯನ್ನು ತುಂಬಾ ಪ್ರೀತಿಸುತ್ತೇನೆ' ಎಂದು ವರ್ಮಾ ಹೇಳಿದ್ದಾರೆ.

ರಾಮ್ ಗೋಪಾಲ್ ವರ್ಮಾ ವಿಮರ್ಷೆ ನೋಡಿ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಪ್ರತಿಕ್ರಿಯೆ ನೀಡಿದ್ದಾರೆ. ವರ್ಮಾ ವಿಡಿಯೋ ಶೇರ್ ಮಾಡಿ, 'ನೀವು ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ದ್ವೇಷಿಸುತ್ತೀರಿ. ಅದಕ್ಕಾಗಿಯೇ ನಾನು ನಿಮ್ಮನ್ನು ಇಷ್ಟಪಡೋದು' ಎಂದು ಟ್ವೀಟ್ ಮಾಡಿದ್ದಾರೆ.

ರಾಮ್‌ ಗೋಪಾಲ್‌ ವರ್ಮಾ ಜೊತೆ ಹೈದರಾಬಾದ್‌ನಲ್ಲಿ ಉಪೇಂದ್ರ ಏನ್ ಮಾಡ್ತಿದ್ದಾರೆ?

ಕಾಶ್ಮೀರ್ ಫೈಲ್ಸ್ 1990ರ ಸಮಯದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ((Vivek Agnihotri) ಸಾರಥ್ಯದಲ್ಲಿ ಬಂದ ಈ ಚಿತ್ರಕ್ಕೆ ಸಿನಿ ಗಣ್ಯರು ಮಾತ್ರವಲ್ಲದೆ ಅನೇಕ ರಾಜಕೀಯ ಗಣ್ಯರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಲೆಕ್ಷನ್ ವಿಚಾರದಲ್ಲಿ ದಾಖಲೆ ನಿರ್ಮಿಸಿರುವ ದಾ ಕಾಶ್ಮೀರ್ ಫೈಲ್ಸ್ ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಈಗಾಗಲೇ ಕಾಶ್ಮೀರ್ ಫೈಲ್ಸ್ ಸಿನಿಮಾ ಇದುವೆರೆಗೂ ಅಂದರೆ 10 ದಿನಗಳಲ್ಲಿ ಒಟ್ಟು 168 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿಯಾಗಿದೆ(The Kashmir Files boxoffice collection Day 10). ಶನಿವಾರ ಮತ್ತು ಭಾನುವಾರ ರಜೆದಿನಗಳಲ್ಲಿ ಕಾಶ್ಮೀರ್ ಫೈಲ್ಸ್ ಸಿನಿಮಾ ದಾಖಲೆ ಗಳಿಕೆ ಮಾಡಿದೆ. ಶನಿವಾರ ಒಂದೇ ದಿನ ಸಿನಿಮಾ 24.80 ಕೋಟಿ ಬಾಚಿಕೊಂಡರೆ ಭಾನುವಾರ 26.20 ಕೋಟಿ ಕಲೆಕ್ಷನ್ ಮಾಡಿದೆ. ಈ ಬಗ್ಗೆ ಬಾಲಿವುಡ್ ಸಿನಿಮಾ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಈಗಾಗಲೆ 168 ಕೋಟಿ ರೂ. ಗಳಿಸಿರುವ ಸಿನಿಮಾ ಸದ್ಯದಲ್ಲೇ 200 ಕೋಟಿ ಕ್ಲಬ್ ದಾಟಿ ಮುನ್ನುಗ್ಗಲಿದೆ ಎಂದು ಅಂದಾಜಿಸಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?