ಸಾಕಷ್ಟು ಅಭಿನಯ ಪ್ರತಿಭೆ ಇದ್ರೂ ಐರನ್ ಲೆಗ್ ಅಂತ ಕರೆಸಿಕೊಂಡ ಈ ಪ್ರತಿಭಾವಂತ ನಟಿ ಜೊತೆ ಆಕ್ಟ್ ಮಾಡೋಕೆ ಸ್ಟಾರ್‌ಗಳು ಹಿಂದೇಟು ಹಾಕ್ತಿದ್ರಂತೆ! ಬಾಲಿವುಡ್ ತಾಪ್ಸಿ ಪನ್ನು ಹೇಳಿಕೊಂಡ ಆಕೆಯ ಕತೆ ಇಲ್ಲಿದೆ.
ನಾನು ಕಾಲೇಜಲ್ಲಿ (College) ಇದ್ದಾಗಲೇ ಮಾಡೆಲಿಂಗ್ (Modelling) ಶುರು ಮಾಡಿದೆ. ಅದನ್ನು ನಾನು ಮಾಡ್ತಿದ್ದುದು ಪಾಕೆಟ್ ಮನಿಗಾಗಿ. ಸಿಎಟಿ (CAT) ಎಕ್ಸಾಮ್‌ನಲ್ಲಿ 89% ಮಾರ್ಕ್ಸ್ ಸ್ಕೋರ್ ಮಾಡಿದೆ. ನಂತರ ಎಂಬಿಎ (MBA) ಮಾಡಲು ಮುಂದಾದೆ. ಆಗ್ಲೇ ನನಗೆ ಫಿಲಂನಲ್ಲಿ ನಟಿಸಲು ಆಫರ್ ಬಂತು. ನಾನೇನೂ ಚಾನ್ಸ್ ಕೇಳಿಕೊಂಡು ಅಲೆದಾಡಲಿಲ್ಲ. ಅದಾಗಿ ಅದೇ ಬಂತು.
ಇದಾದ ಬಳಿಕ ನಾನು ಮೂರು ಫಿಲಂಗಳಲ್ಲಿ ನಟಿಸಿದೆ. ಆದರೆ ನನ್ನ ದುರದೃಷ್ಟ ಒಂದು ಕೂಡ ಹಿಟ್ (Hit) ಆಗಲಿಲ್ಲ. ನನಗೆ 'ಐರನ್ ಲೆಗ್' (Iron Leg) ಅನ್ನುವ ಶಾಪ ಅಂಟಿಕೊಂಡಿತು. ಅಂದೆ ನಾನಿದ್ದ ಫಿಲಂಗೆ ದುರದೃಷ್ಟ ಅಟಕಾಯಿಸಿಕೊಂಡುಬಿಡುತ್ತದೆ ಎಂಬ ರೂಮರ್ ಹಬ್ಬಿತು. ನೆನಪಿಟ್ಟುಕೊಳ್ಳಿ, ನಾನು ನಟಿಸಿದ ಆ ಮೂರೂ ಫಿಲಂಗಳಲ್ಲೂ ದೊಡ್ಡ ದೊಡ್ಡ ಪುರುಷ ಸ್ಟಾರ್‌ಗಳಿದ್ದರು, ನಿರ್ದೇಶಕರಿದ್ದರು. ಆದ್ರೆ ಕೆಟ್ಟ ಹೆಸರು ಮಾತ್ರ ನಂಗೆ!
The Kashmir Files ಪ್ರತಿಯೊಬ್ಬ ಭಾರತೀಯನು ನೋಡಬೇಕಾದ ಸಿನಿಮಾ; ಆಮೀರ್ ಖಾನ್
ಅಲ್ಲಿಂದ ನಂತ್ರ ನನಗೆ ಚಾನ್ಸ್ ಬಂತಾದರೂ ನನ್ನ ಫೀಸ್ ಕಡಿಮೆ ಮಾಡಲು ಹೇಳಲಾಯ್ತು. ನನ್ನನ್ನು ಹಾಕಿಕೊಂಡ ಫಿಲಂಗಳಲ್ಲೂ ನಿರ್ಮಾಪಕರಿಗೆ ಹಣದ ಸಮಸ್ಯೆ ಉಂಟಾದಾಗ, ನನ್ನನ್ನು ಪಾತ್ರದಿಂದ ಕಿತ್ತೆಸೆಯಲಾಯಿತು! ಬಾಲಿವುಡ್‌ನ ದೊಡ್ಡ ದೊಡ್ಡ ನಟರು ನನ್ನ ಜೊತೆ ನಟಿಸೋಕೆ ನಿರಾಕರಿಸ್ತಾ ಇದ್ರು. ಇದಕ್ಕೆಲ್ಲ ಕಾರಣ ಮತ್ತದೇ ಐರನ್ ಲೆಗ್. ನಂಬಿ, ಇದೆಲ್ಲಾ ನಡೆದದ್ದು ನಾನು ಪಿಂಕ್ ಫಿಲಂನಲ್ಲಿ ನಟಿಸೋಕೆ ಮುನ್ನ. ನಂತರ ಕೂಡ ಪರಿಸ್ಥಿತಿ ತುಂಬಾ ಏನೂ ಬದಲಾಗಲಿಲ್ಲ. ಸ್ಟಾರ್‌ಗಳು ನನ್ನ ಜೊತೆ ನಟಿಸೋಕೆ ನಿರಾಕರಿಸಲು ಕಾರಣ ನಾನು 'ಎ' ಲಿಸ್ಟ್ ನಟಿ ಅಲ್ಲ ಅನ್ನುವುದು. ಎ ಲಿಸ್ಟ್ ಅಂದ್ರೆ ದೀಪಿಕಾ, ಪ್ರಿಯಾಂಕ ಮೊದಲಾದ ನಟಿಯರ ಲೆವೆಲ್. ನಿರ್ಮಾಪಕರು ನನ್ನನ್ನು ಚಿತ್ರಕ್ಕೆ ಹಾಕಿಕೊಳ್ತಾ ಇದ್ರು, ನಂತರ ನನಗಿಂತ ದೊಡ್ಡ ನಟಿಯರು ಆ ಫಿಲಂಗೆ ಫಿಕ್ಸ್ ಆಗಿಬಿಟ್ಟಾಗ, ಹೇಳದೇ ಕೇಳದೇ ನನ್ನನ್ನು ಕಿತ್ತು ಹಾಕ್ತಾ ಇದ್ರು.
KGF 2 ತೂಫಾನ್ ಹಾಡು ರಿಲೀಸ್, ಹೇಗಿದೆ ರಾಖಿ ಲುಕ್?
ನಟರ ಸಮಸಮಕ್ಕೆ ಸಂಭಾವನೆ ಆಶಿಸೋದು ದೂರವೇ ಇತ್ತು. ಆದರೆ ನಮ್ಮ ನಟನೆಗೆ ಸಲ್ಲಬೇಕಾದ ಮೂಲಭೂತ ಗೌರವಾರ್ಹ ಮೊತ್ತ ಕೂಡ ಸಿಗ್ತಿರಲಿಲ್ಲ. ಆದ್ರೆ ನಾನು ಎಂದೂ ಯಾರನ್ನೂ ದೂರಲಿಲ್ಲ. ಯಾಕಂದ್ರೆ ನಾನು ಅಭಿನಯದ ಮೇಲಿನ ಪ್ರೀತಿಗಾಗಿ ಇಲ್ಲಿದ್ದೆ. ನನ್ನಲ್ಲಿ ಪರ್‌ಫೆಕ್ಟ್ ಗ್ಲಾಮರಸ್ (Glamorous) ದೇಹ ಇಲ್ಲದಿರಬಹುದು, ಆದರೆ ನನಗೆ ಅಭಿನಯ ಗೊತ್ತು. ಅದರ ಮೇಲೆ ನಂಗೆ ನಂಬಿಕೆ ಇದೆ.
ನನಗೆ ಆತ್ಮಮರುಕ ಆಗಿಬರೋಲ್ಲ. ನಾನು ದೃಢ ಮತ್ತು ಶಕ್ತಿವಂತೆ. ನನ್ನ ಆತ್ಮವಿಶ್ವಾಸದ ಮೇಲೆ ನಂಗೆ ನಂಬಿಕೆ. ನಾನು ಕೆಲ ವಾರಗಳ ಹಿಂದೆ ದಿಲ್ಲಿಯಲ್ಲಿ ಒಂದು ಕೀರ್ತನೆಗೆ ಹೋಗಿದ್ದೆ. ಜನಜಂಗುಳಿಯಲ್ಲಿ ಒಬ್ಬ ವ್ಯಕ್ತಿ ಹಿಂದಿನಿಂದ ನನಗೆ ಚಿವುಟಲು ಮುಂದಾದ. ನಾನು ಅವನ ಕಡೆ ತಿರುಗಿ ನೋಡಲೂ ಇಲ್ಲ, ಅವರ ಕೈಯನ್ನು ಹಿಡಿದು ಜೋರಾಗಿ ತಿರುಚಿದೆ. ನನ್ನ ಕತೆಯಲ್ಲಿ ನಾನು ಹೀರೋಯಿನ್ ಅಲ್ಲ; ನಾನೇ ಹೀರೋ. ಕೆಲವರಿಗೆ ಇದು ಅಪಥ್ಯ ಆಗಬಹುದು. ಆದರೆ ಇದೇ ನಿಜ. ನಾನು ಎಲ್ಲಿಗೂ ಹೋಗಲು ಬಂದವಳಲ್ಲ. ಇಲ್ಲೇ ಇರ್ತೀನಿ, ಇದ್ದು ಜಯಿಸ್ತೀನಿ.
ಕೃಫೆ: ಹ್ಯೂಮನ್ಸ್ ಆಫ್ ಬಾಂಬೇ
ಶಾರುಖ್ ಜೊತೆ ನಿಂತು 'ಮಧ್ಯದ ಬೆರಳು' ತೋರಿಸಿದ ನಟಿ ದೀಪಿಕಾ ಫೋಟೋ ವೈರಲ್