Rohit Shetty; ಚಿತ್ರೀಕರಣ ವೇಳೆ ಅಪಘಾತ; ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಆಸ್ಪತ್ರೆಗೆ ದಾಖಲು

Published : Jan 07, 2023, 03:21 PM IST
Rohit Shetty; ಚಿತ್ರೀಕರಣ ವೇಳೆ ಅಪಘಾತ; ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಆಸ್ಪತ್ರೆಗೆ ದಾಖಲು

ಸಾರಾಂಶ

ಬಾಲಿವುಡ್ ಸ್ಟಾರ್ ನಿರ್ದೇಶಕ, ಕರ್ನಾಟಕ ಮೂಲದ ರೋಹಿತ್ ಶೆಟ್ಟಿ ಶೂಟಿಂಗ್ ವೇಳೆ ತೀವ್ರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. 

ಬಾಲಿವುಡ್ ಸ್ಟಾರ್ ನಿರ್ದೇಶಕ, ಕರ್ನಾಟಕ ಮೂಲದ ರೋಹಿತ್ ಶೆಟ್ಟಿ ಶೂಟಿಂಗ್ ವೇಳೆ ತೀವ್ರ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ರೋಹಿತ್ ಶೆಟ್ಟಿ ಸದ್ಯ ಇಂಡಿಯನ್ ಪೊಲೀಸ್ ಫೋರ್ಸ್ ವೆಬ್ ಸರಣಿ ನಿರ್ದೇಶನ ಮಾಡುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇಂಡಿಯನ್ ಪೊಲೀಸ್ ಫೋರ್ಸ್ ವೆಬ್ ಸರಣಿ ಚಿತ್ರೀಕರಣ ನಡೆಯುತ್ತಿದೆ. ಈ ಸರಣಿಯ ಚೇಸಿಂಗ್ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದು ಆಗ ರೋಹಿತ್ ಶೆಟ್ಟಿ ಅವರಿಗೆ ತೀವ್ರ ಏಟಾಗಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಸಮೀಪದ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರೋಹಿತ್ ಶೆಟ್ಟಿ ಚೇತರಿಸಿಕೊಳ್ಳುತ್ತಿದ್ದಾರೆ ಆತಂಕ ಪಡಬೇಕಾಗಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.   

ಅಂದಹಾಗೆ ಇದೇ ಸರಣಿಯ ಚಿತ್ರೀಕರಣ ವೇಳೆ ಈ ಮೊದಲು ನಟ ಸಿದ್ಧಾರ್ಥ್ ಮಲ್ಹೋತ್ರಾ ಕೂಡ ಗಾಯಗೊಂಡಿದ್ದರು. ಹಾಗೂ ನಟಿ ಶಿಲ್ಪಾ ಶೆಟ್ಟಿ ಕಾಲಿಗೆ ಏಟು ಮಾಡಿಕೊಂಡಿದ್ದರು. ಇದೀಗ ರೋಹಿತ್ ಆಸ್ಪತ್ರೆ ಸೇರಿದ್ದಾರೆ. ಅಂದಹಾಗೆ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಸುಮಾರು 20 ಕೋಟಿಗೂ ಅಧಿಕ ಖರ್ಚು ಮಾಡಿ ಆಕ್ಷನ್ ದೃಶ್ಯ ಚಿತ್ರೀಕರಣ ಮಾಡಲಾಗುತ್ತಿದೆ. ಈ ಸರಣಿಯ ಹೈ ವೋಲ್ಟೇಜ್ ಆಕ್ಷನ್ ದೃಶ್ಯ ಮತ್ತು ಕಾರ್ ಚೇಸಿಂಗ್ ಸೀಕ್ವೆನ್ಸ್ ಶೂಟಿಂಗ್ ಮಾಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಅಂದಹಾಗೆ ಪೊಲೀಸ್ ಫೋರ್ಸ್ ಮೂಲಕ ರೋಹಿತ್ ಶೆಟ್ಟಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರಿಗೂ ಮೊದಲ ವೆಬ್ ಸಿರೀಸ್ ಆಗಿದೆ. ಈ ಮೂಲಕ ಇಬ್ಬರೂ ಮೊದಲ ಬಾರಿಗೆ ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ ಈ ಸರಣಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಶಿಲ್ಪಾ ಶೆಟ್ಟಿ, ವಿವೇಕ್ ಒಬೆರಾಯ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. 

Circus Collection; ಮೋಡಿ ಮಾಡದ ರಣ್ವೀರ್; 10 ವರ್ಷಗಳಲ್ಲೇ ಅತ್ಯಂತ ಕೆಟ್ಟ ಓಪನಿಂಗ್ ಪಡೆದ ರೋಹಿತ್ ಸಿನಿಮಾ

ಅಂದಹಾಗೆ ಸದ್ಯ ಚೇತರಿಕೊಳ್ಳುತ್ತಿರುವ ನಿರ್ದೇಶಕ ರೋಹಿತ್ ಶೆಟ್ಟಿ ಬಗ್ಗೆ ಹೇಳುವುದಾರೆ ಕರಾವಳಿ ಮೂಲದ ನಿರ್ದೇಶಕ ಸಹಾಯಕ ನಿರ್ದೇಶಕರಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಚಿಕ್ಕ ವಯಸ್ಸಿನಿಂದನೇ ರೋಹಿತ್ ಶೆಟ್ಟಿ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. 2003ರಲ್ಲಿ ಮೊದಲ ಸಿನಿಮಾ ಜಮೀನ್‌ಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದರು. ಬಳಿಕ ಗೋಲ್ಮಾಲ್ ಸೀರಿಸ್, ಸಂಡೆ, ಸಿಂಗಂ, ಚೆನ್ನೈ ಎಕ್ಸ್‌ಪ್ರೆಸ್ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 

ರೋಹಿತ್ ಶೆಟ್ಟಿಯ ತಾಯಿ ಕೂಡ ಡೇಂಜರಸ್‌ ಸ್ಟಂಟ್‌ಗಳನ್ನು ಮಾಡುವುದರಲ್ಲಿ ಎಕ್ಸ್‌ಪರ್ಟ್

ಇತ್ತೀಚಿಗಷ್ಟೆ ರೋಹಿತ್ ಶೆಟ್ಟಿ ಸರ್ಕಸ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.  ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಹೀನಾಯ ಸೋಲು ಕಂಡಿದೆ. ರೋಹಿತ್ ಅವರ ಸಿನಿ ಜರ್ನಿಯ ಕಳೆದ 10 ವರ್ಷಗಳಲ್ಲಿಯೇ ಅತೀ ಕಡಿಮೆ ಕಲೆಕ್ಷನ್ ಮಾಡಿದ ಸಿನಿಮಾ ಇದಾಗಿದೆ. ರಣ್ವೀರ್ ಸಿಂಗ್, ಪೂಜಾ ಹೆಗ್ಡೆ, ಜಾಕ್ವೆಲಿನ್ ಸೇರಿದಂತೆ ಅನೇಕರು ನಟಿಸಿದ್ದರು. ಇದೀಗ ವೆಬ್ ಸೀರಿಸ್ ನಲ್ಲಿ ಬ್ಯುಸಿಯಾಗಿರುವ ರೋಹಿತ್ ಶೆಟ್ಟಿ ಅಪಘಾತದಲ್ಲಿ ಗಾಯಗೊಂಡಿದ್ದಾರೆ. 

   

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?