ಹಾವು ಮುಂಗುಸಿಗಳಂತಿದ್ದರೂ ಆಪತ್ಕಾಲದಲ್ಲಿ ಕಂಗನಾ ಬೆನ್ನಿಗೆ ನಿಂತ ಹೃತಿಕ್ ರೋಷನ್

By Anusha KbFirst Published Jun 9, 2024, 5:19 PM IST
Highlights

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಕಂಗನಾ ರಣಾವತ್  ಪರಸ್ಪರ ಕೆಸರೆರಾಚಾಟದಿಂದ ಫೇಮಸ್ ಆದವರು. ಆದರೂ ಈಗ ಕಂಗನಾ ಅವರಿಗೆ ಸಿಐಎಸ್‌ಫ್ ಮಹಿಳಾ ಸಿಬ್ಬಂದಿ ಕೆನ್ನೆಗೆ ಬಾರಿಸಿದ ನಂತರ ನಟ ಹೃತಿಕ್ ರೋಷನ್ ಕಂಗನಾ ಬೆನ್ನಿಗೆ ನಿಂತಿದ್ದಾರೆ. 

ಮುಂಬೈ: ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಕಂಗನಾ ರಣಾವತ್  ಪರಸ್ಪರ ಕೆಸರೆರಾಚಾಟದಿಂದ ಫೇಮಸ್ ಆದವರು ಕಂಗನಾ ಹೇಳುವುದನ್ನು ನಂಬುವುದಾದರೆ ಇವರು ಒಂದು ಕಾಲದಲ್ಲಿ ಪ್ರೇಮಿಗಳಾಗಿದ್ದು, ಬಳಿಕ ವೈರಿಗಳಾದವರು ( ಆದರೆ ಹೃತಿಕ್ ರೋಷನ್ ಮಾತ್ರ ಈಕೆಯ ಹೇಳಿಕೆಯನ್ನು ಎಂದಿಗೂ ಒಪ್ಪಿಲ್ಲ). ಆದರೂ ಈಗ ಕಂಗನಾ ಅವರಿಗೆ ಸಿಐಎಸ್‌ಫ್ ಮಹಿಳಾ ಸಿಬ್ಬಂದಿ ಕೆನ್ನೆಗೆ ಬಾರಿಸಿದ ನಂತರ ನಟ ಹೃತಿಕ್ ರೋಷನ್ ಕಂಗನಾ ಬೆನ್ನಿಗೆ ನಿಂತಿದ್ದಾರೆ. 

ಹೃತಿಕ್ ರೋಷನ್ ಮಾತ್ರವಲ್ಲದೇ ಅಲಿಯಾ ಭಟ್, ಸೋನಾಕ್ಷಿ ಸಿನ್ಹಾ, ಜೋಯಾ ಅಖ್ತರ್, ಸೋನಿ ರಜ್ದಾನ್, ಅರ್ಜುನ್ ಕಪೂರ್, ಪ್ರಜಕ್ತಾ ಕೋಲಿ ಸೇರಿದಂತೆ ಅನೇಕ ಬಾಲಿವುಡ್ ನಟನಟಿಯರು ಕಂಗನಾರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ದೆಹಲಿಗೆ ತೆರಳಲು ಚಂಡೀಗಢ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ನಟಿ ಕಂಗನಾ ರಣಾವತ್‌ಗೆ ಏರ್‌ಪೋರ್ಟ್‌ನ ಚೆಕ್‌ಇನ್‌ನಲ್ಲೇ ಭದ್ರತೆಗೆ ನಿಯೋಜಿಲ್ಪಟ್ಟಿದ್ದ ಸಿಐಎಸ್‌ಎಫ್ ಮಹಿಳಾ ಸಿಬ್ಬಂದಿಯೊಬ್ಬರು ಕೆನ್ನೆಗೆ ಬಾರಿಸಿದ್ದರು. ನವದೆಹಲಿಯಲ್ಲಿ ಆಯೋಜಿಸಿದ್ದ ಎನ್‌ಡಿಎ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ದೆಹಲಿಗೆ ಹೋಗುವುದಕ್ಕೆ ವಿಮಾನವೇರಲು ಬಂದಿದ್ದ ವೇಳೆ ಈ ಘಟನೆ ನಡೆದಿತ್ತು. 

Latest Videos

ಗೆಲುವಿನ ಸಂಭ್ರಮದಲ್ಲಿರುವ ಕಂಗನಾಗೆ ಶಾಕ್, ವಿಮಾನ ನಿಲ್ದಾಣದಲ್ಲಿ ಸಂಸದೆ ಮೇಲೆ ಹಲ್ಲೆ!

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಭಾರಿ ಮತಗಳ ಅಂತರದಿಂದ ಗೆದ್ದಿರುವ ಕಂಗನಾ ಈಗ ಸಂಸದೆಯಾಗಿದ್ದಾರೆ. ಹೀಗಾಗಿ ನಟಿ ಜೊತೆಗೆ ಜನಪ್ರತಿನಿಧಿಯೂ ಆಗಿರುವ ಸಂಸದೆ ಮೇಲೆ ರಕ್ಷಣೆ ನೀಡಬೇಕಾದವರೆ ಕೈ ಮಾಡಿರುವುದಕ್ಕೆ ಅನೇಕ ಸೆಲೆಬ್ರಿಟಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟರಾದ ಅನುಪಮ್ ಖೇರ್, ಮಿಕಾ ಸಿಂಗ್, ರವೀನಾ ಟಂಡನ್, ಶೇಖರ್ ಸುಮನ್ ಸೇರಿದಂತೆ ಅನೇಕರು ಘಟನೆಯನ್ನು ಖಂಡಿಸಿದ್ದಾರೆ. 

ಪತ್ರಕರ್ತೆ ಫಾಯೆ ಡಿಸೋಜಾ ಅವರು ಕೂಡ ಈ ಘಟನೆಯನ್ನು ಖಂಡಿಸಿದ್ದು, ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಹಿಂಸೆ ಎಂದಿಗೂ ಉತ್ತರವಾಗುವುದಿಲ್ಲ ಎಂದು ಹೇಳಿದ್ದಾರೆ. ವಿಶೇಷವಾಗಿ ಗಾಂಧಿಯವರ ಅಹಿಂಸೆಯ ಆದರ್ಶಗಳು ಹುಟ್ಟಿದ ನಮ್ಮ ದೇಶದಲ್ಲಿ ಅಲ್ಲ. ಯಾರೋ ಮಾಡಿದ ಅಭಿಪ್ರಾಯಗಳು ಮತ್ತು ಹೇಳಿಕೆಗಳ ಬಗ್ಗೆ ನಾವು ಎಷ್ಟು ಭಿನ್ನಾಭಿಪ್ರಾಯ ಹೊಂದಿದ್ದೇವೆ ಎಂಬುದು ಮುಖ್ಯವಾಗುವುದಿಲ್ಲ ಹಾಗೂ ಅದಕ್ಕೆ ನಾವು ಹಿಂಸೆಯಿಂದ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಮತ್ತು ನಾವು ಅದನ್ನು ಕ್ಷಮಿಸಬಾರದು. ಸಮವಸ್ತ್ರದಲ್ಲಿರುವ ಭದ್ರತಾ ಸಿಬ್ಬಂದಿ ಹಿಂಸಾತ್ಮಕವಾಗಿ ವರ್ತಿಸುವುದು ಬಹಳ ಅಪಾಯಕಾರಿ, ಕಳೆದ ಹತ್ತು ವರ್ಷಗಳಲ್ಲಿ, ನಮ್ಮಂತಹ ಅಧಿಕಾರವನ್ನು ಪ್ರಶ್ನಿಸಿದವರಿಗೆ ವಿಮಾನ ನಿಲ್ದಾಣಗಳಲ್ಲಿ ಈ ರೀತಿ ಕಾನ್‌ಸ್ಟೆಬಲ್‌ಗಳು ಹಲ್ಲೆ ನಡೆಸಿದ್ದರೆ ಹೇಗಿರಬಹುದು ಊಹಿಸಿಕೊಳ್ಳಿ ಎಂದು ಅವರು ಬರೆದಿದ್ದಾರೆ. ಈ ಪೋಸ್ಟ್‌ನ್ನು ಹೃತಿಕ್ ರೋಷನ್ ಅಲಿಯಾ ಭಟ್, ಅರ್ಜುನ್ ಕಪೂರ್ ಸೋನಾಕ್ಷಿ ಸಿನ್ಹಾ ಜಯಾ ಅಖ್ತರ್, ಸೋನಿ ರಜ್ದಾನ್ ಸೇರಿದಂತೆ ಅನೇಕರು ಸ್ವಾಗತಿಸಿದ್ದಾರೆ. 

ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್‌ ಬಳಿ 90 ಕೋಟಿ ಆಸ್ತಿ, 6 ಕೆಜಿ ಚಿನ್ನ!

ಪ್ರಸ್ತುತ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಬಣಗಳು ರೂಪುಗೊಂಡಿವೆ. ಅದರಲ್ಲಿ ಕೆಲವರು ಕಂಗನಾಗೆ ಥಳಿಸಿದ ಭದ್ರತಾ ಸಿಬ್ಬಂದಿ ಕುಲ್ವೀಂದರ್ ಕೌರ್‌ನನ್ನು ಬೆಂಬಲಿಸಿದ್ದರೆ ಮತ್ತೆ ಕೆಲವರು ಕಂಗನಾರನ್ನು ಬೆಂಬಲಿಸಿ ಘಟನೆಯನ್ನು ಕಂಡಿಸಿದ್ದಾರೆ. ಇದರ ಜೊತೆಗೆ ಈಗ ತಮಿಳುನಾಡಿನ ಪೆರಿಯರ್ ಅಭಿಮಾನಿಗಳ ಬಳಗ ಕಂಗನಾಗೆ ಬಾರಿಸಿದ ಕುಲ್ವೀಂದರ್‌ಗೆ 8 ಗ್ರಾಂನ ಚಿನ್ನದ ಉಂಗುರು ಗಿಫ್ಟ್ ಮಾಡುವುದಾಗಿ ಘೋಷಿಸಿದ್ದಾರೆ. ಇದಕ್ಕೂ ಮೊದಲು ಪಂಜಾಬ್‌ನ ರೈತರು ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಕುಲ್ವೀಂದರ್ ಕೌರ್ ಪರ ಪ್ರತಿಭಟನೆಗೆ ಮುಂದಾಗಿದ್ದಾರೆ. 

 

click me!