
ಮುಂಬೈ(ಜೂ.09) ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಟಾಪ್‌ಲೆಸ್, ಬೆತ್ತಲೆ ಅವತಾರಗಳು ಹೊಸದಲ್ಲ. ಪೂನಂ ಪಾಂಡೆ ಬೆತ್ತಲಾಗೋದಾಗಿ ಹೇಳಿಯೇ ಭಾರಿ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ ಪೂನಂ ಪಾಂಡೆ ಕುಂಕಿಂಗ್, ರೆಸಿಪಿಯತ್ತ ವಾಲಿದ್ದಾರೆ. ಹಾಟ್ ಅವತಾರದಲ್ಲಿ ಕಾಣಿಸಿಕೊಂಡು ಹೊಸ ಹೊಸ ತಿನಿಸುಗಳ ರೆಸಿಪಿ ನೀಡುತ್ತಿದ್ದಾರೆ. ಈ ಬಾರಿ ಪೂನಂ ಪಾಂಡೆ ಹಾಟ್ ಆಗಿ ಕಾಣಿಸಿಕೊಂಡು ಕೇಕ್ ವಿಥ್ ಐಸ್‌ಕ್ರೀಂ ರೆಸಿಪಿ ಟಿಪ್ಸ್ ನೀಡಿದ್ದಾರೆ. ಆದರೆ ಅಭಿಮಾನಿಗಳ ಕಣ್ಣು ಪೂನಂ ಪಾಂಡೆ ಧರಿಸಿದ ಏಪ್ರನ್ ಮೇಲೆ ನೆಟ್ಟಿದೆ.
ಚಾಕ್ಲೆಟ್ ಫ್ಲೇವರ್ ಕೇಕ್ ತಯಾರಿಸಿದ ಪೂನಂ ಪಾಂಡೆ ಅಭಿಮಾನಿಗಳಿಗೆ ಮತ್ತಷ್ಟು ಸಿಹಿ ನೀಡಿದ್ದಾರೆ. ಬಿಳಿ ಬಣ್ಣದ ಏಪ್ರನ್ ಧರಿಸಿ, ತಲೆಗೊಂಡು ಚೆಫ್ ಟೋಪಿ ಹಾಕಿ ಬಂದ ಪೂನಂ ಪಾಂಡೆ, ಚಾಕ್ಲೆಟ್ ಫ್ಲೇವರ್ ಕೇಕ್ ತಯಾರಿ ಆರಂಭಿಸಿದ್ದಾರೆ. ಕೇಕ್ ಸಾಮಾಗ್ರಿಗಳನ್ನು ಚಾಕ್ಲೆಟ್ ಜೊತೆ ಕಲಸಿದ ಪೂನಂ ಪಾಂಡೆ, ಡ್ರೆ ಫ್ರೂಟ್ಸ್ ಸೇರಿಸಿದ್ದಾರೆ. ಈ ಮೂಲಕ ಚಾಕ್ಲೆಟ್ ಕೇಕ್ ತಯಾರಿಸಿದ್ದಾರೆ. ಬಳಿಕ ಚಾಕ್ಲೆಟ್ ಕೇಕ್ ಜೊತೆಗೆ ಐಸ್‌ಕ್ರೀಮ್ ಹಾಕಿ ಸವಿದಿದ್ದಾರೆ.
ರಸಭರಿತ ಮಾವಿನ ಹಣ್ಣಿನ ರೆಸಿಪಿ ನೀಡಿದ ಪೂನಂ ಪಾಂಡೆ, ಡಬಲ್ ಖುಷಿಯಲ್ಲಿ ಫ್ಯಾನ್ಸ್!
ಈ ಕುರಿತು ವಿಡಿಯೋ ಹಂಚಿಕೊಂಡ ಪೂನಂ ಪಾಂಡೆ, ಕುಕಿಂಗ್ ಮಾಡುವಾಗ ಏಪ್ರನ್ ಅತ್ಯಂತ ಮುಖ್ಯ ಎಂದಿದ್ದಾರೆ. ಆದರೆ ಅಭಿಮಾನಿಗಳು ನೀವು ತಪ್ಪಾಗಿ ಏಪ್ರನ್ ಧರಿಸಿದ್ದೀರಿ ಎಂದು ಸೂಚಿಸಿದ್ದಾರೆ. ಕಾರಣ ಪೂನಂ ಟಾಪ್‌ನಲ್ಲಿ ಕೇವಲ ಏಪ್ರನ್ ಮಾತ್ರ ಧರಿಸಿದ್ದಾರೆ. ರೆಸಿಪಿ ಹಾಗೂ ಪೂನಂ ಎರಡೂ ಚೆನ್ನಾಗಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಪೂನಂ ಪಾಂಡೆ ಇದೀಗ ಫುಡ್‌ಗಾಸಮ್ ವಿಥ್ ಪೂನಂ ಅನ್ನೋ ಸೀರಿಸ್ ಆರಂಭಿಸಿದ್ದಾರೆ. ಈ ಮೂಲಕ ಹಲವು ರೆಸಿಪಿಗಳನ್ನು ಹೇಳಿಕೊಡುತ್ತಿದ್ದಾರೆ. ಈಗಾಗಲೇ ಮಾವಿನ ಹಣ್ಣಿನ ರೆಸಿಪಿ ನೀಡಿದ್ದರು. ಈ ವಿಡಿಯೋ ಬಾರಿ ವೈರಲ್ ಆಗಿತ್ತು. ಇದೀಗ ಕೇಕ್ ವಿಥ್ ಐಸ್‌ಕ್ರೀಮ್ ರೆಸೆಪಿ ನೀಡಿದ್ದಾರೆ.
ಮತ್ತೆ ಬೆತ್ತಲಾದ ಪೂನಂ ಪಾಂಡೆ, ಝಲಕ್ ಹರಿಬಿಟ್ಟು ನಿಮ್ಮ ಮನಸ್ಸಿನಲ್ಲಿದ್ದೇನೆ ಎಂದ ನಟಿ!
ಪೂನಂ ಪಾಂಡೆ ಇತ್ತೀಚೆಗೆ ಟಾಪ್‍ಲೆಸ್ ಆಗಿ ಕಾಣಿಸಿಕೊಂಡಿದ್ದರು. ಬಾತ್ ರೂಂ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಅದಕ್ಕೂ ಮುನ್ನ ಬಾತ್ ರೂಂ ವಿಡಿಯೋಗಳ ಕುರಿತು ನೋವು ತೋಡಿಕೊಂಡಿದ್ದರು. ಪೂನಂ ಪಾಂಡೆ ಮಾಜಿ ಬಾಯ್‌ಫ್ರೆಂಡ್ ಬಾತ್ ರೂಂ ವಿಡಿಯೋಗಲನ್ನು ಲೀಕ್ ಮಾಡಿರುವ ಘಟನೆ ನೆನಪಿಸಿಕೊಂಡಿದ್ದರು. ಈ ಘಟನೆ ಯಾವತ್ತೂ ಮರೆಯುವುದಿಲ್ಲ. ಇಷ್ಟೇ ಅಲ್ಲ ಮಾಜಿ ಬಾಯ್‌ಫ್ರೆಂಡ್ ಈ ರೀತಿ ನೋವುಂಟು ಮಾಡಿದ್ದರು ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.