ಕಿಡಿಕಿಡಿಯಾದ ಆದಿತ್ಯ ಧರ್‌; ʻಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಗ್ಯಾರಂಟಿʼ ಎಂದ ʻಧುರಂಧರ್‌ 2ʼ ನಿರ್ದೇಶಕ!

Published : Mar 26, 2026, 01:17 PM ISTUpdated : Mar 26, 2026, 01:20 PM IST
Agitya Dhar Ranveer Singh

ಸಾರಾಂಶ

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌: ದಿ ರಿವೆಂಜ್‌ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದ್ದು, ದಿನದಿನಕ್ಕೂ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಈಗಾಗಲೇ ಚಿತ್ರದ ಗಳಿಕೆಯು 1000 ಕೋಟಿ ರೂ. ಸಮೀಪವಿದೆ. ಮುಂದಿನ ದಿನಗಳಲ್ಲಿ ಧುರಂಧರ್ 2 ಚಿತ್ರದ ಕಲೆಕ್ಷನ್ 2000 ಕೋಟಿ ದಾಟುವುದು ಪಕ್ಕಾ ಎನ್ನಲಾಗುತ್ತಿದೆ.

ಧುರಂಧರ್ ನಿರ್ದೇಶಕ ಆದಿತ್ಯ ಧರ್ ಭಾರೀ ಗರಂ

ಸದ್ಯದಲ್ಲಿ ಇರೋದು ಎಐ ಕಾಲ. ನಿಜ ಯಾವುದು, ಸುಳ್ಳು ಯಾವುದು ಎಂಬುದನ್ನು ತಕ್ಷಣಕ್ಕೆ ಹೇಳುವುದು ಕಷ್ಟ. ಈಗ್ಯಾಕೆ ಈ ವಿಷ್ಯ ಅಂದ್ರೆ.. ಸದ್ಯ ಭಾರೀ ಸೂಪರ್ ಹಿಟ್ ದಾಖಲಿಸಿರುವ ʻಧುರಂಧರ್‌ 2ʼ ಸಿನಿಮಾಗೂ ಈಗ ಎಐ ಕಾಟ ವಕ್ಕರಿಸಿದೆ. ಇದು ಈ ಚಿತ್ರದ ನಿರ್ದೇಶಕ ಆದಿತ್ಯ ಧರ್‌ ಗಮನಕ್ಕೂ ಬಂದಿದೆ. ಹೀಗಾಗಿ, ಅವರು ತಕ್ಷಣವೇ ಒಂದು ಅಧಿಕೃತ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ ಮತ್ತು "ಇಂತಹ ಕಿಡಿಗೇಡಿ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಕೆ ನೀಡಿದ್ದಾರೆ. ಮುಂದೆ ನೋಡಿ...

ಆದಿತ್ಯ ಧರ್‌ ಶೇರ್ ಮಠಾಡಿರೋ ಪೋಸ್ಟ್‌ನಲ್ಲಿ ಏನಿದೆ?

"ನನ್ನ 'ಧುರಂಧರ್: ದಿ ರಿವೆಂಜ್' ಚಿತ್ರಕ್ಕೆ ದೇಶಾದ್ಯಂತ ಮತ್ತು ವಿಶ್ವದಾದ್ಯಂತ ಪ್ರೇಕ್ಷಕರಿಂದ ಸಿಗುತ್ತಿರುವ ಅಪಾರ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಆದರೆ, ಕೆಲವು ವ್ಯಕ್ತಿಗಳು ಕೃತಕ ಬುದ್ಧಿಮತ್ತೆ (AI) ಬಳಸಿ ಚಿತ್ರದ ಅಧಿಕೃತ ಪ್ರಚಾರದ ದೃಶ್ಯಗಳನ್ನು ತಿರುಚಿ ಶೇರ್ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಮಾರ್ಫಿಂಗ್ ಮಾಡಿದ ದೃಶ್ಯಗಳ ಮೂಲಕ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ" ಎಂದು ಆದಿತ್ಯ ಧರ್‌ ಹೇಳಿದ್ದಾರೆ.

ಇದು ಬೇಕೆಂದೇ ಮಾಡಲಾದ ಕೃತ್ಯವಾಗಿದೆ

"ಇದಕ್ಕೆ ಒಂದು ಉದಾಹರಣೆಯೆಂದರೆ, ಚಿತ್ರದ 'ಹಮ್ಜಾ/ಜಸ್ಕಿರತ್' ಎಂಬ ಪಾತ್ರವು ಪೇಟ (Turban) ಧರಿಸಿ ಧೂಮಪಾನ ಮಾಡುತ್ತಿರುವಂತೆ ಒಂದು ನಕಲಿ ಚಿತ್ರವನ್ನು ಹರಿಬಿಡಲಾಗಿದೆ. ಇದು ಸಂಪೂರ್ಣವಾಗಿ ಸುಳ್ಳು. ನಮ್ಮ ಚಿತ್ರದಲ್ಲಾಗಲಿ ಅಥವಾ ನಾವು ಬಿಡುಗಡೆ ಮಾಡಿದ ಯಾವುದೇ ಅಧಿಕೃತ ಪ್ರಚಾರ ಸಾಮಗ್ರಿಗಳಲ್ಲಾಗಲಿ ಅಂತಹ ದೃಶ್ಯಗಳಿಲ್ಲ. ಇದು ಜನರ ಭಾವನೆಗಳನ್ನು ಕೆರಳಿಸಲು ಮತ್ತು ಕಿಡಿಗೇಡಿತನ ಮಾಡಲು ಬೇಕೆಂದೇ ಮಾಡಲಾದ ಕೃತ್ಯವಾಗಿದೆ" ಎಂದು ಹೇಳಿರುವ ಆದಿತ್ಯ ಧರ್ ಅವರು ಗರಂ ಆಗಿದ್ದಾರೆ.

ಘನತೆ ಮತ್ತು ಜವಾಬ್ದಾರಿಯ ಸಂಗಮ ಧುರಂಧರ್

"ನನಗೆ ಸಿಖ್ ಸಮುದಾಯದ ಮೇಲೆ ಅಪಾರ ಗೌರವವಿದೆ ಎಂದು ನಾನು ಅತ್ಯಂತ ಸ್ಪಷ್ಟವಾಗಿ ಹೇಳಬಯಸುತ್ತೇನೆ. ಚಿತ್ರದಲ್ಲಿನ ಪ್ರತಿಯೊಂದು ಪಾತ್ರದ ಚಿತ್ರೀಕರಣವನ್ನು ಅತ್ಯಂತ ಸಂವೇದನಾಶೀಲತೆ, ಘನತೆ ಮತ್ತು ಜವಾಬ್ದಾರಿಯಿಂದ ನಿರ್ವಹಿಸಲಾಗಿದೆ. ತಿರುಚಿದ ದೃಶ್ಯಗಳ ಮೂಲಕ ಇದಕ್ಕೆ ವಿರುದ್ಧವಾಗಿ ಬಿಂಬಿಸಲು ಮಾಡುವ ಯಾವುದೇ ಪ್ರಯತ್ನವು ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕವಾದುದು. ನಾನು ಪ್ರೇಕ್ಷಕರಲ್ಲಿ ವಿನಂತಿಸಿಕೊಳ್ಳುವುದು ಏನೆಂದರೆ, ದಯವಿಟ್ಟು ಕೇವಲ ಅಧಿಕೃತ ಮೂಲಗಳಿಂದ ಬಂದ ಮಾಹಿತಿಯನ್ನು ಮಾತ್ರ ನಂಬಿ. ದುರುದ್ದೇಶದಿಂದ ಹರಡಲಾಗುತ್ತಿರುವ ಇಂತಹ AI-ಚಾಲಿತ ಸುಳ್ಳು ಸುದ್ದಿಗಳಿಗೆ ಬಲಿಯಾಗಬೇಡಿ. ಇಂತಹ ಕಿಡಿಗೇಡಿ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಆದಿತ್ಯ ಧರ್‌ ಖಡಕ್ ವಾರ್ನಿಂಗ್‌ ನೀಡಿದ್ದಾರೆ.

ರಣವೀರ್‌ ಸಿಂಗ್‌ ನಟನೆಯ ʻಧುರಂಧರ್‌: ದಿ ರಿವೆಂಜ್‌ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಕಲೆಕ್ಷನ್ ಮಾಡಿದ್ದು, ದಿನದಿನಕ್ಕೂ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಈಗಾಗಲೇ ಚಿತ್ರದ ಗಳಿಕೆಯು 1000 ಕೋಟಿ ರೂ. ಸಮೀಪವಿದೆ. ಮುಂದಿನ ದಿನಗಳಲ್ಲಿ ಧುರಂಧರ್ 2 ಚಿತ್ರದ ಕಲೆಕ್ಷನ್ 2000 ಕೋಟಿ ದಾಟುವುದು ಪಕ್ಕಾ ಎನ್ನಲಾಗುತ್ತಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Motion Capture: ರಾಜಮೌಳಿ ಸಿನಿಮಾದಲ್ಲಿ 25 ನಿಮಿಷದ ಆಕ್ಷನ್: ವಾರಣಾಸಿ ಸೆಟ್ ನೋಡಿದ್ರೆ ಬೆರಗಾಗ್ತೀರಾ!
ಒಂದೇ ಒಂದು ಹೆಸರು... ಬದುಕು ಸೂಪರ್‌: ನಟಿಯರಿಗೆ ಭಾರತಿರಾಜ ಇಟ್ಟ ಲಕ್ಕಿ ನೇಮ್ಸ್ ಸೀಕ್ರೆಟ್ ಏನು?