ವೇದಿಕೆಯಲ್ಲೇ ದಿಢೀರ್ ಮುತ್ತಿಕ್ಕಿದ ನಿರ್ದೇಶಕ: ಕಕ್ಕಾಬಿಕ್ಕಿಯಾದ ನಟಿ ಮನ್ನಾರ : ವೀಡಿಯೋ ವೈರಲ್‌

By Anusha Kb  |  First Published Aug 30, 2023, 3:35 PM IST

ನಟಿ ಪ್ರಿಯಾಂಕಾ ಚೋಪ್ರ ಸಹೋದರಿ ನಟಿ ಮನ್ನಾರ ಚೋಪ್ರಾ ಅವರಿಗೆ ನಿರ್ದೇಶಕರೊಬ್ಬರು ವೇದಿಕೆಯಲ್ಲೇ ದಿಢೀರ್ ಮುತ್ತಿಕ್ಕಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿರ್ದೇಶಕನ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.


ನಟಿ ಪ್ರಿಯಾಂಕಾ ಚೋಪ್ರ ಸಹೋದರಿ ನಟಿ ಮನ್ನಾರ ಚೋಪ್ರಾ ಅವರಿಗೆ ನಿರ್ದೇಶಕರೊಬ್ಬರು ವೇದಿಕೆಯಲ್ಲೇ ದಿಢೀರ್ ಮುತ್ತಿಕ್ಕಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಿರ್ದೇಶಕನ ನಡೆಗೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ಪ್ರಿಯಾಂಕಾ ಸೋದರ ಸಂಬಂಧಿಯಾಗಿರುವ ಮನ್ನಾರ ಚೋಪ್ರಾ ತೆಲುಗಿನ 'ತಿರಗಬದರ ಸಾಮಿ' ಎಂಬ ಸಿನಿಮಾದಲ್ಲಿ ನಟಿಸಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಚಿತ್ರತಂಡ ಪ್ರಚಾರದಲ್ಲಿ ತೊಡಗಿದೆ. ಚಿತ್ರತಂಡದ ಜೊತೆ ನಟಿ ಮನ್ನಾರ ಕೂಡ ಸಿನಿಮಾದ ಪ್ರಚಾರಕ್ಕೆ ಹೋಗಿದ್ದ ವೇಳೆ ಈ ಮುಜುಗರದ ಘಟನೆ ನಡೆದಿದೆ. 

ವೀಡಿಯೋದಲ್ಲಿ ಕಾಣಿಸುವಂತೆ ನಟಿ ಕ್ಯಾಮರಾಗಳಿಗೆ ವೇದಿಕೆ ಮೇಲೆ ಫೋಸ್ ನೀಡುತ್ತಿದ್ದು, ಜೊತೆಗೆ ಸಿನಿಮಾದ ನಿರ್ದೇಶಕ ರವಿಕುಮಾರ್ ಕೂಡ ಜೊತೆಗಿದ್ದಾರೆ. ನಟಿ ಕ್ಯಾಮರಾಗಳಿಗೆ ಪೋಸ್ ನೀಡುತ್ತಿದ್ದಾರೆ. ಮನ್ನಾರ ಹೆಗಲಿಗೆ ಕೈ ಹಾಕಿದ  ನಿರ್ದೇಶಕ ರವಿಕುಮಾರ್ ಕ್ಯಾಮರಾ ಮುಂದೆಯೇ ನಟಿ ಕೆನ್ನೆಗೆ ಮುತ್ತಿಕ್ಕಿದ್ದಾರೆ. ಈ ವೇಳೆ ಒಂದು ಕ್ಷಣ ನಟಿ ಶಾಕ್ ಆಗಿದ್ದು, ಕೂಡಲೇ ಸುಧಾರಿಸಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ. 

Tap to resize

Latest Videos

ತೆರೆ ಮೇಲೆ ಖುಲ್ಲಂ ಖುಲ್ಲಾ ಕಿಸ್ ಮಾಡಿ ಪಶ್ಚಾತಾಪ ಪಟ್ಟ ಸೆಲೆಬ್ರಿಟಿಗಳಿವರು

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ನಿರ್ದೇಶಕ ರವಿ ವರ್ತನೆಗೆ ಸಾಮಾಜಿಕ ಜಾಲತಾಣ ಬಳಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಆಕೆಗೆ ಎಷ್ಟು ಮುಜುಗರವಾಗಿರಬಹುದು ಎಂದು ಒಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದಾರ. ಇಲ್ಲೇ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮೇಲ್ನೋಟಕ್ಕೆ ಆಕೆ ಮುಜುಗರವನ್ನು ತೋರಿಸಿಕೊಳ್ಳದಿದ್ದರು, ಒಳಗೊಳಗೆ ಆಕೆ ಮರುಗುತ್ತಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಮೀಟೂ (ಲೈಂಗಿಕ ಕಿರುಕುಳ) ಪ್ರಕರಣಗಳನ್ನು ಆದಷ್ಟು ಎಳವೆಯಲ್ಲೇ ಚಿವುಟಬೇಕು ಹಾಗೂ ಅದನ್ನು ಬೆಳೆಯಲು ಬಿಡಬಾರದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ನಿಮ್ಮ ಮನೆ ಒಳಗಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಿದ್ದರೆ ನೀವು ಸಿನಿಮಾಗಳಲ್ಲಿ ಸಮಾಜಕ್ಕೆ ಏನನ್ನು ಬೋಧನೆ ಮಾಡುತ್ತಿರಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಸಿನಿಮಾಗಳಲ್ಲಿ ಇಂತಹ ಘಟನೆ ಇದೇನು ಮೊದಲಲ್ಲ, ಈ ಹಿಂದೆ ಕಾಜಲ್ ಅಗರ್‌ವಾಲ್ ಕೂಡ ಇದೇ ರೀತಿಯ ಮುಜುಗರ ಅನುಭವಿಸಿದ್ದರು. ಸಿನಿಮಾಟೋಗ್ರಾಪರ್ ಚೋಟಾ ಕೆ ನಾಯ್ಡು  ಕಾಜಲ್‌ಗೆ ವೇದಿಕೆ ಮೇಲೆಯೇ ಮುತ್ತಿಕ್ಕಿದ್ದು, ಈ ಘಟನೆಯ ವೀಡಿಯೋ ಫೋಟೋಗಳು ನಂತರ ವೈರಲ್ ಆಗಿದ್ದವು. 

ಮಗಳಿಗಿಂತ ಚಿಕ್ಕವಳ ಜೊತೆ ಅನಿಲ್​ ಕಪೂರ್​ ಲಿಪ್​ಲಾಕ್​! ಬಾಲಿವುಡ್ಡೋ, ಚರಂಡಿವುಡ್ಡೋ ಅಂತಿದ್ದಾರೆ ಟ್ರೋಲಿಗರು

ದಿಲ್ ರಾಜು ನಿರ್ಮಾಣದ ಈ ತಿರಗಬದರ ಸಾಮಿಯ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. . ಈ ಸಿನಿಮಾದಲ್ಲಿ ಮಕರಂದ ದೇಶಪಾಂಡೆ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ನಟಿ ಮನ್ನಾರ ಬಗ್ಗೆ ಹೇಳುವುದಾದರೆ ಮನ್ನಾರಾ ತೆಲುಗಿನ ಪ್ರೇಮ ಗೀಮಾ ಜಾಂತ ನಹೀ ಎಂಬ ತೆಲುಗು ಸಿನಿಮಾದ ಮೂಲಕ 2014ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಅದೇ ವರ್ಷ ಅವರು ಜಿದ್ ಸಿನಿಮಾದಲ್ಲಿ ನಟಿಸಿದ್ದರು, ಇದಾದ ಬಳಿಕ 2015ರಲ್ಲಿ ಸಂದಮರುಥನ್, 2019ರಲ್ಲಿ ಜಕ್ಕಣ್ಣ ಸಿನಿಮಾದಲ್ಲಿ ನಟಿಸಿದ್ದು, ಕೊನೆಯದಾಗಿ ಸೀತಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 

ಈ ಕಿಸ್ಸಿಂಗ್ ವೀಡಿಯೋ ವೈರಲ್ ಆಗುತ್ತಿದ್ದಂತೆ ಮನ್ನಾರ ತನ್ನ ಸೋದರಿ ಪ್ರಿಯಾಂಕಾ ಚೋಪ್ರಾ ಮಾತನಾಡುತ್ತಿರುವ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಪ್ರಿಯಾಂಕಾ 'ಕೆಲವರು ನೀವು ಏನು ಮಾಡಿದರೂ ಯಾವಾಗಲೂ ಅಸಮಾಧಾನವನ್ನು ಹೊಂದಿರುತ್ತಾರೆ. ನಿಮಗೆ ಎಲ್ಲರನ್ನು ತೃಪ್ತಿಪಡಿಸಲು ಸಾಧ್ಯವಾಗದು' ಎಂದು ಹೇಳುತ್ತಿರುವ ವೀಡಿಯೋವಿದೆ. 

 

Director kisses an actress earlier today!pic.twitter.com/JzyBbau45d

— Manobala Vijayabalan (@ManobalaV)

 

 

click me!