
ಟಾಪ್ ಗಾಯಕ ದಿಲ್‌ಜಿತ್ ದೋಸಂಝ್ ಬಾಲಿವುಡ್ ಕ್ವೀನ್ ಕಂಗನಾ ವಿರುದ್ಧ ಗರಂ ಆಗಿದ್ದಾರೆ. ನಟಿಯ ಲೇಟೆಸ್ಟ್ ಪೋಸ್ಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಈ ಯೂತ್ ಸಿಂಗರ್.
ದೆಹಲಿಯ ರೈತರ ಪ್ರತಿಭಟನೆ ಫೋಟೋ ಹಾಕಿ ಶಾಹೀನ್‌ಭಾಗ್ ಅಜ್ಜಿ ಹಣ ಕೊಟ್ರೆ ಎಲ್ಲಕ್ಕೂ ಹೋಗ್ತಾರೆ ಎನ್ನುವ ಅರ್ಥದಲ್ಲಿ ನಟಿ ಟ್ವೀಟ್ ಮಾಡಿದ್ದರು. 100 ರೂಪಾಯಿಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ನಟಿ ಬರೆದಿದ್ದರು.
ಮೋದಿ ನನ್ನ ಮಗ ಎಂದ್ರು CAA ವಿರುದ್ಧ ಪ್ರತಿಭಟಿಸಿದ್ದ ಶಾಹೀನ್‌ಭಾಗ್ ಅಜ್ಜಿ
ಆಗಲೇ ತಪ್ಪನ್ನು ಅರಿತುಕೊಂಡು ಬೇಗನೆ ಟ್ವೀಟ್ ಡಿಲೀಟ್ ಮಾಡಿದರೂ ಈಗ ಪೋಸ್ಟ್ ವೈರಲ್ ಆಗಿದೆ. ಪ್ರಿನ್ಸ್ ನರುಲ, ಸರ್ಗುನ್ ಮೆಹ್ತಾ, ಹಿಮಾಂಶಿ ಖುರಾನ ಸೇರಿ ಹಲವರು ನಟಿ ವಿರುದ್ಧ ಟ್ವೀಟ್ ಮಾಡಿದ ಬೆನ್ನಲ್ಲೇ ಇದೀ ಗಾಯಕ ದಿಲ್‌ಜಿತ್ ಕೂಡಾ ಟ್ವೀಟ್ ಮಾಡಿದ್ದಾರೆ.
ಹಿರಿಯ ವೃದ್ಧೆಯ ಇಂಟರ್‌ವ್ಯೂ ವಿಡಿಯೋ ಶೇರ್ ಮಾಡಿದ ದಿಲ್‌ಜಿತ್, ಇದನ್ನು ಕೇಳಿ ಕಂಗನಾ. ಯಾರೂ ಇಷ್ಟೊಂದು ಕುರುಡರಾಗಬಾರದು. ಏನಾದರೂ ಹೇಳ್ತಾ ಇರೋದು ಎಂದು ಕಂಗನಾರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.