ಇವರ ಹೈಟ್ ಸ್ವಲ್ಪಾನೂ ಮ್ಯಾಚ್ ಆಗಲ್ಲ, ಮನಸು ಪರ್ಫೆಕ್ಟ್ ಮ್ಯಾಚ್

Suvarna News   | Asianet News
Published : Dec 03, 2020, 12:30 PM ISTUpdated : Dec 03, 2020, 12:44 PM IST
ಇವರ ಹೈಟ್ ಸ್ವಲ್ಪಾನೂ ಮ್ಯಾಚ್ ಆಗಲ್ಲ, ಮನಸು ಪರ್ಫೆಕ್ಟ್ ಮ್ಯಾಚ್

ಸಾರಾಂಶ

ಇವರಿಬ್ಬರ ಹೈಟ್ ಸ್ವಲ್ಪಾನೂ ಮ್ಯಾಚ್ ಆಗಲ್ಲ, ವಯಸೂ ಮ್ಯಾಚ್ ಆಗಲ್ಲ, ಆದ್ರೆ ಮನಸು ಮಾತ್ರ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದೆ. ಪ್ರೀತಿಗೆ ಕಣ್ಣಿಲ್ಲ ಅಂತಾರಲ್ಲ.. ಈತ ಪ್ರೀತಿಸಿದ ಹುಡುಗಿಗೂ ಕಣ್ಣಿಲ್ಲ. ಓದಿ ಈ ಇಂಟ್ರೆಸ್ಟಿಂಗ್ ಸ್ಟೋರಿ

ಇವರ ಮದುವೆ ತುಂಬಾ ಸರಳವಾಗಿ ನಡೆದಿದೆ. ಶಾಂತಾ ಮಕ್ವಾನಾ ಮತ್ತು ರಮೇಶ್ ದಂಗರ್ ವಿವಾಹ ಸಿಂಪಲ್ ಆಗಿ ನಡೆದರೂ ನಂತರ ಬಹಳಷ್ಟು ಜನರ ಪ್ರೀತಿಗೆ ಪಾತ್ರವಾಗಿದೆ. ಈ ಮದುವೆ ಗುಜರಾತ್‌ನ ಜುನಾಗಧ್‌ನಲ್ಲಿ ಮಾತಿನ ವಿಷಯವಾಗಿದೆ.

ಇವರಿಬ್ಬರ ಹೈಟ್ ಸ್ವಲ್ಪಾನೂ ಮ್ಯಾಚ್ ಆಗಲ್ಲ, ವಯಸೂ ಮ್ಯಾಚ್ ಆಗಲ್ಲ, ಆದ್ರೆ ಮನಸು ಮಾತ್ರ ಪರ್ಫೆಕ್ಟ್ ಆಗಿ ಮ್ಯಾಚ್ ಆಗಿದೆ. ಪ್ರೀತಿಗೆ ಕಣ್ಣಿಲ್ಲ ಅಂತಾರಲ್ಲ.. ಈತ ಪ್ರೀತಿಸಿದ ಹುಡುಗಿಗೂ ಕಣ್ಣಿಲ್ಲ.

ಮ್ಯಾರಥಾನ್ ಸೆಕ್ಸ್; ವಾರ್ನರ್‌ ಗಾಯಕ್ಕೆ ಅಸಲಿ ಕಾರಣ ಹೇಳಿದ ಪತ್ನಿ!

ಮಖ್ವಾನಾ ನೀಳ ಸುಂದರಿ. ಈಕೆಯ ಹೈಟ್ 5.5 ಫೀಟ್ ಆದರೆ ಮದುವೆಯಾಗಿದ್ದೋ.. ಆಕೆಯ ಮೊಣಕಾಲಿನಷ್ಟೂ ಉದ್ದವಿಲ್ಲದ 2.5 ಫೀಟ್‌ನ ಯುವಕನನ್ನು. ಈ ಜೋಡಿಯ ವಯಸ್ಸಿನ ಅಂತರ 7 ವರ್ಷಗಳು. ಇದು ಸ್ವರ್ಗದಲ್ಲಿ ನಿಶ್ಚಯವಾದ ಮದುವೆ ಅಂತಾರಲ್ಲ, ಅದೇ ರೀತಿ

ಕೇರಳ - ಮದುವೆಗೆ ಹೆಲಿಕಾಪ್ಟರ್‌ನಲ್ಲಿ ಎಂಟ್ರಿ ಕೊಟ್ಟ ಮಧುಮಗಳು!

ನಾನು ಈ ಮದುವೆಯಿಂದ ಖುಷಿಯಾಗಿದ್ದೇನೆ. ನನಗೆ ಹುಟ್ಟಿನಿಂದಲೇ ಕಣ್ಣು ಕಾಣುವುದಿಲ್ಲ. ನನ್ನ ಪತಿ ಕುಳ್ಳಗಿರಬಹುದು. ಆದರೆ ಅವರ ಮನಸು ದೊಡ್ಡದು. ಅವರು ಒಳ್ಳೆಯ ವ್ಯಕ್ತಿ. ನಾವಿಬ್ಬರೂ ಒಂದೇ ಸಮುದಾಯದವರು. ಚೆನ್ನಾಗಿ ದುಡಿಯುತ್ತಾರೆ ಎಂದಿದ್ದಾರೆ 29 ವರ್ಷದ ಮಖ್ವಾನಾ. ಗಂಡನಂತೆ ತಾನೂ ಟೀಚರ್ ಆಗ್ಬೇಕು ಅಂತಾರೆ ಆಕೆ

ಜುನಾಗಢ್‌ನ ರಾಜೇಸರ್ ಹಳ್ಳಿಯ ಮಖ್ವಾನಾ, ನನ್ನ ಶಿಕ್ಷಣ ಮುಗಿಸಿ ನಾನೂ ಶಿಕ್ಷಕಿಯಾಗಬೇಕು ಎಂದಿದ್ದಾರೆ. ಸದ್ಯ ಇವರು ಬಿ.ಎಡ್ ಮಾಡುತ್ತಿದ್ದಾರೆ. ನಾನು ನನ್ನ ಪತ್ನಿಯ ಕನಸು ನನಸು ಮಾಡೋಕೆ ಎಲ್ಲವನ್ನೂ ಮಾಡುತ್ತೇನೆ. ನನ್ನದೇ ಕೆಲಸಕ್ಕೆ ಆಕೆಯೂಸೇರೋದು ಖುಷಿ ವಿಷಯ ಎನ್ನುತ್ತಾರೆ ವರ ಬುತವಾದರ್ ಗ್ರಾಮದ 38 ವರ್ಷದ ದಂಗರ್. ಸದ್ಯ ಇವರು ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದಾರೆ.

ಅಪಘಾತದಲ್ಲಿ ಅರ್ಧ ದೇಹವೇ ಹೋಯ್ತು, ಬದುಕುವ ಛಲ ಬಿಡಲಿಲ್ಲ, ಗರ್ಲ್‌ಫ್ರೆಂಡ್ ಕೈಬಿಡಲಿಲ್ಲ..!

ಇವರಿಬ್ಬರೂ ಸುಶಿಕ್ಷಿತರು. ಇಬ್ಬರಿಗೂ ಸಂಗಾತಿ ಹುಡುಕೋದು ಕಷ್ಟವಾಗಿತ್ತು. ಇದು ಹಿರಿಯರು ಮಾತಾಡಿ ಮಾಡಿದ ಮದುವೆ. ಎರಡೂ ಕುಟುಂಬದ ಹಿರಿಯರು ಮಾತನಾಡಿ ಫಿಕ್ಸ್ ಮಾಡಿದ್ದಾರೆ ಎಂದಿದ್ದಾರೆ ವರನ ಸಹೋದರ ರಾಮ್ ದಂಗರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Abhishek Bachchan: ಮಗಳು ಆರಾಧ್ಯಾ ಗೂಗಲ್‌ನಲ್ಲಿ ಈ ಡಿವೋರ್ಸ್ ಸುದ್ದಿ ಓದಿದರೇ ಏನಾಗುವುದೋ ಏನೋ..!?
ಪ್ರೀತಿಸಿದ ಹುಡುಗಿ ಮೋಸ ಮಾಡಿದ್ರೆ ತಿರುಗಿ ನೋಡದ ಹುಡುಗರು; ದ್ರೋಹ ಮಾಡಿದೋಳ ಹಿಂದೆ ಹೋದ Bigg Boss ಸ್ಪರ್ಧಿ