
ದಿಲೀಪ್ ಕುಮಾರ್ ಮತ್ತು ಮಧುಬಾಲಾ ಅವರ ಜೋಡಿ ಬಾಲಿವುಡ್‌ನ ತುಂಬ ಸುಂದರ ಜೋಡಿಗಳಲ್ಲಿ ಒಂದು. ಹಾಗೇ ಬಾಲಿವುಡ್‌ನ ಅತ್ಯಂತ ದುರದೃಷ್ಟಕರ ಪ್ರಣಯ ಜೋಡಿ ಕೂಡ ಹೌದು. ಇಬ್ಬರೂ ಒಂದು ಕಾಲದ ಸೂಪರ್‌ಸ್ಟಾರ್‌ಗಳು. ಬಾಲಿವುಡ್‌ನ ಮೊತ್ತಮೊದಲ ಪವರ್ ಕಪಲ್‌ಗಳು. ಅವರ ಪ್ರಣಯ ಕಥೆಗಳು 50ರ ದಶಕದ ಬಾಲಿವುಡ್ ಟ್ಯಾಬ್ಲಾಯ್ಡ್‌ಗಳಿಗೆ ಹಬ್ಬವಾಗಿದ್ದವು. ಆದರೆ ಅದು ಒಂದು ದಶಕ ನಡೆಯಿತು. ನಂತರ ಕಹಿ ಘಟನೆಗಳಲ್ಲಿ ಅಂತ್ಯ ಕಂಡಿತು. ಕೋರ್ಟ್ ಪ್ರಕರಣವೊಂದರಲ್ಲಿ ಸ್ವತಃ ಮಧುಬಾಲ ವಿರುದ್ಧವೇ ದಿಲೀಪ್ ಕುಮಾರ್ ಸಾಕ್ಷಿ ನುಡಿದ; ಹೀಗಾಗಿ ಇಬ್ಬರ ನಡುವೆ ಒಡಕು ಉಂಟಾಗಿ ಬೇರೆ ಬೇರೆಯಾದರು ಎಂದು ಹೇಳುತ್ತಾರೆ. ಇದು ಒಂದು ಕಾರಣ ಇರಬಹುದು. ಅದರ ಜೊತೆಗೆ, ಇನ್ನೊಂದು ವೈಯಕ್ತಿಕ ಕಾರಣವೂ ಇತ್ತು ಅಂತ ಹಿರಿಯ ನಟಿ ಮುಮ್ತಾಜ್ ಇತ್ತೀಚೆಗೆ ಸಂದೃಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಮುಮ್ತಾಜ್ ಪ್ರಕಾರ, ಮಧುಬಾಲಾಗೆ ದಿಲೀಪ್ ಜೊತೆಗಿನ ಸಂಬಂಧ ಮುರಿದುಕೊಳ್ಳಲು ಇಷ್ಟವಿರಲಿಲ್ಲ. ಅವಳು ಅವನನ್ನು ಹುಚ್ಚನಂತೆ ಪ್ರೀತಿಸುತ್ತಿದ್ದಳು. ಇದರ ಬಗ್ಗೆ ಅನುಮಾನವಿರಲಿಲ್ಲ. ಆದರೆ ದಿಲೀಪ್ ಕುಮಾರ್‌ಗೆ ಆಕೆಯ ಜೊತೆಗೆ ಮದುವೆ ಬೇಕಿತ್ತು; ಮಕ್ಕಳು ಬೇಕಿದ್ದವು. ಅದನ್ನು ಕೊಡಲು ಮಧುಬಾಲಾಗೆ ಸಾಧ್ಯವಿರಲಿಲ್ಲ. ಅಂದರೆ ಆಕೆಗೆ ತೀವ್ರ ಹೃದಯ ರೋಗವಿತ್ತು. ಆಕೆ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು. ಮಕ್ಕಳು ಮಾತ್ರವಲ್ಲ, ದಿಲೀಪ್ ಕುಮಾರ್‌ಗೆ ಮಂಚದ ಸುಖ ಕೊಡಲು ಕೂಡ ಆಕೆಯಿಂದ ಸಾಧ್ಯವಿರಲಿಲ್ಲ!
ಮಧುಬಾಲಾ ಮತ್ತು ದಿಲೀಪ್ ಕುಮಾರ್ 1951ರಲ್ಲಿ ತಮ್ಮ ಪ್ರಣಯವನ್ನು ಪ್ರಾರಂಭಿಸಿದರು. ಇಬ್ಬರೂ 1950ರ ದಶಕದ ಮಧ್ಯಭಾಗದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಆದರೆ ಮಧುಬಾಲಾ ತಂದೆ ಮತ್ತು ಆಕೆಯ ಮ್ಯಾನೇಜರ್ ಅತಾವುಲ್ಲಾ ಖಾನ್ ಅವರೊಂದಿಗೆ ದಿಲೀಪ್ ಕುಮಾರ್‌ಗೆ ಒಳ್ಳೆಯ ಸಂಬಂಧ ಇರಲಿಲ್ಲ. ಇಬ್ಬರೂ ಒಟ್ಟಿಗಿದ್ದರು. ಮಕ್ಕಳಾಗಲಿಲ್ಲ.
ನಂತರ ಅದೇ ಹತಾಶೆಯಲ್ಲಿ ನಟಿ ಸಾಯಿರಾ ಬಾನು ಅವರನ್ನು ದಿಲೀಪ್ ಕುಮಾರ್ ಮದುವೆಯಾದ. ದಿಲೀಪ್ ಕುಮಾರ್ 1966ರಲ್ಲಿ ನಟಿ ಸಾಯಿರಾ ಬಾನುವನ್ನು ವಿವಾಹವಾದರೂ, ಅವರಿಗೆ ಎಂದಿಗೂ ಮಕ್ಕಳಾಗಲಿಲ್ಲ. ಹೀಗಾಗಿ ಬಹುಶಃ ತೊಂದರೆ ದಿಲೀಪ್ ಕುಮಾರ್‌ನಲ್ಲಿಯೇ ಇದ್ದಿರಬಹುದು. ಇದೇ ಕಾರಣಕ್ಕಾಗಿ ಸಾಯಿರಾ ಬಾನು ಕೂಡ ಹತಾಶರಾಗಿದ್ದರು. ಇಬ್ಬರ ದಾಂಪತ್ಯದಲ್ಲಿ ಕಹಿಯಿತ್ತು.
1957ರಲ್ಲಿ ಮಧುಬಾಲಾ ʼನಯಾ ದೌರ್ʼ ಚಿತ್ರದಲ್ಲಿ ನಟಿಸಲು ಒಪ್ಪಂದ ಮಾಡಿಕೊಂಡಿದ್ದರೂ ಅದರಿಂದ ಹಿಂದೆ ಸರಿದಳು. ಆಗ ಅದರ ನಿರ್ಮಾಪಕ ಬಿ.ಆರ್. ಚೋಪ್ರಾ, ಒಪ್ಪಂದವನ್ನು ಗೌರವಿಸದಿದ್ದಕ್ಕಾಗಿ ಮಧುಬಾಲಾಳನ್ನು ನ್ಯಾಯಾಲಯಕ್ಕೆ ಎಳೆದರು.
ವಿಚಿತ್ರ ಅಂದರೆ, ಸಂಗಾತಿ ಮಧುಬಾಲಾ ಜೊತೆಗೆ ನಿಲ್ಲಬೇಕಿದ್ದ ದಿಲೀಪ್ ಕುಮಾರ್, ನಿರ್ಮಾಪಕರ ಪರವಾಗಿ ಸಾಕ್ಷ್ಯ ನೀಡಿದರು. ಇದು ಇಬ್ಬರು ಸೂಪರ್‌ಸ್ಟಾರ್‌ಗಳ ಸಂಬಂಧದ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಗಿತ್ತು. 1960ರಲ್ಲಿ ಬಿಡುಗಡೆಯಾದ ಕೆ. ಆಸಿಫ್ ಅವರ ಮುಘಲ್-ಎ-ಅಜಮ್ ಚಿತ್ರದಲ್ಲಿ ಅವರಿಬ್ಬರು ಕೊನೆಯ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡರು. ಆದರೆ ಅದರ ಚಿತ್ರೀಕರಣದ ವೇಳೆಯಲ್ಲಿ ಇಬ್ಬರು ತಾರೆಯರ ನಡುವೆ ಮಾತುಕತೆ ಇರಲಿಲ್ಲ ಎಂದು ಹೇಳಲಾಗುತ್ತದೆ. ದಿಲೀಪ್ ಕುಮಾರ್ 2021ರಲ್ಲಿ 98ನೇ ವಯಸ್ಸಿನಲ್ಲಿ ನಿಧನರಾದರು. ಪತ್ನಿ ಸಾಯಿರಾ ಬಾನು ಅವರನ್ನು ಅಗಲಿದರು.
50ರಲ್ಲೂ ಸಿಂಗಲ್, 12 ಮಂದಿ ಜೊತೆ ಡೇಟಿಂಗ್: ಯಾರು ಆ ಇಬ್ಬರು ಮಕ್ಕಳ ನಟಿ!
1990ರಲ್ಲಿ ಮಧುಬಾಲಾ ಮತ್ತು ಕಿಶೋರ್ ಕುಮಾರ್ ವಿವಾಹವಾದರು. ಮಧುಬಾಲಾ ಅವರ ಪೋಷಕರ ಸಲುವಾಗಿ ಕಿಶೋರ್ ಕುಮಾರ್ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು ಮತ್ತು ತಮ್ಮ ಹೆಸರನ್ನು ಕರೀಂ ಅಬ್ದುಲ್ ಎಂದು ಬದಲಾಯಿಸಿಕೊಂಡರು. ಈ ಜೋಡಿ ನಿಕಾ ಮಾಡಿಕೊಂಡರು ಮತ್ತು ನಂತರ ಮದುವೆಯನ್ನು ಘೋಷಿಸಿದರು. ಕಿಶೋರ್ ಕುಮಾರ್ ಮತ್ತು ಮಧುಬಾಲಾ ನಂತರ ಹಿಂದೂ ಸಂಪ್ರದಾಯದ ಪ್ರಕಾರವೂ ವಿವಾಹವಾದರು. ಆದರೂ, ಕಿಶೋರ್ ಅವರ ಕುಟುಂಬವು ನಟಿಯನ್ನು ಸ್ವೀಕರಿಸಲಿಲ್ಲ. ಮಧುಬಾಲಾ 1968ರಲ್ಲಿ ತಮ್ಮ 36ನೇ ವಯಸ್ಸಿನಲ್ಲಿ ಹೃದಯ ಕಾಯಿಲೆಯೊಂದಿಗೆ ದೀರ್ಘ ಹೋರಾಟದ ನಂತರ ನಿಧನರಾದರು.
ಬಾಲಿವುಡ್‌ನ ಈ ಸೂಪರ್‌ಸ್ಟಾರ್ ವಿಶ್ವದಲ್ಲೇ 4ನೇ ಶ್ರೀಮಂತ ನಟ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.