'ಮಗಳ' ಲವ್​ ಗುಟ್ಟು ರಟ್ಟು ಮಾಡಿಯೇ ಬಿಟ್ರು ನಟ ಸಲ್ಮಾನ್​ ಖಾನ್​!

By Suvarna News  |  First Published Apr 13, 2023, 12:18 PM IST

ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಹಾಗೂ ಶ್ವೇತಾ ತಿವಾರಿ ಪುತ್ರಿ ಪಾಲಕ್​ ಇಬ್ಬರೂ ಡೇಟಿಂಗ್​ನಲ್ಲಿ ಇದ್ದಾರೆ ಎನ್ನುವ ಗಾಳಿಸುದ್ದಿಯನ್ನು ಪರೋಕ್ಷವಾಗಿ ನಿಜ ಎಂದು ತಿಳಿಸಿಯೇ ಬಿಟ್ರು ಸಲ್ಮಾನ್​ ಖಾನ್​ 
 


ಪಾಲಕ್ ತಿವಾರಿ (Palak Tiwari) ಬಾಲಿವುಡ್‌ನ ಉದಯೋನ್ಮುಖ ಸ್ಟಾರ್ ಮಕ್ಕಳಲ್ಲಿ ಒಬ್ಬರು. ಇವರು ಖ್ಯಾತ ಟಿವಿ ತಾರೆ ಶ್ವೇತಾ ತಿವಾರಿ ಅವರ ಪುತ್ರಿ. 22 ವರ್ಷದ ಪಾಲಕ್ ತಮ್ಮ ಅತ್ಯಾಕರ್ಷಕ ನೋಟದಿಂದಾಗಿ ಚಲನಚಿತ್ರ ನಿರ್ಮಾಪಕರನ್ನು ಆಕರ್ಷಿಸುತ್ತಿದ್ದಾರೆ. ಈಕೆ  ಸ್ಟೈಲಿಶ್ ಬಟ್ಟೆಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸೆನ್ಸೇಷನ್ ಆಗಿದ್ದಾರೆ. ಸದ್ಯ ಪಾಲಕ್​, ತಮ್ಮ ಅಮ್ಮ ಕಿರುತೆರೆ ನಟಿ ಶ್ವೇತಾ ತಿವಾರಿ ಅವರಿಗಿಂತಲೂ  ಫೇಮಸ್ ಆಗುತ್ತಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟಿವ್ ಆಗಿರೋ ಪಾಲಕ್​,  ವಿವಿಧ ಬ್ರಾಂಡ್‌ಗಳಿಗೆ ಶೂಟ್ ಮಾಡುತ್ತಾರೆ.  ಸದ್ಯ, ಸಲ್ಮಾನ್ ಖಾನ್ ಅವರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' (Kisi Ka Bhai Kisi Ki Jaan) ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಲಿದ್ದಾರೆ ಪಾಲಕ್​. ಇದಕ್ಕಾಗಿ ಅವರು ಸಕಲ ರೀತಿಯಲ್ಲಿ ಸಿದ್ಧರಾಗಿದ್ದಾರೆ. ಬಾಲಿವುಡ್ ನ ಸುಲ್ತಾನ್  ಸಲ್ಮಾನ್ ಖಾನ್ ಜೊತೆಗಿನ ಶೂಟಿಂಗ್ ಅನುಭವವನ್ನು ನಟಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಅದೀಗ ಭಾರಿ ಸುದ್ದಿಯಾಗಿತ್ತು. ಈಕೆಯ ಸಂದರ್ಶನ ಸುದ್ದಿಯಾಗುತ್ತಿಲ್ಲ. ಬದಲಿಗೆ ಸಂದರ್ಶನದಲ್ಲಿ (Interview)ಸಲ್ಮಾನ್​ ಖಾನ್​ ಅವರನ್ನು ಅಪ್ಪನಂತೆ ಎಂದು ಸಂಬೋಧಿಸಿರುವುದು ಈಗ ಸುದ್ದಿಯಾಗಿದ್ದು, ನೆಟ್ಟಿಗರು ನಟಿ ಮತ್ತು ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎನಿಸಿಕೊಂಡಿರೋ ಸಲ್ಲುಭಾಯಿ ಕಾಲೆಳೆಯುತ್ತಿದ್ದರು. ಇದೀಗ ಅವರು ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಅಲಿ ಖಾನ್ ಅವರ ಜೊತೆ ಲವ್​ನಲ್ಲಿದ್ದಾರೆ, ಇಬ್ಬರೂ ರಿಲೇಷನ್​ನಲ್ಲಿ ಇದ್ದಾರೆ ಎನ್ನುವ ಸುದ್ದಿ ಬಹಳ ಹರಿದಾಡುತ್ತಿತ್ತು. ಆದರೆ ಇದುವರೆಗೂ ಇಬ್ಬರು ಇದರ ಬಗ್ಗೆ ಚಕಾರ ಎತ್ತಲಿಲ್ಲ.

ಆದರೆ ಇದೀಗ ಬಿ-ಟೌನ್​ನಲ್ಲಿ ಸ್ಟಾರ್​ ಕಿಡ್ಸ್​ ಬಗ್ಗೆ ಬಹಳ ಸುದ್ದಿಯಾಗುತ್ತಿದೆ. ನಟ ಶಾರುಖ್ ಖಾನ್ (Shah Rukh Khan) ಮಗಳು ಸುಹಾನಾ ಖಾನ್​  ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ಅವರ ಜೊತೆ ಡೇಟಿಂಗ್​ ಮಾಡುತ್ತಿದ್ದು, ಈ ಇಬ್ಬರು ಸ್ಟಾರ್​ಗಳು ಸಂಬಂಧಿಕರಾಗಲಿದ್ದಾರೆಯೆ ಎಂಬ ಗುಮಾನಿ ಇದೆ. ಅದೇ ವೇಳೆ,  ಆದಿತ್ಯ ರಾಯ್ ಕಪೂರ್, ಅನನ್ಯಾ ಪಾಂಡೆ ಲವ್‌ನಲ್ಲಿದ್ದಾರೆಂದು ಹೇಳಲಾಗುತ್ತಿದೆ. ಈಗ ಇಬ್ರಾಹಿಂ ಅಲಿ ಖಾನ್ ಹಾಗೂ ಪಾಲಕ್​ ತಿವಾರಿ ಡೇಟಿಂಗ್​ ಸುದ್ದಿ ಬಹಳ ಓಡಾಡುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗಗೊಂಡಿರಲಿಲ್ಲ. ಆದರೆ  ಮುಂಬೈನಲ್ಲಿ ನಡೆದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಟ್ರೇಲರ್ ಲಾಂಚ್ ವೇಳೆ ನಟ ಸಲ್ಮಾನ್ ಖಾನ್‌ ಅವರು ಈ ವಿಷಯದ ಕುರಿತು ಪರೋಕ್ಷವಾಗಿ ಮಾತನಾಡಿದ್ದಾರೆ. ಇದರ ಅರ್ಥ ಇವರಿಬ್ಬರ ಸಂಬಂಧದ ಕುರಿತು ಹಿಂಟ್​ ಕೊಟ್ಟಿದ್ದಾರೆ.

Tap to resize

Latest Videos

ಸಲ್ಮಾನ್‌ ಖಾನ್‌ ನನ್ನ ಅಪ್ಪನಂತೆ ಎಂದ ನಟಿ ಪಾಲಕ್​: ಬಿಡ್ತಾರೆಯೇ ಟ್ರೋಲಿಗರು?

ಅಷ್ಟಕ್ಕೂ ಅವರೇನು ಸುಖಾ ಸುಮ್ಮನೆ ಈ ವಿಷಯ ಪ್ರಸ್ತಾಪಿಸಲಿಲ್ಲ. ಬದಲಿಗೆ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದ ಪ್ರಮೋಷನ್​ (Promotion) ವೇಳೆ ನಡೆದ ಒಂದು ಘಟನೆಯಿಂದ ಇದು ಖುಲ್ಲಂಖುಲ್ಲಾ ಆಗಿದೆ. ಅಸಲಿಗೆ ಈ ಚಿತ್ರದಲ್ಲಿ ಶ್ವೇತಾ ತಿವಾರಿ ಪುತ್ರಿ ಪಾಲಕ್ ತಿವಾರಿ ಕೂಡ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಿರೂಪಕರು ಪಾಲಕ್‌ಗೆ ಕರೆಯಬೇಕು ಎನ್ನುವ ವೇಳೆ ಅವರು ವೇದಿಕೆ ಮೇಲಿಂದ ಬೀಳುವಂತಾದರು. ಅದೃಷ್ಟವಶಾತ್ ಏನೂ ಆಗಲಿಲ್ಲ. ಪಾಲಕ್ ಮೇಲೆ ನಿರೂಪಕರು ಬಿದ್ದರು ಅಂತ ಅಲ್ಲಿದವರೆಲ್ಲ ಜೋಕ್ ಮಾಡಿ ನಕ್ಕಿದ್ದಾರೆ. ಅದು ಸಲ್ಮಾನ್ ಕಿವಿಗೂ ಬಿದ್ದಿದೆ. ಸಲ್ಮಾನ್ ಖಾನ್ ಅವರು, "ಅವಳು ಈಗಾಗಲೇ ಬಿದ್ದಾಗಿದೆ" ಎಂದು ಹೇಳಿದ್ದಾರೆ ಅಷ್ಟೇ. ಜನರಿಗೆ ಸಾಲದೇ ಇಷ್ಟು ಸುಳಿವು? 
 
ಸಾಕಷ್ಟು ಬಾರಿ ಪಾಲಕ್ ಅವರು ಇಬ್ರಾಹಿಂ ಅಲಿ ಖಾನ್ (Ibrahim Ali Khan) ಜೊತೆ ಪಾರ್ಟಿ ಮಾಡಿದ್ದರು. ಇಬ್ಬರೂ ಸಾಕಷ್ಟು ಬಾರಿ ಒಟ್ಟಿಗೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದರು. ಆದ್ದರಿಂದ  ಇಬ್ಬರ ರಿಲೇಷನ್​ ಬಗ್ಗೆ ಗುಮಾನಿ ಇತ್ತು. ಸಲ್ಮಾನ್​ ಖಾನ್​ರನ್ನು ತಮ್ಮ ತಂದೆಗೆ ಹೋಲಿಸಿದ್ದರಿಂದ ಮಗಳ ಮದುವೆಯ ಕುರಿತು ಅಪ್ಪನೇ ಹಿಂಟ್​ ನೀಡಿರುವುದಾಗಿ ನೆಟ್ಟಿಗರು ಹೇಳುತ್ತಿದ್ದಾರೆ.  ಪಾಲಕ್ ಅವರಿಗೆ ಇಬ್ರಾಹಿಂ ಅಲಿ ಖಾನ್ ಜೊತೆಗಿನ ರಿಲೇಶನ್‌ಶಿಪ್ ಬಗ್ಗೆ ಪ್ರಶ್ನೆ ಮಾಡಿದಾಗ ಅವರು, "ಎರಡು ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದೇನೆ. ಇದು ನನಗೆ ತುಂಬ ಮುಖ್ಯವಾದ ವರ್ಷ, ಈ ಕೆಲಸವೇ ಮುಖ್ಯ. ನಾನು ಭಾಗಿಯಾಗಿರುವ ಚಿತ್ರರಂಗದಲ್ಲಿ ಈ ರೀತಿ ಮಾತು ಕೇಳಿಬರೋದು ಸಾಮಾನ್ಯ, ನಾನು ಇದರ ಕಡೆ ಗಮನ ಕೊಡೋದಿಲ್ಲ. ನಾನು ಕೆಲಸದ ಕಡೆ ಗಮನ ಕೊಡ್ತೀನಿ. ಪ್ರೀತಿಯನ್ನು ಎಂದಿಗೂ ಲೆಕ್ಕಾಚಾರ ಮಾಡಲು ಅಥವಾ ಊಹಿಸಲು ಸಾಧ್ಯವಿಲ್ಲ. ಸದ್ಯ ನಾನು ಕೆಲಸದ ಕಡೆ ಮುಖ ಮಾಡಿದ್ದೇನೆ. ವೃತ್ತಿ ವಿಚಾರವಾಗಿ ಹೇಳುವುದಾದ್ರೆ ನಾನು ತುಂಬ ನಿರ್ಣಾಯಕ ಹಂತದಲ್ಲಿದ್ದೇನೆ, ನನ್ನ ಎಲ್ಲ ಶಕ್ತಿಯನ್ನು ಇಲ್ಲಿ ಹಾಕಬೇಕು" ಎಂದು ಹೇಳಿದ್ದರು. 

ಶಾರುಖ್​- ಅಮಿತಾಭ್​ ಆಗಲಿದ್ದಾರಾ ಹತ್ತಿರದ ಸಂಬಂಧಿ? ಏನಿದು ಹೊಸ ವಿಷ್ಯ?

ಅಷ್ಟಕ್ಕೂ  ಪಾಲಕ್ ತಿವಾರಿ  ಬಾಲಿವುಡ್‌ಗೆ ಅಧಿಕೃತವಾಗಿ ಎಂಟ್ರಿ ಕೊಡ್ತಿರೋ ಮೊದಲ ಚಿತ್ರವಿದು.  ಇದರ ಜೊತೆಗೆ ಬಿಗ್ ಬಾಸ್ ಹಿಂದಿ 13 ಖ್ಯಾತಿಯ ಶೆಹನಾಜ್ ಗಿಲ್ ಅವರಿಗೂ ಕೂಡ ಇದು ಮೊದಲ ಹಿಂದಿ ಚಿತ್ರವಾಗಿದೆ. ಶ್ವೇತಾನ್ನು ಪಾಲಕ್​ ಅವರ ಅಪ್ಪ-ಅಮ್ಮನ ಕುರಿತು ಹೇಳುವುದಾದರೆ, ಇವರ ತಾಯಿ ಶ್ವೇತಾ ಮೊದಲು  ರಾಜ್‌ ಚೌಧರಿಯವರನ್ನು ಮದುವೆಯಾಗಿದ್ದರು. ಈ ದಂಪತಿಯ ಮಗಳೇ ಪಾಲಕ್​.  1998ರಲ್ಲಿ ಮದುವೆಯಾಗಿದ್ದ ಅವರು 2007ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಆಮೇಲೆ ಶ್ವೇತಾ ಅವರು 2013ರಲ್ಲಿ ಅಭಿನವ್ ಕೊಹ್ಲಿ ಎಂಬುವವರನ್ನು ಮದುವೆಯಾದರು. ಇವರಿಗೆ ರೇಯಾಂಶ್ ಎಂಬ ಮಗನಿದ್ದಾನೆ. ಅಂದಹಾಗೆ, 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಏಪ್ರಿಲ್ 14ಕ್ಕೆ ರಿಲೀಸ್ ಆಗಲಿದೆ.

click me!