ದಕ್ಷಿಣದವರ ಬಗ್ಗೆ ಭಾರೀ ತಾರತಮ್ಯ; ಒಂದೊಳ್ಳೆ ಡಿಸೈನರ್ ಬಟ್ಟೆ ಸಿಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಸಮಂತಾ

Published : Apr 13, 2023, 09:29 AM IST
 ದಕ್ಷಿಣದವರ ಬಗ್ಗೆ ಭಾರೀ ತಾರತಮ್ಯ; ಒಂದೊಳ್ಳೆ ಡಿಸೈನರ್ ಬಟ್ಟೆ ಸಿಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಸಮಂತಾ

ಸಾರಾಂಶ

ಡಿಸೈನರ್ ಉಡುಪುಗಳನ್ನು ಖರೀದಿಸುವುದಕ್ಕೆ ಅಥವಾ ಡಿಸೈನ್ ಮಾಡಿಸಿಕೊಳ್ಳುವುದಕ್ಕೆ ಸೌತ್ ಸಿನಿಮಾ ಸೆಲೆಬ್ರಿಟಿಗಳು ಈ ಹಿಂದೆ ತುಂಬಾ ಕಷ್ಟ ಪಡಬೇಕಿತ್ತು ಎಂದ ಸಮಂತಾ...

ಸಮಂತಾ ರುತ್ ಪ್ರಭು ಬಗ್ಗೆ ಪರಿಚಯವೇ ಬೇಡ. ಪವರ್ ಪ್ಯಾಕ್ ಡ್ಯಾನ್ಸ್‌ ಮತ್ತು ಆಕ್ಟಿಂಗ್ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ನಟಿ ಎಂದೇ ಖ್ಯಾತಿ ಪಡೆದಿದ್ದಾರೆ. ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಜೊತೆ ಸಮಂತಾ ನಟಿಸಿರುವ ಸಿನಿಮಾ ಶಾಕುಂತಲಂ ಇದೇ ಏಪ್ರಿಲ್ 14ರಂದು ತೆರೆ ಕಾಣುತ್ತಿದೆ ಹೀಗಾಗಿ ಸಿನಿಮಾ ಪ್ರಚಾರದಲ್ಲಿ ಸ್ಯಾಮ್ ಸಖತ್ ಬ್ಯುಸಿಯಾಗಿದ್ದಾರೆ. ಈ ವೇಳೆ ಸೌತ್ ಸಿನಿಮಾ ಸೆಲೆಬ್ರಿಟಿಗಳು ಡಿಸೈನರ್ ಉಡುಪುಗಳನ್ನು ಪಡೆಯಲು ಎಷ್ಟು ಕಷ್ಟ ಪಡಬೇಕಿತ್ತು ಎಂದು ರಿವೀಲ್ ಮಾಡಿದ್ದಾರೆ. 

ಸ್ಯಾಮ್ ತುಂಬಾನೇ ಸ್ವೀಟ್ ಆಂಡ್ ಹಂಬಲ್ ನಟಿ. ಗಾಡ್‌ಫಾದರ್ ಇಲ್ಲದೆ ಸಿನಿಮಾ ರಂಗಕ್ಕೆ ಕಾಲಿಟ್ಟ ನಟಿ ತಮ್ಮದೇ ಶೈಲಿಯಲ್ಲಿ ಹೆಸರು ಮಾಡಿದ್ದಾರೆ. ಮನಸ್ಸಿಗೆ ಬಂದ ಮಾತುಗಳನ್ನು ನೇರವಾಗಿ ಯಾರಿಗೂ ನೋವಾಗದಂತೆ ಹೇಳುವುದು ಸಮಂತಾ ಟ್ಯಾಲೆಂಟ್ ಎನ್ನಬಹುದು. ಹೀಗಾಗಿ ಸಮಂತಾ ಸೌತ್ ಸಿನಿಮಾರಂಗ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ರಿವೀಲ್ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತ ಸಿನಿಮಾ ತಾರೆಯರನ್ನು ತುಂಬಾ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು ಎನ್ನುವ ಮಾತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಡುಮ್ಮಿ ಎಂದವರಿಗೆ ತಿರುಗೇಟು ಕೊಡಲು ಸಮಂತಾ ಧೈರ್ಯ ಕೊಟ್ಟಳು: ತಮನ್ನಾ ಭಾಟಿಯಾ

'ಸಮಯ ಎಲ್ಲವನ್ನು ಬದಲಾಯಿಸುತ್ತದೆ. ಒಂದು ಸಮಯದಲ್ಲಿ ಸೌತ್ ತಾರೆಯರು ಡಿಸೈನರ್ ಉಡುಪುಗಳನ್ನು ಪಡೆಯಲು ಕಷ್ಟ ಪಡುತ್ತಿದ್ದರು. ಆಗ ನೀವು ಯಾರು? ಸೌತ್ ಕಲಾವಿದರೇ? ಯಾವ ಸೌತ್ ಎಂದು ಹಾಸ್ಯ ಮಾಡುತ್ತಿದ್ದರು.ಈಗ ನಮ್ಮ ಸೌತ್ ತುಂಬಾ ಹೆಸರು ಮಾಡಿದ ಅಲ್ವಾ? ನಾವು ಯಾರು ನಮ್ಮ ಸಾಮರ್ಥ್ಯ ಏನು ಎಂದು ತೋರಿಸಿದ್ದೀವಿ' ಎಂದು ಗುಲ್ಟೆ ಸಂದರ್ಶನದಲ್ಲಿ ಸಮಂತಾ ಮಾತನಾಡಿದ್ದಾರೆ. 

ಪುಷ್ಪ ಚಿತ್ರದ ಊ ಅಂಟಾವ ಹಾಡಿಗೆ ಹೆಜ್ಜೆ ಹಾಕಿದ ಮೇಲೆ ಸಮಂತಾ ಫ್ಯಾನ್ ಇಂಡಿಯಾ ನಟಿಯಾಗಿ ಬಿಟ್ಟರು. ಇದಕ್ಕೂ ಮೊದಲು ಹಲವು ವರ್ಷಗಳ ಕಾಲ ಪ್ರೀತಿ ಮದುವೆ ಮಾಡಿಕೊಂಡಿದ್ದ ನಾಗ ಚೈತನ್ಯರ ಜೊತೆ ವಿಚ್ಛೇದನ ಪಡೆದುಕೊಂಡರು. ಸಿಂಗಲ್ ಆಗಿ ಲೈಫ್‌ನ ಎಂಜಾಯ್ ಮಾಡುತ್ತಿರುವ ಸ್ಯಾಮ್‌ಗೆ ಆರೋಗ್ಯ ಸಮಸ್ಯೆ ಕೂಡ ಕಾಡಿತ್ತು. 

ಸ್ಟಾರ್‌ ನಟಿಯರ ನಡುವೆ ತಂದಿಡುವ ಕೆಲ್ಸ ಮಾಡ್ಬೇಡಿ; ರಶ್ಮಿಕಾ ಮಂದಣ್ಣ ಬಗ್ಗೆ ಸಮಂತಾ ಹೇಳಿಕೆ

'ನನ್ನ ಮದುವೆ ಡಿವೋರ್ಸ್‌ ವಿಚಾರ ಹೊರ ಬಂದಾಗ ನನಗೆ ಊ ಅಂಟಾವ ಐಟಂ ಹಾಡಿನ ಆಫರ್ ಬಂತು. ಆಗ ನನ್ನ ಕುಟುಂಬಸ್ಥರು, ಸ್ನೇಹಿತರು ಅಭಿಮಾನಿಗಳು ಅಷ್ಟೇ ಯಾಕೆ ಟ್ರೋಲ್ ಮಾಡುವವರು ಈ ಆಫರ್‌ನ ಒಪ್ಪಿಕೊಳ್ಳಬೇಡಿ ಮನೆಯಲ್ಲಿ ಇರಬೇಕು ಎಂದ ಸಲಹೆ ಕೊಡುತ್ತಿದ್ದರು. ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದ ಫ್ರೆಂಡ್ಸ್‌ ಗ್ಯಾಂಗ್‌ ಕೂಡ ಸಪರೇಷನ್‌ ನಂತರ ಐಟಂ ಸಾಂಗ್ ಮಾಡಬೇಡ ಎನ್ನುತ್ತಿದ್ದರು. ಎಲ್ಲರೂ ಬೇಡ ಬೇಡ ಎನ್ನುತ್ತಿದ್ದ ಕಾರಣ ಸರಿ ನಾನು ಡ್ಯಾನ್ಸ್‌ ಮಾಡುತ್ತೀನಿ ಎಂದು ಆಫರ್ ಒಪ್ಪಿಕೊಂಡೆ. ನನ್ನ ತಲೆಯಲ್ಲಿ ಓಡುತ್ತಿದ್ದ ವಿಚಾರ ಒಂದೇ ಯಾಕೆ ನಾನು ಬಚ್ಚಿಟ್ಟುಕೊಳ್ಳಬೇಕು? ನಾನು ಯಾವ ತಪ್ಪೂ ಮಾಡಿಲ್ಲ. ಬಚ್ಚಿಟ್ಟುಕೊಂಡು ಟ್ರೋಲ್ ಮತ್ತು ಜನರು ಮಾತನಾಡುವುದು ಕಡಿಮೆ ಮಾಡಲಿ ಆನಂತರ ನಾನು ಹೊರ ಬಂದು ಮುಖ ತೋರಿಸುವೆ ಎನ್ನುವ ಮೈಂಡ್‌ ಸೆಟ್‌ನಲ್ಲಿ ನಾನು ಇರಲಿಲ್ಲ' ಎಂದು ಮಿಸ್ ಮಾಲಿನಿ ಯುಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?