Deepika Padukone: 'ಪಠಾಣ್'​ ನಾಯಕಿ ಗರ್ಭಿಣಿ? ಏನಿದು ಬಿಸಿಬಿಸಿ ಸುದ್ದಿ?

Published : Apr 12, 2023, 06:24 PM ISTUpdated : Apr 12, 2023, 06:47 PM IST
Deepika Padukone: 'ಪಠಾಣ್'​ ನಾಯಕಿ ಗರ್ಭಿಣಿ? ಏನಿದು ಬಿಸಿಬಿಸಿ ಸುದ್ದಿ?

ಸಾರಾಂಶ

ಬಾಲಿವುಡ್​ನ ಅತ್ಯಂತ ಹ್ಯಾಪಿ ಕಪಲ್ ಅನಿಸಿಕೊಂಡಿರುವ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪಾಲಕರಾಗುತ್ತಿದ್ದಾರೆಯೆ? ದೀಪಿಕಾ ಪಡುಕೋಣೆ ಗರ್ಭಿಣಿ ಎನ್ನುವ ಸುದ್ದಿ ಹರಿದಾಡುತ್ತಿದೆ.  

ಬಾಲಿವುಡ್ (Bollywood)ನ ಅತ್ಯಂತ ಹ್ಯಾಪಿ ಕಪಲ್ ಅನಿಸಿಕೊಂಡಿರುವ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ ಮಗು ಮಾಡಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರಂತೆ ಅನ್ನೋ ಸುದ್ದಿ ವರ್ಷದಂದಲೂ ಭಾರಿ ಸದ್ದು ಮಾಡುತ್ತಲೇ ಇದೆ. ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲೂ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್​ ಸಖತ್ ರೊಮ್ಯಾಂಟಿಕ್ ಕಪಲ್​.  2018 ನವೆಂಬರ್ 14ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು ಈ ಜೋಡಿ. ಆದರೆ ಮಗುವೆಂದರೆ ತಮಗೆ ಇಷ್ಟ. ಅದಕ್ಕಾಗಿ ನಾವು ಪ್ಲ್ಯಾನ್​ ಮಾಡುತ್ತಿರುವುದಾಗಿ ಕಳೆದ ವರ್ಷ  ರಣವೀರ್ ಸಿಂಗ್ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆಗ  ಮದುವೆಯಾಗಿ ಮೂರು ವರ್ಷವಾಗಿದ್ದರಿಂದ  ಇಂಥದ್ದೊಂದು  ನಿರ್ಧಾರಕ್ಕೆ ಬಂದಿರುವುದಾಗಿ ಅವರು ಹೇಳಿಕೊಂಡಿದ್ದರು. ಮದುವೆಯಾದ ಮೇಲೆ  ತಮ್ಮ ಕರಿಯರ್​ನತ್ತ  ಗಮನ ಕೊಟ್ಟಿದ್ದೆವು. 

ಕುಟುಂಬವನ್ನು ವಿಸ್ತಾರ ಮಾಡಿಕೊಳ್ಳುವ ಕುರಿತು ಆಲೋಚನೆ ಮಾಡಿದ್ದೇವೆ.  ಮದುವೆಯಾಗಿ ಸರಿಯಾದ ವೇಳೆಯಲ್ಲೇ ಮಗು ಮಾಡಿಕೊಳ್ಳಲು ನಾವು ಮಾತುಕತೆ ಮಾಡಿದ್ದೇವೆ ಎಂದು ರಣವೀರ್ ಹೇಳಿದ್ದರು.  ತಮಗೆ  ದೀಪಿಕಾ ಪಡುಕೋಣೆ ಅವರಂತಹ ಮುದ್ದಾದ ಹೆಣ್ಣು ಮಗು ಬೇಕು ಎಂದಿದ್ದರು.  ಅವರು ಈಗಾಗಲೇ ಮಗುವಿನ ಹೆಸರಿನ ಹುಡುಕಾಟದಲ್ಲಿರುವುದಾಗಿ ಹೇಳಿದ್ದರು.   'ದೀಪಿಕಾಗೆ ವೃತ್ತಿ ಬದ್ಧತೆ ಜೊತೆಗೆ, ಸಂಸಾರವನ್ನು ನಿಭಾಯಿಸಿಕೊಂಡು ಹೋಗುವ ಜಾಣ್ಮೆ ಇದೆ. ಆಕೆ  ಎಲ್ಲ ರೀತಿಯಲ್ಲೂ ಪ್ರತಿಭಾವಂತೆ.

ಮದ್ವೆಯಾಗಿದ್ದು ಕಸಿನ್‌ನನ್ನು ಎಂದಿದ್ದ ಪ್ರಕಾಶ್ ಪಡುಕೋಣೆ, ಹಳೇ ವೀಡಿಯೋ ಈಗ ಟ್ರಾಲ್

ಪ್ರತಿ ಬಾರಿಯೂ ಹೊಸದನ್ನು ಕಲಿಯುವುದಕ್ಕೆ ಅವರು ಪ್ರೇರಕ' ಎಂದು ಪತ್ನಿಯ ಬಗ್ಗೆ ಹೊಗಳಿದ್ದರು ರಣವೀರ್ (Ranabir Singh). ಆದರೆ ಈ ಹೇಳಿಕೆ ನೀಡಿ ವರ್ಷವಾಗುತ್ತ ಬಂದರೂ ದಂಪತಿಗೆ ಇದುವರೆಗೆ ಮಕ್ಕಳಾಗಲಿಲ್ಲ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಮದುವೆ, ಮದುವೆಯಾದ ಮೇಲೆ ಮಕ್ಕಳು ಇವುಗಳತ್ತ ಅವರಿಗಿಂತ ಹೆಚ್ಚಾಗಿ ಅವರ ಫ್ಯಾನ್ಸ್​ ಚಿಂತೆಯಾಗಿರುತ್ತದೆ. ಅದೇ ರೀತಿ ಈ ಜೋಡಿ ಪಾಲಕರಾಗುವುದು ಯಾವಾಗ ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಅಂಥವರಿಗೆ ದೀಪಿಕಾ ಈಗ ಗುಡ್​ ನ್ಯೂಸ್​ ಕೊಟ್ಟಿದ್ದಾರೆಯೇ ಎನ್ನುವ ಪ್ರಶ್ನೆ ಕಾಡಿದೆ.  

ಇದಕ್ಕೆ ಕಾರಣ,  ದೀಪಿಕಾ ಪಡುಕೋಣೆ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ದೀಪಿಕಾ ಡ್ರೆಸ್ಸಿಂಗ್ ಸೆನ್ಸ್ ಚರ್ಚೆಗೆ ಗ್ರಾಸವಾಗಿದೆ. ವಾಸ್ತವವಾಗಿ, ಅವರು ವಿಮಾನ ನಿಲ್ದಾಣದಲ್ಲಿ ಥರ್ಮಲ್ ಮತ್ತು ಕೆಂಪು ಗಾತ್ರದ ಜಾಕೆಟ್‌ನಲ್ಲಿ (Jacket) ಕಾಣಿಸಿಕೊಂಡಿದ್ದರು.  ದೀಪಿಕಾ ಅವರ ಈ ಲುಕ್ ನೋಡಿದ ಜನರು ಆಕೆ ಗರ್ಭಿಣಿಯಾಗಿದ್ದಾರೆ ಮತ್ತು ಈ ಬಟ್ಟೆಯಲ್ಲಿ ತನ್ನ ಬೇಬಿ ಬಂಪ್ ಅನ್ನು ಮರೆಮಾಡಿದ್ದಾರೆ ಎಂದು ಊಹಿಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಈ ಪರಿ ಬೆವರುವ ಬಟ್ಟೆ ಏಕೆ ಹಾಕಿಕೊಂಡಿದ್ದಾರೆ ಎನ್ನುವುದು ಎಲ್ಲರ ಪ್ರಶ್ನೆಯಾಗಿದೆ. ಈಕೆಯ ಹೊಟ್ಟೆ ನೋಡಿದರೆ ಗರ್ಭಿಣಿಯಾಗಿರುವಂತೆ (Pregnant) ಕಾಣಿಸುತ್ತಿದೆ ಎಂದು ಕೆಲವರು ಕಮೆಂಟ್​ ಮಾಡಿದ್ದರೆ, ಇನ್ನು ಕೆಲವರು 'ನಟಿ ತನ್ನನ್ನು ನಾನು ಹಾಲಿವುಡ್ ಸ್ಟಾರ್​  ಎಂದು ಪರಿಗಣಿಸಿದ್ದಾರೆ, ಅದಕ್ಕೇ ಈ ವೇಷ ' ಎಂದಿದ್ದಾರೆ. ಮತ್ತೊಬ್ಬರು, 'ಇಡೀ ಪ್ರಪಂಚದ ಚಳಿಯನ್ನು ಈಕೆ ಅನುಭವಿಸುವಂತೆ ತೋರುತ್ತಿದೆ' ಎಂದು ಬರೆದಿದ್ದಾರೆ.

Siddharth Anand: ಬೇಷರಂ ರಂಗ್​ಗೆ ಕೇಸರಿ ಬಿಕಿನಿ ಆಯ್ಕೆ ಮಾಡಿದ್ದೇಕೆ? ಕೊನೆಗೂ ಮೌನ ಮುರಿದ ನಿರ್ದೇಶಕ

ಸದ್ಯ ದೀಪಿಕಾ ಅವರ ಕೆಲಸದ ವಿಚಾರಕ್ಕೆ ಬರುವುದಾದರೆ ಅವರು ಬ್ಲಾಕ್​ಬ್ಲಸ್ಟರ್​ ಚಲನಚಿತ್ರ 'ಪಠಾಣ್' ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅವರ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡುವುದಾದರೆ,  ಅವರು ಶೀಘ್ರದಲ್ಲೇ ಹೃತಿಕ್ ರೋಷನ್ ಜೊತೆಗೆ 'ಫೈಟರ್' (Fighter) ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಅವರು 'ದಿ ಇಂಟರ್ನ್' ಮತ್ತು 'ಪ್ರಾಜೆಕ್ಟ್ ಕೆ' ನ ಭಾಗವಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?