
ರಾಶಾ ತಡಾನಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಮಿಂಚಿಂಗ್ ಫಿಗರ್. ಇಂಥ ರಾಶಾ ತಡಾನಿ ತಮ್ಮ ಸಾಕುನಾಯಿ ಜತೆ ರೊಮ್ಯಾನ್ಸ್ ಮಾಡುತ್ತಿರುವ ಫೋಟೋ ಒಂದು ಇತ್ತೀಚೆಗೆ ಸಖತ್ ವೈರಲ್ ಆಗುತ್ತಿದೆ. ಕಾರಣ, ನಾಯಿ ರಾಶಾಗೆ ಮುತ್ತಿಡುತ್ತಿದೆಯೋ ಅಥವಾ ನಾಯಿಯೇ ಆಕೆಗೆ ಕಿಸ್ ಕೊಡುತ್ತಿದೆಯೋ ಎಂಬುದು ತಿಳಿಯುತ್ತಿಲ್ಲ. ಜತೆಗೆ, ರಾಶಾ ತಮ್ಮ ಫೋಟೋಗೆ ಹಾಕಿರುವ ಕ್ಯಾಪ್ಶನ್ ನೋಡಿದರೆ, ಯಾರಿಗೂ ಈ ಸಂಗತಿ ಅರ್ಥವಾಗುತ್ತಿಲ್ಲ.
ನಾಯಿಗೆ ಮತ್ತಿಡುತ್ತಿರುವ ಅಥವಾ ನಾಯಿಯೇ ಮುತ್ತಿಡುತ್ತಿರುವ ಫೋಟೋಗೆ ನಟಿ ರಾಶಾ "ಒಂದೋ ನಾನು ಪೋಸ್ ಕೊಡುತ್ತೇನೆ ಅಥವಾ ಅದೇ ಪೋಸ್ ಕೊಡುತ್ತದೆ. ಇದೆರಡ ಮಧ್ಯೆ ಯಾವುದೇ ಸಾಧ್ಯತೆ ಇಲ್ಲ" ಎಂದು ಹೇಳುವ ಮೂಲಕ ತಾವಿಬ್ಬರೂ (ನಾಯಿ-ರಾಶಾ ತಡಾನಿ) ತುಂಬಾ ಕ್ಲೋಸ್, ಪರಸ್ಪರ ತುಂಬಾ ಪ್ರೀತಿ ಇದೆ ಎಂಬ ಮಾಹಿತಿ ನೀಡಿದ್ದಾರೆ. ಅಂದರೆ, ನಾಯಿ ಜತೆ ನಟಿ ರಾಶಾಗೆ 'ಹೆವ್ವಿ' ಎನ್ನುವಷ್ಟು ಪ್ರೀತಿ ಇದೆ. ಇವಿಷ್ಟು ನಾಯಿ ಪುರಾಣ!
ನಾನು ಹಾಗಂದಿಲ್ಲ ಬ್ರೋ ಎಂದ 'ಡ್ರೋನ್ ಪ್ರತಾಪ್'ಗೆ ಹಿಗ್ಗಾಮುಗ್ಗಾ ಬೈದ ವಿನಯ್ ಗೌಡ!
ಅಂದಹಾಗೆ, ನಟಿ ರಾಶಾ ರಾಮ್ ಚರಣ್ ಜತೆ ಮುಂಬರುವ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಟಿ ರವೀನಾ ಟಂಡನ್ ಮತ್ತು ಅನಿಲ್ ತಡಾನಿ ಮಗಳು ರಾಶಾ ತಡಾನಿ, ಬಾಲಿವುಡ್ ಚಿತ್ರರಂಗದ ಮೂಲಕ ಸಿನಿಮಾರಂಗ ಪ್ರವೇಶ ಮಾಡಬಹುದು ಎಂದುಕೊಳ್ಳಲಾಗಿತ್ತು. ಆದರೆ, ಇದೀಗ ರಾಶಾ ಸೌತ್ ಇಂಡಿಯನ್ ಬೇಸ್ಡ್ ಚಿತ್ರದ ಮೂಲಕ ಸಿನಿಮಾತಾರೆ ಆಗಲಿದ್ದಾರೆ.
'ನಾನು ಊಟ ಬೇಡ ಅಂತೀನಿ.. ಮುದ್ದು ಮಾಡಿಯೇ ತಿನ್ನಿಸ್ಬೇಕು..' ಸಂಗೀತಾಗೆ ಲಾರ್ಡ್ ಪ್ರಥಮ್ ಆರ್ಡರ್!
ಹೌದು, ಭಾರತದಲ್ಲಿ ಇಂದು ಸೌತ್ ಇಂಡಿಯನ್ ಚಿತ್ರರಂಗ ಬಾಲಿವುಡ್ ಚಿತ್ರರಂಗವನ್ನು ಮೂಲೆ ಗುಂಪು ಮಾಡಿದೆ ಎನ್ನಬಹುದು. ಹಾಗೆ ಅನ್ನುವುದು ಬೇಡ ಎಂದರೆ, ಸೌತ್ ಇಂಡಸ್ಟ್ರಿ ಬಾಲಿವುಡ್ ಚಿತ್ರರಂಗವನ್ನು ಸೈಡ್‌ಲೈನ್‌ಗೆ ಸರಿಸಿದೆ ಎನ್ನಬಹುದು. ಒಟ್ಟಿನಲ್ಲಿ, ಬಾಲಿವುಡ್ ತಾರೆಯೊಬ್ಬಳ ಮಗಳು ಸೌತ್ ಇಂಡಿಯನ್ ಸಿನಿಮಾ ಮೂಲಕ ಕೆರಿಯರ್ ಶುರು ಮಾಡಲಿದ್ದಾಳೆ ಎಂಬುದೇ ಅಚ್ಚರಿಯ ಸಂಗತಿ ಎಂಬಂತೆ ಆಡತೊಡಗಿದೆ ಸೋಷೊಯಲ್ ಮೀಡಿಯಾದ ಒಂದು ವರ್ಗ. ಮುಂದೇನು ಎಂಬುದಕ್ಕೆ ಕಾಲ ಕೂಡಿಬರಬೇಕಷ್ಟೇ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.