ರಾಕ್ಷಸನ ರೂಪದಲ್ಲಿ ರಣವೀರ್ ಸಿಂಗ್, ಧುರಂಧರ್ 2 ಟೀಸರ್ ರಿಲೀಸ್

Published : Feb 03, 2026, 01:19 PM IST
Dhurandhar 2

ಸಾರಾಂಶ

ಧುರಂಧರ್ 2 ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ರಣವೀರ್ ಲುಕ್ ರಿವೀಲ್ ಮಾಡಿದ ತಂಡ ನಂತ್ರ ಟೀಸರ್ ರಿಲೀಸ್ ಮಾಡಿದೆ. ಧುರಂಧರ್ ನೋಡಿ ಉಸ್ಸಪ್ಪ ಅಂತಿದ್ದೋರು ಧುರಂಧರ್ 2 ಟೀಸರ್ ನೋಡಿಯೇ ಬೆಚ್ಚಿ ಬೀಳ್ತಿದ್ದಾರೆ. 

ಥಿಯೇಟರ್ ನಲ್ಲಿ ಅಬ್ಬರಿಸಿ ದಾಖಲೆ ಮೇಲೆ ದಾಖಲೆ ಬರೆದಿದ್ದ ಧುರಂಧರ್ ಸಿನಿಮಾ (Dhurandhar movie) ಈಗ ಒಟಿಟಿಯಲ್ಲಿ ಆರ್ಭಟಿಸ್ತಿದೆ. ಇದೇ ಮಾರ್ಚ್ 19 ರಂದು ಧುರಂಧರ್ 2 ತೆರೆಗೆ ಬರಲಿದ್ದು, ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಚಿತ್ರ ತಂಡ ಇಂದು ಪೋಸ್ಟರ್ ಜೊತೆ ಟೀಸರ್ ಬಿಡುಗಡೆ ಮಾಡಿ ಅಭಿಮಾನಿಗಳು ಕುತೂಹಲವನ್ನು ಡಬಲ್ ಮಾಡಿದೆ.

ಧುರಂಧರ್ 2 (Dhurandhar 2) ಪೋಸ್ಟರ್ ರಿಲೀಸ್

ಧುರಂಧರ್ ಸಿನಿಮಾ ಬಿಡುಗಡೆ ಟೈಂನಲ್ಲೇ ಚಿತ್ರ ತಂಡ ಪಾರ್ಟ್ 2 ಬಗ್ಗೆ ಮಾಹಿತಿ ನೀಡಿತ್ತು. ನಿನ್ನೆ ರಣವೀರ್ ಸಿಂಗ್ ಕ್ಲ್ಯೂ ನೀಡಿದ್ದರು. ಇಂದು ಚಿತ್ರ ತಂಡ ಮೊದಲು ಧುರಂಧರ್ 2 ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದೆ. ಸಿನಿಮಾದಲ್ಲಿ ರಣವೀರ್ ಸಿಂಗ್ ಲುಕ್ ಹೇಗಿರುತ್ತೆ ಅನ್ನೋದನ್ನು ರಿವೀಲ್ ಮಾಡಿದೆ. ಅದ್ರ ಜೊತೆ ಟೀಸರ್ ಟೈಂ ಕೂಡ ಅನೌನ್ಸ್ ಮಾಡಿತ್ತು. ಪೋಸ್ಟರ್ನಲ್ಲಿ ರಣವೀರ್ ಸಾಕಷ್ಟು ಮಾರಕವಾಗಿ ಕಾಣ್ತಿದ್ದಾರೆ. ಈ ಕೆಂಪು ಮತ್ತು ಕಪ್ಪು ಥೀಮ್ನ ಪೋಸ್ಟರ್ ಚಿತ್ರದ ತೀವ್ರತೆ ತೋರಿಸ್ತಿದೆ. ರಣವೀರ್ ಫೋಟೋ ಹಿಂದೆ ದಿ ರಿವೆಂಜ್ ಎಂದು ಬರೆಯಲಾಗಿದೆ.

ರಿಲೀಸ್‌ ಗೂ ಮೊದ್ಲೇ ರಕ್ಕಸಪುರದೋಳ್ ಸಿನಿಮಾ ನೋಡುವ ಅವಕಾಶ, ಎಲ್ಲಿ ನಡೆಯಲಿದೆ ಪ್ರೀಮಿಯರ್

ಧುರಂಧರ್ 2 ಟೀಸರ್ ರಿಲೀಸ್

ಇನ್ನು ಟೀಸರ್ ನಲ್ಲಿ ರಣವೀರ್ ವೀರಾವೇಷವನ್ನು ಫ್ಯಾನ್ಸ್ ನೋಡ್ಬುದು. 1 ನಿಮಿಷ, 12 ಸೆಕೆಂಡುಗಳ ಟೀಸರ್ ಆರಂಭದಲ್ಲಿ ಹೇರ್ ಕಟ್ ಮಾಡಿರುವ, ಗಡ್ಡ ಶೇವ್ ಮಾಡಿರುವ, ಕೈಯಲ್ಲಿ ಬಂದೂಕು ಹಿಡಿದಿರುವ ಭಯಾನಕವಾಗಿ ಕಾಣ್ತಿರುವ ರಣವೀರ್ ಲುಕ್ ನೋಡ್ಬಹುದು. ನಂತರ ರಣವೀರ್ ಉದ್ದ ಕೂದಲಿನೊಂದಿಗೆ ಹಮ್ಜಾ ಅಲಿ ಮಜಾರಿ ಪಾತ್ರಕ್ಕೆ ಮರಳುತ್ತಾರೆ. ಟೀಸರ್ ರಣವೀರ್ ಸಿಂಗ್ ಹಮ್ಜಾ ಆಗಿ ಬದಲಾಗೋದನ್ನು ಸ್ಪಷ್ಟವಾಗಿ ತೋರಿಸಿದೆ. ಇದು ವೀಕ್ಷಕರಿಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅತ್ಯಂತ ಅಪಾಯಕಾರಿ ಗ್ಯಾಂಗ್ ಸೇರುವ ಸಿಂಗ್, ತನ್ನ ದೇಶವನ್ನು ರಕ್ಷಿಸಲು, ಸೇಡು ತೀರಿಸಿಕೊಳ್ಳಲು ಎಲ್ಲವನ್ನೂ ಪಣಕ್ಕಿಡಲಿದ್ದಾನೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ಧುರಂಧರ್: ದಿ ರಿವೆಂಜ್ ಅಂತ ಹೆಸರಿಡಲಾಗಿದೆ. ಧುರಂಧರ್ 2, ಧುರಂಧರ್ ಗಿಂತ ಮತ್ತಷ್ಟು ಹಿಂಸಾತ್ಮಕವಾಗಿದೆ. ಹಮ್ಜಾ ಕ್ರೌರ್ಯವನ್ನು ತೋರಿಸುತ್ತದೆ.

ಈ ಬಾರಿ ಸಿನಿಮಾ ಕಥೆ ಎರಡು ಭಾಗಗಳಲ್ಲಿ ಸಾಗಲಿದೆ. ಗುಪ್ತಚರ ಏಜೆಂಟ್ ಆಗುವುದರಿಂದ ಹಿಡಿದು ಪಾಕಿಸ್ತಾನ ತಲುಪುವವರೆಗಿನ ರಣವೀರ್ ಸಿಂಗ್ ಅವರ ಪ್ರಯಾಣವನ್ನು ಚಿತ್ರಿಸಲಾಗಿದೆ. ಟೀಸರ್ನಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್ ಮತ್ತು ಆರ್. ಮಾಧವನ್ ಅವರ ಝಲಕ್ಗಳು ಸಹ ಇವೆ.

ಕೋಪದಿಂದ ಕೈತಪ್ಪಿದ ಬ್ಲಾಕ್‌ಬಸ್ಟರ್ ಸಿನಿಮಾ; ಈ ಸ್ಟಾರ್ ನಟನಿಗೆ ಒಂದೇ ಮಾತಲ್ಲಿ ನಾಳೆಯಿಂದ ಶೂಟಿಂಗ್‌ಗೆ ಬರಬೇಡಿ ಎಂದಿದ್ದ ಡೈರೆಕ್ಟರ್!

ಧುರಂಧರ್: ದಿ ರಿವೆಂಜ್ ಒಂದು ಹೈ-ಆಕ್ಷನ್ ಸ್ಪೈ-ಆಕ್ಷನ್ ಥ್ರಿಲ್ಲರ್ ಆಗಿದ್ದು, ಆದಿತ್ಯ ಧರ್ ಬರೆದು, ನಿರ್ದೇಶಿಸಿ, ನಿರ್ಮಿಸಿದ್ದಾರೆ. ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧರ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ನಿರ್ಮಾಣ ಬ್ಯಾನರ್ಗಳ ಅಡಿಯಲ್ಲಿ ಮಾರ್ಚ್ 19, 2026 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಕಳೆದ ವರ್ಷ ಬಿಡುಗಡೆಯಾದ 'ಧುರಂಧರ್' ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಗಳಿಕೆ ಕಂಡಿದೆ. ಈ ಚಿತ್ರವು ಭಾರತದಲ್ಲಿ 800 ಕೋಟಿ ಮತ್ತು ವಿಶ್ವಾದ್ಯಂತ 1.3 ಬಿಲಿಯನ್ ಗಳಿಸಿತ್ತು. ಚಿತ್ರದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್, ಸಾರಾ ಅಲಿ ಖಾನ್ ಮತ್ತು ಆರ್. ಮಾಧವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

SP Venkatesh: ಪಂಚಮವೇದ, ಸುಂದರಕಾಂಡ, ಅಶ್ವಮೇಧ ಸಿನಿಮಾಗಳ ಸಂಗೀತ ಮಾಂತ್ರಿಕ ಇನ್ನಿಲ್ಲ!
ಮಲಯಾಳಂನ ಸಿನಿಮಾ ನಿರ್ದೇಶಿಸುತ್ತಾರಾ ರಿಷಬ್‌? ಬಿಗ್‌ ಬಜೆಟ್‌ ಪ್ರಾಜೆಕ್ಟ್‌ಗೆ ಮರುಜೀವ