88ನೇ ವಯಸ್ಸಿನಲ್ಲಿ ಬಾಲಿವುಡ್​ ನಟ ಧರ್ಮೇಂದ್ರ ಹೆಸ್ರು ಬದಲಾಯಿಸಿಕೊಂಡ್ರಾ? ಏನಿದು ಹೊಸ ವಿಷ್ಯ?

Published : Feb 10, 2024, 05:59 PM IST
88ನೇ ವಯಸ್ಸಿನಲ್ಲಿ ಬಾಲಿವುಡ್​ ನಟ ಧರ್ಮೇಂದ್ರ ಹೆಸ್ರು ಬದಲಾಯಿಸಿಕೊಂಡ್ರಾ? ಏನಿದು ಹೊಸ ವಿಷ್ಯ?

ಸಾರಾಂಶ

ಚಿತ್ರರಂಗಕ್ಕೆ ಕಾಲಿಟ್ಟು 64 ವರ್ಷಗಳ ಬಳಿಕ ಈಗ ನಟ ಧರ್ಮೇಂದ್ರ ಹೆಸ್ರು ಬದಲಾಯಿಸಿಕೊಂಡರೆ? ಏನಿದು ವಿಷಯ?   

ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವುದು ಎಂದರೆ ಸುಲಭದ ಮಾತಲ್ಲ. ಅಂಥ ಒಂದು ಅಪರೂಪದ ಕಲಾವಿದ ಧರ್ಮೇಂದ್ರ.  ಬಾಲಿವುಡ್​ನ ಈ ಸೂಪರ್​ಸ್ಟಾರ್​ ಕಳೆದ ಡಿಸೆಂಬರ್​ 8ರಂದು ತಮ್ಮ 88ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.   64 ವರ್ಷಗಳ ಹಿಂದೆ ತಮ್ಮ ವೃತ್ತಿಜೀವನ ಪ್ರಾರಂಭಿಸಿರುವ ಧರ್ಮೇಂದ್ರ ಅವರು  ಕಳೆದ 6 ದಶಕಗಳಿಂದ ಅಭಿಮಾನಿಗಳನ್ನು ರಂಜಿಸುತ್ತಾ ಬಂದಿದ್ದು, ಇಂದಿಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಎಂದರೆ ಅವರ ತಾಕತ್ತು ಎಷ್ಟು ಎನ್ನುವುದು ತಿಳಿಯುತ್ತದೆ. 1960ರಲ್ಲಿ ‘ದಿಲ್ ಭಿ ತೇರಾ ಔರ್ ಹಮ್ ಭಿ ತೇರೆ’ ಚಿತ್ರದ ಮೂಲಕ ಧರ್ಮೇಂದ್ರ ನಟನಾ ಜಗತ್ತಿಗೆ ಕಾಲಿಟ್ಟರು. ಒಮ್ಮೆ 'ಡ್ಯಾನ್ಸ್ ದೀವಾನೆ 3' ಕಾರ್ಯಕ್ರಮದಲ್ಲಿ, ಚಿತ್ರಕ್ಕೆ ಸಹಿ ಹಾಕಲು ಕೇವಲ 51 ರೂಪಾಯಿಗಳನ್ನು ಪಡೆದಿರುವುದಾಗಿ ನಟ ಹೇಳಿದ್ದರು. ಅಂದರೆ ಇವರು ತಮ್ಮ ಸಿನಿಮಾ ಪಯಣ ಶುರು ಮಾಡಿದ್ದು 51 ರೂಪಾಯಿಗಳಿಂದ. 'ದಿಲ್ ಭಿ ತೇರಾ ಔರ್ ಹಮ್ ಭಿ ತೇರೆ' ಚಿತ್ರವನ್ನು ಮೂವರು ನಿರ್ಮಾಪಕರು ಸೇರಿ ನಿರ್ಮಿಸಿದ್ದರು. ಈ ಹಿನ್ನೆಲೆಯಲ್ಲಿ, ಮೂವರೂ ತಲಾ 17 ರೂಪಾಯಿಗಳಂತೆ ಧರ್ಮೇಂದ್ರ ಅವರಿಗೆ ನೀಡಿದ್ದರು. ಮೂವರೂ ಸೇರಿ 17 17 ರೂಪಾಯಿ ಅಂದರೆ ಒಟ್ಟು 51 ರೂಪಾಯಿ ಧರ್ಮೇಂದ್ರ ಅವರಿಗೆ ಸಿಕ್ಕಿತ್ತು. ಅಲ್ಲಿಂದಲೇ ಅವರ ಸಿನಿ ಪಯಣ ಶುರುವಾದದ್ದು.

ಇದೀಗ 88ರ ಹರೆಯದಲ್ಲಿಯೂ ಬಣ್ಣ ಹಚ್ಚುತ್ತಿದ್ದಾರೆ ನಟ. ಕಳೆದ ವರ್ಷ ರಿಲೀಸ್ ಆದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ನಟಿಸಿದ್ದರು. ನಟಿ ಶಬನಾ ಅಜ್ಮಿ ಜೊತೆ ಲಿಪ್​ಲಾಕ್​ ಮಾಡಿ ಹಲ್​ಚಲ್​ ಸೃಷ್ಟಿಸಿದ್ದರು. ಇದೀಗ ಕೃತಿ ಸನೋನ್ ಹಾಗೂ ಶಾಹಿದ್ ಕಪೂರ್ ನಟನೆಯ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಹೀರೋ ಶಾಹಿದ್ ಅವರ ತಾತನ ಪಾತ್ರದಲ್ಲಿ ಧರ್ಮೇಂದ್ರ ನಟಿಸಿದ್ದಾರೆ. ಇದೀಗ ಇವರ ಕುರಿತು ಇಂಟರೆಸ್ಟಿಂಗ್​ ವಿಷ್ಯವೊಂದು ಎಲ್ಲರ ತಲೆ ಕೆಡುತ್ತಿದೆ. ಅದೇನೆಂದರೆ,  ಧರ್ಮೇಂದ್ರ ಅವರು, ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ  64 ವರ್ಷಗಳ ಬಳಿಕ ಅವರು ಹೆಸರು ಬದಲಿಸಿಕೊಂಡರೇ ಎನ್ನುವುದು! ಹೌದುಉ. ನಿನ್ನೆ ಅಂದರೆ ಫೆಬ್ರವರಿ 9ರಂದು ರಿಲೀಸ್ ಆದ ‘ತೇರಿ ಬಾತೋ ಮೆ ಐಸಾ ಉಲ್ಜಾ ಜಿಯಾ’ ಸಿನಿಮಾದಲ್ಲಿ ಧರ್ಮೇಂದ್ರ ಅವರ ಹೆಸರನ್ನು ನೋಡಿದಾಗ ಫ್ಯಾನ್ಸ್​ ಕಣ್​ಕಣ್​ ಬಿಟ್ಟಿದ್ದಾರೆ. ಏಕೆಂದರೆ ಇಲ್ಲಿ ಧರ್ಮೇಂದ್ರ ಅವರು ಬರಿ ಧರ್ಮೇಂದ್ರ ಆಗಿರದೇ ಅವರ ಹೆಸರಿನ ಮುಂದೆ ಬೇರೆ ಹೆಸರು ಸೇರಿಕೊಂಡಿದೆ!

ಧರ್ಮೇಂದ್ರ @88: 51 ರೂ.ಗಳಿಂದ 450 ಕೋಟಿಯ ಒಡೆಯನಾದ ಬಾಲಿವುಡ್​ ನಟನ ಇಂಟರೆಸ್ಟಿಂಗ್ ಸ್ಟೋರಿ!
 
ಇಷ್ಟು ವರ್ಷ ಧರ್ಮೇಂದ್ರ ಅವರ ಯಾವುದೇ ಚಿತ್ರಗಳಲ್ಲಿಯೂ ಹೆಸರನ್ನು ಧರ್ಮೇಂದ್ರ ಎಂದಷ್ಟೇ ತೋರಿಸಲಾಗುತ್ತಿತ್ತು. ಆದರೆ ಈ ಚಿತ್ರದಲ್ಲಿ  ಧರ್ಮೇಂದ್ರ ಸಿಂಗ್ ಡಿಯೋಲ್ ಎಂದು   ತೋರಿಸಲಾಗಿದೆ. ಈ ಹೆಸರಿನಲ್ಲಿ ಬದಲಾವಣೆ ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇದರ ಹಿಂದಿನ ಉದ್ದೇಶ ಏನು ಎಂದು ಕೇಳುತ್ತಿದ್ದಾರೆ. ಅಷ್ಟಕ್ಕೂ  ನಟನೆಗಾಗಿ  ಆರು ದಶಕಗಳ ಹಿಂದೆ ಧರ್ಮೇಂದ್ರ ಅವರು ಮುಂಬೈಗೆ ಬಂದ ಸಂದರ್ಭದಲ್ಲಿ  ಮಧ್ಯದ ಹೆಸರು ಹಾಗೂ ಸರ್​ನೇಮ್​ನ ತೆಗೆದು ಧರ್ಮೇಂದ್ರ ಎಂದಷ್ಟೇ ಇಟ್ಟುಕೊಂಡಿದ್ದರು. ಆದರೆ  ಅವರ ಮಕ್ಕಳಾದ ಸನ್ನಿ ಹಾಗೂ ಬಾಬಿ ‘ಡಿಯೋಲ್​’ ಸರ್​ನೇಮ್​ನ ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡಿದ್ದಾರೆ. ಆದರೆ ಇದೀಗ ಧರ್ಮೇಂದ್ರ ಅವರ ಹೆಸರು ಫುಲ್​ ಕನ್​ಫ್ಯೂಷನ್ ಸೃಷ್ಟಿಸಿದೆ. 


ಧರ್ಮೇಂದ್ರ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಇವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಇಲ್ಲಿಯವರೆಗೆ 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಏತನ್ಮಧ್ಯೆ, ಅವರು ಖ್ಯಾತಿಯನ್ನು ಗಳಿಸಿದ್ದು ಮಾತ್ರವಲ್ಲದೆ ಸಾಕಷ್ಟು ಸಂಪತ್ತನ್ನೂ ಗಳಿಸಿದ್ದಾರೆ. ಅಂದಹಾಗೆ ನಟನ ಸದ್ಯದ ಆಸ್ತಿ  450 ಕೋಟಿ ರೂಪಾಯಿ.  ಇವರು ಲೋನಾವಾಲಾದಲ್ಲಿ 100 ಎಕರೆ ಪ್ರದೇಶದಲ್ಲಿ ಫಾರ್ಮ್‌ಹೌಸ್ ಹೊಂದಿದ್ದಾರೆ. ಈ ಸ್ಥಳದಲ್ಲಿ ಕೃಷಿಯನ್ನೂ ಮಾಡುತ್ತಾರೆ. ಈ ಫಾರ್ಮ್‌ಹೌಸ್‌ನಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿದೆ. ಧರ್ಮೇಂದ್ರ ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫಾರ್ಮ್‌ಹೌಸ್‌ನ ನೋಟವನ್ನು ತೋರಿಸುತ್ತಲೇ ಇರುತ್ತಾರೆ. ಇಷ್ಟೇ ಅಲ್ಲದೇ, ಇವರು, ಮಹಾರಾಷ್ಟ್ರದಲ್ಲಿ 17 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕೆಲವು ಆಸ್ತಿ ಹೊಂದಿದ್ದಾರೆ. ರಾಜ್ಯದಲ್ಲಿ ಕೃಷಿ ಮತ್ತು ಕೃಷಿಯೇತರ ಭೂಮಿಯಲ್ಲಿ 88 ಲಕ್ಷ ಹಾಗೂ 52 ಲಕ್ಷಕ್ಕೂ ಹೆಚ್ಚು ಬಂಡವಾಳ ಹೂಡಿದ್ದಾರೆ. 2015 ರ ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಧರ್ಮೇಂದ್ರ ಅವರು ಲೋನಾವಾಲಾದ ತಮ್ಮ ಫಾರ್ಮ್‌ಹೌಸ್ ಬಳಿ 12 ಎಕರೆ ಪ್ರದೇಶದಲ್ಲಿ 30 ಕಾಟೇಜ್ ರೆಸಾರ್ಟ್ ಅನ್ನು ನಿರ್ಮಿಸಲು ರೆಸ್ಟೋರೆಂಟ್ ಸರಪಳಿಯೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದಾರೆ.

ಇಂಥ ಪತ್ನಿಯರೂ ಇರ್ತಾರಾ? ಸವತಿ ಹೇಮಾ ಮಾಲಿನಿಯನ್ನೇ ಹಾಡಿ ಹೊಗಳಿದ್ದ ಧರ್ಮೇಂದ್ರ ಮೊದಲ ಪತ್ನಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?