ಧನುಷ್ ನಮ್ಮ ಪುತ್ರ ಎಂದು ಹೇಳಿಕೊಳ್ಳುತ್ತಿದ್ದ ದಂಪತಿಗೆ ನೋಟಿಸ್ ಕಳುಹಿಸಿದ ನಟ

By Anusha KbFirst Published May 21, 2022, 2:08 PM IST
Highlights
  • ಮಧುರೈ ದಂಪತಿಗೆ ನೋಟೀಸ್ ನೀಡಿದ ಧನುಷ್‌
  • ಧನುಷ್ ನಮ್ಮ ಮಗ ಎಂದಿದ್ದ ದಂಪತಿ
  • ಮಾನನಷ್ಟ ಮೊಕದ್ದಮೆ ಎದುರಿಸುವಂತೆ ಕರೆ

ಚೆನ್ನೈ: ದಕ್ಷಿಣದ ಸೂಪರ್‌ಸ್ಟಾರ್ ತಮ್ಮ ಧನುಷ್ ತಮ್ಮ 'ಜೈವಿಕ' ಮಗ ಎಂದು ಹೇಳಿಕೊಂಡಿದ್ದ ಮಧುರೈ (Madurai) ಮೂಲದ ದಂಪತಿಗೆ ನಟ ಧನುಷ್ ಮತ್ತು ಅವರ ತಂದೆ ಕಸ್ತೂರಿ ರಾಜಾ  ( Kasthoori Raja) ನೋಟಿಸ್ ಕಳುಹಿಸಿದ್ದಾರೆ. ಇಬ್ಬರೂ ತಮ್ಮ ವಕೀಲ ಎಸ್ ಹಾಜಾ ಮೊಹಿದೀನ್ ಗಿಸ್ತಿ (Advocate S Haja Mohideen Gisthi) ಮೂಲಕ ಕಳುಹಿಸಿರುವ ನೋಟಿಸ್‌ನಲ್ಲಿ, ಧನುಷ್‌ಗೆ ಸಂಬಂಧಿಸಿದಂತೆ ಈ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ದಂಪತಿಗೆ ಕೇಳಿಕೊಂಡಿದ್ದಾರೆ.

ನನ್ನ ಕಕ್ಷಿದಾರರು ಇನ್ನು ಮುಂದೆ ತಮ್ಮ ವಿರುದ್ಧ ಸುಳ್ಳು, ಅಸಮರ್ಥನೀಯ ಮತ್ತು ಮಾನಹಾನಿಕರ ಆರೋಪಗಳನ್ನು ಮಾಡದಂತೆ ನಿಮ್ಮಿಬ್ಬರಿಗೂ ಕರೆ ನೀಡುತ್ತಿದ್ದಾರೆ. ಇದನ್ನು ಪಾಲಿಸಲು ವಿಫಲವಾದರೆ ನನ್ನ ಕಕ್ಷಿದಾರರು ಈ ನಿಟ್ಟಿನಲ್ಲಿ ತಮ್ಮ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಸಮರ್ಥ ನ್ಯಾಯಾಲಯಗಳನ್ನು ಸಂಪರ್ಕಿಸುವ ಇಚ್ಛೆಯನ್ನು ಹೊಂದಿರುತ್ತಾರೆ. ನೀವು  ಅವರ ವಿರುದ್ಧ ಮಾಡುತ್ತಿರುವ ಸುಳ್ಳು, ಅಸಮರ್ಥನೀಯ ಮತ್ತು ಮಾನಹಾನಿಕರ ಆರೋಪಗಳಿಂದ ಅವರಿಗೆ ಮಾನನಷ್ಟವಾಗಿದ್ದು, ಅವರ ಖ್ಯಾತಿಗೆ ಕಳಂಕ ಬಂದಿರುವುದು. ಹೀಗಾಗಿ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೊಟೀಸ್‌ನಲ್ಲಿ ಹೇಳಲಾಗಿದೆ. 

ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ದಂಪತಿಗಳು, ತಮಿಳು ಸ್ಟಾರ್ ಗೆ ಸಮನ್ಸ್!

ಅಲ್ಲದೇ ಅವರ ಬಗ್ಗೆ ನಿಮ್ಮ ಎಲ್ಲಾ ಆರೋಪಗಳು ಸುಳ್ಳಾಗಿದ್ದು, ಇವು ಸುಳ್ಳು ಎಂದು ಪತ್ರಿಕಾ ಹೇಳಿಕೆ ನೀಡುವಂತೆ ಮತ್ತು ಅಂತಹ ಆರೋಪಗಳನ್ನು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವಂತೆ ಈ ದಂಪತಿಯನ್ನು ಕೇಳಿದ್ದಾರೆ. ಒಂದು ವೇಳೆ ಹಾಗೆ ಮಾಡಲು ವಿಫಲವಾದರೆ, ತಮ್ಮ ವಿರುದ್ಧದ ಪ್ರತಿಷ್ಠೆಯ ನಷ್ಟಕ್ಕೆ ಪರಿಹಾರವಾಗಿ 10 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯನ್ನು ಎದುರಿಸಲು ಸಜ್ಜಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ದಕ್ಷಿಣ ಭಾರತದ ಸೂಪರ್‌ಸ್ಟಾರ್  ಧನುಷ್ (Dhanush) ತಮ್ಮ "ಜೈವಿಕ" ಪುತ್ರ ಎಂದು ಮಧುರೈ ಮೂಲದ ದಂಪತಿ ಆಗಾಗ ಹೇಳಿಕೊಳ್ಳುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. 

ನಟ ತಮ್ಮ ಮಗ ಎಂದು ಹೇಳಿಕೊಂಡು ವೃದ್ಧ ದಂಪತಿಗಳು ಸಲ್ಲಿಸಿದ ಈ ಪಿತೃತ್ವ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಧನುಷ್‌ಗೆ ಕೆಲ ದಿನಗಳ ಹಿಂದಷ್ಟೇ ಸಮನ್ಸ್ ನೀಡಿತ್ತು. ಕಳೆದ ಹಲವು ವರ್ಷದಿಂದ ಈ ಪ್ರಕರಣ ನಡೆಯುತ್ತಿದೆ. ವೃದ್ಧ ದಂಪತಿಗಳು ಚಿತ್ರನಟ ಧನುಷ್ ತಮ್ಮ ಪುತ್ರ ಎಂದು ಕೋರ್ಟ್ ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದರಿಂದ ಈ ಕುರಿತಾಗಿ ಕೋರ್ಟ್ ಧನುಷ್‌ಗೆ ಸಮನ್ಸ್ (summoned) ಜಾರಿ ಮಾಡಿತ್ತು. 

ತಮಿಳು ನಟ Dhanush ಮೇಲೆ ಕೇಸ್‌; ಹೈಕೋರ್ಟ್‌ ಸಮನ್ಸ್
 

ಕದಿರೇಸನ್ (Kathiresan ) ಹಾಗೂ ಅವರ ಪತ್ನಿ ಮೀನಾಕ್ಷಿ (Meenakshi) ಚಿತ್ರ ನಟ ಧನುಷ್ ತಮ್ಮ ಮೂರನೇ ಪುತ್ರ ಎಂದು ಹೇಳಿಕೊಂಡಿದ್ದು, ಚಿತ್ರದಲ್ಲಿ ನಟಿಸಬೇಕು ಎನ್ನುವ ಆಸೆಯ ಕಾರಣದಿಂದಾಗಿ ಮನೆಯಿಂದ ಓಡಿ ಬಂದಿದ್ದ ಎಂದು ಹೇಳಿದ್ದರು. ಅಲ್ಲದೇ ಮನೆಯ ನಿರ್ವಹಣೆಗಾಗಿ ಅವರಿಂದ ಪ್ರತಿ ತಿಂಗಳು 65 ಸಾವಿರ ರೂಪಾಯಿ ಬೇಡಿಕೆಯನ್ನೂ ಇಟ್ಟಿದ್ದರು. ಕಳೆದ ಕೆಲವು ವರ್ಷಗಳಿಂದ ಈ ಪ್ರಕರಣ ವಿಚಾರಣೆಯ ಹಂತದಲ್ಲಿದೆ.

ಧನುಷ್ ತಮ್ಮ ಮಗ ಎಂದು ಕದಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಆರೋಪಿಸಿದ್ದರು. ಧನುಷ್ ಪಿತೃತ್ವ ಪರೀಕ್ಷೆಯ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಕದಿರೇಸನ್ ನ್ಯಾಯಾಲಯದ ಮೆಟ್ಟಿಲೇರಿದ್ದರು ಅದರೊಂದಿಗೆ ಈ ವಿಚಾರದಲ್ಲಿ ಪೊಲೀಸ್ ತನಿಖೆಯನ್ನೂ ನಡೆಸುವಂತೆ ಕೋರಿದ್ದರು. ಈ ಪ್ರಕರಣವನ್ನು ವಜಾಗೊಳಿಸಿ 2020ರಲ್ಲಿ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕದಿರೇಸನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಆಗ ಪಿತೃತ್ವದ ದಾಖಲೆಗಳನ್ನು ನಕಲಿ ಎಂದು ಸಾಬೀತುಪಡಿಸಲು ಯಾವುದೇ ಪೂರಕ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
 

click me!