
ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್(Kangana Ranaut) ನಟನೆಯ ಧಾಕಡ್(Dhakad) ಸಿನಿಮಾ ಮೇ 20ರಂದು ಬಿಡುಗಡೆಯಾಗಿದೆ. ಅದೇ ದಿನ ಬಾಲಿವುಡ್ ನಟ ಕಾರ್ತಿಕ್ ಆರ್ಯನ್(Kartik Aaryan) ಅಭಿನಯದ ಭೂಲ್ ಭುಲೈಯಾ-2(Bhool Bhulaiyaa 2) ಸಿನಿಮಾ ಕೂಡ ಚಿತ್ರಮಂದಿರಕ್ಕೆ ಬಂದಿದೆ. ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರ್ತಿರುವುದು ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಈ ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾಗೆ ಪ್ರೇಕ್ಷಕರು ಜೈ ಎನ್ನುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದರು. ಆದರೆ ಮೊದಲ ದಿನ ಕಾರ್ತಿಕ್ ಆರ್ಯನ್ ನಟನೆಯ ಭೂಲ್ ಭುಲೈಯಾ-2 ಸಿನಿಮಾ ಉತ್ತಮ ಕಲೆಕ್ಷನ್(collection) ಮಾಡುವ ಮೂಲಕ ಕಂಗನಾ ಮುಂದೆ ಗೆದ್ದು ಬೀಗಿದ್ದಾರೆ.
ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ನಟನೆಯ ಭೂಲ್ ಬೂಲೈಯಾ-2 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಲಾಗಿದೆ. ಕಾಮಿಡಿ ಹಾರರ್ ಸಿನಿಮಾಗೆ ಚಿತ್ರಪ್ರೇಕ್ಷಕರು ಫಿದಾ ಆಗಿದ್ದಾರೆ. ಅನೇಕ ಕಡೆ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಮೊದಲ ದಿನ ಸಿನಿಮಾ 13 ರಿಂದ 15 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ. ಬಾಲಿವುಡ್ ಸರಣಿ ಸೋಲಿನಿಂದ ಕಂಗೆಟ್ಟಿತ್ತು. ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದಿಂದ ಹಿಂದಿ ಚಿತ್ರರಂಗ ತತ್ತರಿಸಿತ್ತು. ಇದೀಗ ಕಾರ್ತಿಕ್ ಆರ್ಯನ್ ಸಿನಿಮಾದ ಕಲೆಕ್ಷನ್ ಕೊಂಚ ಮಟ್ಟಕ್ಕೆ ನಿಟ್ಟುಸಿರು ಬಿಡುವಂತೆ ಮಾಡಿದೆ.
ಆದರೆ ಇದೇ ದಿನ ಮೇ 20ರಂದು ತೆರೆಗೆ ಬಂದ ಕಂಗನಾ ರಣಾವತ್ ನಟನೆಯ ಧಾಕಡ್ ಸಿನಿಮಾ ಮೊದಲ ದಿನದ ಕಲೆಕ್ಷನ್ ಹೀನಾಯವಾಗಿದೆ. ಧಾಕಡ್ ಸಿನಿಮಾ ಮೊದಲ ದಿನ 1 ರಿಂದ 2 ಕೋಟಿ ಗಳಿಸಿದೆ ಎನ್ನಲಾಗಿದೆ. ಧಾಕಡ್ ಸಿನಿಮಾ 100 ಕೋಟಿ ರೂಪಾಯಿಗೂ ಅಧಿಕ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಹಾಗಾಗಿ ಮೊದಲ ದಿನದ ಕಲೆಕ್ಷನ್ ಧಾಕಡ್ ಸಿನಿಮಾತಂಡಕ್ಕ ಆಘಾತ ತಂದಿದೆ.
Kangana Ranaut ಚಿತ್ರ ಧಾಕಡ್ ಪ್ರೀಮಿಯರ್‌ಗೆ ಬಾಲಿವುಡ್‌ನ ಯಾವುದೇ ದೊಡ್ಡ ಸ್ಟಾರ್‌ಗಳಿಲ್ಲ
ಧಾಕಡ್ ಸಿನಿಮಾ ಪ್ರಿ ರಿಲೀಸ್ ಈವೆಂಟ್ ನಲ್ಲಿ ನಟಿ ಕಂಗನಾ ರಣಾವತ್, ಕಾರ್ತಿಕ್ ಆರ್ಯನ್ ಅವರನ್ನು ಹಾಡಿ ಹೊಗಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕಂಗನಾ ಅಂತ ನಟಿಯರು ತನ್ನ ಬಗ್ಗೆ ಹೊಗಳಿರುವುದನ್ನು ಗಮನಿಸದೆ ಇರಲು ಸಾಧ್ಯನಾ, ಖುಷಿಯಾಗುತ್ತದೆ ಎಂದು ಹೇಳಿದ್ದರು.
ಪ್ರಚಾರದ ಗಿಮಿಕ್ ಅಲ್ಲ, ನಾವು ಮನುಷ್ಯರೇ; ಸಾರಾ ಜೊತೆಗಿನ ಲಿಂಕ್‌ಅಪ್ ಬಗ್ಗೆ ಕಾರ್ತಿಕ್ ಆರ್ಯನ್ ಪ್ರತಿಕ್ರಿಯೆ
ಅಂದಹಾಗೆ ಬಾಲಿವುಡ್ ಸರಣಿ ಸೋಲಿನಿಂದ ಕಂಗೆಟ್ಟಿದೆ. ಬಚ್ಚನ್ ಪಾಂಡೆ, ಜುಂದ್, ಅಟ್ಯಾಕ್, ಜೆರ್ಸಿ, ರನ್ ವೇ 34 ಮತ್ತು ಹೀರೋಪಂಕ್ತಿ-2 ಸೇರಿದಂತೆ ಅನೇಕ ಸಾಲು ಸಾಲು ಸಿನಿಮಾಗಳು ಸೋತಿವೆ. ಇದೀಗ ಧಾಕಡ್ ಕೂಡ ಅದೇ ಸಾಲಿಗೆ ಸೇರಿದೆ. ಆದರೆ ಕಾರ್ತಿಕ್ ಆರ್ಯನ್ ಅವರ ಭೂಲ್ ಭೂಲೈಯಾ-2 ಸಿನಿಮಾ ಕೊಂಚ ಸಮಾಧಾನ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.