ವಿಚ್ಛೇದನ ಬಳಿಕ ಮೊದಲ ಬಾರಿ ಮಕ್ಕಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟ ಧನುಷ್

By Suvarna News  |  First Published Mar 19, 2022, 7:02 PM IST

ತಮಿಳು ನಟ ಧನುಷ್(Dhanush) ಪತ್ನಿ ಐಶ್ವರ್ಯಾಗೆ ವಿಚ್ಛೇದನ ನೀಡಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಧನುಷ್ ಮಕ್ಕಳ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


ತಮಿಳು ನಟ ಧನುಷ್(Dhanush) ಪತ್ನಿ ಐಶ್ವರ್ಯಾಗೆ(Aishwarya) ವಿಚ್ಛೇದನ(Divorce) ನೀಡಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳ ಜೊತೆ ಧನುಷ್ ಸಂಗೀತ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ಧನುಷ್ ಮಕ್ಕಳ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಧನುಷ್ ಮ್ಯೂಸಿಕ್ ಮಾಂತ್ರಿಕ ಇಳಯರಾಜ(Ilayaraja) ಅವರ ರಾಕ್ ವಿತ್ ರಾಜಾ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲದೆ ಆ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಇಸೈನ್ಯಾನಿ ಹಾಡನ್ನು ಮರುಸೃಷ್ಟಿ ಮಾಡಿದ್ದರು. ಕಾರ್ಯಕ್ರಮಕ್ಕೆ ಧನುಷ್ ಬಿಳಿ ಬಣ್ಣದ ಶರ್ಟ್ ಮತ್ತು ಪಂಚೆ ಧರಿಸಿದ್ದರು. ಧನುಷ್ ಲುಕ್ ಅಭಿಮಾನಿಗಳ ಗಮನಸೆಳೆಯುತ್ತಿದೆ. ಇಬ್ಬರು ಮಕ್ಕಳಾದ ಯಾತ್ರ ಮತ್ತು ಲಿಂಗ (Yathra and Linga) ಇಬ್ಬರೂ ಧನುಷ್ ಅಕ್ಕಪಕ್ಕದಲ್ಲಿ ಕುಳಿತಿದ್ದಾರೆ. ಧನುಷ್ ಜೊತೆ ಖ್ಯಾತ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ್ ಕೂಡ ಉಪಸ್ಥಿತರಿದ್ದರು.

Tap to resize

Latest Videos

ಇತ್ತೀಚಿಗಷ್ಟೆ ನಟ ಧನುಷ್ ಪತ್ನಿಯನ್ನು ನನ್ನ ಗೆಳತಿ ಎಂದು ಕರೆದು ಸದ್ದುಯಾಗಿದ್ದರು. ಐಶ್ವರ್ಯಾ ನಿರ್ದೇಶನ ಮಾಡಿರುವ ವಿಡಿಯೋ ಸಾಂಗ್ ಲಿಂಕ್ ಶೇರ್ ಮಾಡಿದ್ದ ಧನುಷ್, ಪತ್ನಿಯನ್ನು ನನ್ನ ಗೆಳತಿ ಎಂದು ಕರೆದು ಹಾಡಿಗೆ ಶುಭಾಶಯ ತಿಳಿಸಿ ಪ್ರಮೋಟ್ ಮಾಡಿದ್ದರು.

ಹೊಸ ಗರ್ಲ್‌ ಫ್ರೆಂಡ್ ಜೊತೆ ಹೋಟೆಲ್‌ನಲ್ಲಿ ಕಾಣಿಸಿಕೊಂಡ Dhanush

ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದ ಧನುಷ್, ಐಶ್ವರ್ಯಾ ಹಾಡಿನ ಲಿಂಕ್ ಶೇರ್ ಮಾಡಿದ್ದಾರೆ. ಅಷ್ಟೆಯಲ್ಲ ನನ್ನ ಗೆಳತಿ ಎಂದು ಪತ್ನಿಯನ್ನು ಕರೆದಿದ್ದಾರೆ. 'ಮ್ಯೂಸಿಕ್ ವಿಡಿಯೋಗೆ ಒಳ್ಳೆಯದಾಗಲಿ ನನ್ನ ಗೆಳತಿ ಐಶ್ವರ್ಯಾ, ಅಭಿನಂದನೆಗಳು' ಎಂದು ಹೇಳಿದ್ದಾರೆ.

ಧನುಷ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಐಶ್ವರ್ಯಾ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ ಐಶ್ವರ್ಯಾ ಟ್ವಿಟ್ಟರ್ ಖಾತೆಯಲ್ಲಿ ತನ್ನ ಹೆಸರಿನ ಜೊತೆ ಧನುಷ್ ಹೆಸರನ್ನು ಹಾಗೆ ಉಳಿಸಿಕೊಂಡಿದ್ದಾರೆ. ಗಂಡ-ಹೆಂಡತಿ ಸಂಬಂಧ ಕಡಿದುಕೊಂಡು ಇಬ್ಬರು ದೂರ ದೂರ ಆಗಿದ್ದರೂ ಐಶ್ವರ್ಯಾ ಪತಿಯ ಹೆಸರನ್ನು ಹಾಗೆ ಉಳಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.

ಧನುಷ್ ಮತ್ತು ಐಶ್ವರ್ಯಾ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಬರುತ್ತಿದೆ. ವಿಚ್ಛೇದನದ ಬಳಿಕವೂ ಐಶ್ವರ್ಯಾ ತನ್ನ ಹೆಸರಿನ ಜೊತೆ ಧನುಷ್ ಹೆಸರನ್ನು ಹಾಗೆ ಉಳಿಸಿಕೊಂಡಿದ್ದಾರೆ, ತುಂಬಾ ಪ್ರಬುದ್ಧರಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ರಜನಿಕಾಂತ್ - ಧನುಷ್: ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡಲೇ ಇಲ್ಲ!

ಡಿಸೆಂಬರ್ ನಲ್ಲಿ ಧನುಷ್ ಮತ್ತು ಐಶ್ವರ್ಯಾ ಇಬ್ಬರೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಇಬ್ಬರು ಬೇರೆ ಬೇರೆ ಆಗುತ್ತಿದ್ದೀವಿ ಎಂದು ಬಹಿರಂಗ ಪಡಿಸುವ ಮೂಲಕ ಸಂಚಲನ ಮೂಡಿಸಿದ್ದರು.

'18 ವರ್ಷಗಳ ಸ್ನೇಹ, ದಾಂಪತ್ಯ, ಪೋಷಕರು ಮತ್ತು ಹಿತೈಶಿಗಳಾಗಿ ಒಟ್ಟಿಗೆ ಪಯಣ ಮಾಡಿದ್ದೇವೆ. ನಮ್ಮ ಪಯಣ ಹೊಂದಾಣಿಕೆಯಿಂದ ಕೂಡಿತ್ತು. ಆದರೆ ಇಂದು ನಾವು ಬೇರೆ ಬೇರೆ ಮಾರ್ಗದಲ್ಲಿ ಸಾಗಲು ನಿರ್ಧರಿಸಿದ್ದೇವೆ. ಐಶ್ವರ್ಯಾ ಮತ್ತು ನಾನು ಬೇರೆ ಆಗುತ್ತಿದ್ದೇವೆ. ನಮ್ಮ ನಿರ್ಧಾರಕ್ಕೆ ಗೌರವ ನೀಡಿ. ನಮ್ಮ ಖಾಸಗಿತನಕ್ಕೆ ಸಮಯ ನೀಡಿ' ಎಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಬಳಿಕ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಐಶ್ವರ್ಯಾ ಮತ್ತು ಧನುಷ್ ಇದೀಗ ಟ್ವಿಟ್ಟರ್ ನಲ್ಲಿ ಮಾತುಕತೆ ನಡೆಸುವ ಮೂಲಕ ಎಲ್ಲರ ಮಗನ ಸೆಳೆದಿದ್ದಾರೆ. ಇಬ್ಬರ ನಡೆ ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ.

ಇನ್ನು ಧನುಷ್ ಸಿನಿಮಾ ವಿಚಾರಕ್ಕೆ ಬರುವುದಾದರೆ, ಧನುಷ್ ಕೊನೆಯದಾಗಿ ಅತ್ತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದಿ ಬಂದಿದ್ದರು. ಹಿಂದಿ ಸಿನಿಮಾವಾಗಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೂಡ ನಟಿಸಿದ್ದರು. ನಾಯಕಿಯಾಗಿ ಸಾರಾ ಅಲಿ ಖಾನ್ ಕಾಣಿಸಿಕೊಂಡಿದ್ದರು. ಸದ್ಯ ಧನುಷ್ ಬಳಿ ಮಾರನ್, ದಿ ಗ್ರೇ ಮೆನ್, ನಾನೆ ವರುವೆನ್, ವಾತಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

click me!