ತನ್ನದೆ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ನಟಿ ಅನುಷ್ಕಾ ಶರ್ಮಾ

Suvarna News   | Asianet News
Published : Mar 19, 2022, 06:01 PM IST
ತನ್ನದೆ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ನಟಿ ಅನುಷ್ಕಾ ಶರ್ಮಾ

ಸಾರಾಂಶ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ(Anushka Sharma) ತಾನೆ ನಿರ್ಮಿಸಿದ ತನ್ನ ಕನಸಿನ ನಿರ್ಮಾಣ ಸಂಸ್ಥೆಯಾಗಿದ್ದ ಕ್ಲೀನ್ ಸ್ಲೇಟ್ ಫಿಲ್ಮ್ ನಿಂದ ಹೊರನಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ(Anushka Sharma) ತಾನೆ ನಿರ್ಮಿಸಿದ ತನ್ನ ಕನಸಿನ ನಿರ್ಮಾಣ ಸಂಸ್ಥೆಯಿಂದ ಹೊರನಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅನುಷ್ಕಾ ತನ್ನ ನಿರ್ಮಾಣ ಸಂಸ್ಥೆಯಾಗಿರುವ ಕ್ಲೀನ್ ಸ್ಲೇಟ್ ಫಿಲ್ಮ್ (Clean Slate Filmz) ನಿಂದ ಹೊರಬಂದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅನುಷ್ಕಾ ಅವರ ಈ ನಡೆ ಬಾಲಿವುಡ್ ಮಂದಿಯ ಅಚ್ಚರಿಗೆ ಕಾರಣವಾಗಿದೆ. ತಮ್ಮ ಜೀವನವನ್ನು ಬ್ಯಾಲೆನ್ಸಿಂಗ್ ಆಗಿ ಇಟ್ಟುಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅನುಷ್ಕಾ ಹೇಳಿದ್ದಾರೆ.

ಅನುಷ್ಕಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು(virat kohli) ಮದುವೆಯಾದ ಬಳಿಕ ಸಿನಿಮಾರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಬಳಿಕ ಮುದ್ದಾದ ಮಗುವಿಗೆ ಜನ್ಮ ನೀಡಿದ್ದ ಅನುಷ್ಕಾ ಮಗಳ ಆರೈಕೆಯ ಕಡೆ ಗಮನ ಹರಿಸಿದ್ದರು. ಇದೀಗ ಅನುಷ್ಕಾ ಮತ್ತೆ ಸಿನಿಮಾದ ಕಡೆ ಮುಖ ಮಾಡಿದ್ದಾರೆ. ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ. ಈ ನಡುವೆ ಅನುಷ್ಕಾ ತನ್ನದೆ ನಿರ್ಮಾಣ ಸಂಸ್ಥೆಯಿಂದ ಹೊರಬರುವ ನಿರ್ಧಾರ ತೆಗೆದುಕೊಂಡಿರುವುದು ಅಚ್ಚರಿ ಮೂಡಿಸಿದೆ.

ದೀಪಿಕಾ - ಅನುಷ್ಕಾ : ಬಾಲಿವುಡ್‌ ಚೆಲುವೆಯರ ಶಾರ್ಟ್ ಹೇರ್‌ಕಟ್‌ ಲುಕ್‌

ಅಂದಹಾಗೆ ಅನುಷ್ಕಾ, ಕ್ಲೀನ್ ಸ್ಲೇಟ್ ಫಿಲ್ಮ್ ಬ್ಯಾನರ್ ನಲ್ಲಿ ಸೂಪರ್ ಹಿಟ್ ಸಿನಿಮಾ ಮತ್ತು ವೆಬ್ ಸೀರಿಸ್ ಗಳನ್ನು ನಿರ್ಮಾಣ ಮಾಡಿದ್ದರು. ಅನುಷ್ಕಾ ತನ್ನ ಬ್ಯಾನರ್ ನಲ್ಲಿ ಎನ್ ಹೆಚ್ 10(NH10), ಫಿಲೌರಿ, ಪರಿ(Pari), ಪಾತಾಳ್ ಲೋಕ್(Paatal Lok), ಬುಲ್ ಬುಲ್ ಸಿನಿಮಾಗಳನ್ನು ನಿರ್ಮಿಸಿದ್ದರು. ಪಾತಾಳ್ ಲೋಕ್ ವೆಬ್ ಸೀರಿಸ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಅಂದಹಾಗೆ 2013ರಲ್ಲಿ ಅನುಷ್ಕಾ ಈ ನಿರ್ಮಾಣ ಸಂಸ್ಥೆಯನ್ನು ತನ್ನ ಸಹೋದರನ ಜೊತೆ ಸೇರಿ ನಿರ್ಮಾಣ ಮಾಡಿದ್ದರು. 2022ರಲ್ಲಿ ಈ ಸಂಸ್ಥೆಯಿಂದ ಹೊರಬರುತ್ತಿದ್ದಾರೆ. ಈ ಬಗ್ಗೆ ಅನುಷ್ಕಾ ಸಾಮಾಜಿಕ ಜಾಲತಾಣದಲ್ಲಿ ದೀರ್ಘವಾಗಿ ಬರೆದುಕೊಂಡಿದ್ದಾರೆ.

'ನಾನು ನನ್ನ ಸಹೋದರ ಕರ್ಣೇಶ್ ಶರ್ಮಾ ಜೊತೆ ಕ್ಲೀನ್ ಸ್ಲೇಟ್ ಫಿಲ್ಮ್ ಪ್ರಾರಂಭಿಸಿದಾ ಇನ್ನು ಹೊಸಬರು. ಇಂದು ನಾವು ಹಿಂದೆ ತಿರುಗಿ ನೋಡಿದಾಗ ಸೃಷ್ಟಿ ಮಾಡಿದ್ದೀವಿ ಎನ್ನುವ ಬಗ್ಗೆ ನಮಗೆ ತುಂಬ ಹೆಮ್ಮೆ ಎನಿಸುತ್ತೆ. ಇದರಲ್ಲಿ ಕರ್ಣೇಶ್ ಕೊಡುಗೆ ದೊಡ್ಡದಿದೆ' ಎಂದು ಬರೆದುಕೊಂಡಿದ್ದಾರೆ. 

Anushka Sharma : "ಮನುಷ್ಯತ್ವವನ್ನು ಅರ್ಥ ಮಾಡಿಕೊಳ್ಳದವರು ಹುಚ್ಚರು"

'ತಾಯಿಯಾಗಿ ಈಗ ನಾನು ನಟನಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡಾಗ ಹಿಂದಿಗಿಂತಲೂ ಸಂಪೂರ್ಣವಾಗಿ ನಾನು ನನ್ನ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಳ್ಳಬೇಕಾಗಿದೆ. ಹಾಗಾಗಿ ಈಗ ನನ್ನ ಕೈಯಲ್ಲಿ ಎಷ್ಟು ಸಮಯ ಸಿಗುತ್ತೊ ಆ ಸಮಯವನ್ನು ನನ್ನ ಮೊದಲ ಪ್ರೀತಿಯಾಗಿರುವ ನಟನೆಗೆ ಮೀಸಲಿಡುತ್ತೇನೆ. ಆದ್ದರಿಂದ ನಾನು ಕ್ಲೀನ್ ಸ್ಲೇಟ್ ಫಿಲ್ಮ್ ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಕರ್ಣೇಶ್ ಇದನ್ನು ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.

'ನಾನು ಇನ್ಮುಂದೆ ಕರ್ಣೇಶ್ ಮತ್ತು ಸಂಸ್ಥೆಗೆ ಚೀರ್ ಲೀಡರ್ ಆಗಿ ಇರುತ್ತೇನೆ. ಈ ಸಂಸ್ಥೆ ಮೂಲಕ ಮತ್ತಷ್ಟು ಉತ್ತಮ ಸಿನಿಮಾಗಳು ಬರಲಿವೆ ಎಂದು ನಂಬಿದ್ದೇನೆ. ಈ ಸಂಸ್ಥೆ ಮುಂದೆ ಹೇಗೆ ಬೆಳೆಯಲಿದೆ ಎಂದು ನೋಡಲು ಕಾತರಳಾಗಿದ್ದೇನೆ. ಸಂಸ್ಥೆಯ ಇಡೀ ಕುಟುಂಬಕ್ಕೆ ನನ್ನ ಶುಭಾಶಯಗಳು' ಎಂದಿದ್ದಾರೆ.

ಅನುಷ್ಕಾ ಕಳೆದ ವರ್ಷ 2021 ಜನವರಿಯಲ್ಲಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ. ಮಗಳಿಗೆ ವಮಿಕಾ ಎಂದು ನಾಮಕರಣ ಮಾಡಿದ್ದಾರೆ. ಮಗಳಿಗೆ ಜನ್ಮ ನೀಡಿದ ಬಳಿಕ ಬಣ್ಣದ ಲೋಕದಿಂದ ದೂರ ಇದ್ದ ಅನುಷ್ಕಾ ಆಗಾಗ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಮತ್ತೆ ನಟನೆಯತ್ತ ಮುಖ ಮಾಡಿದ್ದಾರೆ. 2018ರಲ್ಲಿ ಬಂದ ಝಿರೋ ಸಿನಿಮಾದಲ್ಲಿ ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಶಾರುಖ್ ಖಾನ್ ಜೊತೆ ಅನುಷ್ಕಾ ತೆರೆಹಂಚಿಕೊಂಡಿದ್ದರು.

ಅನುಷ್ಕಾ ಸದ್ಯ ಖ್ಯಾತ ಮಹಿಳಾ ಕ್ರಿಕೆಟರ್ ಜೂಲವ್ ಗೋಸ್ವಾಮಿ ಅವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನೆಟ್ ಫ್ಲಿಕ್ಸ್ ನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?