Katrin Kaif- Vicky Koushal Wedding: ನಡೆಯುವ ರಾಜಸ್ಥಾನ ಕೋಟೆಯ ರೆಸ್ಟೋರೆಂಟ್‌ ಹೇಗಿದೆ?

By Suvarna NewsFirst Published Dec 8, 2021, 4:14 PM IST
Highlights

ಈ ವರ್ಷದ ಬಾಲಿವುಡ್‌ನ ಹೈ ಸೆನ್ಸೇಷನ್ ಮದುವೆಯಾಗಿರುವ ಕತ್ರಿನಾ ಕೈಫ್- ವಿಕ್ಕಿ ಕೌಶಲ್ ವಿವಾಹದ ತಾಣವಾದ ಸವಾಯಿ ಮಾಧೋಪುರದ ಪೋರ್ಟ್ ಬರ್ವಾರಾ ಮತ್ತಲ್ಲಿನ ಡೆಸ್ಟಿನೇಶನ್ ವೆಡ್ಡಿಂಗ್ ರೆಸ್ಟುರಾ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು ಇಲ್ಲಿವೆ.

ಈ ವರ್ಷದ ಬಾಲಿವುಡ್‌ನ (Bollywood) ಹೈ ಸೆನ್ಸೇಷನ್ ಮದುವೆ (Sensation Wedding) ಎಂದು ಕತ್ರಿನಾ ಕೈಫ್‌ (Katrina Kaif) ಮತ್ತು ವಿಕ್ಕಿ ಕೌಶಲ್‌ದು (Vicky Koushal). ಈ ಮದುವೆಯ ಗಂಡು ಹಿಂದೂ, ಹೆಣ್ಣು ಮುಸ್ಲಿಂ- ಕ್ರೈಸ್ತ ದಂಪತಿಯ ಮಗಳು ಎನ್ನುವುದೊಂದೇ ವಿಶೇಷವಲ್ಲ. ಇವರು ಮದುವೆಯಾಗುತ್ತಿರುವ ತಾಣವೂ ವಿಶೇಷವೇ. ಇದೊಂದು ಡೆಸ್ಟಿನೇಶನ್ (Destinatin wedding) ವೆಡ್ಡಿಂಗ್‌. ಅಂದರೆ ವಿಶೇಷವಾಗಿ ಆಯೋಜಿಸಲಾದ ಅದ್ದೂರಿ ಮದುವೆ. ದೀಪಿಕಾ (Deepika Padukone) ಮತ್ತು ಪ್ರಿಯಾಂಕಾ (Priyanka Chopra) ಅವರ ಮದುವೆಯ ಸಂಭ್ರಮದ ಬಳಿಕ ವಿಕ್ಕಿ- ಕತ್ರಿನಾ ಮದುವೆ ಸದ್ದು ಮಾಡುತ್ತಿದೆ. ವರದಿಗಳ ಪ್ರಕಾರ, ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಸಿಕ್ಸ್ ಸೆನ್ಸ್ ಫೋರ್ಟ್ (Six sense port Barwara) ಬರ್ವಾರಾದಲ್ಲಿ ದಂಪತಿಗಳು ವಿವಾಹವಾಗಲಿದ್ದಾರೆ. 14ನೇ ಶತಮಾನದ ರಜಪೂತರ ಭವ್ಯ ಕೋಟೆ ಬರ್ವಾರಾ. ಇಲ್ಲಿರುವ ಐಷಾರಾಮಿ ರೆಸ್ಟಾರೆಂಟ್ ಸಿಕ್ಸ್ ಸೆನ್ಸ್.

ಈ ವಿವಾಹದಲ್ಲೂ ಎಲ್ಲವೂ ಕಸ್ಟಮೈಸ್ ಮಾಡಲಾಗುತ್ತಿದೆ. ಅಂದರೆ ಪ್ರತಿಯೊಬ್ಬ ಆಹ್ವಾನಿತ ಗಣ್ಯ ಅತಿಥಿಯ ಅಭಿರುಚಿಗೆ ತಕ್ಕಂತೆ ಆಹಾರವನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಈಗಾಗಲೇ ಮುಂಬೈನಿಂದ 100 ಮಿಠಾಯಿಗಾರರು ಸಿಕ್ಸ್ ಸೆನ್ಸ್ ರೆಸಾರ್ಟ್‌ಗೆ ತಲುಪಿದ್ದಾರೆ. ಕರ್ನಾಟಕದಿಂದ ತರಕಾರಿಗಳನ್ನು ತುಂಬಿದ ಟ್ರಕ್ ಮದುವೆಯ ಸ್ಥಳಕ್ಕೆ ತಲುಪಿದೆ. ತರಕಾರಿಗಳಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪಂಜಾಬಿ ಮತ್ತು ಇಂಗ್ಲಿಷ್ ಖಾದ್ಯಗಳ ಮಿಶ್ರಣವಿದೆ. ಭೋಜನಕ್ಕೂ ಇಲ್ಲಿ ಐದು ಅಂತಸ್ತುಗಳ ವಿಹಾರವಿದೆ. ಪ್ರತಿ ಭೋಜನಸ್ಥಳದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ.

ಕಾರ್ಟೈಲ್ (Cartail) 
ಇದು ಕೋಟೆಯ ಹೊರಾಂಗಣದಲ್ಲಿದೆ. ಇದು ಮೆಡಿಟರೇನಿಯನ್‌ನಿಂದ ಪ್ಯಾನ್-ಏಷ್ಯನ್ ವರೆಗೆ ಎಲ್ಲ ಆಹಾರವನ್ನೂ ಒದಗಿಸುವ ಊಟದ ರೆಸ್ಟೋರೆಂಟ್. ಇಲ್ಲಿ ಭಾರತೀಯ ಆರಾಮದಾಯಕ ಆಹಾರ ಮತ್ತು ಆರೋಗ್ಯಕರ ಸಲಾಡ್‌ಗಳನ್ನು ಸಹ ನೀಡುತ್ತಾರೆ. ನೀವು ಆರೋಗ್ಯಕರ ಸಲಾಡ್ ಬ್ರಂಚ್ ಅನ್ನು ಹೊಂದಲು ಬಯಸುವವರಾಗಿದ್ದರೆ, ಇದು ನಿಮಗೆ ಸೂಕ್ತ ಸ್ಥಳ. ಬೆಳಗಿನ ಉಪಾಹಾರಕ್ಕಾಗಿ ಬೆಳಿಗ್ಗೆ 7ರಿಂದ 11ರವರೆಗೆ ಮತ್ತು ಮಧ್ಯಾಹ್ನ 12ರಿಂದ ಮಧ್ಯರಾತ್ರಿಯವರೆಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತೆರೆದಿರುತ್ತದೆ.

ರೂಹಾನಿ (Roohani) 
ಇದು ವಿಶೇಷ ದಿನ ನಿಗದಿಪಡಿಸಿ ಹೋಗಲು ಮತ್ತು ನವವಿವಾಹಿತರಿಗೆ ಸೂಕ್ತವಾದ ಭಾರತೀಯ ವಿಶೇಷ ರೆಸ್ಟೋರೆಂಟ್. ಇದು ರಾಜಸ್ಥಾನದ ಬರ್ವಾರಾ ಕೋಟೆಯ ಐತಿಹಾಸಿಕ ಗುಮ್ಮಟಗಳೊಂದಿಗೆ ಮಿಳಿತವಾಗಿದ್ದು ರೋಮ್ಯಾಂಟಿಕ್ ನೋಟವನ್ನು ನೀಡುತ್ತದೆ. ಇಲ್ಲಿ ಪ್ರತಿ ಸಂಜೆ ಬಹುಖಾದ್ಯ ವೈಭವದ ಬಾಣಸಿಗರ ವಿಶೇಷ ಮೆನುವನ್ನು ಸಸ್ಯಾಹಾರಿಗಳು ಮತ್ತು ಮಾಂಸಾಹಾರಿಗಳಿಗೆ ಆಧುನಿಕ ರೀತಿಯಲ್ಲಿ ನೀಡಲಾಗುತ್ತದೆ.

Samantha on divorce: ಸಾಯೋ ಮನಸ್ಥಿತಿಗೆ ತಲುಪಿದ್ದ ಸಮಂತಾ, ನಟಿ ಹೇಳಿದ್ದಿಷ್ಟು

ವೀಕ್ಷಣೆ ಗ್ಯಾಲರಿ
ಸಂದರ್ಶಕರ ಪ್ರಕಾರ, ಇದು ಈ ತಾಣದ ಅತ್ಯಂತ ರೋಮ್ಯಾಂಟಿಕ್ ಭಾಗಗಳಲ್ಲಿ ಒಂದು. ಇದು ವಿಂಟೇಜ್‌ ಪ್ರವಾಸದ ಅಂದರೆ ಇತಿಹಾಸದ ಕಾಲದಲ್ಲಿ ಓಡಾಡಿದ ಅನುಭವವನ್ನು ನೀಡುತ್ತದೆ. ವೈನ್ ಸೊಮೆಲಿಯರ್ ಜೊತೆಗೆ ನಿಮ್ಮನ್ನು ಬೆರಗುಗೊಳಿಸುತ್ತದೆ. ತೆರೆದ ಆಕಾಶದ ಅಡಿಯಲ್ಲಿ ಕಾಕ್‌ಟೇಲ್‌ ಜೊತೆಗೆ ಭೋಜನದ ಆನಂದ ಅನುಭವಿಸಬಹುದು. ಇಲ್ಲಿಂದ ಸೊಗಸಾದ ಸೂರ್ಯಾಸ್ತದ ನೋಟವನ್ನು ಕಾಣಬಹುದು.

ರಾಣಿ ಬಾಗ್ (Rani Bhag) 
ಇಲ್ಲಿ ಈಜುಕೊಳವಿದೆ. ಇಲ್ಲಿ ನೀವು ಈಜುಡುಗೆಯಲ್ಲಿಯೇ ಆಹಾರ ಸವಿಯಬಹುದು. ರಾಣಿ ಬಾಗ್ ಈ ರೆಸ್ಟಾರೆಂಟ್‌ನ ಪೂಲ್ ವಿಭಾಗ. ಇಲ್ಲಿ ನವನವೀನ ಬಗೆಯ ಇಟಾಲಿಯನ್ ಹಾಗೂ ಲೈಟ್ ಮೆನುಗಳನ್ನು ಸವಿಯಬಹುದು. ಇಲ್ಲಿಗೇ ಪ್ರತ್ಯೇಕವಾದ ಅಡುಗೆಮನೆಯಿದೆ. ಕೋಟೆಯಲ್ಲೇ ಇರುವ ಸಾವಯವ ತರಕಾರಿ ತೋಟಗಳಿಂದ ಆಯ್ದ ಆಯಾ ಸೀಸನ್‌ನ ಬೆಳೆಗಳನ್ನು ಬಳಸಿಕೊಂಡು ಮಾಡುವ ಅಡುಗೆಯನ್ನು ನೀವು ಇಲ್ಲಿ ನೋಡಬಹುದು.

ರಾಜವತ್ ಕೊಠಡಿ (Rajawat Room)
ಇದು ರೆಸ್ಟಾರೆಂಟ್‌ನ ವಿಶಾಲವಾದ ಲಾಜ್. ಸ್ವಾಗತ ವಿಭಾಗದ ಪಕ್ಕದಲ್ಲಿದೆ. ಎಲ್ಲ ಬಗೆಯ ಕಾಕ್‌ಟೇಲ್‌ಗಳು, ಮಂಚಿಗಳನ್ನು ಇಲ್ಲಿ ನೀಡಲಾಗುತ್ತದೆ.

ಡೆಸ್ಟಿನೇಶನ್ ಡೈನಿಂಗ್‌ (Destination Dining)
ಇದರಲ್ಲಿ ಮತ್ತೂ ಮೂರು ಪ್ರಕಾರಗಳಿವೆ. ಇವುಗಳಲ್ಲಿ ಅತ್ಯುತ್ತಮ, ಐಷಾರಾಮಿ ಭೋಜನವನ್ನು ನೀಡಲಾಗುತ್ತದೆ. ಯಾವುದೇ ಅಡಚಣೆಗಳಿಲ್ಲದ ಅತ್ಯಂತ ಖಾಸಗಿ ಊಟದ ಜಾಗವಿದಾಗಿದೆ. ಇದಕ್ಕೆ ವಿಶೇಷ ಪ್ರದೇಶಗಳನ್ನು ನಿಗದಿಪಡಿಸಲಾಗಿದೆ. 6 ಅತಿಥಿಗಳಿಗೆ ಮೀಸಲಾದ ವೀಕ್ಷಣಾ ಗೋಪುರಗಳು, 12 ಅತಿಥಿಗಳಿಗೆ ಮೀಸಲಾದ ಜೆನಾನಾ ಬಾಗ್ ಮತ್ತು 8 ಅತಿಥಿಗಳಿಗೆ ಮೀಸಲಾದ ರಾಣಿ ಬಾಗ್ ಪೆವಿಲಿಯನ್ ಇದರಲ್ಲಿವೆ.

Jacqueline Fernandes in Trouble: ಅರೆಸ್ಟ್ ಆಗಲಿದ್ದಾರಾ ನಟಿ ? ನೆರವಿಗೆ ಬರ್ತಾರಾ ಸಲ್ಮಾನ್ ಖಾನ್ ?

 

click me!