ಜ್ಯೂ.ಎನ್‌ಟಿಆರ್ ಮತ್ತು ರಾಮ್ ಚರಣ್ ಕಾಂಬಿನೇಷನ್‌ನಲ್ಲಿ 'ಆರ್‌ಆರ್‌ಆರ್' ಚಿತ್ರ ಮೂಡಿಬಂದಿದ್ದು, ಡಿಸೆಂಬರ್ 9ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ಈಗಾಗಲೇ ಚಿತ್ರತಂಡ ತಿಳಿಸಿದೆ. ಇದೀಗ ಚಿತ್ರದ ಟ್ರೇಲರ್‌ನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗುವುದಕ್ಕೂ ಮುಂಚೆಯೆ ನೋಡಬಹುದು.
ಎಸ್.ಎಸ್.ರಾಜಮೌಳಿ (SS Rajamouli) ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್' (RRR) (ರೈಸ್–ರೋರ್–ರಿವೋಲ್ಟ್) ಚಿತ್ರದ ಫಸ್ಟ್‌ಲುಕ್, ಪೋಸ್ಟರ್, ಪ್ರೋಮೋ ಹಾಗೂ ಹಾಡು ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಜ್ಯೂ.ಎನ್‌ಟಿಆರ್ (Jr.NTR) ಮತ್ತು ರಾಮ್ ಚರಣ್ (Ram Charan) ಕಾಂಬಿನೇಷನ್‌ನಲ್ಲಿ 'ಆರ್‌ಆರ್‌ಆರ್' ಚಿತ್ರ ಮೂಡಿಬಂದಿದ್ದು, ಡಿಸೆಂಬರ್ 9ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂದು ಈಗಾಗಲೇ ಚಿತ್ರತಂಡ ತಿಳಿಸಿದೆ. ಇದೀಗ ಚಿತ್ರದ ಟ್ರೇಲರ್‌ನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗುವುದಕ್ಕೂ ಮುಂಚೆಯೆ ನೋಡಬಹುದು.
ಹೌದು! 'ಆರ್‌ಆರ್‌ಆರ್' ಚಿತ್ರವನ್ನು ಡಿವಿವಿ ದಾನಯ್ಯ (DVV Danayya) 450 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದ್ದು, 'ಆರ್‌ಆರ್‌ಆರ್' ಚಿತ್ರದ ಕರ್ನಾಟಕ ವಿತರಣೆ ಹಕ್ಕನ್ನು 'ಕೆವಿಎನ್' (KVN) ಪ್ರೊಡಕ್ಷನ್ಸ್ ಸಂಸ್ಥೆ ಪಡೆದುಕೊಂಡಿದೆ. ವಿಶೇಷವಾಗಿ 'ಕೆವಿಎನ್' ಪ್ರೊಡಕ್ಷನ್ ಸಂಸ್ಥೆ ಚಿತ್ರದ ಟ್ರೇಲರ್ ಬಗ್ಗೆ ಟ್ವೀಟರ್‌ನಲ್ಲಿ 'ರಾಮ್ ಚರಣ್, ಜೂನಿಯರ್ ಎನ್.ಟಿ.ಆರ್ , ಅಜಯ್ ದೇವ್‌ಗನ್, ಆಲಿಯಾ ಭಟ್ ಅಭಿನಯದ ಸುಪ್ರಸಿದ್ಧ ನಿರ್ದೇಶಕರಾದ ಎಸ್.ಎಸ್.ರಾಜಮೌಳಿ ಸರ್ ನಿರ್ದೇಶಿಸಿರುವ, ಭಾರತ ಚಿತ್ರರಂಗದ ಬಹು ನಿರೀಕ್ಷಿತ 'ಆರ್‌ಆರ್‌ಆರ್' ಚಿತ್ರದ ಟ್ರೇಲರ್ ಬಿಡುಗಡೆಯನ್ನು ಕರ್ನಾಟಕದ 30 ಚಿತ್ರಮಂದಿರಗಳಲ್ಲಿ ಮಾಡಲಾಗುವುದೆಂದು ತಿಳಿಸಲು ನಾವು ಹೆಮ್ಮೆ ಪಡುತ್ತೇವೆ. ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಬನ್ನಿ, ಈ ಅದ್ಭುತವಾದ ಕ್ಷಣಕ್ಕೆ ಸಾಕ್ಷಿಯಾಗಿ. ಇಡೀ ಪ್ರಪಂಚ ಯೂಟ್ಯೂಬ್‌ನಲ್ಲಿ ಈ ಟ್ರೇಲರ್ ನೋಡುವುದಕ್ಕೂ ಮುನ್ನ, ನೀವು ಡಿಸೆಂಬರ್ 9ರಂದು ಬೆಳಗ್ಗೆ 10 ಗಂಟೆಗೆ ಬೆಳ್ಳಿ ಪರದೆಯ ಮೇಲೆ ವೀಕ್ಷಿಸಿ' ಎಂದು ಟ್ವೀಟ್ ಮಾಡಿದ್ದಾರೆ.
RRR Movie: ಸಾಹಸಮಯ ಟ್ರೇಲರ್ ರಿಲೀಸ್ಗೆ ಹೊಸ ದಿನಾಂಕ ಹಂಚಿಕೊಂಡ ಜ್ಯೂ.ಎನ್‌ಟಿಆರ್
ಜೊತೆಗೆ ಲಾಲ್‌ಬಾಗ್ ರಸ್ತೆಯ ಊರ್ವಶಿ, ಮಾಗಡಿ ರಸ್ತೆಯ ಅಂಜನ್, ಆಗರದ ತಿರುಮಲ, ಕೆ.ಆರ್.ಪುರಂನಲ್ಲಿರುವ ವೆಂಕಟೇಶ್ವರ, ಬಿ.ಎನ್.ಪುರದ ಪುಷ್ಪಾಂಜಲಿ, ಜೆ.ಪಿ.ನಗರದ ಸಿದ್ಧೇಶ್ವರ, ಎಂ.ಜಿ.ರಸ್ತೆಯ ಸ್ವಾಗತ್ ಶಂಕರ್‌ನಾಗ್, ಸ್ಯಾಂಕೀ ರಸ್ತೆಯ ಕಾವೇರಿ, ಸೇವಾ ನಗರದ ಮುಕುಂದ, ಜೆ.ಪಿ.ನಗರದ ರೇಣುಕಾ ಪ್ರಸನ್ನ, ಕೋಣನಕುಂಟೆಯ ಮಾನಸ, ಹೋಂಗಸಂದ್ರದ ಬೃಂದಾ, ಆರ್.ಟಿ.ನಗರದ ರಾಧಾಕೃಷ್ಣ, ಸಂಜಯ್ ನಗರದ ವೈಭವ್, ಮಾರತಹಳ್ಳಿಯ ವಿನಾಯಕ, ಕೋಲಾರದ ನಾರಾಯಣಿ, ಚಿಕ್ಕಬಳ್ಳಾಪುರದ ಬಾಲಾಜಿ, ಪಾವಗಡದ ಮಾರುತಿ, ಮುಳಬಾಗಿಲಿನ ವರದರಾಜ್, ದೊಡ್ಡಬಳ್ಳಾಪುರದ ವೈಭವ್, ವಿಜಿಪುರದ ಗೌರಿಶಂಕರ, ಮೈಸೂರಿನ ಡಿ.ಆರ್.ಸೀ, ದಾವಣಗೆರೆಯ ವಸಂತ, ಬಳ್ಳಾರಿಯಲ್ಲಿರುವ ರಾಧಿಕಾ-ರಾಘವೇಂದ್ರ-ನಟರಾಜ ಕಾಂಪ್ಲೆಕ್ಸ್, ಹೊಸಪೇಟೆಯ ಬಾಲ, ಸಿರಗುಪ್ಪದ ಬಾಲಾಜಿ, ಕಂಪ್ಲಿಯ ಭಾರತ್, ಕುರುಗೋಡಿನ ಎಸ್.ಎಲ್.ವಿ, ತೋರಣಗಲ್ಲಿನ ವಿಜಯಲಕ್ಷ್ಮಿ, ಸಂಡೂರಿನ ವಿಶಾಲ್ ಹಾಗೂ ಕಂಪ್ಲಿಯ ಚಂದ್ರಕಲಾ ಚಿತ್ರಮಂದಿರಗಳಲ್ಲಿ 'ಆರ್‌ಆರ್‌ಆರ್' ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ತಿಳಿಸಿದೆ.
ಇನ್ನು 'ಆರ್‌ಆರ್‌ಆರ್' ಚಿತ್ರದ ನಿರ್ಮಾಪಕರು ನಮ್ಮ ಕೆವಿಎನ್ ಪ್ರೊಡಕ್ಷನ್ಸ್ ಜತೆ ಸೇರಿ ರಾಜ್ಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಐದು ಭಾಷೆಗಳ ಪೈಕಿ ರಾಜ್ಯದಲ್ಲಿ ಯಾವುದೇ ಭಾಷೆ ಬಿಡುಗಡೆ ಆದರೂ ಅದು ನಮ್ಮ ಪ್ರೊಡಕ್ಷನ್‌ನಲ್ಲಿ ವಿತರಣೆ ಆಗಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಹಾಗೂ ನಿರ್ಮಾಪಕ ಸುಪ್ರೀತ್ (Supreeth) ಈ ಹಿಂದೆ ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 'ಆರ್‌ಆರ್‌ಆರ್' ಚಿತ್ರದ ಟ್ರೇಲರ್ ಡಿಸೆಂಬರ್ 3ರಂದು ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಟ್ರೇಲರ್ ರಿಲೀಸ್ ಆಗಿಲ್ಲ. ಈ ಬಗ್ಗೆ 'ಅನಿರೀಕ್ಷಿತ ಕಾರಣಗಳಿಂದಾಗಿ ನಾವು ಡಿ.3ರಂದು 'ಆರ್‌ಆರ್‌ಆರ್' ಟ್ರೇಲರ್ ಬಿಡುಗಡೆ ಮಾಡುತ್ತಿಲ್ಲ. ಹೊಸ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುತ್ತೇನೆ' ಎಂದು 'ಆರ್‌ಆರ್‌ಆರ್' ಚಿತ್ರದ ಅಧಿಕೃತ ಟ್ವಿಟರ್ (Twitter) ಖಾತೆ ಮೂಲಕ ಚಿತ್ರತಂಡ ಈ ಹಿಂದೆ ತಿಳಿಸಿತ್ತು.
RRR ಚಿತ್ರದ ವಿತರಣೆ ಹಕ್ಕು ಪಡೆದ ಕೆವಿಎನ್ ಸಂಸ್ಥೆ!
'ಆರ್‌ಆರ್‌ಆರ್' ಚಿತ್ರವು 1920ನೇ ಇಸವಿಯ ಆರಂಭದಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೊಮರಂ ಭೀಮ್ ಅವರ ಜೀವನವನ್ನು ಆಧರಿಸಿದ ಕಾಲ್ಪನಿಕ ಕಥೆ. ಈ ಚಿತ್ರದಲ್ಲಿ ಚರಣ್ ರಾಮರಾಜು ಪಾತ್ರದಲ್ಲಿ, ಜೂನಿಯರ್ ಎನ್‌ಟಿಆರ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಆರ್‌ಆರ್‌ಆರ್' ಟ್ರೇಲರ್ ರಿಲೀಸ್ ಆದ ನಂತರ ಚಿತ್ರದ ಪ್ರಮೋಷನ್‌ಗಳನ್ನು ನಡೆಸುವುದಾಗಿ ಚಿತ್ರತಂಡ ತಿಳಿಸಿದೆ. ವಿಶೇಷವಾಗಿ ಕರ್ನಾಟಕದಲ್ಲಿ (Karnataaka) ಗ್ರ್ಯಾಂಡ್ ಆಗಿ ಪ್ರೀ-ರಿಲೀಸ್ ಇವೆಂಟ್ ನಡೆಸಲು ಚಿತ್ರತಂಡ ನಿರ್ಧರಿಸಿದ್ದು, ಈ ಬಗ್ಗೆ ರಾಜಮೌಳಿ ಇತ್ತೀಚೆಗೆ ತಿಳಿಸಿದ್ದರು. ಚಿತ್ರಕ್ಕೆ ಎಂ.ಎಂ.ಕೀರವಾಣಿ (M.M. Keeravaani) ಸಂಗೀತ ಸಂಯೋಜಿಸಿದ್ದು, ಜನವರಿ 7ರಂದು 'ಆರ್‌ಆರ್‌ಆರ್' ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಎಲ್ಲರಿಗೂ ಆದರದ ಸ್ವಾಗತ.
ದಿನಾಂಕ: 09 ಡಿಸೆಂಬರ್ 2021.
ಸಮಯ: ಬೆಳಗ್ಗೆ 10ಕ್ಕೆ. Sir pic.twitter.com/AiRPDC4SYP