
ಬಾಲಿವುಡ್‌ನ ಕ್ಯೂಟ್ ರೀಲ್ & ರಿಯಲ್ ಜೋಡಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ. ಈ ಜೋಡಿ ಜೊತೆಗೇ ಸಕ್ಸಸ್ ಪಡೆಯುತ್ತಾ ಹೋದರು. ರಾಮ್‌ಲೀಲಾ, ಬಾಜಿರಾವ್ ಮಸ್ತಾನಿ, ಪದ್ಮಾವತ್ ನಂತಹ ಬಾಲಿವುಡ್‌ನ ಸೂಪರ್ ಹಿಟ್ ಸಿನಿಮಾಗಳಲ್ಲಿ ಜೋಡಿಯಾಗಿ ನಂತರ ನಿಜ ಜೀವನದಲ್ಲಿ ಜೋಡಿಯಾದವರು ಇವರು. ಇವರ ಸಕ್ಸಸ್‌ನಲ್ಲಿ ಬನ್ಸಾಲಿ ಕೊಡುಗೆ ಮಹತ್ವದ್ದು. ಈಗ ಇವರಿಬ್ಬರನ್ನು ಇಟ್ಟುಕೊಂಡು ಮತ್ತೊಂದು ಹಿಟ್ ಸಿನಿಮಾ ತಯಾರಿಸೋ ಸಿದ್ಧತೆಯಲ್ಲಿದ್ದಾರೆ ಸಂಜಯ್ ಲೀನಾ ಬನ್ಸಾಲಿ. ಹಾಗಿದ್ರೆ ಇವರು ಜೊತೆಯಾಗಿ ಸಿನಿಮಾ ಮಾಡೋದು ಪಕ್ಕಾನಾ ?
ಬಾಲಿವುಡ್ ನಟ ರಣವೀರ್ ಸಿಂಗ್ ಚಲನಚಿತ್ರ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ ಅವರ ಪ್ರೇಮ ಕಥೆಯನ್ನು ಒಳಗೊಂಡ ಸಿನಿಮಾ 'ಬೈಜು ಬಾವ್ರಾ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಣವೀರ್ ಸಿಂಗ್ ಅವರನ್ನು ಈ ಪಾತ್ರಕ್ಕಾಗಿ ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಎಸ್‌ಎಲ್‌ಬಿ ಪ್ರೊಡಕ್ಷನ್ಸ್‌ಗೆ ಹತ್ತಿರದ ಮೂಲ ಈಗಾಗಲೇ ತಿಳಿಸಿದೆ. ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಜೋಡಿಯು ನಾಲ್ಕನೇ ಬಾರಿಗೆ ಬೆಳ್ಳಿ ಪರದೆಯಲ್ಲಿ ಮರಳುವುದನ್ನು ನೋಡಲು ಅನೇಕರು ಕಾಯುತ್ತಿದ್ದಾರೆ. ಆದಾರೂ, 'ದೀಪ್‌ವೀರ್' ಅಭಿಮಾನಿಗಳು ನಿರಾಶೆಯಲ್ಲಿದ್ದಾರೆ.
ಪ್ರಿಯಾಂಕಾ ಅಥವಾ ದೀಪಿಕಾ ? ಯಾರು ಹೆಚ್ಚು ಶ್ರೀಮಂತರು?
ದೀಪಿಕಾ ಪಡುಕೋಣೆ ಬೈಜು ಬಾವ್ರಾದಲ್ಲಿಲ್ಲ. ದೀಪಿಕಾ ತನ್ನ ಪ್ರೀತಿಯ ಗಂಡನ ಎದುರು ಪ್ರಣಯ ಪಾತ್ರದಲ್ಲಿ ನಟಿಸುವುದಿಲ್ಲ ಎಂಬುದುಕ್ಕೆ ಸಂಭಾವನೆಯೇ ಕಾರಣ. ಬಾಜಿರಾವ್ ಮಸ್ತಾನಿ ನಟಿ ತನ್ನ ಪತಿಯಷ್ಟೇ ಸಂಭಾವನೆಯನ್ನು ಬಯಸುತ್ತಾರೆ ಎಂದು ಹೇಳಲಾಗಿದೆ. ಸ್ಪಷ್ಟವಾಗಿ, ದೀಪಿಕಾ ತನ್ನ ಗಂಡನಂತೆಯೇ ಸಂಭಾವನೆಯನ್ನು ಬಯಸುತ್ತಾಳೆ. ಒಂದು ಪೈಸೆಯೂ ಹೆಚ್ಚಿಲ್ಲ, ಒಂದು ಪೈಸೆಯೂ ಕಡಿಮೆಯಿಲ್ಲ ಎನ್ನಲಾಗಿದೆ.
ಸಂಜಯ್ ಲೀಲಾ ಬನ್ಸಾಲಿ ವೇತನ ಸಮಾನತೆಗಾಗಿ ಆಕೆಯ ಮನವಿಯನ್ನು ತಿರಸ್ಕರಿಸಿದ್ದಾರೆ. ಆದರೆ ಇದನ್ನು ಬನ್ಸಾಲಿ ಪಾಸಿಟಿವ್ ಆಗಿ ತೆಗೆದುಕೊಂಡಿದ್ದು, ಒಂದೇ ಜೋಡಿಯ ಒಬ್ಬರೇ ನಿರ್ದೇಶಕರ 4 ಸಿನಿಮಾ ಸ್ವಲ್ಪ ಅತಿ ಆಯ್ತಲ್ಲಾ ಎಂದಿದ್ದಾರಂತೆ ಬನ್ಸಾಲಿ ಪ್ರೊಡಕ್ಷನ್ ಸಿಬ್ಬಂದಿ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸಂಜಯ್ ಲೀಲಾ ಬನ್ಸಾಲಿ ಅವರ ಮೂರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಜೋಡಿಯು ಗೋಲಿಯೋನ್ ಕಿ ರಾಸ್ಲೀಲಾ- ರಾಮಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದೆ. ದೀಪಿಕಾ ಮತ್ತು ರಣವೀರ್ ಮುಂದಿನ ಕಬೀರ್ ಖಾನ್ '83 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಪಡುಕೋಣೆ ರಣವೀರ್ ಪತ್ನಿಯ ಪಾತ್ರವನ್ನು ನಿರ್ವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.