ನಟಿ ಪೂಜಾ ಹೆಗ್ಡೆ ಡಯಟ್‌, ಪ್ರತಿ ದಿನ ಸೇವಿಸುವ ಆಹಾರ ಇದಂತೆ!

By Suvarna News  |  First Published Aug 8, 2021, 2:28 PM IST

ಪೂಜಾ ಹೆಗ್ಡೆ ಫಿಟ್ನೆಸ್‌ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ನೆಟ್ಟಿಗರಿಗೆ ಇಲ್ಲಿದೆ ಉತ್ತರ. ಆರೋಗ್ಯ ಮುಖ್ಯ ತೂಕ ಅಲ್ಲ ಎಂದಿದ್ದಾರೆ ಚೆಲುವೆ...


ಭಾರತೀಯ ಚಿತ್ರರಂಗದ ಬೇಡಿಕೆಯ ನಟಿ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಸಹಿ ಮಾಡಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ವರ್ಕೌಟ್ ಮಾಡಲು ಕಡಿಮೆ ಸಮಯ ಸಿಗುವ ಕಾರಣ ಆಹಾರದಲ್ಲಿ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ. 

'ನಾನು ತುಂಬಾ ಬ್ಯಾಲೆನ್ಸ್ ಡಯಟ್ ಫಾಲೋ ಮಾಡುತ್ತೇನೆ. ಬೆಳಗ್ಗೆ ಮೊಟ್ಟೆ ದೋಸೆ ತಿನ್ನುತ್ತೇನೆ. ಊಟಕ್ಕೆ ಮನೆಯಲ್ಲಿ ಮಾಡಿರುವ ಅಡು ರೋಟಿ, ಚಿಕನ್ ಕರಿ, ಬ್ರೌನ್ ರೈಸ್ ಸೇವಿಸುತ್ತೇನೆ' ಎಂದು ಬಾಲಿವುಡ್ ಹಂಗಾಮಾಗೆ ತಿಳಿಸಿದ್ದಾರೆ.  ದಿನಕ್ಕೆ 5 ತಾಸು ಮಲಗುವ ಪೂಜಾ ದಿನಾ ತಪ್ಪದೇ ಪಪ್ಪಾಯ, ಬಾಳೆ ಹಣ್ಣು ಮತ್ತು ಸೇಬು ಸೇವಿಸುತ್ತಾರಂತೆ. ಅಲ್ಲದೆ ಸೀ ಫುಡ್ ಸಖತ್ ಇಷ್ಟ ಪಡುವ ಪೂಜಾ ಯಾವಾಗ ಕೊಟ್ಟರೂ ಮೀನು ಮತ್ತು ಪ್ರಾನ್ಸ್ ತಿನ್ನುತ್ತಾರಂತೆ.

ಮತ್ತೆ ಸಂಭಾವನೆ ಹೆಚ್ಚಿಸಿಕೊಂಡ ನಟಿ ಪೂಜಾ ಹೆಗ್ಡೆ?

Tap to resize

Latest Videos

'ಕಾಫಿ ರುಚಿ ನನಗೆ ಇಷ್ಟವಿಲ್ಲ. ಹೆಚ್ಚಾಗಿ ಸೇವಿಸುವುದಿಲ್ಲ ಅಪರೂಪಕ್ಕೆ ಮಾತ್ರ ರೀತಿ ತೆಗೆದುಕೊಳ್ಳುವೆ. ಚಿತ್ರೀಕರಣಕ್ಕೆಂದು ಹೆಚ್ಚಾಗಿ ಪ್ರಯಾಣ ಮಾಡುವ ಕಾರಣ ಎಲ್ಲಿ ಹೋದರು ಅಡುಗೆ ಮಾಡುವವರನ್ನು ಕರೆದುಕೊಂಡು ಹೋಗುತ್ತೇನೆ. ನಾನು ಮರೆತರೂ ಅವರೇ ಟೈಂಗೆ ಸರಿಯಾಗಿ ಅಡುಗೆ ತಂದು ಕೊಡುತ್ತಾರೆ. ಬಹುತೇಕ ಸಮಯ ನನ್ನ ಡಯಟ್ ನೋಡಿಕೊಳ್ಳುವುದು ಅವರೇ' ಎಂದು ಪೂಜಾ ಹೇಳಿದ್ದಾರೆ.

click me!