
ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ರಾಜ್ ಕುಂದ್ರಾ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದ್ದಾರೆ. ಪೋರ್ನ್ ವಿಡಿಯೋ ದಂಧೆಯಲ್ಲಿ ಅರೆಸ್ಟ್ ಆದ ರಾಜ್ ಕುಂದ್ರಾ ಅವರ ಎಪ್ಲಿಕೇಷನ್‌ಗಾಗಿ ಕೆಲಸ ಮಾಡುತ್ತಿದ್ದ ಶೆರ್ಲಿನ್ ಚೋಪ್ರಾ ಅವರನ್ನು ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಈ ವೇಳೆ ಕೇಸ್‌ಗೆ ಸಂಬಂಧಿಸಿ ಬಹಳಷ್ಟು ಹೊಸ ವಿಚಾರಗಳು ಹೊರಬಂದಿವೆ.
ಪತ್ನಿ ಶಿಲ್ಪಾ ಶೆಟ್ಟಿ ನಿಮ್ಮ ವಿಡಿಯೋ ಇಷ್ಟಪಟ್ಟಿದ್ದಾರೆ ಎಂದು ರಾಜ್ ಕುಂದ್ರಾ ಅವರು ಶೆರ್ಲಿನ್ ಚೋಪ್ರಾಗೆ ಹೇಳಿ ಮನವರಿಕೆ ಮಾಡಿದ್ದರು. ಈ ವಿಚಾರ ವಿಚಾರಣೆಯ ವೇಳೆ ಬಯಲಾಗಿದೆ. ಒಂದು ಸಿನಿಮಾಗಾಗಿ ಕುಂದ್ರಾ ಶೆರ್ಲಿನ್ ಅವರನ್ನು ಸಂಧಿಸಿದ್ದು ಸಿನಿಮಾ ಒಪ್ಪಿ ಮಾರ್ಚ್‌ನಲ್ಲಿ ಎಗ್ರಿಮೆಂಟ್ ಕೂಡಾ ಮಾಡಲಾಗಿತ್ತು ಎಂದಿದ್ದಾರೆ ಶೆರ್ಲಿನ್. ನಾನು ಅವರ ಜೊತೆ ಸೇರಬೇಕೆಂದು ಕುಂದ್ರಾ ಬಯಸಿದ್ದರು. ಹಾಗೆಯೇ ಶೆರ್ಲಿನ್ ಚೋಪ್ರಾ ಆಪ್ ಎನ್ನುವ ಹೆಸರಿನಲ್ಲಿ ಎಪ್ಲಿಕೇಷನ್ ತಯಾರಿಸುವ ಬಗ್ಗೆ ಮಾತನಾಡಲಾಗಿತ್ತು ಎಂದಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್‌ನ ಪ್ರಾಪರ್ಟಿ ಸೆಲ್ ಶೆರ್ಲಿನ್ ಅವರ ವಿಚಾರಣೆ ನಡೆಸಿದೆ. ಕುಂದ್ರಾ ಜೊತೆ ಸೇರಿ ಪೋನ್ ವಿಡಿಯೋ ತಯಾರಿಸುವ ಬಗ್ಗೆ ಇದರಲ್ಲಿ ಕೇಳಲಾಗಿತ್ತು.
ಮನೆಗೆ ನುಗ್ಗಿ ಕಿಸ್ ಮಾಡೋಕೆ ಶುರು ಮಾಡಿದ: ಶಿಲ್ಪಾ ಪತಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಎಪ್ಲಿಕೇಷನ್‌ನಲ್ಲಿ ಭಿನ್ನವಾದ ವಿಡಿಯೋ ಇರಬೇಕೆಂದು ಕುಂದ್ರಾ ಬಯಸಿದ್ದರು. ಗ್ಲಾಮರ್, ಹೈ ಫ್ಯಾಷನ್, ಫಿಟ್ನೆಸ್, ಫನ್ ಹಾಗೂ ಇತರ ವಿಚಾರಗಳ ವಿಡಿಯೋ ಸೇರಿಸುವ ಬಗ್ಗೆ ಚರ್ಚಿಸಿದ್ದರು. ಆರಂಭದಲ್ಲಿ ಗ್ಲಾಮರಸ್ ಎಂದು ನಂತರದಲ್ಲಿ ಸೆಮಿ ನ್ಯೂಡ್ ಹಾಗೂ ನ್ಯೂಡ್ ಫಿಲ್ಮ್ ಎನ್ನಲಾಗಿತ್ತು ಎಂದಿದ್ದಾರೆ ಶೆರ್ಲಿನ್. ಶೂಟ್ ಮಧ್ಯೆ ನನ್ನ ವಿಡಿಯೋ ಶಿಲ್ಪಾ ಅವರು ಮೆಚ್ಚಿ ಹೊಗಳಿದ್ದಾರೆ ಎನ್ನುತ್ತಿದ್ದರು. ಈ ಮೂಲಕ ಹಿರಿಯ ನಟಿಯರೇ ಹೊಗಳುವಾಗ ನಾನು ತಪ್ಪೇನು ಮಾಡುತ್ತಿಲ್ಲ ಅನಿಸಿ ಇನ್ನಷ್ಟು ಚೆನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೆ ಎಂದಿದ್ದಾರೆ ಶೆರ್ಲಿನ್.
ಶೆರ್ಲಿನ್ ಚೋಪ್ರಾ ಈ ಹಿಂದೆ ಮಹಾರಾಷ್ಟ್ರ ಸೈಬರ್ ಸೆಲ್‌ಗೆ ತನ್ನ ಹೇಳಿಕೆಯನ್ನು ದಾಖಲಿಸಿದ ಮೊದಲ ವ್ಯಕ್ತಿ ಎಂದು ಬಹಿರಂಗಪಡಿಸಿದ್ದರು. ರೆಕಾರ್ಡ್ ಮಾಡಿದ ವೀಡಿಯೋ ಸಂದೇಶದಲ್ಲಿ, ಆರ್ಮ್ಸ್‌ಪ್ರೈಮ್ ಮೀಡಿಯಾ ಮಾಡೆಲ್‌ಗಳಿಗಾಗಿ ಆಪ್‌ಗಳನ್ನು ಅಭಿವೃದ್ಧಿಪಡಿಸುವ ಕಂಪನಿ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿದುಕೊಳ್ಳಲು ಕಳೆದ ಕೆಲವು ದಿನಗಳಿಂದ ಹಲವಾರು ಪತ್ರಕರ್ತರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರ ಸೈಬರ್ ಸೆಲ್‌ನಲ್ಲಿ ಹೇಳಿಕೆಯನ್ನು ದಾಖಲಿಸಿದ ಮೊದಲ ವ್ಯಕ್ತಿ ನಾನು ಎಂದು ನಾನು ನಿಮಗೆ ಹೇಳುತ್ತೇನೆ. ಮಹಾರಾಷ್ಟ್ರ ಸೈಬರ್ ಸೆಲ್ ನಿಂದ ಕರೆಸಿಕೊಳ್ಳಲಾಗಿದೆ, ನಾನು ಅಡಗಿಕೊಳ್ಳಲು ಹೋಗಲಿಲ್ಲ ಅಥವಾ ಶಿಲ್ಪಾ ಶೆಟ್ಟಿ ಮತ್ತು ಮಕ್ಕಳ ನೋವಿನ ಕಾಳಜಿ ಇದೆ ಎಂದು ಎಂದು ಹೇಳಿಕೆ ನೀಡಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.